
India
oi-Madhusudhan KR
Adani: ಯೂತ್4 ಜಾಬ್ಸ್ ಫೌಂಡೇಶನ್‌ನ ಅಂಗಸಂಸ್ಥೆಯಾದ ನಾಟ್ ಜಸ್ಟ್ ಆರ್ಟ್ (NotJustArt),ಅದಾನಿ ಗ್ರೀನ್ ಎಕ್ಸ್‌ಟಾಕ್ಸ್ (Adani GreenXTalks) ಸಹಯೋಗದೊಂದಿಗೆ ಜಾಗತಿಕ ಫೋಟೋಗ್ರಫಿ ಸ್ಪರ್ಧೆ 2026ರ ಐದನೇ ಆವೃತ್ತಿಯನ್ನು ಅಧಿಕೃತವಾಗಿ ಆರಂಭಿಸಿರುವುದಾಗಿ ಘೋಷಿಸಿದೆ.
ಈ ಸ್ಪರ್ಧೆಯು ವಿಶ್ವದಾದ್ಯಂತದ ಎಲ್ಲಾ ವಿಕಲಚೇತನರಿಗೂ ಮುಕ್ತವಾಗಿದ್ದು, ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಈ ವೇದಿಕೆಯು ಗಮನಾರ್ಹವಾಗಿ ಬೆಳೆದಿದೆ. ಇದು ಇದುವರೆಗೆ 80 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿದ್ದು, 30ಕ್ಕೂ ಹೆಚ್ಚು ದೇಶಗಳಿಂದ 50,000ಕ್ಕೂ ಅಧಿಕ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದಾರೆ.
ಹಿಂದಿನ ಆವೃತ್ತಿಗಳಲ್ಲಿ ಆಯ್ಕೆಯಾದ ಅತ್ಯುತ್ತಮ ಚಿತ್ರಗಳನ್ನು ಜಪಾನ್ ಮತ್ತು ದುಬೈ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

ಸ್ಪರ್ಧಿಗಳು ತಮ್ಮ ಜೀವನದ ವೈಯಕ್ತಿಕ ಅನುಭವಗಳು ಮತ್ತು ವಿಶಿಷ್ಟ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಬಹುದಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸದ ವಿಭಿನ್ನ ಜೀವನದ ಕಥೆಗಳನ್ನು ಛಾಯಾಚಿತ್ರಗಳ ಮೂಲಕ ಜಗತ್ತಿಗೆ ಪರಿಚಯಿಸುವುದು ಈ ಸ್ಪರ್ಧೆಯ ಆಶಯವಾಗಿದೆ. ಕಲಾತ್ಮಕ ಕ್ಷೇತ್ರದಲ್ಲಿ ವಿಕಲಚೇತನರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದು ಮತ್ತು ಅವರ ಸೃಜನಶೀಲತೆಯನ್ನು ಗೌರವಿಸುವ ವಾತಾವರಣ ನಿರ್ಮಿಸುವುದು ಇದರ ಮೂಲ ಗುರಿಯಾಗಿದೆ.
ಯೂತ್4ಜಾಬ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಸಿಇಒ ಆಗಿರುವ ಮೀರಾ ಶೇಣಾಯ್ ಅವರು ಈ ಅಭಿಯಾನದ ಮಹತ್ವವನ್ನು ವಿವರಿಸುತ್ತಾ ಕೆಲವು ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ. ವಿಕಲಚೇತನ ವ್ಯಕ್ತಿಗಳಿಗೆ ಸರಿಯಾದ ವೇದಿಕೆ ಮತ್ತು ಅವಕಾಶವನ್ನು ನೀಡಿದಾಗ, ಅವರು ಅತ್ಯಂತ ಶಕ್ತಿಶಾಲಿ ಮತ್ತು ಸೃಜನಶೀಲ ರೀತಿಯಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬಲ್ಲರು ಎಂಬುದನ್ನು ಈ ಉಪಕ್ರಮವು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.
ಹಿಂದಿನ ಆವೃತ್ತಿಗಳಲ್ಲಿ ವಿಜೇತರಾದ ಅನೇಕರು ಜೀವನದ ಕಠಿಣ ಸವಾಲುಗಳನ್ನು ಮೀರಿ ನಿಂತವರು. ಅಂತಹ ಪ್ರತಿಭೆಗಳು ಇಂದು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡುತ್ತಿದ್ದಾರೆ. ಕೇವಲ ಕಲೆಯಷ್ಟೇ ಅಲ್ಲದೆ, ಈ ವೇದಿಕೆಯು ವಿಕಲಚೇತನರಲ್ಲಿ ನಾಯಕತ್ವದ ಗುಣವನ್ನು ಬೆಳೆಸಲು ಮತ್ತು ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಗಳಿಸಿಕೊಡಲು ನೆರವಾಗುತ್ತಿದೆ ಎಂದು ಹೇಳಿದ್ದಾರೆ.
ಅದಾನಿ ಏರ್‌ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ನಿರ್ದೇಶಕ ಜೀತ್ ಅದಾನಿ ಅವರು, ಈ ಸಹಯೋಗದ ಉದ್ದೇಶ ಮತ್ತು ಛಾಯಾಗ್ರಹಣ ಕಲೆಯ ಮಹತ್ವದ ಬಗ್ಗೆ ಮಾತನಾಡುತ್ತಾ ಕೆಲವು ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ. ಈ ಸಹಯೋಗದ ಮುಖ್ಯ ಉದ್ದೇಶವೆಂದರೆ ಪ್ರತಿಭಾವಂತ ವಿಕಲಚೇತನ ಛಾಯಾಗ್ರಾಹಕರಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಒಂದು ಜಾಗತಿಕ ವೇದಿಕೆಯನ್ನು ಒದಗಿಸುವುದಾಗಿದೆ. ಛಾಯಾಗ್ರಹಣವು ಒಂದು ಸಾರ್ವತ್ರಿಕ ಮತ್ತು ಸೃಜನಶೀಲ ಮಾಧ್ಯಮವಾಗಿದೆ. ಇದು ಯಾವುದೇ ಭಾಷೆಯ ಹಂಗಿಲ್ಲದೆ ಪ್ರಬಲವಾದ ಕಥೆಗಳನ್ನು ಹೇಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು.
ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ ಗೌರವಿಸಲು ಬೃಹತ್ ಮೊತ್ತದ ಬಹುಮಾನ ಮೊತ್ತವನ್ನು ಘೋಷಿಸಿದೆ.. ಮೊದಲ ಬಹುಮಾನವಾಗಿ ರೂಪಾಯಿ 5 ಲಕ್ಷ ರೂಪಾಯಿ ನಗದು ನೀಡಲಾಗುತ್ತದೆ. ದ್ವಿತೀಯ ಸ್ಥಾನಕ್ಕೆ 3 ಲಕ್ಷ ರೂಪಾಯಿ ಹಾಗೂ ತೃತೀಯ ಸ್ಥಾನಕ್ಕೆ 2 ಲಕ್ಷ ರೂಪಾಯಿ ನೀಡಲಾಗುತ್ತದೆ. ನಾಲ್ಕರಿಂದ-ಹತ್ತನೇ ಸ್ಥಾನಗಳವರೆಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ.
ಸ್ಪರ್ಧೆಯ ಅತ್ಯುತ್ತಮ 20 ಛಾಯಾಚಿತ್ರಗಳನ್ನು ವಿಶೇಷವಾಗಿ ಆಯೋಜಿಸಲಾದ ಪ್ರದರ್ಶನದಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇಡಲಾಗುವುದು. ಮೊದಲ 10 ವಿಜೇತರಿಗೆ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ವಿನ್ಯಾಸಕ ಮೈಕೆಲ್ ಫೋಲಿ ಅವರು ವಿಶೇಷವಾಗಿ ವಿನ್ಯಾಸಗೊಳಿಸಿದ ವಿಶೇಷ ಟ್ರೋಫಿಗಳನ್ನು ಪ್ರದಾನ ಮಾಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಅವರ ಉತ್ಸಾಹ ಮತ್ತು ಸೃಜನಶೀಲತೆಯನ್ನು ಗೌರವಿಸಿ ಪ್ರಮಾಣಪತ್ರ ನೀಡಲಾಗುವುದು.
ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಪ್ರದರ್ಶನವು 2026ರ ಜೂನ್ 24ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಆಯ್ಕೆಯಾದ ಭಾರತೀಯ ವಿಜೇತರು ಮತ್ತು ಒಬ್ಬ ಅಂತಾರಾಷ್ಟ್ರೀಯ ವಿಜೇತರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತಗಲುವ ಪ್ರಯಾಣ ಮತ್ತು ವಸತಿ ವೆಚ್ಚವನ್ನು ಆಯೋಜಕರೇ ಭರಿಸಲಿದ್ದಾರೆ. ಆಯ್ಕೆಯಾದ ಅತ್ಯುತ್ತಮ ಚಿತ್ರಗಳನ್ನು ವಿವಿಧ ಮಾಧ್ಯಮ ವೇದಿಕೆಗಳಲ್ಲಿ ಮತ್ತು ಜಾಗತಿಕ ಅಭಿಯಾನಗಳಲ್ಲಿ ಪ್ರದರ್ಶಿಸಲಾಗುತ್ತದೆ. ಇದು ಕಲಾವಿದರಿಗೆ ದೊಡ್ಡ ಮಟ್ಟದ ಮನ್ನಣೆ ತಂದುಕೊಡಲಿದೆ
‘ನಾಟ್ ಜಸ್ಟ್ ಆರ್ಟ್’ ಸಂಸ್ಥೆಯು ವಿಶೇಷವಾಗಿ ಛಾಯಾಗ್ರಹಣ ಕ್ಷೇತ್ರದಲ್ಲಿ ಅಂಗವೈಕಲ್ಯ ವಿಕಲಚೇತನರಲ್ಲಿರುವ ಕಲಾತ್ಮಕ ಪ್ರತಿಭೆಯನ್ನು ಉತ್ತೇಜಿಸುವುದರ ಮೇಲೆ ಗಮನ ಹರಿಸುತ್ತಿದ್ದು, ಈ ಮೂಲಕ ಕಲಾ ಲೋಕದಲ್ಲಿ ಎಲ್ಲರನ್ನೂ ಒಳಗೊಳ್ಳುವಂತಹ ಒಂದು ವ್ಯವಸ್ಥೆಯನ್ನು ನಿರ್ಮಿಸಲು ಇದು ಶ್ರಮಿಸುತ್ತಿದೆ. ಇದು ಯೂತ್4Jobs Foundationನ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೌಶಲ್ಯಾಭಿವೃದ್ಧಿ ಹಾಗೂ ತಂತ್ರಜ್ಞಾನ ಆಧಾರಿತ ಉಪಕ್ರಮಗಳ ಮೂಲಕ ಅಂಗವೈಕಲ್ಯ ಹೊಂದಿರುವ ಯುವಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಈಗಾಗಲೇ ನೋಂದಣಿಗಳು ಈಗಾಗಲೇ ಆರಂಭವಾಗಿದ್ದು, ವಿಶ್ವದಾದ್ಯಂತದ ಅಂಗವೈಕಲ್ಯ ಹೊಂದಿರುವ ಛಾಯಾಗ್ರಾಹಕರನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/adani-partners-with-youth4jobs-foundation-for-global-ability-photography-challenge-2026-know-detail-448465.html. xn--babytilbehr-pgb.com does not claim ownership of this content. All rights remain with the original publisher.
