Darshan Thoogudeepa Birthday: ನಟ ದರ್ಶನ್ ಹುಟ್ಟುಹಬ್ಬ: ವಿಶೇಷ ಪೋಸ್ಟ್‌ ಹಂಚಿಕೊಂಡ ಸೆಲೆಬ್ರಿಟಿಗಳು | Darshan Thoogudeepa Birthday Bash: Film Fraternity Floods Social Media with Wishes

Entertainment

oi-Hitesh Y

Darshan Thoogudeepa Birthday: ಫೆಬ್ರವರಿ 16 ನಟ ದರ್ಶನ್ ಅವರ ಬರ್ತಡೇ. ಇದೇ ಮೊದಲ ಬಾರಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಜೈಲಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಜೈಲಿನಲ್ಲಿದ್ದಾರೆ. ನಟ ದರ್ಶನ್ ಅವರ ಜನ್ಮದಿನಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೇರಿದಂತೆ ಹಲವು ನಟ, ನಟಿಯರು ಶುಭಕೋರಿದ್ದಾರೆ. ಬೇಗ ಬನ್ನಿ ಎಂದೂ ಹೇಳಿದ್ದಾರೆ. ನಟ ದರ್ಶನ್ ಬರ್ತಡೇಗೆ ಯಾರು ಏನಂದ್ರು ಎನ್ನುವ ವಿವರ ಇಲ್ಲಿದೆ.

ನಟ ದರ್ಶನ್ ಅವರು ಜೈಲಿನಲ್ಲಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ದರ್ಶನ್‌ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ದರ್ಶನ್ ಅವರನ್ನು ಅವರ ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ದರ್ಶನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮಿ ಅವರು ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ.

Darshan Thoogudeepa

ನಟ ದರ್ಶನ್ ಅವರ ಜನ್ಮದಿನಕ್ಕೆ ವಿಜಯಲಕ್ಷ್ಮಿ, ರಕ್ಷಿತಾ ಪ್ರೇಮ್, ಧನ್ವೀರ್ ಗೌಡ, ಅನುಷಾ ರೈ, ಚಿಕ್ಕಣ್ಣ ಹಾಗೂ ಅಭಿಷೇಕ್ ಅಂಬರೀಶ್ ಸೇರಿದಂತೆ ಹಲವರು ನಟ ದರ್ಶನ್ ಅವರಿಗೆ ವಿಶ್ ಮಾಡಿದ್ದಾರೆ. ನಟ ದರ್ಶನ್ ಅವರೊಂದಿಗಿದ್ದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಯಾರು ಏನಂದ್ರು ಎನ್ನುವುದು ಮುಂದಿದೆ.

ವಿಜಯಲಕ್ಷ್ಮಿ ದರ್ಶನ್

ನಟ ದರ್ಶನ್ ಅವರ ಜನ್ಮದಿನಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ವಿಶೇಷ ಪೋಸ್ಟ್‌ ಹಂಚಿಕೊಂಡಿದ್ದಾರೆ. ಪ್ರತಿ ದಿನ ಸಂಭ್ರಮಿಸುವ ದರ್ಶನ್‌ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ವಿಜಯಲಕ್ಷ್ಮಿ ದರ್ಶನ್ ಅವರು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.

ಕಮ್‌ ಸೂನ್ ಕಣೋ ಎಂದ ರಕ್ಷಿತಾ

ನಟಿ ರಕ್ಷಿತಾ ಅವರು ಕಮ್ ಸೂನ್ ಕಣೋ ಎಂದಿದ್ದಾರೆ. ಹ್ಯಾಪಿ ಬರ್ತ್‌ಡೇ. ನಾನು ನಿನ್ನನ್ನ ಪ್ರತಿ ದಿನವೂ ಮಿಸ್ ಮಾಡಿಕೊಳ್ಳುತ್ತೇನೆ. ನಿನ್ನನ್ನು ಮತ್ತೆ ಖುಷಿಯಾಗಿ ನೋಡಬೇಕು ಎನ್ನುವುದೇ ನನ್ನ ಆಸೆ. ಕಮ್ ಹೋಮ್ ಸೂನ್ ಕಣೋ ಎಂದು ನಟಿ ರಕ್ಷಿತಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

Darshan Thoogudeepa

ಕಳೆದ ವರ್ಷ ಇದೇ ಸಮಯದಲ್ಲಿ ತೆಗೆದ ಫೋಟೋ ಇದು ಹ್ಯಾಪಿ ಬರ್ತ್‌ಡೇ ಎಂದು ರಕ್ಷಿತಾ ಪ್ರೇಮ್ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/darshan-thoogudeepa-birthday-bash-film-fraternity-floods-social-media-with-wishes-443891.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo