
Karnataka
oi-Shankrappa Parangi
ಬಾಗಲಕೋಟೆ: ಕಾಂಗ್ರೆಸ್ ನವರು ಜಾತಿ ರಾಜಕಾರಣ ಮಾಡಿಯೇ ಅಧಿಕಾರಕ್ಕೆ ಬಂದಿದ್ದಾರೆ. ಒಡೆದಾಳುವ ನೀತಿ ಅನುಸರಿಸುವ ಕಾಂಗ್ರೆಸ್ನವರು ವೀರಶೈವರು ಲಿಂಗಾಯತರನ್ನು ಒಡೆಯುವ ಪ್ರಯತ್ನ ಮಾಡುತ್ತಾರೆ. ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಸ್ವಾಭಿಮಾನದಿಂದ ಬಾಗಲಕೋಟೆಯಲ್ಲಿ ಬದಲಾವಣೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಬಾಗಲಕೋಟೆಯ ಉಪಚುನಾವಣೆಯ ಪ್ರಯುಕ್ತ ಬಿಜೆಪಿ ನಾಯಕರು ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ಅಬ್ಬರ ಪ್ರಚಾರ ನಡೆಸಿದ್ದಾರೆ. ಬೊಮ್ಮಾಯಿ ಅವರೊಂದಿಗೆ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಗೋವಿಂದ ಕಾರಜೋಳ ಇನ್ನಿತರ ನಾಯಕರು ಪಾಲ್ಗೊಂಡಿದ್ದರು. ಮತ್ತೊಂದೆಡೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಹ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಶನಿವಾರ ಇಂದು ಕ್ಷೇತ್ರದ ಗದ್ದನಕೇರಿ ಕ್ರಾಸ್ ಬಳಿ ಬಣಜಿಗ ಸಮಾಜದ ಪ್ರಮುಖರ ಸಭೆಯನ್ನು ನಡೆಸಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಈ ಚುನಾವಣೆ ಒಂದು ಅವಕಾಶವೂ ಹೌದು, ಕಳೆದ ಮೂರು ವರ್ಷದ ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತು ಸರ್ಕಾರವನ್ನು ತೆಗೆದು ಒಗೆಯುವ ಸದವಕಾಶ ಬಂದಿದೆ. ಬಾಗಲಕೋಟೆ ನಗರ ಬದಲಾಗುತ್ತಿರುವ ನಗರ, ಇದೆ ಬಾಗಲಕೋಟೆ ಮುಳುಗಿ ನವ ಬಾಗಲಕೋಟೆ ನಿರ್ಮಾಣ ಆಗುತ್ತಿದ ಎಂದು ಕರೆ ನೀಡಿದರು.
ಬಾಗಲಕೋಟೆಗೆ ಬಿಜೆಪಿ ಕೊಡುಗೆ
ನಾನು ನೀರಾವರಿ ಸಚಿವ ಆಗಿದ್ದಾಗ 700 ಕೋಟಿ ರೂ. ಬಾಗಲಕೋಟೆ ನವ ನಿರ್ಮಾಣಕ್ಕೆ ನೀಡಿದ್ದೇನೆ. ಕಳೆದ ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದ ವೇಳೆ ನವನಗರ ನಿರ್ಮಾಣಕ್ಕಾಗಿ 2300 ಕೋಟಿ ರೂ.ಗಳನ್ನು ವೀರಣ್ಣ ಚರಂತಿಮಠ ಅವರು ತೆಗೆದುಕೊಂಡು ಬಂದಿದ್ದಾರೆ. ನವನಗರ ನಿರ್ಮಾಣ ಆಗಿದ್ದು ಬಿಜೆಪಿಯ ಕಾಲದಲ್ಲಿ ಕಾಂಗ್ರೆಸ್ ನ ಯಾವುದೇ ಕೊಡುಗೆ ಇಲ್ಲ. ಅವರು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಆಗುತ್ತದೆ ಎಂದು ಹೇಳುತ್ತಾರೆ ಎಂದರು.
ಬಾಗಲಕೋಟೆಯ ಅಭಿವೃದ್ಧಿ ಯಾಗಬೇಕಾದರೆ ಬಿಜೆಪಿಗೆ ಮತ ಹಾಕಿ, ವೀರಣ್ಣ ಚರಂತಿಮಠ ಪ್ರಾಮಾಣಿಕ ವ್ಯಕ್ತಿ, ಸತ್ಯವನ್ನು ನೇರವಾಗಿ ಹೇಳುತ್ತಾರೆ. ಈಗಿನ ಕಾಲದಲ್ಲಿ ರಾಜಕೀಯದಲ್ಲಿ ಪ್ರಾಮಾಣಿಕ ವ್ಯಕ್ತಿ ಸಿಗುವುದು ಬಹಳ ಕಷ್ಟ. ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯನ್ನು ಪ್ರಾಮಾಣಿಕವಾಗಿ ಕಟ್ಟಿದ್ದಾರೆ, ಬಾಗಲಕೋಟೆ ಅಭಿವೃದ್ಧಿ ಆಗಬೇಕೆಂದರೆ ವೀರಣ್ಣ ಚರಂತಿಮಠ ಅವರಿಗೆ ಮತ ಹಾಕಬೇಕು.
ವೀರಣ್ಣ ಚರಂತಿಮಠ ಪರ ಮತಯಾಚನೆ
ಕಾಂಗ್ರೆಸ್ ನವರು ಜಾತಿ ರಾಜಕಾರಣ ಮಾಡುತ್ತಾರೆ. ಜಾತಿ ರಾಜಕಾರಣ ಮಾಡಿಯೇ ಅವರು ಅಧಿಕಾರಕ್ಕೆ ಬಂದಿದ್ದಾರೆ. ಒಡೆದುವಾಳುವ ನೀತಿಯನ್ನು ಮಾಡುತ್ತಾರೆ. ವೀರಶೈವರು ಲಿಂಗಾಯತರನ್ನು ಒಡೆಯುವ ಪ್ರಯತ್ನ ಮಾಡುತ್ತಾರೆ. ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಸ್ವಾಭಿಮಾನ ದಿಂದ ಬದಲಾವಣೆ ತರಬೇಕು. ಈ ಬದಲಾವಣೆಯಿಂದ ಇಡೀ ರಾಜ್ಯಕ್ಕೆ ಅನುಕೂಲ ಆಗುತ್ತದೆ. ಬಾಗಲಕೋಟಿ ಅಭಿವೃದ್ಧಿ ಪರ್ವಕ್ಕೆ ಹೊಸ ಶಕ್ತಿ ಬರುತ್ತದೆ. ಹೀಗಾಗಿ ಎಲ್ಲರೂ ವೀರಣ್ಣ ಚರಂತಿಮಠ ಅವರಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ವೀರಣ್ಣ ಚರಂತಿಮಠ ಅವರ ಗೆಲುವು
ಜನಸಾಮಾನ್ಯರ ಗೆಲುವು
ಅಭಿವೃದ್ಧಿ ರಾಜಕಾರಣದ ಗೆಲುವು
ಸರಳ, ಸಜ್ಜನಿಕೆಯ ರಾಜಕಾರಣಕ್ಕೆ ಗೆಲುವುಬಾಗಲಕೋಟ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಹಳ್ಳೂರ ಗ್ರಾಮದಲ್ಲಿ ಇಂದು ನಮ್ಮ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಅವರ ಪರವಾಗಿ ರೋಡ್ ಶೋ ಮೂಲಕ ಮತಯಾಚನೆ ಮಾಡಿ, ನಂತರ ನಡೆದ ಸಭೆಯಲ್ಲಿ ಸಾರ್ವಜನಿಕರನ್ನು… pic.twitter.com/HD3pDttLmc
— Basanagouda R Patil (Yatnal) (@BasanagoudaBJP) April 4, 2026
ಬಸನಗೌಡ ಪಾಟೀಲ್ ಯತ್ನಾಳ್ ಪ್ರಚಾರ
ಬಾಗಲಕೋಟ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಹಳ್ಳೂರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಅವರ ಪರವಾಗಿ ರೋಡ್ ಶೋ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತಯಾಚಿಸಿದರು. ನಂತರ ನಡೆದ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ವೀರಣ್ಣ ಚರಂತಿಮಠ ಅವರ ಗೆಲುವು, ಜನಸಾಮಾನ್ಯರ ಗೆಲುವು. ಅಭಿವೃದ್ಧಿ ರಾಜಕಾರಣದ ಗೆಲುವು ಸರಳ, ಸಜ್ಜನಿಕೆಯ ರಾಜಕಾರಣಕ್ಕೆ ಗೆಲುವು’ ಎಂದು ಹೇಳಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/by-election-basavaraj-bommai-slams-congress-over-divide-and-rule-policy-says-bjp-role-in-bagalkot-449359.html. xn--babytilbehr-pgb.com does not claim ownership of this content. All rights remain with the original publisher.
