Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ | Asha Bhosle Kannada Songs: Iconic Tracks Sung by Legendary Singer: Know Complete List details

Entertainment

oi-Madhusudhan KR

Asha Bhosle Kannada Songs: ಭಾರತೀಯ ಚಿತ್ರರಂಗದ ದಂತಕಥೆ, ಗಾನ ಕೋಗಿಲೆ ಆಶಾ ಭೋಸ್ಲೆ (92) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರು ಕೇವಲ ಹಿಂದಿ ಮಾತ್ರವಲ್ಲದೆ, ಕನ್ನಡ ಚಿತ್ರರಂಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಕನ್ನಡದಲ್ಲಿ ಮೂರು ಹಾಡುಗಳನ್ನು ಹಾಡಿ ಕರ್ನಾಟಕದ ಜನರ ಮನ ಗೆದ್ದಿದ್ದಾರೆ.

ಆಶಾ ಭೋಸ್ಲೆ ಅವರ ಧ್ವನಿ ಕೇವಲ ಹಿಂದಿ ಚಿತ್ರರಂಗ ಮಾತ್ರ ಸೀಮಿತವಾಗಿಲ್ಲ. ಇವರು ಕನ್ನಡ, ಮರಾಠಿ, ಬೆಂಗಾಲಿ, ತೆಲುಗು, ತಮಿಳು ಸೇರಿದಂತೆ ಭಾರತದ ಸುಮಾರು 20ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳಲ್ಲಿ ಹಾಡುಗಳನ್ನು ಆಡಿದ್ದಾರೆ. ಕೇವಲ ಭಾರತೀಯ ಭಾಷೆಗಳಷ್ಟೇ ಅಲ್ಲದೆ, ವಿದೇಶಿ ಭಾಷೆಗಳಲ್ಲೂ ಹಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

Asha Bhosle Kannada Songs Iconic Tracks Sung by Legendary Singer Know Complete List details

ಆಶಾ ಭೋಸ್ಲೆ ಸಾಧನೆ

ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಹಾಡುಗಳನ್ನು ಆಡಿದ ಗಾಯಕಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಸಾವಿರಾರು ವೈವಿಧ್ಯಮಯ ಗೀತೆಗಳಿಗೆ ಜೀವ ತುಂಬಿದ ಇವರ ಸಾಧನೆಯನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತವಾಗಿ ಗುರುತಿಸಿದೆ. ಶಾಸ್ತ್ರೀಯ ಸಂಗೀತದಿಂದ ಹಿಡಿದು ಪಾಪ್, ಗಜಲ್ ಮತ್ತು ಜಾನಪದ ಶೈಲಿಯ ಹಾಡುಗಳನ್ನು ಹಾಡಿದ್ದಾರೆ.

ಕನ್ನಡದ ಜೊತೆ ಆಶಾ ಭೋಸ್ಲೆ ನಂಟು

ಅದರಲ್ಲೂ ಕನ್ನಡಿಗರ ಪಾಲಿಗೆ ಆಶಾ ಭೋಸ್ಲೆ ಎಂದಿಗೂ ಆಪ್ತರು. ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ‘ಏನೋ ಏನೋ’, ದೂರದ ಬೆಟ್ಟ ಚಿತ್ರದ ‘ಸವಾಲು ಹಾಕಿ ಸೋಲಿಸಿ ಎಲ್ಲರ’ ಎಂಬಂತಹ ಕ್ರಾಂತಿಕಾರಿ ಗೀತೆಗಳಿಂದ ಹಿಡಿದು ಇತ್ತೀಚಿನ ‘ಮತ್ತೆ ಮುಂಗಾರು’ ಚಿತ್ರದವರೆಗೆ ಇವರು ಹಾಡಿರುವ ಗೀತೆಗಳು ಇಂದಿಗೂ ಸದಾ ಹಸಿರಾಗಿವೆ.

ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು

* 1967: ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ‘ಏನೋ ಏನೋ’ ಹಾಡು.

* 1973: ಡಾ.ರಾಜ್‌ಕುಮಾರ್ ಅಭಿನಯದ ‘ದೂರದ ಬೆಟ್ಟ’ ಚಿತ್ರದ ‘ಸವಾಲು ಹಾಕಿ ಸೋಲಿಸಿ ಎಲ್ಲರ’ ಎಂಬ ಜನಪ್ರಿಯ ಗೀತೆ.

* 2010: ‘ಮತ್ತೆ ಮುಂಗಾರು’ ಚಿತ್ರದ ‘ಹೇಳದೆ ಕಾರಣ’ಎಂದ ಹಾಡುಗಳನ್ನು ಹಾಡಿದ್ದಾರೆ.

* ಜೊತೆಗೆ ಕರ್ನಾಟಕದಲ್ಲಿ ಸಾಕಷ್ಟು ಬಾರಿ ಲೈವ್ ಶೋಗಳನ್ನು ಸಹ ನೀಡಿ ಗಮನ ಸೆಳದಿದ್ದಾರೆ.

ಆಶಾ ಬೋಸ್ಲೆ ಅವರು ಮಹಾರಾಷ್ಟ್ರದ ಸಾಂಗ್ಲಿಯ ಗೋರ್ ಗ್ರಾಮದಲ್ಲಿ 8 ಸೆಪ್ಟೆಂಬರ್ 1933ರಂದು ಸಂಗೀತ ಕುಟುಂಬದಲ್ಲಿ ಜನಿಸಿದ್ದು, ಪಂಡಿತ್ ದೀನನಾಥ್ ಮಂಗೇಶ್ಕರ್ ಶೇವಂತಿ (ಶೆವಂತ) ಮಂಗೇಶ್ಕರ್ ಅವ ದಂಪತಿಯ 3ನೇ ಮಗಳಾಗಿದ್ದಾರೆ. 1949ರಲ್ಲಿ ಗಣಪತರಾವ್ ಭೋಸ್ಲೆ ಜೊತೆ ಆಶಾ ಭೋಸ್ಲೆ ಅವರ ವಿವಾಹವಾಗಿತ್ತು. 8 ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗಕ್ಕೆ ಗಾಯಕಿಯಾಗಿ ಕೊಡುಗೆ ನೀಡಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/asha-bhosle-kannada-songs-iconic-tracks-sung-by-legendary-singer-know-complete-list-details-450191.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo