Abhishek Sharma: ಟೀಂ ಇಂಡಿಯಾ ಟಿ20 ಸ್ಪೆಷಲಿಸ್ಟ್‌ ಮತ್ತೆ ಫ್ಲಾಪ್: ಆಂಗ್ಲರಿಗೆ ಶರಣಾದ ಅಭಿಷೇಕ್ ಶರ್ಮಾ | Abhishek Sharma Falls Early for 9 in IND vs ENG T20 World Cup 2026 Semi-Final at Wankhede Stadium

Sports

oi-Madhusudhan KR

Abhishek Sharma: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್‌ 2026 ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಭಾರತ ಮುಖಾಮುಖಿಯಾಗಿವೆ. ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಟೀಂ ಇಂಡಿಯಾಗೆ ಆರಂಭದಲ್ಲೇ ಆಘಾತ ಎದುರಾಗಿದೆ. ಓಪನರ್ ಆಗಿ ಕಣಕ್ಕಳಿದ ಅಭಿಷೇಕ್‌ ಶರ್ಮಾ ಕೇವಲ 9 ರನ್‌ಗಳಿಗೆ ಕ್ಯಾಚ್‌ ನೀಡಿ ಪೆವಿಲಿಯನ್‌ನತ್ತ ನಡೆದರು.

ಟಾಸ್ ಸೋತ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರು, ಮೊದಲೇ ಬ್ಯಾಟಿಂಗ್ ಮಾಡಲು ಬಯಸಿದ್ದೇವು ಎಂದು ತಿಳಿಸಿದ್ದಾರೆ. ಅದಂತೆಯೇ ಮೊದಲು ಬ್ಯಾಟ್‌ ಬೀಸಿದ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಅಭಿಷೇಕ್‌ ಶರ್ಮಾ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಕಡೆ ನಡೆದರು. ಆದರೂ, ಕುಗ್ಗದ ಸಂಜು ಸ್ಯಾಮ್ಸನ್‌ ಸ್ಪೋಟಕ ಬ್ಯಾಟಿಂಗ್‌ ಮುಂದುವರೆಸಿದ್ದಾರೆ.

Abhishek Sharma Falls Early for 9 in IND vs ENG T20 World Cup 2026 Semi-Final at Wankhede Stadium

ಇನ್ನೂ ಸತತ ಮೂರನೇ ಬಾರಿ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ಹಂತದಲ್ಲಿ ಮುಖಾಮುಖಿ ಆಗುತ್ತಿರುವುದು ವಿಶೇಷ. ಹಿಂದಿನ ಎರಡು ಆವೃತ್ತಿಗಳಲ್ಲೂ ಈ ಪಂದ್ಯದಲ್ಲಿ ಗೆದ್ದ ತಂಡವೇ ಕೊನೆಯಲ್ಲಿ ಟ್ರೋಫಿ ಗೆದ್ದಿದೆ ಎಂಬುದು ಗಮನಾರ್ಹ ಸಂಗತಿ.

ವೆಸ್ಟ್ ಇಂಡೀಸ್ ವಿರುದ್ಧ ಸಂಜು ಸ್ಫೋಟಕ ಬ್ಯಾಟಿಂಗ್

ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗೆದ್ದು ಫೈನಲ್ ಪ್ರವೇಶ ಮಾಡಿತು. ಸಂಜು ಈ ಪಂದ್ಯದಲ್ಲಿ 97 ರನ್‌ಗಳನ್ನು ಕಲೆಹಾಕಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ಉತ್ತಮ ಫಾರ್ಮ್‌ನಲ್ಲಿರುವ ಇಂಗ್ಲೆಂಡ್

ಮತ್ತೊಂದೆಡೆ, ಹ್ಯಾರಿ ಬ್ರೂಕ್ಸ್‌ ನೇತೃತ್ವದ ಇಂಗ್ಲೆಂಡ್ ತಂಡ ತನ್ನ ಕೊನೆಯ ಐದು ಪಂದ್ಯಗಳಲ್ಲಿ ಜಯ ಸಾಧಿಸಿ ಉತ್ತಮ ಫಾರ್ಮ್‌ನಲ್ಲಿದೆ. ವಿಶೇಷವಾಗಿ ಆಲ್‌ರೌಂಡರ್ ವಿಲ್‌ ಜಾಕ್ಸ್‌ ಭರ್ಜರಿ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿನ ಈ ಸೆಮಿಫೈನಲ್‌ನಲ್ಲಿ ಗೆಲ್ಲುವ ತಂಡ ಭಾನುವಾರ ನಡೆಯುವ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕಣಕ್ಕಿಳಿಯಲಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/abhishek-sharma-falls-early-for-9-in-ind-vs-eng-t20-world-cup-2026-semi-final-at-wankhede-stadium-446053.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo