Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ – ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್‌ | Bhagyalakshmi Serial: Finally Bhagya Aadi Tie the Knot, Responsibility of Uniting Three Families Begins

Entertainment

oi-Hitesh Y

Bhagyalakshmi Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ ಮಹತ್ವದ ತಿರುವು ಪಡೆದುಕೊಂಡಿದೆ. ಎಲ್ಲ ಅಡ್ಡಿಗಳನ್ನೂ ಮೀರಿ ನಡೆದೇಹೋಯ್ತು ಭಾಗ್ಯ – ಆದಿ ಮದುವೆ ಆಗಿದೆ. ತಾಂಡವ್ ನಾಟಕವನ್ನು ಭಾಗ್ಯ ಎಳೆ ಎಳೆಯಾಗಿ ಬಿಚ್ಚಿಡ್ತಿದಾಳೆ. ಭಾಗ್ಯ – ಶ್ರೇಷ್ಠಾ ಇಬ್ಬರನ್ನೂ ವಂಚಿಸಲು ಹೊರಟಿದ್ದ ತಾಂಡವ್‌ಗೆ ಕೊನೆಗೂ ತಕ್ಕ ಶಾಸ್ತಿ ಆಗಿದೆ. ಈ ಮೂಲಕ ಭಾಗ್ಯಲಕ್ಷ್ಮೀ ಸೀರಿಯಲ್ ವೀಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಹಲವು ದಿನಗಳಿಂದ ಸೃಷ್ಟಿಯಾಗಿದ್ದ ಗೊಂದಲ ಹಾಗೂ ಕುತೂಹಲಕ್ಕೆ ಈಗ ಕೊನೆಗೂ ತೆರೆ ಬಿದ್ದಿದೆ. ಶ್ರೇಷ್ಠಾ ಹಾಗೂ ಭಾಗ್ಯಲಕ್ಷ್ಮೀಗೆ ಮೋಸ ಮಾಡಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದ ತಾಂಡವ್ ಪ್ಲ್ಯಾನ್‌ಗೆ ಹಿನ್ನಡೆ ಆಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಭಾಗ್ಯಲಕ್ಷ್ಮೀ ಹಾಗೂ ತಾಂಡವ್ ಎರಡನೇ ಬಾರಿ ಮದುವೆ ಆಗಬೇಕಾಗಿತ್ತು. ಆದರೆ, ಭಾಗ್ಯ ಮತ್ತು ತಾಂಡವ್‌ಗೆ ಮದುವೆ ನಡೆಯುತ್ತಿದ್ದ ಮದುವೆ ಮಂಟಪಕ್ಕೆ ಶ್ರೇಷ್ಠಾ ಬರುವುದರೊಂದಿಗೆ ತಾಂಡವ್ ಬಣ್ಣ ಬಯಲಾಗಿದೆ. ಶ್ರೇಷ್ಠಾ ಅದು ಆಗಲ್ಲ, ನಿನಗೆ ಅರ್ಥ ಆಗಲ್ಲ ನಾನು ವಿವರಿಸುತ್ತೀನಿ ತಡಿ ಅಂತ ತಾಂಡವ್‌ ಹೇಳಿದ್ದಾನೆ.

Bhagyalakshmi Serial

ಇದಕ್ಕೆ ಶ್ರೇಷ್ಠಾ ಮುಚ್ರಿ ಬಾಯಿ.. ಈಡಿಯಟ್ ಏನೇ ಆದರೂ ನೀನು ಬದಲಾಗಲ್ಲ. ಇದು ಗೊತ್ತಿರುವ ವಿಷಯನೇ. ನಿನಗೋಸ್ಕರ ನಮ್ಮ ಅಪ್ಪ – ಅಮ್ಮ ಎಲ್ಲರನ್ನೂ ಬಿಟ್ಟು ಬಂದರೆ ಅದಕ್ಕೋಸ್ಕರನಾದರೂ ನನ್ನ ಜೊತೆ ಇರಬೇಕು ಅಂತ ಅನಿಸಲಿಲ್ಲವಾ. ನಿನ್ನ ಮದುವೆ ಆಗುವುದಕ್ಕೆ ಏನೆಲ್ಲ ಸಮಸ್ಯೆ ಎದುರಿಸಿದ್ದೇನೆ ಅಂತ ಗೊತ್ತಿದೆ. ಆದರೂ ನೀನು ಈ ರೀತಿ ಮಾಡಿದ್ದೀಯ. ಇಷ್ಟೆಲ್ಲ ಆದರೂ ನನ್ನ ಬಿಟ್ಟು ಬಂದಿದ್ದಿಯ. ಈಗಲೂ ಏನು ಒಳ್ಳೆಯದು ಮಾಡುವುದಕ್ಕೆ ಬಂದಿಲ್ಲ ನೀನು. ಭಾಗ್ಯನ ಮೋಸ ಮಾಡಬೇಕು ಅಂತತಾನೆ ನೀನು ಬಂದಿರುವುದು ಎಂದು ಶ್ರೇಷ್ಠಾ ಪ್ರಶ್ನೆ ಮಾಡುವುದರೊಂದಿಗೆ ತಾಂಡವ್‌ ಬಣ್ಣ ಬಯಲಾಗಿದೆ.

ಭಾಗ್ಯಲಕ್ಷ್ಮೀಯಿಂದ ಟ್ವಿಸ್ಟ್‌

ನೀವು ಯಾವೊತ್ತು ನಾನು ಬದಲಾಗಿದ್ದೀನಿ ಅಂತ ಬಂದು ನನ್ನ ಕಾಲಿಗೆ ಬಿದ್ದಿರೋ ಆವೊತ್ತೇ ನಾನು ಅಂದುಕೊಂಡೆ ನೀವು ಬದಲಾಗಿಲ್ಲ; ಏನೋ ಸಾಧಿಸುವುದಕ್ಕೆ ಬಂದಿರುವ ಸಮಯ ಸಾಧಕ ಎಂದು ಕೊಂಡೆ ಎಂದು ತಾಂಡವ್‌ನ ನೋಡಿ ಭಾಗ್ಯ ಹೇಳಿದ್ದಾರೆ. ಆವೊತ್ತಿಂದ ನಿಮ್ಮನು ನಾನು ಗಮನಿಸುತ್ತಿದ್ದೇನೆ. ಎಲ್ಲರೂ ಇದ್ದಾಗ ನೀವು ಇರುವುದಕ್ಕೂ – ನೀವೊಬ್ಬರೇ ಇರುವಾಗ ಇರುವುದಕ್ಕೂ ತುಂಬಾನೇ ವ್ಯತ್ಯಾಸ ಕಾಣ್ಸತಾ ಇತ್ತು. ಆಗಲೇ ನನಗೆ ಅನುಮಾನ ಶುರುವಾಗಿತ್ತು. ಏನೋ ಒಂದು ಮಾಡ್ತಾ ಇದ್ದಿರ ಅಂತ. ಆದರೆ ನಾನು ಆಗಲೇ ಯಾಕೆ ಹೇಳಲಿಲ್ಲ ಗೊತ್ತಾ, ಆಗ ನನ್ನ ಬಳಿ ಸಾಕ್ಷಿ ಇರಲಿಲ್ಲ. ಇವರು ಆರತಿ ಮಾಡಿ ಮನೆಯೊಳಗೆ ಕರೆದುಕೊಂಡ್ರೋ ಆವೊತ್ತೇ ಸ್ಟೋರೂಮ್‌ಗೆ ಹೋಗಿ ನನ್ನ ಫೋಟೋನ ಸುಟ್ಟು ಹಾಕಿದ್ರು. ಆಗಲೇ ನನಗೆ ಇವರ ನಿಜವಾದ ಮುಖ ಕನ್ಫರ್ಮ್‌ ಆಗೋಯ್ತು ಅಂತ ಭಾಗ್ಯ ಹೇಳಿದ್ದಾರೆ.

ಭಾಗ್ಯ – ಆದಿ ಮದುವೆ

ಕೊನೆಗೂ ಭಾಗ್ಯ ಮತ್ತು ಆದಿ ಲಕ್ಷ್ಮೀ ಮದುವೆಯಾಗಿದೆ. ಆದಿ ಅವರು ನಮ್ಮ ಮೂರು ಕುಟುಂಬಗಳು ಇನ್ಮುಂದೆ ಒಂದೇ ಆಗಿರುತ್ತದೆ ಅಂತ ಹೇಳಿದ್ದಾರೆ. ಇದಕ್ಕೆ ಭಾಗ್ಯ ಅದನ್ನು ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಅಂತ ಹೇಳಿರುವುದು ಹೊಸ ಪ್ರೋಮೋದಲ್ಲಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/bhagyalakshmi-serial-finally-bhagya-aadi-tie-the-knot-responsibility-of-uniting-three-families-be-450223.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo