Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ | Singer Asha Bhosle No More, Nation Bids Emotional Farewell, Social Media Trending name Asha Bhosle

India

oi-Shankrappa Parangi

Asha Bhosle: ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ (96) ಅವರು ನಿಧನರಾದರು. ಅವರ ನಿಧನಕ್ಕೆ ಅಪಾರ ಗಣ್ಯರು, ಸಂಗೀತ ಪ್ರೇಮಿಗಳು, ವಿವಿಧ ಚಿತ್ರರಂಗದ ದಿಗ್ಗಜರು ಕಂಬನಿ ಮಿಡಿದಿದ್ದಾರೆ. ಅವರ ನಿಧಣ ಸುದ್ದಿ ಅದೆಷ್ಟೋ ಜನರಿಗೆ ಬರಸಿಡಿಲು ಬಡಿದಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ಹೆಸರು #Asha Bhosle ಟ್ರೆಂಡಿಂಗ್‌ನಲ್ಲಿದೆ. ಮೃತರ ಆರೋಗ್ಯದ ಬಗ್ಗೆ ಮೊಮ್ಮಗಳಾದ ಝನೈ ಭೋಸ್ಲೆ ಅವರು ಇತ್ತೀಚೆಗಷ್ಟೇ ಅಧಿಕೃತ ಮಾಹಿತಿ ಹಂಚಿಕೊಂಡಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಝನೈ ಭೋಸ್ಲೆ ಅವರು, ‘ತಮ್ಮ ಅಜ್ಜಿ ಆಶಾ ಭೋಸ್ಲೆ ಅವರು ಅನಾರೋಗ್ಯದಿಂದ ತೀವ್ರ ಬಳಲುತ್ತಿದ್ದರು. ಎದೆಯ ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಚೇತರಿಕೆ ಕಾಣುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ವಿಧಿ ಲಿಖಿತವೇ ಬೇರೆ ಇದ್ದು, ಆಶಾ ಅವರನ್ನು ಕುಟುಂಬಸ್ಥರು, ಅಪಾರ ಅಭಿಮಾನಿಗಳಿಂದ ದೂರ ಮಾಡಿದೆ.

Asha Bhosle

ಆಸ್ಪತ್ರೆ ವಿಡಿಯೋ

ಸೋಷಿಯಲ್ ಮೀಡಿಯಾಗಳಲ್ಲಿ ಪ್ರಸಿದ್ಧ ಗಾಯಕಿ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತೆ ಆಶಾ ಭೋಸ್ಲೆ ಅವರನ್ನು ಪೋಟೋಗಳನ್ನು ಹಂಚಿಕೊಂಡು ಸಂತಾಪ ಸೂಚಿಸಲಾಗುತ್ತಿದೆ. ಕೊನೆ ಕ್ಷಣದಲ್ಲಿ ಆಸ್ಪತ್ರೆಗಳಲ್ಲಿ ಯಾರೆಲ್ಲ ಇದ್ದರು, ಎಂಬಿತ್ಯಾದಿ ಮಾಹಿತಿಗಳ ವಿಡಿಯೋ ಸಹ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿದ್ದ ವೇಳೆ, ಅವರ ಕುಟುಂಬಸ್ಥರು ಆಪ್ತರು ಆತಂಕದಲ್ಲಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.

ಆಶಾ ಭೋಸ್ಲೆ ಅವರ ಪುತ್ರ ಆನಂದ ಭೋಸ್ಲೆ ಪ್ರತಿಕ್ರಿಯಿಸಿ, ನನ್ನ ತಾಯಿ ಇಂದು ನಿಧನರಾಗಿದ್ದು, ಜನರು ನಾಳೆ ಬೆಳಿಗ್ಗೆ 11 ಗಂಟೆಗೆ ಅವರು ವಾಸಿಸುತ್ತಿದ್ದ ಲೋವರ್ ಪರೇಲ್‌ನ ಕಾಸಾ ಗ್ರಾಂಡೆಯಲ್ಲಿ ಅವರಿಗೆ ಅಂತಿಮ ನಮನ ಸಲ್ಲಿಸಬಹುದು. ಅವರ ಅಂತ್ಯಕ್ರಿಯೆಯನ್ನು ನಾಳೆ ಸಂಜೆ 4 ಗಂಟೆಗೆ ಶಿವಾಜಿ ಪಾರ್ಕ್‌ನಲ್ಲಿ ನಡೆಸಲಾಗುವುದು ಎಂದು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ಹಾಡಿನ ವಿಡಿಯೋಗಳು ಮತ್ತೆ ವೈರಲ್

‘ಆಶಾ ಭೋಸ್ಲೆ ಅವರು ಧ್ವನಿ ಕೇಳ್ಳುತ್ತಿದ್ದರೆ ನೆಮ್ಮದಿ’ ಎಂದು ಅಭಿಮಾನಿಗಳು ಬರೆದುಕೊಂಡು ಅವರ ಹಾಡುಗಳ ವಿಡಿಯೋಗಳನ್ನು ಮೇಲಿಂದ ಮೇಲೆ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಎಕ್ಸ್ ಖಾತೆ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಗಾಯಕಿ ಆಶಾ ಅವರ ಧ್ವನಿ ಮೊಳಗುತ್ತಿದೆ. ಅವರ ಹಾಡುಗಳನ್ನು ಅಭಿಮಾನಿಗಳು ಪದೇ ಪದೇ ಕೇಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಸಂಗೀತ ಹುಚ್ಚು ಹಿಡಿಸುವಂತೆ ಆಶಾ ಅವರು ಮಾಡಿದ್ದರು ಎಂಬುದು ಇನ್ನೂ ಇತಿಹಾಸ.

https://kannada.oneindia.com/news/india/asha-bhosle-passes-away-legendary-voice-of-indian-cinema-look-at-iconic-achievements-timeless-le-450185.html?utm_source=OI-KN-Home-Page&utm_medium=Organic-Social&utm_campaign=Social-Share

ನಿಮ್ಮ ಯುಗ ಕಳೆದಿರಬಹುದು, ನಿಮ್ಮ ಧ್ವನಿ ಶಾಸ್ವತ

ಅಗಲಿರುವ ಆಶಾ ಭೋಸ್ಲೆ ಅವರು ನಾಡಿನಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅವರ ಅಭಿಮಾನಿಗಳು ‘ನಿಮ್ಮ ಯುಗದಲ್ಲಿ ನಾವಿದ್ದದ್ದು ನಮ್ಮ ಪುಣ್ಯ’ ಎಂದು ಕೆಲವರು ಹೇಳಿದ್ದಾರೆ. ನೀರುವಷ್ಟು ದಿನ ಸಂಗೀತವನ್ನು ಉಣಬಡಿಸಿದ್ಧೀರಿ, ಹೋಗಿ ಬನ್ನಿ ಓಂಶಾತಿ’ ಎಂದು ಬರೆದುಕೊಂಡು ಕಂಬನಿ ಮಿಡಿದ್ದಾರೆ. ಮತ್ತೊಬ್ಬರ ‘ನಿಮ್ಮ ನಿಧನದೊಂದಿಗೆ ಸಂಗೀತ ಧ್ವನಿ, ಇಂಪು, ಗಾಯನ ಯುಗ ಕಳೆದಿರಬಹುದು. ಆದರೆ ನಿಮ್ಮ ಧ್ವನಿ ನಮ್ಮಂತಹ ಕೋಟ್ಯಾಂತರ ಅಭಿಮಾನಿಗಳಲ್ಲಿ ಶಾಶ್ವತವಾಗಿದೆ, ಜೀವಂತ’ವಾಗಿದೆ ಎಂದು ಬರೆದುಕೊಂಡು ಭಾವನಾತ್ಮಕವಾಗಿ ಸಂತಾಪ ಸೂಚಿಸಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/india/singer-asha-bhosle-no-more-nation-bids-emotional-farewell-social-media-trending-name-asha-bhosle-450187.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo