
India
oi-Shankrappa Parangi
ನವದೆಹಲಿ: ವಂದೇ ಭಾರತ್ ರೀತಿಯಲ್ಲೇ ಉತ್ತಮ ದರ್ಜೆಯ ಹಾಗೂ ಆರಾಮದಾಯಕ ಅನುಭವ ನೀಡುವ ಈ ‘ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು’ (Amrit Bharat Express Rail) ಹೊಸ ವಿನ್ಯಾಸದ ಒಳಾಂಗಣ ಮತ್ತು ಎಸಿ ಬೋಗಿಗಳೊಂದಿಗೆ ಸೇವೆ ನೀಡಲು ಬರುತ್ತಿದೆ. ದೇಶದಲ್ಲಿ 2023 ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಈ ರೈಲು ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯಗಳೊಂದಿಗೆ ಪ್ರಯಾಣಿಕರಿಗೆ ಸೇವೆ ನೀಡಲು ಸಜ್ಜಾಗಿದೆ.
ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು 3.0 ಹೆಸರಿನ ಈ ರೈಲಿನ ಒಳಾಂಗಣ ವಿನ್ಯಾಸ, ಎಸಿ ಅಲ್ಲದ ಬೋಗಿಗಳ ಜೊತೆಗೆ ಎಸಿ ಕೋಚ್ಗಳನ್ನು ಪರಿಚಯಿಸಲು ರೈಲ್ವೆ ಇಲಾಖೆ ಸಜ್ಜಾಗಿದೆ. ಈ ಪ್ರಯತ್ನದ ಮೊದಲ ರೈಲನ್ನು ಶನಿವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಖುದ್ದು ಪರಿಶೀಲಿಸಿದರು. ಪ್ರಯಾಣಿಕರ ಅನುಕೂಲಕರ ಸೌಕರ್ಯದ ಜೊತೆಗೆ ಸೌಂದರ್ಯ ಮತ್ತು ಒಟ್ಟಾರೆ ಪ್ರಯಾಣದ ಅನುಭವವನ್ನು ಹೆಚ್ಚಿಸಲು ಈ ಕೋಚ್ಗಳನ್ನು ವಿನ್ಯಾಸಗೊಳಿಸಲಾಗಿದೆ.

ಅಮೃತ್ ಭಾರತ್ ಎಕ್ಸ್ಪ್ರೆಸ್ 3.0 ಅಭಿವೃದ್ಧಿ
ಹೊಸ ಪೀಳಿಗೆಯ ಪ್ರಯಾಣಿಕರಿಗೆ ಈ ರೈಲು ಹೆಚ್ಚು ಐಶಾರಾಮಿ ಅನುಭವ ನೀಡಲಿವೆ. ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು 1.0 ಮತ್ತು ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು 2.0 ರೈಲುಗಳು ಮೂಲವನ್ನಾಗಿ ಇಟ್ಟುಕೊಂಡು ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು 3.0 ಅಭಿವೃದ್ಧಿಪಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಒಳಾಂಗಣ ಹೇಗಿದೆ?
ಅಮೃತ್ ಭಾರತ್ ಎಕ್ಸ್ಪ್ರೆಸ್ 3.0 ರೈಲು ವಿಭಿನ್ನ ಒಳಾಂಗಣ ಹೊಂದಿದೆ. ವಿಶಿಷ್ಟ ಥೀಮ್ನೊಂದಿಗೆ ನೀಡಲಾಗಿದೆ. ಪಿವಿಸಿ ನೆಲಹಾಸು, ಸೀಟ್ ಮತ್ತು ಬರ್ತ್ ರೆಕ್ಸಿನ್, ಸ್ನ್ಯಾಕ್ ಟೇಬಲ್ಗಳು, ಪರದೆಗಳು ಮತ್ತು ಶೌಚಾಲಯ ಪ್ರದೇಶಗಳ ಕಂಗೊಳಿಸುತ್ತಿವೆ. ವಿಶಾಲ ಒಳಾಂಗಣವು ದೀರ್ಘ ಪ್ರಯಾಣದ ಮಾಡುವವರಿಗೆ ಹೇಳಿ ಮಾಡಿದಂತಿದೆ. ಮುಖ್ಯವಾಗಿ ಇದರಲ್ಲಿನ ಎಲ್ಲ ವಸ್ತುಗಳು ಅಗ್ನಿ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿವೆ. ಅಷ್ಟರ ಮಟ್ಟಿಗೆ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ.
ದೇಶದ ವಿವಿಧೆಡೆ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳು 2023ರಿಂದಲೇ ಸಂಚಾರ ಮಾಡುತ್ತಿವೆ. ಕಡಿಮೆ ಮತ್ತು ಸಾಮಾನ್ಯ ಮತ್ತು ಮಧ್ಯಮ ವರ್ಗದ ಪ್ರಯಾಣಿಕರಿಗೆ ಸೂಕ್ತ ರೈಲುಗಳು ಇವಾಗಿವೆ. ಕೈಗೆಟುಕುವ ದರದಲ್ಲಿ ಪ್ರಯಾಣಿಸಬಹುದಾಗಿದೆ. ಸದ್ಯ ಅಮೃತ್ ಭಾರತ್ 1.0 ಮತ್ತು ಅಮೃತ್ ಭಾರತ್ 2.0 ರೈಲುಗಳು ಭಾರತೀಯ ರೈಲ್ವೆ ವ್ಯಾಪ್ತಿಯಲ್ಲಿ ವಾಣಿಜ್ಯ ಸೇವೆ ನೀಡುತ್ತಿವೆ. ಶೀಘ್ರವೇ ಅಮೃತ್ ಭಾರತ್ 3.0 ರೈಲು ಕಾರ್ಯಾಚರಣೆ ಆರಂಭಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/amrit-bharat-express-3-0-railway-minister-inspects-new-ac-coaches-with-modern-interiors-run-soon-449439.html. xn--babytilbehr-pgb.com does not claim ownership of this content. All rights remain with the original publisher.
