
Entertainment
-Manohara M
“ಹೆಬ್ಬುಲಿ” ನಟಿ ಅಮಲಾ ಪೌಲ್ ತಮ್ಮ ವೈಯಕ್ತಿಕ ಜೀವನ ಮತ್ತು ಮದುವೆಯ ಕುರಿತು ಇತ್ತೀಚೆಗೆ ಆಘಾತಕಾರಿ ಮತ್ತು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಾನು ಮತ್ತು ಜಗತ್ ದೇಸಾಯಿ ಡೇಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲೇ ಗರ್ಭಿಣಿಯಾಗಿದ್ದೆ ಎಂದು ಅಮಲಾ ಪೌಲ್ ಬಹಿರಂಗಪಡಿಸಿದ್ದಾರೆ. ಇದೇ ಕಾರಣಕ್ಕೆ ತಾವು ತರಾತುರಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ.
ನಟಿ ಎಂದು ಆತನಿಗೆ ತಿಳಿದಿರಲಿಲ್ಲ
ಜಗತ್ ದೇಸಾಯಿಗೆ ಅಮಲಾ ಪೌಲ್ ಒಬ್ಬ ದೊಡ್ಡ ನಟಿ ಎಂಬ ವಿಷಯ ಆರಂಭದಲ್ಲಿ ತಿಳಿದಿರಲಿಲ್ಲವಂತೆ. ಗೋವಾದಲ್ಲಿ ಇವರಿಬ್ಬರ ಭೇಟಿಯಾಗಿದ್ದು, ಅಮಲಾ ಕೇವಲ ಕೇರಳದ ಹುಡುಗಿ ಎಂದು ಜಗತ್ ಭಾವಿಸಿದ್ದರು. ಅಮಲಾ ಗರ್ಭಿಣಿಯಾದ ನಂತರವೇ ಜಗತ್ಗೆ ಆಕೆಯ ಸಿನಿಮಾ ಕೆರಿಯರ್ ಮತ್ತು ಜನಪ್ರಿಯತೆಯ ಬಗ್ಗೆ ತಿಳಿಯಿತು. ಜಗತ್ ದೇಸಾಯಿ ಅವರೊಂದಿಗಿನ ನನ್ನ ಸಂಬಂಧವು ತುಂಬಾ ಪಾರದರ್ಶಕವಾಗಿದೆ. ನಾವು ಒಟ್ಟಿಗೆ ಇದ್ದಾಗ ನಾನು ಅನಿರೀಕ್ಷಿತವಾಗಿ ಗರ್ಭಿಣಿಯಾದೆ. ಆ ಗರ್ಭಧಾರಣೆಯ ಕಾರಣದಿಂದಾಗಿ ನಮ್ಮ ಮದುವೆ ಆತುರದಲ್ಲಿ ಮತ್ತು ಅನಿರೀಕ್ಷಿತವಾಗಿ ನಡೆಯಿತು. ಸಮಾಜದ ಹಿತದೃಷ್ಟಿಯಿಂದ ಆ ಪರಿಸ್ಥಿತಿಯಿಂದಾಗಿ ನಾನು ಎರಡನೇ ಬಾರಿಗೆ ಮದುವೆಯಾಗಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

ಕೋವಿಡ್ ಸಮಯದಲ್ಲಿ ಮಾನಸಿಕ ಒತ್ತಡ
ತಂದೆಯ ಸಾವು ಮತ್ತು ಕೋವಿಡ್ ಸಮಯದಲ್ಲಿ ತಾನು ತೀವ್ರ ಮಾನಸಿಕ ಒತ್ತಡದಲ್ಲಿದ್ದೆ ಎಂದು ಅಮಲಾ ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಎದುರಾದ ಗರ್ಭಾವಸ್ಥೆಯು ತನ್ನ ಜೀವನಕ್ಕೆ ಒಂದು ಹೊಸ ದಿಕ್ಕು ಮತ್ತು ಅರ್ಥವನ್ನು ನೀಡಿತು ಎಂದು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ.
ಅಮಲಾಗೆ ಎರಡನೇ ಮದುವೆ
ಅಮಲಾ ಪೌಲ್ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ತಮಿಳು ನಿರ್ದೇಶಕ ಎ.ಎಲ್.ವಿಜಯ್ ಅವರನ್ನು ಪ್ರೀತಿಸುತ್ತಿದ್ದರು. 2014ರಲ್ಲಿ ಇಬ್ಬರೂ ವಿವಾಹವಾದರು. ಮದುವೆಯ ನಂತರ, ಅವರು ಸ್ವಲ್ಪ ಸಮಯದವರೆಗೆ ಸಿನಿಮಾಗಳಿಂದ ದೂರ ಉಳಿದಿದ್ದರು. ಆದಾಗ್ಯೂ, ಅವರ ವೈವಾಹಿಕ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ. ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದಾಗಿ 2017ರಲ್ಲಿ ವಿವಾಹವಾದ ಕೇವಲ ಮೂರು ವರ್ಷಗಳಲ್ಲೇ ವಿಚ್ಛೇದನ ಪಡೆದರು. ನಂತರ ಅಮಲಾ ಪೌಲ್ ತಮ್ಮ ಜೀವನವನ್ನು ದೀರ್ಘಕಾಲ ಒಂಟಿಯಾಗಿ ಕಳೆದರು.

ವಿಚ್ಛೇದನದ ನಂತರ, ಸುಮಾರು ಐದು ವರ್ಷಗಳ ಕಾಲ ಸಿನಿಮಾಗಳ ಮೇಲೆ ಕೇಂದ್ರೀಕರಿಸಿದ ಅಮಲಾ, ಕೈಗಾರಿಕೋದ್ಯಮಿ ಮತ್ತು ಗಾಯಕ ಜಗತ್ ದೇಸಾಯಿ ಅವರೊಂದಿಗೆ ಸಂಪರ್ಕಕ್ಕೆ ಬಂದರು. ಆ ಪರಿಚಯ ಸ್ನೇಹ ಮತ್ತು ನಂತರ ಪ್ರೀತಿಗೆ ತಿರುಗಿತು. ಇಬ್ಬರೂ ದೀರ್ಘಕಾಲ ಡೇಟಿಂಗ್ ಮಾಡುತ್ತಿದ್ದರು ಎಂಬ ವರದಿಗಳು ಬಂದವು. ಅದರಂತೆ ಅವರಿಬ್ಬರು ಆತ್ಮೀಯರಾಗುವ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದವು. ಆದರೆ ಅಮಲಾ ಎರಡನೇ ಬಾರಿಗೆ ಮದುವೆಯಾಗುವ ಮೂಲಕ ಎಲ್ಲರಿಗೂ ಶಾಕ್ ನೀಡಿದರು. 2023ರ ನವೆಂಬರ್ನಲ್ಲಿ ಜಗತ್ ದೇಸಾಯಿ ಅವರನ್ನು ಎರಡನೇ ವಿವಾಹವಾದರು. ಅಮಲಾ ಪೌಲ್ ಮತ್ತು ಜಗತ್ ದೇಸಾಯಿ ದಂಪತಿಗೆ 2024ರ ಜೂನ್ನಲ್ಲಿ ಗಂಡು ಮಗು ಜನಿಸಿದ್ದು, ಮಗುವಿಗೆ ‘ಇಲಾಯ್’ ಎಂದು ಹೆಸರಿಡಲಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/amala-paul-reveals-pregnancy-during-dating-with-jagat-desai-says-marriage-happened-in-a-hurry-011-447263.html. xn--babytilbehr-pgb.com does not claim ownership of this content. All rights remain with the original publisher.
