Allu Arjun: ವಿವಾಹ ವಾರ್ಷಿಕೋತ್ಸವ: ಪತ್ನಿಗೆ 1.81 ಕೋಟಿ ಬೆಲೆಯ ಮರ್ಸಿಡಿಸ್ ಕಾರು ಗಿಫ್ಟ್‌ ಕೊಟ್ಟ ಅಲ್ಲು ಅರ್ಜುನ್ | Allu Arjun Gifts 1 Crore Worth Mercedes Benz AMG CLE 53 To Wife Sneha Reddy on 15th Anniversary

Entertainment

oi-Manohara M

ಟಾಲಿವುಡ್‌ನ ಅತ್ಯಂತ ಪ್ರೀತಿಪಾತ್ರ ಜೋಡಿಗಳಲ್ಲಿ ಒಂದಾದ ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಮಾರ್ಚ್ 6ರಂದು ತಮ್ಮ 15ನೇ ವಿವಾಹ ವಾರ್ಷಿಕೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಅಲ್ಲು ಅರ್ಜುನ್ ತಮ್ಮ ಪತ್ನಿಗೆ ಕೋಟಿ ಬೆಲೆಯ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಸರ್‌ಪ್ರೈಸ್‌ ಕೊಟ್ಟಿದ್ದಾರೆ.

ಡಬಲ್ ಸಂಭ್ರಮದಲ್ಲಿ ಕುಟುಂಬ

ಈ ವರ್ಷದ ಮಾರ್ಚ್ 6 ಅಲ್ಲು ಕುಟುಂಬಕ್ಕೆ ಎರಡು ಪಟ್ಟು ಸಂಭ್ರಮವನ್ನು ತಂದಿದೆ. ಒಂದೆಡೆ ಅಲ್ಲು ಅರ್ಜುನ್ ದಂಪತಿಯ 15ನೇ ವರ್ಷದ ದಾಂಪತ್ಯ ಜೀವನದ ಸಂಭ್ರಮವಾದರೆ, ಅದೇ ದಿನ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ಅವರು ನಯನಿಕಾ ರೆಡ್ಡಿ ಅವರೊಂದಿಗೆ ವಿವಾಹ ಬಂಧನಕ್ಕೊಳಗಾದರು. ಈ ಮೂಲಕ ಕುಟುಂಬದಲ್ಲಿ ಮದುವೆ ಮತ್ತು ವಾರ್ಷಿಕೋತ್ಸವದ ಸಂಭ್ರಮ ಮನೆಮಾಡಿತ್ತು.

Allu Arjun

₹1.81 ಕೋಟಿ ಮೌಲ್ಯದ ಐಷಾರಾಮಿ ಉಡುಗೊರೆ

ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಅಲ್ಲು ಅರ್ಜುನ್ ಅವರು ಸ್ನೇಹಾ ರೆಡ್ಡಿ ಅವರಿಗೆ ಮರ್ಸಿಡಿಸ್-ಬೆಂಜ್ ಎಎಮ್‌ಜಿ ಸಿಎಲ್‌ಇ 53 (Mercedes-Benz AMG CLE 53) ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೈದರಾಬಾದ್‌ನ ಮಾರುಕಟ್ಟೆ ದರದಂತೆ ಈ ಐಷಾರಾಮಿ ಕಾರಿನ ಬೆಲೆ ಸುಮಾರು ₹1.81 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

ವಿಡಿಯೋ ವೈರಲ್

ನಟ ಅಲ್ಲು ಅರ್ಜುನ್ ಅವರ ತಂಡವು ಹಂಚಿಕೊಂಡಿರುವ ವಿಡಿಯೋದಲ್ಲಿ, ಅರ್ಜುನ್ ಮತ್ತು ಅವರ ತಂದೆ ಅಲ್ಲು ಅರವಿಂದ್ ಅವರು ಒಟ್ಟಾಗಿ ಹೊಸ ಕಾರಿನ ಕೀಲಿಯನ್ನು ಸ್ನೇಹಾ ಅವರಿಗೆ ಹಸ್ತಾಂತರಿಸುವುದನ್ನು ಕಾಣಬಹುದು. ಕಾರಿನ ಮೇಲಿದ್ದ ಪರದೆಯನ್ನು ಸರಿಸುತ್ತಿದ್ದಂತೆ ಅತ್ಯಂತ ಸಂತಸಗೊಂಡ ಸ್ನೇಹಾ ಅವರು ಪತಿ ಅಲ್ಲು ಅರ್ಜುನ್ ಅವರ ಕೆನ್ನೆಗೆ ಮುತ್ತಿಟ್ಟು ಪ್ರೀತಿ ವ್ಯಕ್ತಪಡಿಸಿದರು. ನಂತರ ಮಾವ ಅಲ್ಲು ಅರವಿಂದ್ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡರು. ಪತ್ನಿಯ ಮುಖದಲ್ಲಿನ ಮಂದಹಾಸ ಕಂಡ ಅಲ್ಲು ಅರ್ಜುನ್ ಅವರ ಮೊಗದಲ್ಲೂ ಸಂತಸ ಕಾಣುತ್ತಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ಜೋಡಿಯ ನಡುವಿನ ಪ್ರೀತಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಇಂದಿನ ಅತ್ಯಂತ ಸುಂದರವಾದ ದೃಶ್ಯ ಎಂದು ಹಲವರು ಕಾಮೆಂಟ್ ಬಾಕ್ಸ್‌ನಲ್ಲಿ ಹಾರ್ಟ್ ಎಮೋಜಿಗಳನ್ನು ಹಾಕುವ ಮೂಲಕ ಈ ದಂಪತಿಗೆ ಶುಭ ಹಾರೈಸಿದ್ದಾರೆ.

Allu Arjun

ಸ್ನೇಹಾ ರೆಡ್ಡಿ ಅವರ ಭಾವುಕ ಪೋಸ್ಟ್

ಸಂದರ್ಭದಲ್ಲಿ ಸ್ನೇಹಾ ರೆಡ್ಡಿ ಅವರು ತಮ್ಮ ಪತಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಭಾವನಾತ್ಮಕ ಸಂದೇಶವು ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತಮ್ಮ ಸಹೋದರ ಅಲ್ಲು ಸಿರೀಶ್ ಅವರ ವಿವಾಹ ಪೂರ್ವ ಸಮಾರಂಭದ ಸುಂದರ ಚಿತ್ರಗಳನ್ನು ಹಂಚಿಕೊಂಡ ಸ್ನೇಹಾ, ಅರ್ಜುನ್ ಅವರೊಂದಿಗಿನ 15 ವರ್ಷಗಳ ಸುದೀರ್ಘ ಪಯಣವನ್ನು ನೆನೆದಿದ್ದಾರೆ.

“15 ವರ್ಷಗಳ ನಂತರ… ನಾವು ಪ್ರೀತಿಯಿಂದ ತುಂಬಿದ ಜೀವನವನ್ನು ಕಟ್ಟಿಕೊಂಡಿದ್ದೇವೆ. ನನಗೆ ಎಲ್ಲವೂ ಆಗಿರುವ ಒಂದು ಕುಟುಂಬ ಮತ್ತು ಮನೆಯನ್ನು ನಿರ್ಮಿಸಿದ್ದೇವೆ. ನಮ್ಮ ಇಬ್ಬರು ಮುದ್ದಾದ ಮಕ್ಕಳು, ಎರಡು ಸಾಕು ನಾಯಿಗಳು ಮತ್ತು ಇವುಗಳ ನಡುವೆ ನಾವು ಸೃಷ್ಟಿಸಿದ ಅಸಂಖ್ಯಾತ ನೆನಪುಗಳೇ ನಮ್ಮ ಆಸ್ತಿ. ಜೀವನದ ಪ್ರತಿ ಹಂತದಲ್ಲೂ ನನ್ನ ಸಂಗಾತಿಯಾಗಿ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳು. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಸ್ನೇಹಾ ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಅಲ್ಲು ಅರ್ಜುನ್ ಮತ್ತು ತಮ್ಮ ಮುದ್ದಿನ ಮಕ್ಕಳಾದ ಅಯಾನ್ ಮತ್ತು ಅರ್ಹಾ ಅವರೊಂದಿಗೆ ಮದುವೆಯ ಸಮಾರಂಭದಲ್ಲಿ ತೆಗೆಸಿಕೊಂಡ ಸುಂದರ ಚಿತ್ರಗಳನ್ನು ಸ್ನೇಹಾ ಹಂಚಿಕೊಂಡಿದ್ದಾರೆ. “ನನ್ನ ಇಡೀ ಹೃದಯ ಇಲ್ಲೇ ಇದೆ” ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.‌


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/allu-arjun-gifts-1-crore-worth-mercedes-benz-amg-cle-53-to-wife-sneha-reddy-on-15th-anniversary-446371.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo