
India
oi-Madhusudhan KR
Air Ambulance Crash: ಜಾರ್ಖಂಡ್ನಿಂದ ದೆಹಲಿಗೆ 7 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಆಂಬ್ಯುಲೆನ್ಸ್ ರಾಂಚಿ ಬಳಿ ಸೋಮವಾರ (ಫೆಬ್ರವರಿ 23) ರಾತ್ರಿ ಪತನವಾಗಿದೆ. ಈ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಧಿಕೃತ ಮಾಹಿತಿ ನೀಡಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನದಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ರೋಗಿ ಸೇರಿದಂತೆ ಒಟ್ಟು ಏಳು ಮಂದಿ ಇದ್ದರು ಎನ್ನಲಾಗಿದೆ. ಇನ್ನೂ ವಿಮಾನ ಪತನವಾದ ಸ್ಥಳಕ್ಕೆ ತಕ್ಷಣವೇ ರಕ್ಷಣಾ ತಂಡಗಳು ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲು ಕ್ರಮ ಕೈಗೊಳ್ಳಲಾಗಿದೆ.

ಛತ್ರ ಜಿಲ್ಲೆ ಬಳಿ ವಿಮಾನ ಪತನ
ಏರ್ ಆಂಬ್ಯುಲೆನ್ಸ್ನಲ್ಲಿದ್ದ ರೋಗಿ ಸಂಜಯ್ ಕುಮಾರ್ (41) ಮೃತಪಟ್ಟಿದ್ದು, ವೈದ್ಯರು, ನರ್ಸ್ ಸೇರಿ ಪೈಲಟ್ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದ ರಾಡಾರ್ ಸಂಪರ್ಕ ಕಡಿತಗೊಂಡಿತ್ತು ಎಂದು ಎಂದು ವರದಿಯಾಗಿದೆ. ಈ ವಿಮಾನ ರಾತ್ರಿ 10 ಗಂಟೆಗೆ ದೆಹಲಿ ತಲುಪಬೇಕಿತ್ತು. ದೆಹಲಿಯ ಕಡೆಗೆ ಹೊರಟಿದ್ದ ವೇಳೆ ಜಾರ್ಖಂಡ್ನ ಛತ್ರ ಜಿಲ್ಲೆಯ ಸಿಮಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ಮತಂಡ್ ಗ್ರಾಮದ ಬಳಿಯ ಕಾಡಿನಲ್ಲಿ ಅಪಘಾತಕ್ಕೀಡಾಯಿತು ಎಂದು ವರದಿಯಾಗಿದೆ.
ದೆಹಲಿ ಕಡೆಗೆ ಪ್ರಯಾಣ ಬೆಳೆಸಿದ್ದ ವಿಮಾನ
ರೆಡ್ಬರ್ಡ್ ಏರ್ವೇಸ್ ನಿರ್ವಹಿಸುತ್ತಿದ್ದ ‘ಬೀಚ್ಕ್ರಾಫ್ಟ್ ಸಿ90’ ಮಾದರಿಯ ಈ ವಿಮಾನವು ಜಾರ್ಖಂಡ್ನ ರಾಜಧಾನಿ ರಾಂಚಿಯಿಂದ ದೆಹಲಿ ಕಡೆಗೆ ಪ್ರಯಾಣ ಬೆಳೆಸಿತ್ತು. ವಿಮಾನ ಹಾರಾಟ ಆರಂಭಿಸಿ ಕೋಲ್ಕತ್ತಾ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಸಾಧಿಸಿತ್ತು. ಆದರೆ, ರಾತ್ರಿ 7:34ರ ಸುಮಾರಿಗೆ ವಾರಣಾಸಿಯಿಂದ ಸುಮಾರು 100 ನಾಟಿಕಲ್ ಮೈಲಿ ಆಗ್ನೇಯ ದಿಕ್ಕಿನಲ್ಲಿ ಚಲಿಸುತ್ತಿರುವ ವೇಳೆ ಇದ್ದಕ್ಕಿದ್ದಂತೆ ರಡಾರ್ ಮತ್ತು ಸಂವಹನ ಸಂಪರ್ಕ ಕಳೆದುಕೊಂಡಿತು ಎಂದು ಡಿಜಿಸಿಎ ತಿಳಿಸಿದೆ.
AIR MISHAP ⚠️
Air ambulance traveling from Ranchi, Jharkhand, to Delhi crashed in Simaria, Chatra district.
Seven people including two pilots and a patient were on board.
No clarity yet on survivors.pic.twitter.com/1AIxPpxJyu— Abhijit Majumder (@abhijitmajumder) February 23, 2026
ಅಪಘಾತಕ್ಕೀಡಾದ ವಿಮಾನದ ಟೈಲ್ ಸಂಖ್ಯೆ VT-AJV ಆಗಿತ್ತು. ವಿಮಾನವು ಛತ್ರ ಜಿಲ್ಲೆಯ ವ್ಯಾಪ್ತಿಯಲ್ಲಿ ಪತನಗೊಂಡಿದ್ದು, ಸ್ಥಳಕ್ಕೆ ರಕ್ಷಣಾ ತಂಡಗಳು ಮತ್ತು ಸ್ಥಳೀಯ ಪೊಲೀಸರು ಧಾವಿಸಿದ್ದಾರೆ. ಸಂಪರ್ಕ ಕಡಿತಕ್ಕೆ ತಾಂತ್ರಿಕ ದೋಷವೇ ಕಾರಣವೇ ಅಥವಾ ಹವಾಮಾನ ವೈಪರೀತ್ಯವೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/air-ambulance-flying-to-delhi-with-7-onboard-crashes-in-jharkhand-s-chatra-district-know-details-444863.html. xn--babytilbehr-pgb.com does not claim ownership of this content. All rights remain with the original publisher.
