CJ Roy Death: ಸಿ.ಜೆ ರಾಯ್ ಆತ್ಮಹತ್ಯೆಗೆ ಐಟಿ ದಾಳಿ ಕಾರಣವಲ್ಲ ಎಂದ ಕಾನ್ಫಿಡೆಂಟ್ ಗ್ರೂಪ್, ಸಾವಿಗೆ ಅಸಲಿ ಕಾರಣವೇನು ? | CJ Roy Death: Confident Group Denies IT Raid Angle, What Was the Real Cause

Karnataka

oi-Hitesh Y

CJ Roy Death: ದಕ್ಷಿಣ ಭಾರತದ ಪ್ರಮುಖ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಮಾಲೀಕರಾದ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣವು ಪ್ರಮುಖ ತಿರುವು ಪಡೆದುಕೊಂಡಿದೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿಯ ಒತ್ತಡಕ್ಕೆ ಮಣಿದು ಸಿಜೆ ರಾಯ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿತ್ತು. ಆದರೆ ಇದೀಗ ಆ ರೀತಿ ಏನು ಇಲ್ಲ ಎಂದು ಎಂದು ಕಂಪನಿಯು ಹೇಳಿದೆ. ಸಿಜೆ ರಾಯ್ ಅವರ ಪ್ರಕರಣದಲ್ಲಿ ಹೊಸ ಬೆಳವಣಿಗೆ ಏನಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ಒಂದು ವಾರದ ನಂತರ ಕಾನ್ಫಿಡೆಂಟ್ ಗ್ರೂಪ್‌ನಿಂದ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಕಾನ್ಫಿಡೆಂಟ್ ಗ್ರೂಪ್ ಸೋಮವಾರ ಸ್ಪಷ್ಟನೆ ನೀಡಿದ್ದು, ನಮ್ಮ ಕಂಪನಿ ಸಾಲವಿಲ್ಲದ (zero-debt) ಮತ್ತು ಹೂಡಿಕೆದಾರರಿಲ್ಲದ (zero-investor) ಸಂಸ್ಥೆಯಾಗಿಯೇ ಮುಂದುವರಿಯುತ್ತಿದೆ ಎಂದು ಹೇಳಿದೆ. ಅಲ್ಲದೇ ಈಗ ಪ್ರಸ್ತುತ ಜಾರಿಯಲ್ಲಿರುವ ಎಲ್ಲ ಯೋಜನೆಗಳನ್ನು ನಿರ್ದಿಷ್ಟ ಕಾಲಾವಧಿಯಲ್ಲೇ ಪೂರ್ಣಗೊಳಿಸಲಾಗುತ್ತದೆ ಎಂದು ಗ್ರಾಹಕರಿಗೆ ಭರವಸೆ ನೀಡಿದೆ.

CJ Roy Death

ಕಾನ್ಫಿಡೆಂಟ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ಟಿ.ಎ ಜೋಸೆಫ್ ಅವರು, ಕಂಪನಿಯ ಬೆಂಗಳೂರಿನ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಆದಾಯ ತೆರಿಗೆ ದಾಳಿಯು ನಿಯಮಿತ ಕಾರ್ಯವಿಧಾನವಾಗಿದೆ ಎಂದು ಅವರು ಹೇಳಿದ್ದಾರೆ. ಇಂದು ಎಂದಿನಂತೆ ನಡೆಯುವ ಐಟಿ ದಾಳಿಯಾಗಿದೆ. ಐಟಿ ಅಧಿಕಾರಿಗಳ ತಪಾಸಣೆಯ ಸಮಯದಲ್ಲಿ ಐಟಿ ಅಧಿಕಾರಿಗಳಿಂದ ಯಾವುದೇ ತೀವ್ರ ಕಿರುಕುಳ ನಡೆದಿಲ್ಲ ಎಂದಿದ್ದು, ಈ ರೀತಿಯ ಆರೋಪಗಳನ್ನು ನಿರಾಕರಿಸಿದ್ದಾರೆ.

ಜನವರಿ 30 ರಂದು ಬೆಂಗಳೂರಿನ ಕಚೇರಿಯಲ್ಲಿ ನಡೆದ ಆದಾಯ ತೆರಿಗೆ ದಾಳಿಯ ಸಂದರ್ಭದಲ್ಲಿ ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ.ಜೆ ರಾಯ್ ಅವರ ಆತ್ಮಹತ್ಯೆಯ ಸುತ್ತಲಿನ ವಿವಾದಗಳ ಬಗ್ಗೆ ಇದೀಗ ಕಂಪನಿಯು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಇದೀಗ ಐಟಿ ಅಧಿಕಾರಿಗಳ ದಾಳಿಯಿಂದ ಈ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದಾದರೆ, ಇದಕ್ಕೆ ಕಾರಣವೇನು ಎನ್ನುವ ವಿಚಾರವೂ ಸಹ ಚರ್ಚೆಗೆ ಕಾರಣವಾಗಿದೆ. ಐಟಿ ಅಧಿಕಾರಿಗಳು ವಿರೋಧಿಗಳಲ್ಲ, ಆದರೆ ಸರ್ಕಾರಿ ನಿಯಮಗಳನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಜೋಸೆಫ್ ಹೇಳಿದ್ದಾರೆ. ಅಲ್ಲದೇ ಮುಂದುವರಿದು ಐಟಿ ಅಧಿಕಾರಿಗಳ ದಾಳಿಯ ಸಮಯದಲ್ಲಿ ರಾಯ್ ಅವರ ಸಹೋದರ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮುಂದುವರಿದು ಕಾನ್ಫಿಡೆಂಟ್ ಗ್ರೂಪ್ ಕಂಪನಿಯು ಐಟಿ ಕಾರ್ಯಾಚಣೆಗೆ ಸಂಪೂರ್ಣವಾಗಿ ಸಹಕರಿಸಿದೆ ಎಂದೂ ಅವರು ಹೇಳಿದ್ದಾರೆ.

ಆದಾಯ ತೆರಿಗೆ ತಪಾಸಣೆ ಎನ್ನುವುದು ಸಹಜ ಪ್ರಕ್ರಿಯೆಯಾಗಿದೆ. ಕಂಪನಿಯು ಯಾವುದೋ ಅಪರಾಧದಿಂದ ಈ ಐಟಿ ಪರಿಶೋಧನೆ ನಡೆದಿಲ್ಲ. ಅಧಿಕಾರಿಗಳು ಕಂಪನಿಯೊಂದಿಗೆ ಸಮಂಜಸವಾದ ರೀತಿಯಲ್ಲಿ ಸಂವಹನ ನಡೆಸಿದ್ದರು. ನಿಯಮಾನುಸಾರವೇ ಈ ಐಟಿ ಪರಿಶೋಧನೆ ನಡೆದಿತ್ತು ಎಂದೂ ಜೋಸೆಫ್ ಅವರು ಹೇಳಿದ್ದಾರೆ.

ರಾಯ್ ಸಾವಿನ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲ್ಲ

ಇನ್ನು ಇದೇ ಸಂದರ್ಭದಲ್ಲಿ ರಾಯ್ ಅವರ ಸಾವಿನ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಜೋಸೆಫ್ ಹೇಳಿದ್ದಾರೆ. ಆದರೆ ನಡೆಯುತ್ತಿರುವ ವಿಶೇಷ ತನಿಖಾ ತಂಡದ ತನಿಖೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅಥವಾ ನಿರ್ಮಾಪಕ ಆಂಥೋನಿ ಪೆರುಂಬವೂರ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಜೋಸೆಫ್ ಅವರು, ಇಲ್ಲ ಆ ರೀತಿ ಯಾರೂ ಸಹ ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡಿಲ್ಲ ಎಂದು ಹೇಳಿದ್ದಾರೆ. ಅವರಿಬ್ಬರೊಂದಿಗಿನ ರಾಯ್ ಸಂಬಂಧವು ಕ್ಯಾಸನೋವಾ ಚಿತ್ರಕ್ಕೆ ಸೀಮಿತವಾಗಿದೆ.

ಪ್ರಕರಣದ ಹಿನ್ನೆಲೆ ಏನು ?

ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಅಧ್ಯಕ್ಷ ಸಿ.ಜೆ ರಾಯ್ ಅವರು ಬೆಂಗಳೂರಿನ ರಿಚ್‌ಮಂಡ್ ಸರ್ಕಲ್ ಬಳಿಯ ತಮ್ಮ ಕಚೇರಿಯಲ್ಲಿ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಜನವರಿ 30ರಂದು ಕಾನ್ಫಿಡೆಂಟ್ ಗ್ರೂಪ್‌ನ ಮೇಲೆ ಐಟಿ ದಾಳಿ ನಡೆಸಿದ ಸಂದರ್ಭದಲ್ಲಿ ಸಿ.ಜೆ ರಾಯ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಮೂರು ದಿನಗಳಿಂದ ನಡೆಸಲಾಗಿದ್ದ ಶೋಧ ಕಾರ್ಯಾಚರಣೆಗಳ ನಂತರ ಕೇರಳದ ಆದಾಯ ತೆರಿಗೆ ಅಧಿಕಾರಿಗಳ ತಂಡವು ರಾಯ್ ಅವರನ್ನು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಕಳೆದ ವರ್ಷ ಡಿಸೆಂಬರ್‌ನಿಂದ ರಾಯ್ ಆದಾಯ ತೆರಿಗೆ ಇಲಾಖೆಯ ಪರಿಶೀಲನೆಯಲ್ಲಿದ್ದರು ಎನ್ನಲಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/cj-roy-death-confident-group-denies-it-raid-angle-what-was-the-real-cause-443341.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo