
India
oi-Hitesh Y
Annamalai: ಅಣ್ಣಾಮಲೈ ಮತ್ತು ರಾಜಕೀಯ ಉನ್ಮಾದ ಹಿರಿಯ ಪತ್ರಕರ್ತ ಶಿವಕುಮಾರ್ ಮೆಣಸಿನಕಾಯಿ ಅವರ ಬರಹ ಇಲ್ಲಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಿವೃತ್ತ ಐಪಿಎಸ್ ಅಧಿಕಾರ ಅಣ್ಣಾಮಲೈ ಅವರನ್ನು ಬಿಜೆಪಿ ಈ ಬಾರಿ ಕಣಕ್ಕೆ ಇಳಿಸಿಲ್ಲ. ಕರ್ನಾಟಕದಲ್ಲಿ ಸೇವೆಯಲ್ಲಿದ್ದಷ್ಟು ದಿನ ಮನೆಮಾತಾಗಿದ್ದ ಅಣ್ಣಾಮಲೈ ರಾಜಕೀಯ ಉನ್ಮಾದಕ್ಕೆ ಒಳಗಾಗಿ ಕಷ್ಟಪಟ್ಟು ಗಳಿಸಿದ್ದ ಹುದ್ದೆಯನ್ನು ಕೈಚೆಲ್ಲಿ ಹೋದರು.

ಈಗ ರಾಜಕೀಯ ಬದುಕಿನ ಕವಲುದಾರಿಯಲ್ಲಿ ಇದ್ದಂತೆ ಕಾಣುತ್ತಿದೆ. ಯಾರು ಏನೇ ಹೇಳಿದರೂ ಕಳೆದ 5 ವರ್ಷಗಳಲ್ಲಿ ಅಣ್ಣಾಮಲೈ ಅಂದುಕೊಂಡಂತೆ ಆಗುತ್ತಿಲ್ಲ. ಒಬ್ಬ ಜನಪ್ರಿಯ ಅಧಿಕಾರಿ, ಒಬ್ಬ ಖ್ಯಾತನಟ, ಒಬ್ಬ ಹೆಸರು ಮಾಡಿದ ಪತ್ರಕರ್ತ, ಒಬ್ಬ ಸೊಗಸಾಗಿ ಹಾಡುವ ಕಲಾವಿದ ಹೀಗೆ ಸಮಾಜದ ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು ರಾಜಕೀಯ ಕ್ಷೇತ್ರದತ್ತ ಮುಖ ಮಾಡುವುದು ಹೊಸದಲ್ಲ, ಆದರೆ ಇಂತಹ ನಿರ್ಧಾರ ಮಾಡಿದವರು ಪ್ರತಿಬಾರಿ ಹೊಸ ಪಾಠವನ್ನೇ ಕಲಿತಿದ್ದಾರೆ.
ರಾಜಕಾರಣ ಉಳಿದೆಲ್ಲ ಕ್ಷೇತ್ರಗಳಿಗಿಂತ ಅತ್ಯಂತ ವಿಸ್ತೃತ ಮತ್ತು ಸೂಕ್ಷ್ಮ ಕ್ಷೇತ್ರ. ಮೇಲ್ನೋಟಕ್ಕೆ ಕಾಣುವುದು ಎಲ್ಲವೂ ಸತ್ಯವಲ್ಲ, ಅಲ್ಲಿ ವಿರೋಧಿಗಳಿಗಿಂತ ಜತೆಗಿದ್ದವರೇ ದೊಡ್ಡ ಸಮಸ್ಯೆ. ಕೆಳಮಧ್ಯಮ ಅಥವಾ ಮಧ್ಯಮ ವರ್ಗದಿಂದ ಬಂದ ಅಧಿಕಾರಿ, ಚಿತ್ರನಟ, ಪತ್ರಕರ್ತ, ಸಂಗೀತಗಾರ ಮುಂತಾದವರು ತಮ್ಮ ಜನಪ್ರಿಯತೆಯನ್ನು ಬಳಸಿಕೊಂಡೇ ರಾಜಕೀಯ ಉನ್ಮಾದಕ್ಕೆ ಸಿಲುಕಿದರೆ ಯಶಸ್ಸು ಸಲೀಸಲ್ಲ.
K Annamalai: ನೆಟ್ಟಿಗರು ಹೇಳುವುದೇನು ?
ಕೆ ಶ್ರೀನಿವಾಸ್ ರಾವ್ ಸಾಳಂಕೆ ಅವರು, ಅಣ್ಣಾಮಲೈ ಸರ್ಕಾರಿ ಹುದ್ದೆಯಲ್ಲಿದ್ದಾಗಲೇ ಅವರ ರಾಜಕಾರಣಕ್ಕೆ ಬರುವ ಎಲ್ಲಾ ಲಕ್ಷಣಗಳು ಅದನ್ನೇ ಬರೆದಾಗ ಬಹಳಷ್ಟು ಜನ ಅಣ್ಣಾಮಲೈ ಅಭಿಮಾನಿಗಳು ಎಗರಾಡಿ ಕಾಮೆಂಟ್‌ಗಳನ್ನು ಹಾಕಿದ್ದರು. ಒಬ್ಬ ಉನ್ನತ ಅಧಿಕಾರದಲ್ಲಿದ್ದವರು ಬೇರೆಯವರ ಮಾತುಗಳನ್ನ ಅಷ್ಟಾಗಿ ಗಣನೆಗೆ ತೆಗೆದುಕೊಳ್ಳುತ್ತಾರೆ ತೆಗೆದುಕೊಳ್ಳುವುದು ಕಡಿಮೆಯಿಲ್ಲದ ಪಕ್ಷದಲ್ಲಿ ಕಿರಿಕಿರಿ ಅವರ ರಾಜಕಾರಣದಲ್ಲಿ ಉತ್ತುಂಗದಲ್ಲಿರುವವರು ಒಪ್ಪಿಕೊಳ್ಳುವುದು ಬಹಳ ಕಡಿಮೆ ತಮಿಳುನಾಡು ಒಂದೇ ತಾನೇ ಅದಿಲ್ಲದಿದ್ದರೆ ಏನಂತೆ ಎನ್ನವ ಭಾವನೆ ಏನೇ ಆಗಲಿ ನೆಲೆ ಇಲ್ಲದ ರಾಜ್ಯದಲ್ಲಿ ಬಿಜೆಪಿಯ ನೆಲೆಯೂರಲು ಅಣ್ಣಾಮಲೈ ಪ್ರಯತ್ನಪಟ್ಟಿದ್ದು ಮರೆಯ ರಾಜಕಾರಣದಲ್ಲಿ ಹುಜೂರ ಎಂಬುವವರಿಗೆ ಸ್ಥಾನಮಾನ
ಅದಕ್ಕೆ ಅಣ್ಣಾಮಲೈ ಮತ್ತೊಂದು ನಿದರ್ಶನ ಆಗದಿರಲಿ, ಏಕೆಂದರೆ ಅಣ್ಣಾಮಲೈ ಹಾದಿಯಲ್ಲೇ ನಮ್ಮ ಸುತ್ತಮುತ್ತಲಿನ ಅನೇಕರಿದ್ದಾರೆ. ಕೆಲವು ಭರವಸೆಯ ವ್ಯಕ್ತಿಗಳು ಅದೇ ರಾಜಕೀಯ ಉನ್ಮಾದಕ್ಕೆ ಸಿಲುಕಿದ್ದಾರೆ.. ಯಶಸ್ಸೇ ಮಾನದಂಡ ಅಲ್ಲ ನಿಜ, ಆದರೆ ಮೂಲತಃ ಅವರಲ್ಲಿರುವ ಪ್ರತಿಭೆ, ಜಾಣ್ಮೆ, ಬದ್ಧತೆಯು ರಾಜಕಾರಣಕ್ಕೆ ಬಲಿ ಆಗುತ್ತದೆ ಎಂಬ ಅಂಶವನ್ನೂ ಮನಗಾಣಬೇಕು. ಪಕ್ಷ, ಸಿದ್ಧಾಂತ ಏನೇ ಇರಲಿ, ಅಣ್ಣಾಮಲೈ ದಿಕ್ಕು ತಪ್ಪದಿರಲಿ ಎಂದಿದ್ದಾರೆ.
ರಾಧಾಕೃಷ್ಣ ಕೌಂಡಿನ್ಯ ಎನ್ನುವವರು, ಅಣ್ಣಾಮಲೈಗೆ ಸುದೀರ್ಘ ರಾಜಕಾರಣದ ಭವಿಷ್ಯವಿದೆ. ಬಹಳ ಉನ್ನತ ಸ್ಥಾನಗಳಲ್ಲಿ ಅವರನ್ನು ನೋಡುವ ಕಾಲ ದೂರವೇನಿಲ್ಲ. ಬಹುಶಃ ಇನ್ಮುಂದಿನ ದಿನಗಳಲ್ಲಿ ರಾಜಕಾರಣವು ಆಡಳಿತ ತಜ್ಞರ, ವಿದ್ಯಾವಂತರ ಕ್ಷೇತ್ರ ಆಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/k-annamalai-political-hysteria-around-annamalai-senior-journalist-shivakumar-s-sharp-take-449291.html. xn--babytilbehr-pgb.com does not claim ownership of this content. All rights remain with the original publisher.
