
Sports
oi-Madhusudhan KR
Abhishek Sharma: ಗುರುವಾರ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ವಿಫಲರಾದರು. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಎಡಗೈ ಬ್ಯಾಟರ್ ಆಗಿರುವ ಅವರು ಕೇವಲ 7 ಎಸೆತಗಳಲ್ಲಿ 9 ರನ್ ಮಾತ್ರ ಗಳಿಸಿ ವಿಲ್ ಜ್ಯಾಕ್ಸ್ ಅವರ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ ಬಳಿಕ ಟೀಕೆಗೆ ಗುರಿಯಾಗಿದ್ದಾರೆ.
ಈ ಟೂರ್ನಿಯಲ್ಲಿ ಅವರ ಕಳಪೆ ಪ್ರದರ್ಶನ ಮುಂದುವರಿದಿದ್ದು, ಆಡಿದ 7 ಪಂದ್ಯಗಳಲ್ಲಿ 6 ಬಾರಿ 15 ರನ್‌ಗಳಿಗಿಂತ ಕಡಿಮೆ ಸ್ಕೋರ್ ಮಾಡಿ ಔಟಾಗಿದ್ದಾರೆ. ಈ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಭಿಷೇಕ್ ಶರ್ಮಾ ಅವರ ಕಳಪೆ ಆಟದ ಶೈಲಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಕೆಲವರು ಅವರನ್ನು “ಬ್ಲೈಂಡ್ ಸ್ಲಾಗರ್” ಎಂದು ಕರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿಷೇಕ್ ಶರ್ಮಾ ಕೇವಲ 7 ಎಸೆತಗಳಲ್ಲಿ 9 ರನ್ ಗಳಿಸಿ ವಿಲ್ ಜಾಕ್ಸ್ ಬೌಲಿಂಗ್‌ನಲ್ಲಿ ಔಟಾದರು. ಈ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ ಅವರು 6 ಬಾರಿ 15 ರನ್‌ಗಳಿಗಿಂತ ಕಡಿಮೆ ಸ್ಕೋರ್ ಮಾಡಿದ್ದಾರೆ. ಅಭಿಷೇಕ್ ಅವರ ಆಟದ ಶೈಲಿ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅವರನ್ನು ‘ಬ್ಲೈಂಡ್ ಸ್ಲಾಗರ್’ ಎಂದು ಕರೆಯುತ್ತಿದ್ದಾರೆ. ಟೂರ್ನಿಯುದ್ದಕ್ಕೂ ಅವರು ತಮ್ಮ ಲಯ ಕಂಡುಕೊಳ್ಳಲು ಪರದಾಡುತ್ತಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಷೇಕ್ ವಿರುದ್ಧ ಆಕ್ರೋಶ
Abhishek Kumar ಎಂಬ ಹೆಸರಿನ ಟ್ವಿಟರ್ ಖಾತೆ ಬಳಕೆದಾರರು, “ರುತುರಾಜ್ ಗಾಯಕ್ವಾಡ್ ಹಾಗೂ ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರರನ್ನು ಹೊರಗಿಟ್ಟು ಅಭಿಷೇಕ್ ಶರ್ಮಾ ಎಂಬ “ಬ್ಲೈಂಡ್ ಸ್ಲಾಗರ್” ಅನ್ನು ಆಡಿಸುತ್ತಿದ್ದಾರೆ” ಎಂದು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು “ದೇವರು ಯಾವಾಗಲಾದರೂ ಎರಡನೇ ಅವಕಾಶ ಕೊಟ್ಟರೆ, ಅದನ್ನು ಸಂಜು ಸ್ಯಾಮ್ಸನ್‌ನಂತೆ ಸದುಪಯೋಗಪಡಿಸಿಕೊಳ್ಳಬೇಕು, ಅಭಿಷೇಕ್ ಶರ್ಮಾನಂತೆ ವ್ಯರ್ಥ ಮಾಡಬಾರದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
They are playing a blind slogger like Abhishek Sharma ahead of players like Ruturaj Gaikwad and Yashasvi Jaiswal.
Can’t believe this. 💔 pic.twitter.com/RCViAvpdLK
— Abhishek Kumar (@Abhishek060722) March 5, 2026
ಮತ್ತೊಬ್ಬ ಟ್ವಿಟರ್ ಬಳೆದಾರರು, “ಅಭಿಷೇಕ್ ಶರ್ಮಾ ಇನ್ನೂ ತಂಡದಲ್ಲಿರುವುದು ಏಕೆ? ಅಂದರೆ ನೀವು ಒಂದು ಉತ್ತಮ ಪಂದ್ಯ ಆಡಿದರೆ, 10 ಕಳಪೆ ಪಂದ್ಯಗಳನ್ನು ಆಡಿದರೂ ತಂಡದಲ್ಲಿ ಇರಬಹುದಾ? ಪ್ರದರ್ಶನ ನೀಡಿ ಅಥವಾ ತಂಡವನ್ನು ಬಿಟ್ಟುಬಿಡಿ ಎಂಬ ನಿಯಮವಿರಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗೆ ಬಹುತೇಕ ಮಂದು ಅಭಿಷೇಕ್ ಶರ್ಮಾ ಫ್ಲಾಪ್ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Why Abhishek Sharma is still in the team? So it’s like you play one good match and then can play 10 bad matches and still be in team? Perform or perish. The rule should be Simple. @BCCI @GautamGambhir
— Biplab Debbarma, CFA (@Biplab_Debbarma) March 5, 2026
ಟಿ20 ವಿಶ್ವಕಪ್ 2026ಕ್ಕೂ ಮುನ್ನ ಸಂಜು ಸ್ಯಾಮ್ಸನ್ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನದಿಂದ ಕೈಬಿಡಲಾಗಿದ್ದು, ಅಭಿಷೇಕ್ ಶರ್ಮಾ ಅವರನ್ನು ಭಾರತದ ಮುಂದಿನ ದೊಡ್ಡ ಓಪನರ್ ಎಂದು ಭಾರೀ ಹೈಪ್ ಮಾಡಲಾಗಿತ್ತು. ಆದರೆ, ವಿಶ್ವಕಪ್‌ನಲ್ಲಿ ಅವಕಾಶ ಸಿಕ್ಕಾಗ ಸಂಜು ಸ್ಯಾಮ್ಸನ್ ಎರಡು ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದರು. ಮತ್ತೊಂದೆಡೆ, ಅಭಿಷೇಕ್ ಶರ್ಮಾ ನಿರಂತರವಾಗಿ ವಿಫಲರಾಗಿದ್ದು, ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಫೈನಲ್
ಟಿ20 ವಿಶ್ವಕಪ್‌ನ ರೋಚಕ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಸೋಲುಣಿಸಿ ಫೈನಲ್ ಪ್ರವೇಶಿಸಿರುವ ಭಾರತ ತಂಡವು, ಈಗ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಮಾರ್ಚ್ 8ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಸೆಮಿಫೈನಲ್ ಪಂದ್ಯದಲ್ಲಿ ಸ್ಪೋಟಕ 89 ರನ್ ಸಿಡಿಸಿ ಭಾರತದ ಗೆಲುವಿನ ರೂವಾರಿಯಾಗಿರುವ ಸಂಜು ಸ್ಯಾಮ್ಸನ್ ಅವರ ಮೇಲೆ ಫೈನಲ್ ಪಂದ್ಯದಲ್ಲೂ ದೊಡ್ಡ ನಿರೀಕ್ಷೆಯಿದೆ. ಅವರ ಬ್ಯಾಟಿಂಗ್ ಲಯ ಭಾರತಕ್ಕೆ ಹೆಚ್ಚಿನ ಬಲ ನೀಡಿದೆ. ಮತ್ತೊಂದೆಡೆ, ಟೂರ್ನಿಯಲ್ಲಿ ನಿರಂತರವಾಗಿ ವೈಫಲ್ಯ ಅನುಭವಿಸುತ್ತಿರುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಆಯ್ಕೆಯು ಕುತೂಹಲ ಮೂಡಿಸಿದೆ. ಸೆಮಿಫೈನಲ್‌ನಲ್ಲಿ ಕೇವಲ 9 ರನ್‌ಗೆ ಔಟಾದ ನಂತರ ಅಭಿಮಾನಿಗಳು ಅವರ ಆಟದ ಶೈಲಿಯನ್ನು ಟೀಕಿಸಿದ್ದಾರೆ. ಈ ಒತ್ತಡದ ನಡುವೆ ತಂಡದ ಆಡಳಿತ ಮಂಡಳಿ ಅವರನ್ನು ಫೈನಲ್‌ನಲ್ಲಿ ಮುಂದುವರಿಸುತ್ತದೆಯೇ ಅಥವಾ ಬದಲಾವಣೆ ಮಾಡುತ್ತದೆಯೇ ಎಂಬುದು ಎಲ್ಲರ ಗಮನ ಸೆಳೆದಿದೆ.
ಭಾರತದ ಬೌಲರ್‌ಗಳು ಟೂರ್ನಿಯುದ್ದಕ್ಕೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಪಡೆ ಪ್ರಬಲವಾಗಿದ್ದು, ಅವರನ್ನು ಕಟ್ಟಿಹಾಕಲು ಭಾರತದ ಬೌಲಿಂಗ್ ವಿಭಾಗ ಪೂರ್ಣ ಸಿದ್ಧತೆ ನಡೆಸಿದೆ. ಇದೀಗ ಫೈನಲ್ ಪಂದ್ಯವು ಅತ್ಯಂತ ರೋಚಕವಾಗಿರಲಿದ್ದು, ತವರು ನೆಲದ ಅನುಕೂಲ ಮತ್ತು ಕ್ರೀಡಾಂಗಣದ ಬೆಂಬಲ ಭಾರತದ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ನ್ಯೂಜಿಲೆಂಡ್ ಕೂಡ ಪ್ರಶಸ್ತಿ ಗೆಲ್ಲುವ ಕಾತರದಲ್ಲಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/abhishek-sharma-faces-backlash-after-poor-performance-in-t20-world-cup-2026-semi-final-against-eng-446093.html. xn--babytilbehr-pgb.com does not claim ownership of this content. All rights remain with the original publisher.
