
India
oi-Madhusudhan KR
Karan Adani: ನವದೆಹಲಿಯಲ್ಲಿ ಮಾರ್ಚ್ 13ರಂದು ನಡೆದ ಲೀಡರ್‌ಶಿಪ್ ಶೃಂಗಸಭೆಯಲ್ಲಿ ಮಾತನಾಡಿದ ಕರಣ್ ಅದಾನಿ ಅವರು, ಭಾರತದ ಸಾಮಾಜಿಕ ಮೂಲಸೌಕರ್ಯವನ್ನು ಬಲಪಡಿಸಲು ಅದಾನಿ ಸಮೂಹವು ಮಹತ್ವದ ಹೆಜ್ಜೆ ಇಟ್ಟಿದೆ. ಮುಂದಿನ 10 ವರ್ಷಗಳಲ್ಲಿ ದೇಶಾದ್ಯಂತ 300 ಶಾಲೆಗಳು ಮತ್ತು 30 ಅತ್ಯಾಧುನಿಕ ಆಸ್ಪತ್ರೆಗಳನ್ನು ನಿರ್ಮಿಸಲು ಅದಾನಿ ಸಮೂಹವು ₹60,000 ಕೋಟಿ ಹೂಡಿಕೆ ಮಾಡಲು ಯೋಜಿಸಿದೆ. ಆರ್ಥಿಕ ಬೆಳವಣಿಗೆಯು ಕೇವಲ ಲಾಭ ಗಳಿಕೆಗೆ ಮಾತ್ರ ಸೀಮಿತವಾಗಬಾರದು. ಅದು ಬಲವಾದ ಸಾಮಾಜಿಕ ಸಂಸ್ಥೆಗಳ ಬೆಂಬಲವಾಗಬೇಕೆಂಬುದು ಅದಾನಿ ಗ್ರೂಪ್‌ನ ನಂಬಿಕೆಯಾಗಿದೆ ಎಂದು ಹೇಳಿದರು.
ಅದಾನಿ ಗ್ರೂಪ್‌ಮ ಈ ಬೃಹತ್ ಸಾಮಾಜಿಕ ಹೂಡಿಕೆ ಯೋಜನೆಯು ಕೇವಲ ಇತ್ತೀಚಿನ ನಿರ್ಧಾರವಲ್ಲ. 2022ರಲ್ಲಿ ಅದಾನಿ ಸಮೂಹದ ಅಧ್ಯಕ್ಷರಾದ ಗೌತಮ್ ಅದಾನಿ ಅವರು ತಮ್ಮ 60ನೇ ಜನ್ಮದಿನದ ಅಂಗವಾಗಿ ಮಾಡಿದ ವಿಶೇಷ ಪ್ರತಿಜ್ಞೆಯ ಭಾಗವಾಗಿ ಇದನ್ನು ಘೋಷಿಸಿದ್ದರು. ಈ ಯೋಜನೆಯು ‘ಸಮಾಜಕ್ಕೆ ಸೇವೆ’ ಎಂಬ ತತ್ವದ ಆಧಾರದ ಮೇಲೆ ರೂಪುಗೊಂಡಿದ್ದು, ದೇಶದಾದ್ಯಂತ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಸೌಲಭ್ಯಗಳನ್ನು ಬಲಪಡಿಸುವುದಕ್ಕೆ ವಿಶೇಷ ಗಮನಹರಿಸಲಾಗದೆ. ಇದರಿಂದ ಭಾರತದ ಸಾಮಾಜಿಕ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.

ಕರಣ್ ಅದಾನಿ ಅವರ ಪ್ರಕಾರ, ಮುಂದಿನ ಹತ್ತು ವರ್ಷಗಳಲ್ಲಿ ಹಂತ ಹಂತವಾಗಿ ಈ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದರ ಮುಖ್ಯ ಉದ್ದೇಶ ಸಮುದಾಯಗಳಲ್ಲಿ ದೀರ್ಘಕಾಲಿಕ ಮತ್ತು ಸುಸ್ಥಿರ ಬದಲಾವಣೆಯನ್ನು ತರುವುದಾಗಿದೆ. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಭೌತಿಕ ಮೂಲಸೌಕರ್ಯಗಳು ಮಹತ್ವದ ಪಾತ್ರ ವಹಿಸುತ್ತವೆ. ಆದರೆ, ಶಾಲೆಗಳು ಮತ್ತು ಆಸ್ಪತ್ರೆಗಳಂತಹ ಸಾಮಾಜಿಕ ಮೂಲಸೌಕರ್ಯಗಳು ಒಂದು ರಾಷ್ಟ್ರದ ಬುನಾದಿಯನ್ನು ಬಲಪಡಿಸಲು ಅತಿ ಮುಖ್ಯ ಎಂದು ಅವರು ಹೇಳಿದರು.
ಪ್ರಸ್ತಾವಿತ ಶಾಲೆಗಳು ಕೇವಲ ಸಾಂಪ್ರದಾಯಿಕ ಶಿಕ್ಷಣಕ್ಕೆ ಸೀಮಿತವಾಗದೆ, ವೈವಿಧ್ಯಮಯ ಸಮುದಾಯಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿವೆ. ಇದು ಮುಂದಿನ ಪೀಳಿಗೆಯ ಸಮರ್ಥ ನಾಯಕರನ್ನು ರೂಪಿಸಲು ಸಹಕಾರಿಯಾಗಲಿದೆ. ಇನ್ನು ಆಸ್ಪತ್ರೆಗಳ ವಿಷಯಕ್ಕೆ ಬಂದರೆ, ಅವು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ತಲುಪಲು ಕಷ್ಟಕರವಾದ ಅಥವಾ ಹಿಂದುಳಿದ ಪ್ರದೇಶಗಳಲ್ಲಿ ಸ್ಥಾಪನೆಯಾಗಲಿವೆ. ಇದು ಸಾಮಾನ್ಯ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆಗಳು ಸುಲಭವಾಗಿ ದೊರೆಯುವಂತೆ ಮಾಡಲಿದೆ ಎಂದು ತಿಳಿಸಿದರು.
ಅದಾನಿ ಗ್ರೂಪ್‌ನ ಸಾಮಾಜಿಕ ಅಭಿವೃದ್ಧಿ ವಿಭಾಗವಾದ ‘ಅದಾನಿ ಫೌಂಡೇಶನ್’, ಈ ವರ್ಷದ ಆಗಸ್ಟ್‌ನಲ್ಲಿ ತನ್ನ ಕಾರ್ಯಾಚರಣೆಯ 30 ವರ್ಷಗಳನ್ನು ಪೂರ್ಣಗೊಳಿಸಲಿದೆ. ಈ ಸುದೀರ್ಘ ಅವಧಿಯಲ್ಲಿ ಫೌಂಡೇಶನ್ ಮಾಡಿರುವ ಕೆಲಸಗಳ ಮುಂದುವರಿದ ಭಾಗವೇ ಈ ಹೊಸ ಉಪಕ್ರಮವಾಗಿದೆ. ಪ್ರಸ್ತುತ, ಫೌಂಡೇಶನ್ ದೇಶದ ಹಲವು ರಾಜ್ಯಗಳಲ್ಲಿ ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿ ಮತ್ತು ಸುಸ್ಥಿರ ಜೀವನೋಪಾಯದಂತಹ ಪ್ರಮುಖ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ.
ಬಂದರುಗಳು, ವಿಮಾನ ನಿಲ್ದಾಣಗಳು, ಲಾಜಿಸ್ಟಿಕ್ಸ್ ಜಾಲಗಳು ಮತ್ತು ಇಂಧನ ಮೂಲಸೌಕರ್ಯಗಳು ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತವೆ. ಆದರೆ, ಅದಕ್ಕಿಂತಲೂ ಮುಖ್ಯವಾಗಿ ಶಾಲೆಗಳು ಮತ್ತು ಆಸ್ಪತ್ರೆಗಳಂತಹ ಸಾಮಾಜಿಕ ಸಂಸ್ಥೆಗಳು ಜನಸಾಮಾನ್ಯರಿಗೆ ಅವಕಾಶಗಳ ಬಾಗಿಲನ್ನು ತೆರೆಯುತ್ತವೆ. ಭೌತಿಕ ಮೂಲಸೌಕರ್ಯಗಳು ರಾಷ್ಟ್ರದ ಆರ್ಥಿಕ ಚಕ್ರವನ್ನು ವೇಗಗೊಳಿಸಿದರೆ, ಸಾಮಾಜಿಕ ಮೂಲಸೌಕರ್ಯಗಳು ದೇಶದ ಜನರನ್ನು ಸಬಲೀಕರಣಗೊಳಿಸುತ್ತವೆ. ಈ ಎರಡೂ ವಲಯಗಳು ಕೈಜೋಡಿಸಿದಾಗ ಮಾತ್ರ ಒಂದು ದೇಶವು ಸಮಗ್ರವಾಗಿ ಅಭಿವೃದ್ಧಿ ಹೊಂದಲು ಸಾಧ್ಯ.
ದಶಕಗಳ ಕಾಲ ಸಮುದಾಯಗಳಿಗೆ ನಿರಂತರವಾಗಿ ಸೇವೆ ಸಲ್ಲಿಸುವ ಮತ್ತು ದೇಶದ ದೀರ್ಘಕಾಲಿಕ ಪ್ರಗತಿಗೆ ಕೊಡುಗೆ ನೀಡುವಂತಹ ಶಾಶ್ವತ ಸಂಸ್ಥೆಗಳನ್ನು ನಿರ್ಮಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಆರ್ಥಿಕ ವಿಸ್ತರಣೆ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಇವೆರಡರ ನಡುವೆ ಸರಿಯಾದ ಸಮತೋಲನವನ್ನು ಕಾಯ್ದುಕೊಂಡಾಗ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯ. ಅದಾನಿ ಗ್ರೂಪ್‌ನ ಜವಾಬ್ದಾರಿಯು ಕೇವಲ ಲಾಭದಾಯಕ ವ್ಯವಹಾರಗಳನ್ನು ನಿರ್ಮಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತದ ದೀರ್ಘಕಾಲೀನ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಸಹ ಕೊಡುಗೆ ನೀಡುವುದು ತಮ್ಮ ಜವಾಬ್ದಾರಿಯ ಭಾಗವಾಗಿದೆ ಎಂದು ಹೇಳಿದರು.
-

LPG ಸಿಲಿಂಡರ್ ಕೊರತೆ: ಗಗನಕ್ಕೇರಿದ ಸೌದೆ ಬೆಲೆ, ಸ್ಟೌವ್ ರಿಪೇರಿ ಅಂಗಡಿಗಳಿಗೆ ಫುಲ್ ಡಿಮ್ಯಾಂಡ್
-

Karan Adani: ಆರ್ಥಿಕ ಬೆಳವಣಿಗೆಗೆ ದಕ್ಷ ಮೂಲಸೌಕರ್ಯ ಹಾಗೂ ಸಾರಿಗೆ ಅತ್ಯಗತ್ಯ- ಕರಣ್ ಅದಾನಿ ಪ್ರತಿಪಾದನೆ
-

Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಮತ್ತಷ್ಟು ಕುಸಿತ: ಇಲ್ಲಿದೆ ಮಾರ್ಚ್ 14ರ ದರಪಟ್ಟಿ
-

ಅದಾನಿ ಫೌಂಡೇಶನ್ ಮಹತ್ವದ ಕಾರ್ಯ, 10 ಲಕ್ಷ ಮಹಿಳಾ ಉದ್ಯಮಿಗಳನ್ನು ಬೆಳೆಸುವ ಗುರಿ | Swabhimaan Programme
-

Arecanut Price: ಶಿವಮೊಗ್ಗ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ?: ಇಲ್ಲಿದೆ ಮಾರ್ಚ್ 13ರ ದರಪಟ್ಟಿ
-

Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ
-

Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು
-

ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ
-

Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್
-

Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ
-

ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion
-

ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ
Disclaimer: This content was automatically imported from a third-party source via RSS feed. The original source is: https://kannada.oneindia.com/news/india/adani-group-to-invest-60-000-crore-for-300-schools-and-30-hospitals-in-india-says-karan-adani-447109.html. xn--babytilbehr-pgb.com does not claim ownership of this content. All rights remain with the original publisher.
