
Karnataka
-Shankrappa Parangi
ಹಾವೇರಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಲೇ ಇದೆ. ಇರಾನ್-ಇಸ್ರೇಲ್ ಮತ್ತು ಅಮೆರಿಕಾ ನಡುವಿನ ಯುದ್ಧ ಶಾಂತಿ ಸಂಧಾನಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಇದರ ಪ್ರಭಾವವು ತೈಲ ಪೂರೈಕೆ, ಜಾಗತಿಕ ಆರ್ಥಿಕತೆ ಹಾಗೂ ಇನ್ನಿತರ ರಂಗದ ಮೇಲೆ ಬೀರಿದೆ. ಇದೀಗ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮೇಲೂ ಉಂಟಾಗಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಪ್ರತಿ ವರ್ಷ ಲಕ್ಷಾಂತರ ಚೀಲ ಒಣ ಮೆಣಸಿನಕಾಯಿಗಳು ಬರುತ್ತವೆ. ಇಲ್ಲಿಂದ ದೇಶ ವಿದೇಶಗಳಿಗೆ ರಫ್ತಾಗುತ್ತವೆ. ಅದರಂತೆ ಮಧ್ಯಪ್ರಾಚ್ಯದ ದುಬೈ, ಇರಾನ್, ಇಸ್ರೇಲ್ನಂತಹ ದೇಶಗಳಿಗೆ ರವಾನೆ ಆಗುತ್ತದೆ. ಯುದ್ಧದಿಂದಾಗಿ ಕಳೆದ ಎರಡು ವಾರದಿಂದ ರಫ್ತು ನಿಂತಿದೆ. ಅಲ್ಲಿಂದ ಬರಬೇಕಾದ ಬಾಕಿ ಕೋಟ್ಯಾಂತರ ರೂಪಾಯಿ ಹಣ ಸಹ ಬರುತ್ತಿಲ್ಲ. ಇನ್ನು ಬೇರೆ ದೇಶಗಳಿಗೆ ರಫ್ತು ಬಾಡಿಗೆ ಸಹ ಏರಿಕೆ ಆಗಿದೆ ಎಂದು ಬ್ಯಾಡಗಿ ಮಾರುಕಟ್ಟೆ ವರ್ತಕರು ತಿಳಿಸಿದ್ದಾರೆ.

ಬ್ಯಾಡಗಿ ಮೆಣಸಿನಕಾಯಿ ವಿಶ್ವ ಪ್ರಸಿದ್ಧಿ ಪಡೆದಿದೆ. ಕರ್ನಾಟಕದ ಕುಂದಗೋಳ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ ಹಾಗೂ ನೆರೆಯ ಆಂಧ್ರ ಪ್ರದೇಶ, ತಮಿಳುನಾಡು ಭಾಗಗಳಿಂದಲೂ ಇಲ್ಲಿಗೆ ಮೆಣಸಿನಕಾಯಿ ಬರುತ್ತದೆ. ಈ ವರ್ಷ ಒಣಮೆಣಸಿನಕಾಯಿ ಬೆಳೆಯು ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಡಿಸೆಂಬರ್ನಿಂದ ಮಾರ್ಚ್ ಹೊತ್ತಿಗೆ ಮಾರುಕಟ್ಟೆಗೆ ಬರಬೇಕಿದ್ದ ಮೆಣಸಿನಕಾಯಿ ಪ್ರಮಾಣದಲ್ಲಿ ಭಾರೀ ಕುಸಿತವಾಗಿತ್ತು. ಇದರಿಂದ ಮಾರುಕಟ್ಟೆ ಬಣಗುಡುತ್ತಿತ್ತು. ಆ ಸಂಕಷ್ಟ ಬೆನ್ನಲ್ಲೆ ಮತ್ತೆ ಯುದ್ಧದ ಪರಿಣಾಮ ಬ್ಯಾಡಗಿ ಮಾರುಕಟ್ಟೆ ಮೇಲಾಗಿದ್ದು, ವಿದೇಶಿ ರಫ್ತು ವ್ಯಾಪಾರ ಅತಂತ್ರವಾಗಿದೆ.
ಮಧ್ಯಪ್ರಾಚ್ಯ ದೇಶಗಳಿಗೆ ಖಾರದ ಪುಡಿ, ಮೆಣಸಿನಕಾಯಿ ರವಾನೆ ಆಗುತ್ತದೆ. ಸುಮಾರು 15 ದಿನಗಳಿಂದ ರಫ್ತು ನಿಂತಿರುವ ಜೊತೆಗೆ ಅಲ್ಲಿಂದ ಬರಬೇಕಿದ್ದ ಸುಮಾರು 10 ಕೋಟಿ ರೂಪಾಯಿಯಷ್ಟು ಹಣ ಬಾರದೇ ಸ್ಥಗಿತವಾಗಿದೆ. ಮತ್ತೊಂದೆಡೆ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ಮುಂದೆ ಹೇಗೆ ಎಂಬ ಚಿಂತೆ ವರ್ತಕರಲ್ಲಿ ಕಾಡುತ್ತಿದೆ.
ವಿದೇಶಿ ರಪ್ತು ಬಾಡಿಗೆ ದರ ಹೆಚ್ಚಳ
ಮಸಾಲೆ ಹಾಗೂ ಸೌಂದರ್ಯವರ್ಧಕ ತಯಾರಿಕೆಗೆ ಬ್ಯಾಡಗಿ ಮೆಣಸಿನಕಾಯಿ ಬಳಕೆ ಆಗುತ್ತದೆ. ರೀತಿಯ ಬಳಕೆ ಜೊತೆಗೆ ಆಹಾರ ಪದಾರ್ಥಕ್ಕಾಗಿಯು ವಿದೇಶಕ್ಕೆ ರಫ್ತಾಗುತ್ತದೆ. ಈ ಪೈಕಿ ಸಿಂಗಾಪುರ, ಥೈಲ್ಯಾಂಡ್, ಬಾಲಿ, ಮಲೇಶೀಯಾ, ಇಂಡೋನೇಶಿಯಾ, ಇರಾನ್ ಮತ್ತು ಇಸ್ರೇಲ್ ಸೇರಿ ಅನೇಕ ರಾಷ್ಟ್ರಗಳಿಗೆ ಮೆಣಸಿನಕಾಯಿ ರಫ್ತಾಗುತ್ತದೆ. ಯುದ್ಧ ಪೀಡಿತ ದೇಶಗಳಿಗೆ ಮೆಣಸಿನಕಾಯಿ ರವಾನೆ ನಿಂತಿದೆ. ಬೇರೆ ದೇಶಗಳಿಗೆ ಮೊದಲು 1800 ಡಾಲರ್ನಷ್ಟಿದೆ ಬಾಡಿಗೆ ಇದೀಗ 3600 ಡಾಲರ್ನಷ್ಟು ಏರಿಕೆ ಆಗಿದೆ ಎಂದು ವರ್ತಕರು ಕಳವಳ ವ್ಯಕ್ತಪಡಿಸಿದ್ದಾರೆ.
-

ಏಷ್ಯಾದ ಬೃಹತ್ ಆಹಾರ ಮೇಳ 2026: ಜಾಗತಿಕ ಮಾರುಕಟ್ಟೆಗೆ ಉದ್ಯಮ ಲಗ್ಗೆ
-

ಇರಾನ್ ನಾಯಕರೊಂದಿಗೆ ಸಂಪರ್ಕಕ್ಕೆ ಯತ್ನ: ಭಾರತದ ಈ ಕ್ರಮಕ್ಕೆ ಇರಾನ್ ಧನ್ಯವಾದ ಹೇಳಿದೆ: ವಿದೇಶಾಂಗ ಸಚಿವ ಎಸ್ ಜೈಶಂಕರ್
-

Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ?
-

Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು
-

Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್
-

ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ
-

Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ
-

Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ
-

Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ
-

ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ
-

Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ
-

Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ
-

ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers
-

ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್
-

Women’s Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/byadgi-chilli-market-hit-by-middle-east-war-exports-stalled-and-shipping-costs-double-3600-dollar-011-446499.html. xn--babytilbehr-pgb.com does not claim ownership of this content. All rights remain with the original publisher.
