
India
oi-Hitesh Y
ಬೆಂಗಳೂರು ಹಾಗೂ ಕರ್ನಾಟಕದ ವಿಚಾರದಲ್ಲಿ ಲಾಗಾಯ್ತಿನಿಂದ ಕರ್ನಾಟಕದ ವಿರೋಧ ಮಾಡಿಕೊಂಡು ಬಂದಿದ್ದ ತಮಿಳುನಾಡು ಇದೀಗ ವರಸೆ ಬದಲಾಯಿಸಿದೆ. ಬೆಂಗಳೂರು ಹಾಗೂ ಹೊಸೂರು ಎರಡೂ ನಗರಗಳ ಅಭಿವೃದ್ಧಿ ಆಗಲಿದೆ. ಹೀಗಾಗಿ ತಮಿಳುನಾಡಿನ ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಹೇಳುತ್ತಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ವಿಚಾರದಲ್ಲಿ ಯಾವುದೇ ಮಹತ್ವದ ಬದಲಾವಣೆ ಆಗುತ್ತಿಲ್ಲ. ಅಲ್ಲದೆ ಕೇಂದ್ರ ಸರ್ಕಾರವು ಸಹ 2033ರ ವರೆಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯ ಕಷ್ಟ ಎಂದು ಹೇಳಿದೆ. ಈ ರೀತಿ ಇರುವಾಗಲೇ ನೆರೆಯ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಲಾಬಿ ಮುಂದುವರಿಸಿದೆ.

ಸಿ.ಎಸ್.ಲಕ್ಷ್ಮಿಶಾ ಅವರು, ಲಾಗಾಯ್ತಿನಿಂದ ಕರ್ನಾಟಕದ ವಿರೋಧ ಮಾಡಿಕೊಂಡು ಬಂದ ತಮಿಳುನಾಡಿಗೆ ಇದ್ದಕ್ಕಿದ್ದಂತೆ ಬೆಂಗಳೂರು ಮತ್ತು ಹೊಸೂರು ಎರಡನ್ನೂ ಒಟ್ಟಿಗೆ ಬೆಳೆಸುವ ಕಾಳಜಿ ಬಂದುಬಿಟ್ಟಿದೆ. ಅದಕ್ಕಾಗಿ ಹೊಸೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೇಕಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಂ.ಬಿ ಪಾಟೀಲ್ ಅವ ಬೇಗನೇ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಮರುಜೀವ ನೀಡಿ, ನೆಲಮಂಗಲ ಪ್ರದೇಶದಲ್ಲಿ ಇನ್ನೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಬೇಕು ಎಂದಿದ್ದಾರೆ. ಇದಕ್ಕೆ ಹಲವು ಕನ್ನಡಿಗರು ದನಿಗೂಡಿಸಿದ್ದಾರೆ.
ತಮಿಳುನಾಡು ಸರ್ಕಸ್
ಇನ್ನು ತಮಿಳುನಾಡಿನ ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ತಮಿಳುನಾಡು ಸರ್ಕಾರವು ಮುಂದಾಗಿತ್ತು. ಅಲ್ಲದೆ ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ ಹೊಸೂರು ಕೈಗಾರಿಕಾ ಪ್ರದೇಶಕ್ಕೆ ಅನುಕೂಲವಾಗಲಿದೆ. ಅಲ್ಲದೆ ಬೆಂಗಳೂರಿನ ಬ್ರ್ಯಾಂಡ್ ಬಳಸಿಕೊಳ್ಳಬಹುದು ಎನ್ನುವುದು ಸಹ ಇದರ ಲೆಕ್ಕಾಚಾರವಾಗಿತ್ತು. ಆದರೆ ವಾಯುಪ್ರದೇಶದ ದೃಷ್ಟಿಯಿಂದ ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟವಾಗಿ ಹೇಳಿದೆ. ಆದರೆ ತಮಿಳುನಾಡು ಸರ್ಕಸ್ ಮುಂದುವರಿಸಿದೆ.
ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಕನ್ನಡಿಗರು ಹೇಳಿದ್ದೇನು
ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರದಲ್ಲೂ ಕರ್ನಾಟಕ ಸರ್ಕಾರ ಪ್ರಯತ್ನಿಸಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ. ಅಲ್ಲದೆ Oneindia Kannada ಬರಹವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಚರ್ಚೆ ನಡೆದಿದೆ. ಇನ್ನು ಕೆಲವರು ಬೆಂಗಳೂರಿನಲ್ಲೇ ಯಾಕೆ, ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮಸ್ಯೆಯಾದರೆ ಕರ್ನಾಟಕದ ಬೇರೆ ಜಾಗದಲ್ಲಿ ನಿರ್ಮಾಣ ಮಾಡಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದೆ.
ಲಾಗಾಯ್ತಿನಿಂದ ಕರ್ನಾಟಕದ ವಿರೋಧ ಮಾಡಿಕೊಂಡು ಬಂದ ತಮಿಳುನಾಡಿಗೆ ಇದ್ದಕ್ಕಿದ್ದಂತೆ ಬೆಂಗಳೂರು ಮತ್ತು ಹೊಸೂರು ಎರಡನ್ನೂ ಒಟ್ಟಿಗೆ ಬೆಳೆಸುವ ಕಾಳಜಿ ಬಂದುಬಿಟ್ಟಿದೆ. ಅದಕ್ಕಾಗಿ ಹೊಸೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೇಕಂತೆ. @siddaramaiah @MBPatil ಅವರು ಬೇಗನೇ ಹೆಚ್ಎಎಲ್ ವಿಮಾನನಿಲ್ದಾಣಕ್ಕೆ ಮರುಜೀವ ನೀಡಿ, ನೆಲಮಂಗಲ…
— CSLakshmeesha (@LakshmeeshaCS) February 17, 2026
ಪ್ರಶಾಂತ್ ಕುಮಾರ್ ಎನ್ನುವವರು, ಹುಬ್ಬಳ್ಳಿಯಲ್ಲಿ ಅಥವಾ ಮಧ್ಯ ಕರ್ನಾಟಕದ ದಾವಣಗೆರೆಯಲ್ಲೋ ಏಕೆ ರಾಜ್ಯದ ಮೂರನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬರಬಾರದು, ಎಲ್ಲವೂ ಬೆಂಗಳೂರಿನ ಸುತ್ತ ಮುತ್ತ ಏಕೆ ಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಸತತವಾಗಿ ಅಧಿಕಾರಕ್ಕೆ ಬಂದ ಸರ್ಕಾರಗಳು ಬೆಂಗಳೂರು ಕೇಂದ್ರಿತ ಅಭಿವೃದ್ಧಿಯನ್ನೇ ಬಯಸುತ್ತಿವೆ, ಈ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಒಪ್ಪಬೇಕು. ರಾಮನಗರ, ಕನಕಪುರ ಇವರ ಕಾಲದಲ್ಲಿ ಅಭಿವೃದ್ಧಿ ಕಾಣುತ್ತಿವೆ. ಕರ್ನಾಟಕ ಸರ್ವತೋಮುಖವಾಗಿ ಅಭಿವೃದ್ಧಿ ಆಗಬೇಕು. ಬೆಂಗಳೂರು ಕರ್ನಾಟಕವಲ್ಲಾ, ಉತ್ತರ ಕರ್ನಾಟಕ ಬೆಳೆಯಲಿ ಎಂದೂ ಕೆಲವು ನೆಟ್ಟಿಗರು ಹೇಳಿದ್ದಾರೆ.
-

Bengaluru Second Airport: ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಮಿಳುನಾಡು ಸರ್ಕಾರದಿಂದ ಹೊಸ ಡಿಮ್ಯಾಂಡ್
-

ಪಾಪಾ ಪಾಂಡು ಸೀರಿಯಲ್ ನಟಿ ರಶ್ಮಿ ನಿಧನ: “ನಮ್ಮ ಪ್ರಾಣ ಹೊರಟು ಹೋಯಿತು..” ಸಂಕಟ ಹಂಚಿಕೊಂಡ ಆಪ್ತರು
-

Bengaluru Second Airport: ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಮಿಳುನಾಡು ಸರ್ಕಾರದಿಂದ ಹೊಸ ಡಿಮ್ಯಾಂಡ್
-

Gold Price Feb 17: ಚಿನ್ನದ ಬೆಲೆ 15,300 ರೂ., ಬೆಳ್ಳಿ ಬೆಲೆ 8,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಖುಷ್
-

Horoscope February 17: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಮನ್ನಣೆ, ದಾಂಪತ್ಯ ಜೀವನದ ದಿನ ಭವಿಷ್ಯ ಇಲ್ಲಿದೆ
-

SSLC PUC Exams: ಮಾರ್ಚ್ 18 ರಿಂದ ಎಸ್ಎಸ್ಎಲ್ಸಿ, 28 ರಿಂದ ಪಿಯುಸಿ; ವೇಳಾಪಟ್ಟಿ, ಫಲಿತಾಂಶ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ
-

Silver Price: ಬೆಳ್ಳಿ ಬೆಲೆ ಪಾತಾಳಕ್ಕೆ; ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಭಾರಿ ಕುಸಿತ, ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ
-

ಮಂಗಳೂರಿಗೆ ರೈಲು ಬರಲ್ಲ ಕೇರಳ ಲಾಬಿ ಜೊತೆಗೆ ಸುಳ್ಳು ಭರವಸೆ: ಸುರತ್ಕಲ್, ಮೂಲ್ಕಿ, ಉಡುಪಿ, ಕಾರವಾರ ಜನರಿಗೆ ಅನ್ಯಾಯ
-

ನಟ ದರ್ಶನ್ ನಿಮಗೆ ಡಿ ಬಾಸ್ ಆದ್ರೆ, ನನಗೆ ಮಗ, ಇನ್ನೆರಡು ತಿಂಗಳಲ್ಲಿ ಜೈಲಿನಿಂದ ಬಿಡುಗಡೆ ಪಕ್ಕಾ: ರವಿಚಂದ್ರನ್ ಭವಿಷ್ಯ
-

Vaibhav Suryavanshi: ಅಂಡರ್ 19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಗೈರು
-

Bengaluru School: ಬೆಂಗಳೂರಿನಲ್ಲಿ ವಿದ್ಯಾರ್ಥಿಯಿಂದ ತಪ್ಪಿದ ಶಾಲಾ ಮಕ್ಕಳ ಕಿಡ್ಯಾಪ್, ಪೋಷಕರೇ ಮಕ್ಕಳ ಬಗ್ಗೆ ಇರಲಿ ಎಚ್ಚರ
-

ಆಕಾಶದಲ್ಲಿ ಸೂರ್ಯ ಇಂದು ದಿಢೀರ್ ನಾಪತ್ತೆ, ಯಾವ ಯಾವ ದೇಶಗಳಲ್ಲಿ ತಿಳಿಯಿರಿ… Solar Eclipse
-

ವಿದ್ಯಾವಂತರ ಬೇಜವಾಬ್ದಾರಿಗೆ ಸಮಾಜವೇಕೆ ಹಣ ನೀಡಬೇಕು? ಆರೋಗ್ಯ ವಿಮೆ ಮಾಡಿಸಿ: ರಂಗಸ್ವಾಮಿ ಮೂಕನಹಳ್ಳಿ ಬರಹ
-

ಚಿನ್ನ-ಬೆಳ್ಳಿ ದರ ಮತ್ತೆ ಕುಸಿತ: ಭವಿಷ್ಯದಲ್ಲಿ ಇನ್ನಷ್ಟು ಇಳಿಕೆಯಾಗುವುದೇ? ಖರೀದಿ, ಹೂಡಿಕೆಗೆ ಮುನ್ನ ಗಮನಿಸಲೇಬೇಕಾದ ಅಂಶಗಳಿವು
-

Priyank Kharge biography: ಚಿತ್ತಾಪುರದಿಂದ ಸಚಿವ ಸಂಪುಟದವರೆಗೆ: ಪ್ರಿಯಾಂಕ್ ಖರ್ಗೆ ರಾಜಕೀಯ ಪಯಣ, ಕುಟುಂಬ, ಒಟ್ಟು ಆಸ್ತಿ ವಿವರ
Disclaimer: This content was automatically imported from a third-party source via RSS feed. The original source is: https://kannada.oneindia.com/news/india/bengaluru-second-airport-row-tamil-nadu-shifts-stance-backs-bengaluru-hosur-growth-push-444315.html. xn--babytilbehr-pgb.com does not claim ownership of this content. All rights remain with the original publisher.

