
Entertainment
oi-Hitesh Y
Anushree: ನಟಿ, ಆ್ಯಂಕರ್ ಅನುಶ್ರೀ (Anushree) ಅವರು ಸೋಷಿಯಲ್ ಮೀಡಿಯಾದಲ್ಲಿ ಕೆಲವು ನೆಟ್ಟಿಗರು ಬಳಸುತ್ತಿರುವ ಅಶ್ಲೀಲ ಪದ ಬಳಕೆ ಹಾಗೂ ಭಾಷೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಲ್ಲೂ ನಟಿಯರು ಹಾಗೂ ಸೆಲೆಬ್ರಿಟಿಗಳು ಹೆಚ್ಚಾಗಿ ಟ್ರೋಲ್ ಮತ್ತು ಅಶ್ಲೀಲ ಕಾಮೆಂಟ್ಗಳಿಗೆ ಗುರಿಯಾಗುತ್ತಿದ್ದಾರೆ. ಈ ರೀತಿ ಅಶ್ಲೀಲವಾಗಿ ಕಾಮೆಂಟ್ ಮಾಡುವವರ ವಿರುದ್ಧ ಸೆಲೆಬ್ರಿಟಿಗಳು ತಿರುಗಿ ಬಿದಿದ್ದಾರೆ.
ಮದುವೆಗೆ ಮುಂಚೆಯೂ ಕೆಲವೊಂದು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದ ಆ್ಯಂಕರ್ ಅನುಶ್ರೀ ಅವರು ಇದೀಗ ಮತ್ತೊಂದು ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅಶ್ಲೀಲವಾಗಿ ಬಳಕೆ ಮಾಡುತ್ತಿರುವ ಕಾಮೆಂಟ್ಗೆ ಅನುಶ್ರೀ ಅವರು ಕಣ್ಣೀರಾಗಿದ್ದಾರೆ. ಅನುಶ್ರೀ ಅವರು ಅವರ ಬಗ್ಗೆ ಹಾಗೂ ಅವರು ನಡೆಸಿಕೊಂಡುವ ಕಾರ್ಯಕ್ರಮಗಳ ಬಗ್ಗೆ ಏನಾದರೂ ಕೆಟ್ಟದಾಗಿ / ಭಿನ್ನಾಭಿಪ್ರಾಯ ಬಂದರೂ ಅದನ್ನು ಅವರು ಮುಕ್ತವಾಗಿ ಮಾತನಾಡುವುದು ಇದೆ. ಆದರೆ ಈ ಬಾರಿ ವೈಯಕ್ತಿಯ ಟೀಕೆಗೆ ಅವರು ಕಣ್ಣೀರಾಕಿದ್ದಾರೆ.

ಇದೀಗ ಸೋಷಿಯಲ್ ಮೀಡಿಯಾ ಟ್ರೋಲಿಂಗ್ ಹಾಗೂ ಕೆಲವು ಹೆಣ್ಣು ಮಕ್ಕಳಿಗೆ ಸೈಲೆಂಟ್ ಆಗಿ ನಡೆಯುತ್ತಿರುವ ಕಿರುಕುಳದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅನುಶ್ರೀ ಅವರು ಸಂದರ್ಶನ ಕೊಡುವುದು ತೀರ ಕಡಿಮೆ. ಆ ರೀತಿ ನೋಡಿದರೆ ಅವರು ಸಂದರ್ಶನಗಳನ್ನು ಮಾಡಿದ್ದೇ ಹೆಚ್ಚು. ಆರ್ಜೆ ಮಯೂರ್ ಅವರು ತಮ್ಮ ಗೋಲ್ಡನ್ ಕ್ಲಾಸ್ ವಿತ್ ಮಯೂರ ಎನ್ನುವ ಯೂಟ್ಯೂಬ್ ಚಾನೆಲ್ನಲ್ಲಿ ಅನುಶ್ರೀ ಅವರ ಸಂದರ್ಶನ ಮಾಡಿದ್ದು. ಈ ಸಂದರ್ಶನದಲ್ಲಿ ಅವರು ಹಲವು ವಿಚಾರಗಳನ್ನು ಮುಕ್ತವಾಗಿ ಮಾತನಾಡಿದ್ದಾರೆ.
Anushree: ಡಗಾರ್ ಎಂಬ ಪದ ಬಳಕೆ ಚರ್ಚೆಗೆ
ಇನ್ನು ಈ ಸಂದರ್ಶನದ ನಂತರ ಡಗಾರ್ ಎಂಬ ಪದ ಬಳಕೆಯ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಬಹುತೇಕ ಎಲ್ಲ ಸೆಲೆಬ್ರಿಟಿಗಳ ಖಾತೆಗೂ ಇತ್ತೀಚಿನ ದಿನಗಳಲ್ಲಿ ಅಶ್ಲೀಲ ಕಾಮೆಂಟ್ ಬರುತ್ತಿವೆ. ಇದರಲ್ಲಿ ಹಲವರು ತಿರುಗಿ ಬಿದಿದ್ದಾರೆ. ಸೆಲೆಬ್ರಿಟಿಗಳು ತಮ್ಮ ಖಾತೆಯನ್ನು ಓಪನ್ /ಮುಕ್ತವಾಗಿ ಇರಿಸಿಕೊಂಡಿರುತ್ತಾರೆ. ಇದೇ ಕಾರಣಕ್ಕೇನೋ ಗೊರುತು ಪರಿಚಯ ಇಲ್ಲದವರು ಈ ಖಾತೆಗಳಲ್ಲಿ ಮನಸೋಇಚ್ಛೆ ಕಾಮೆಂಟ್ ಹಾಕುತ್ತಾರೆ ಅಂತ ಈ ವಿಚಾರದ ಬಗ್ಗೆ ಅನುಶ್ರೀ ತಮ್ಮ ನೋವು, ಆಕ್ರೋಶವನ್ನು ಹೊರ ಹಾಕಿದ್ದಾರೆ.
ಈ ಸಂದರ್ಶನದಲ್ಲಿ ಡಗಾರ್ ಎನ್ನುವ ಅಶ್ಲೀಲ ಪದ ಬಳಕೆಯು ಚರ್ಚೆಗೆ ಬಂದಿದೆ. ಡಗಾರ್ ಅಂದರೆ ನಡತೆಗೆಟ್ಟವಳು / ಸಭ್ಯಳಲ್ಲದವಳು ಅರ್ಥ ಕೊಡುತ್ತದೆ. ಈ ಪದ ಹೇಳುವುದಕ್ಕೆ ಮಯೂರ್ ಅವರು ಸಹ ಮುಜುಗರಕ್ಕೆ ಒಳಗಾಗಿದ್ದಾರೆ. ಈ ಪ್ರಶ್ನೆಗೆ ಉತ್ತರ ನೀಡಿರುವ ಅನುಶ್ರೀ ನೋಡಿ ಇದನ್ನು ನಿಮಗೆ ಹೇಳುವುದಕ್ಕೇ ಇಷ್ಟೊಂದು ಮುಜುಗರ ಆಗುತ್ತಿದೆ ಅಂತಾದರೆ ನಮಗೆ ಆ ರೀತಿ ಕರೆಸಿಕೊಳ್ಳುವುದಕ್ಕೆ ಹೇಗನಿಸಬೇಡಿ ಹೇಳಿ ಅಂತ ಅನುಶ್ರೀ ಕೇಳಿದರು. ಅದನ್ನು ಹೇಳುವಾಗ ಅವರ ಮುಖದಲ್ಲಿ ನೋವಿನ ಭಾವ ಇರುವುದು ಕಾಣಿಸಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/anushree-slams-vulgar-trolling-breaks-down-over-use-of-dagar-term-video-goes-viral-449391.html. xn--babytilbehr-pgb.com does not claim ownership of this content. All rights remain with the original publisher.
