DEMU Rail: ದಾಂಡೇಲಿ-ಅಳ್ನಾವರ ಮಧ್ಯ ಡೆಮು ರೈಲುಗಳ ಸೇವೆ ಆರಂಭ, ವೇಳಾಪಟ್ಟಿ, ಸಂಚಾರ ವಿವರ | Dandeli-Alnavar Demu Rail Service From Feb 9th, 3 Rail operate 6 times a week: Schedule: V Somanna

Karnataka

oi-Shankrappa Parangi

ದಾಂಡೇಲಿ: ಕರ್ನಾಟಕದ ಎರಡು ಜಿಲ್ಲೆಗಳ ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ (SWR) ಸಿಹಿ ಸುದ್ದಿ ನೀಡಿದೆ. ದಾಂಡೇಲಿ ಮತ್ತು ಅಳ್ನಾವರ ನಡುವೆ ಸಂಚರಿಸುವ ಪ್ರಯಾಣಿಕರ ಬೇಡಿಕೆ ಈಡೇರಿಕೆಗೆ ಕಾಲ ಕೂಡಿ ಬಂದಿದೆ. ಈ ಎರಡು ನಗರಗಳ ನಡುವೆ ಹೊಸ ಡೆಮು (DEMU) ರೈಲುಗಳ ಸೇವೆಗಳನ್ನು ಪರಿಚಯಿಸಲಾಗುತ್ತಿದೆ. ಈ ಸೇವೆಯ ಆರಂಭಕ್ಕೆ ಇಂದು ಫೆಬ್ರವರಿ 07ರಂದು ದಾಂಡೇಲಿ ರೈಲು ನಿಲ್ದಾಣದಲ್ಲಿ ರೈಲು ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಚಾಲನೆ ನೀಡಲಿದ್ದಾರೆ. ಈ ಸೇವೆಯ ಪ್ರಯೋಜನೆ, ಮಾರ್ಗ, ನಿಲ್ದಾಣ ಹಾಗೂ ವೇಳಾಪಟ್ಟಿ ವಿವರ ಇಲ್ಲಿದೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಹಾಗೂ ಧಾರವಾಡ ಜಿಲ್ಲೆಯ ಅಳ್ನಾವರ ಮಧ್ಯೆ 26 ಕಿಲೋ ಮೀಟರ್ ಜಾಲದಲ್ಲಿ ನೂತನ ಡೆಮು ರೈಲುಗಳ ಸೇವೆ ಆರಂಭಿಸಲು ರೈಲ್ವೆ ಇಲಾಖೆ ಯೋಜಿಸಿದೆ. ಈ ಭಾಗದಲ್ಲಿ ನಿಯಮಿತವಾಗಿ ಡೆಮುಗಳ ನಿಯಮಿತ ಸೇವೆ ಫೆಬ್ರವರಿ 9ರಿಂದ ಲಭ್ಯವಾಗಲಿದೆ. ಈ ಸೇವೆಯು ಸ್ಥಳೀಯ ಪ್ರಯಾಣಿಕರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರಿಗೆ ಸುಗಮ ಸಂಚಾರ ಒದಗಿಸುತ್ತದೆ. ಜೊತೆಗೆ ಪ್ರವಾಸೋದ್ಯಮ ಹಾಗೂ ವ್ಯಾಪಾರಕ್ಕೆ ಉತ್ತೇಜನ ನೀಡಿ, ಪ್ರದೇಶದ ಸಮಗ್ರ ಅಭಿವೃದ್ಧಿಗೆ ಹೊಸ ಚೈತನ್ಯ ನೀಡಲಿದೆ.

Dandeli Alnavar Demu Rail

ನೈಋತ್ಯ ರೈಲ್ವೆ ಅಧಿಕಾರಿಗಳ ನೀಡಿರುವ ಮಾಹಿತಿ ಪ್ರಕಾರ, ದಾಂಡೇಲಿ ಮತ್ತು ಅಳ್ನಾವರ ನಡುವೆ ಹೊಸ ಡೆಮು ರೈಲುಗಳ ನಿಯಮಿತ ಸಂಚಾರ ಸೇವೆಯು ವಾರಕ್ಕೆ 6 ದಿನಗಳ ಕಾಲ ಲಭ್ಯ ಇರಲಿದೆ. ಪ್ರತಿ ಭಾನುವಾರ ರೈಲು ಸಂಚಾರ ಇರುವುದಿಲ್ಲ ಎಂಬುದನ್ನು ಸ್ಥಳೀಯ ಪ್ರಯಾಣಿಕರು ಗಮನಿಸಿ ಪ್ರಯಾಣ ಪ್ಲ್ಯಾನ್ ಮಾಡಿಕೊಳ್ಳಬಹುದು.

ರೈಲುಗಳ ಸಂಚಾರದ ವೇಳಾಪಟ್ಟಿ

1. ಅಳ್ನಾವರ-ದಾಂಡೇಲಿ ಡೆಮು ರೈಲು (76501) ಬೆಳಗ್ಗೆ 05:30 ಗಂಟೆಗೆ, 76503 ಸಂಖ್ಯೆ ರೈಲು ಬೆಳಗ್ಗೆ 07:40 ಹಾಗೂ ಮತ್ತು 76505 ಸಂಖ್ಯೆ ಡೆಮು ರೈಲು ಸಂಜೆ 19:30 ಕ್ಕೆ ಅಳ್ನಾವರ ರೈಲು ನಿಲ್ದಾಣದಿಂದ ಹೊರಡುತ್ತದೆ.

2. ದಾಂಡೇಲಿಯಿಂದ ಅಳ್ನಾವರ ರೈಲು ಡೆಮು ರೈಲು (76502) ಬೆಳಗ್ಗೆ 06:45, 76504 ಸಂಖ್ಯೆಯ ರೈಲು ಬೆಳಗ್ಗೆ 08:40 ಹಾಗೂ 76506 ಸಂಖ್ಯೆಯ ರಾತ್ರಿ 20:30 ಗಂಟೆಗೆ ದಾಂಡೇಲಿಯಿಂದ ಆಳ್ನಾವರದತ್ತ ಪ್ರಯಾಣ ಬೆಳೆಸಲಿವೆ. ಒಂದು ಮಾರ್ಗದಲ್ಲಿ ತಲಾ ಮೂರು ರೈಲುಗಳು ಪ್ರತಿ ದಿನ ಸಂಚಾರ ಮಾಡಲಿವೆ. ವಾರದಲ್ಲಿ ಆರು ದಿನ ಲಭ್ಯ ಇವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಡೆಮು ರೈಲಿನ ವಿಶೇಷತೆಗಳೇನು?

ಅಳ್ನಾವರ-ದಾಂಡೇಲಿ ಈ ಹೊಸ ಡೆಮು ರೈಲುಗಳು ಒಟ್ಟು 04 ಕಾರ್ ಡೆಮು ಕೋಚ್‌ಗಳ ಸಂಯೋಜನೆಯನ್ನು ಒಳಗೊಂಡಿವೆ. ಇದು ಸಣ್ಣ ದೂರದ ಪ್ರಯಾಣಕ್ಕೆ ಅತ್ಯಂತ ಸುಸಜ್ಜಿತವಾಗಿದೆ. ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ವೇಗದ ಪ್ರಯಾಣದ ಅನುಭವ ನೀಡುತ್ತದೆ. ನಗರಗಳಿಂದ ಗ್ರಾಮೀಣ ಭಾಗಕ್ಕೆ ತೆರಳುವವರಿಗೆ ಹೇಳಿ ಮಾಡಿದ ಸಾರಿಗೆ ಇದಾಗಿದೆ. ಇವು ಗಂಟೆಗೆ 100ರಿಂದ 120 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲಿದೆ. ನಿಲುಗಡೆಯಲ್ಲಿ ನಿಲ್ಲುವ ಕಾರಣ ಸರಾಸರಿ ವೇಗವನ್ನು ಪ್ರತಿ ಗಂಟೆಗೆ ಸುಮಾರು 45 ಕಿಮೀಗೆ ಇಳಿಸಲಾಗಿದೆ.

ಈ ಡೆಮು ರೈಲುಗಳ ನಿಲುಗಡೆ, ನಿಖರ ಸಂಚಾರ ಸಮಯದ ಕುರಿತು ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ www.enquiry.indianrail.gov.in ಗೆ ಭೇಟಿ ನೀಡಬಹುದು. ಇಲ್ಲವೆ NTES ಆ್ಯಪ್ ಮೂಲಕ ಮಾಹಿತಿ ಪಡೆಯಬಹುದು. ಜೊತೆಗೆ ರೈಲ್ವೆ ಸಹಾಯವಾಣಿ ಸಂಖ್ಯೆ 139 ಗೂ ಕರೆ ಮಾಡಿ ವಿಚಾರಿಸಬಹುದು.


Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/dandeli-alnavar-demu-rail-service-from-feb-9th-3-rail-operate-6-times-a-week-schedule-v-somanna-442829.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo