Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ | World Record Chase: Amelia Kerr’s Unbeaten 179 Leads New Zealand to Historic Win Over South Africa

Sports

oi-Shankrappa Parangi

Cricket News: ನಾಯಕಿ ಅಮೆಲಿಯಾ ಕೆರ್ (ಅಜೇಯ 179) ಅವರು ಬಾರಿಸಿದ ಶತಕದ ನೆರವಿನಿಂದ ನ್ಯೂಜಿಲೆಂಡ್‌ ವನಿತೆಯರ ತಂಡ 2 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ ಮಹಿಳಾ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ನ್ಯೂಜಿಲೆಂಡ್ ತಂಡ ದಾಖಲೆಯ ರನ್‌ಗಳನ್ನು ಚೇಸ್ ಮಾಡಿದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.

ಭಾರತ ತಂಡ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ 330 ರನ್‌ಗಳ ದಾಖಲೆಯ ರನ್‌ ಚೇಸ್‌ ಮಾಡಿದ ದಾಖಲೆಯನ್ನು ಈಗ ನ್ಯೂಜಿಲೆಂಡ್ ಅಳಿಸಿ ಹಾಕಿದೆ. ವೆಲ್ಲಿಂಗ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ 347 ರನ್‌ಗಳ ಮೊತ್ತವನ್ನು ಬೆನ್ನಟ್ಟಿ ನೂತನ ವಿಶ್ವದಾಖಲೆಯನ್ನು ಬರೆದಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕಿ ಅಮೆಲಿಯಾ ಕೆರ್ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು.

World Record Chase

ಸವಾಲಿನ ಗುರಿಯನ್ನು ಬೆನ್ನಟ್ಟಿ ನ್ಯೂಜಿಲೆಂಡ್ ತಂಡದ ಟಾಪ್‌ ಆರ್ಡರ್ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಒಂದು ಹಂತದಲ್ಲಿ ಕಿವೀಸ್‌ 130 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ತಂಡಕ್ಕೆ ಆಧಾರವಾದರು ಕೆರ್‌ ಹಾಗೂ ಇಸಾಬೆಲ್ಲಾ ಗೇಜ್ (68) ಜೋಡಿ 124 ಎಸೆತಗಳಲ್ಲಿ 132 ರನ್‌ ಸೇರಿಸಿತು.

ಕಿವೀಸ್ ತಂಡದ ನಾಯಕಿ ಅಮೆಲಿಯಾ ಕೆರ್ ತಮ್ಮ 89ನೇ ಏಕದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. 139 ಎಸೆತಗಳಲ್ಲಿ 23 ಬೌಂಡರಿ, 1 ಸಿಕ್ಸರ್‌ ನೆರವಿನಿಂದ ಅಜೇಯ 179 ರನ್‌ ಸಿಡಿಸಿ ಜಯಶಾಲಿಯಾದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಪರ ಲಾರಾ ವೊಲ್ವಾರ್ಡ್ (69), ಆನೆಕೆ ಬಾಷ್ (91), ಸುನೆ ಲೂಸ್ (40), ಕ್ಲೋಯ್ ಟ್ರಯಾನ್ (52), ನಡಿನ್ ಡಿ ಕ್ಲರ್ಕ್, ಸಿನಾಲೊ ಜಾಫ್ಟಾ (37) ಸ್ಥಿರ ಪ್ರದರ್ಶನ ನೀಡಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 6 ವಿಕೆಟ್‌ಗೆ 346 ರನ್‌ ಗಳಿಸಿತು.

ಕೇರ್-ಗೇಜ್ ಜೋಡಿ ಆಟದ ಮೋಡಿ

ಆರನೇ ವಿಕೆಟ್‌ಗೆ ಅಮೆಲಿಯಾ ಕೆರ್ ಹಾಗೂ ಇಸಾಬೆಲ್ಲಾ ಗೇಜ್ ಜೋಡಿ 82 ಎಸೆತಗಳಲ್ಲಿ 120 ರನ್‌ ಬಾರಿಸಿದರು. ಈ ವೇಳೆ ಇಸಾಬೆಲ್ಲಾ ಗೇಜ್ 11 ಬೌಂಡರಿ ನೆರವಿನಿಂದ 68 ರನ್‌ ಗಳಿಸಿ ಹೊರ ಬಂದರು. ನಂತರದ ಬಂದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ದೀರ್ಘ ಕಾಲದವರೆಗೆ ನಾಯಕಿ ಅಮೆಲಿಯಾ ಕೆರ್‌ ಅವರು ಗಟ್ಟಿಯಾಗಿ ನಿಂತಿದ್ದು ಪ್ರೇಕ್ಷಕರಲ್ಲಿ ಕ್ರೇಜ್ ಹೆಚ್ಚಾಗುವಂತೆ ಮಾಡಿತು.

ಮಹಿಳಾ ಏಕದಿನ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಅಧಿಕ ರನ್ ಚೇಸ್‌ ಮಾಡಿದ ತಂಡಗಳ ವಿವರ ನೋಡುವುದಾದರೆ, ದಕ್ಷಿಣ ಆಫ್ರಿಕಾ ವಿರುದ್ಧ 2026ರಲ್ಲಿ ನ್ಯೂಜಿಲೆಂಡ್‌ 347 ರನ್‌, 2025ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 339 ರನ್‌, 2025 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 330 ರನ್‌, 2024ರಲ್ಲಿ ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 302 ರನ್‌ ಹಾಗೂ 2012ರಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ 288 ರನ್‌ ಗಳಿಸುವ ಮೂಲಕ ಈ ತಂಡಗಳು ಚೇಸ್ ಮಾಡಿದ್ದವು.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/world-record-chase-amelia-kerr-s-unbeaten-179-leads-new-zealand-to-historic-win-over-south-africa-449097.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo