
Entertainment
oi-Hitesh Y
Dhurandhar 2: ಭಾರತೀಯ ಸಿನಿಮಾ ರಂಗದಲ್ಲಿ ಹೊಸ ದಾಖಲೆ ಬರೆದಿರುವ ಹಾಗೂ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ರೂ. ಗಳಿಸುತ್ತಿರುವ ದುರಂಧರ್ 2: ದಿ ರಿವೆಂಜ್ಗೆ ಇದೀಗ ಹೊಸ ಸಂಕಷ್ಟ ಎದುರಾಗಿದೆ. ದುರಂಧರ್ 2 ಸಿನಿಮಾಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಬಾಕ್ಸ್ ಆಫೀಸ್ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಯಾವ ಭಾರತೀಯ ಸಿನಿಮಾವೂ ಮಾಡದ ಹೊಸ ದಾಖಲೆಗಳನ್ನು ದುರಂಧರ್ 2 ಮಾಡಿದೆ. ಆದರೆ ಇದೀಗ ಈ ಸಿನಿಮಾವು ಹೊಸ ಕಾನೂನು ಸಂಕಷ್ಟವನ್ನು ಎದುರಿಸುತ್ತಿದೆ.
ದುರಂಧರ್ 2 ಸಿನಿಮಾಗೆ ಬಾಲಿವುಡ್ ನಿರ್ಮಾಣ ಸಂಸ್ಥೆ ತ್ರಿಮೂರ್ತಿ ಫಿಲ್ಮ್ಸ್ ನಿಂದ ದೂರು ಬಂದಿದೆ. ಆದಿತ್ಯಧರ್ ಅವರ ಬ್ಯಾನರ್ ಬಿ62 ಸ್ಟುಡಿಯೋಸ್ ವಿರುದ್ಧ ರಂಗ್ ದೇ ಲಾಲ್ (ಓಯೆ ಓಯೆ) ಹಾಡಿನ ಅನಧಿಕೃತ ಬಳಕೆಗಾಗಿ ಮೊಕದ್ದಮೆ ಹೂಡಲಾಗಿದೆ. ದುರಂಧರ್ 2 ದಿ ರಿವೆಂಜ್ ಬಾಕ್ಸ್ ಆಫೀಸ್ನಲ್ಲಿ ತನ್ನ ಓಟವನ್ನು ಮುಂದುವರಿಸಿದೆ. ಈ ಸಿನಿಮಾವು ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ.

‘ರಂಗ್ ದೇ ಲಾಲ್’ ಹಾಡು ಬಳಕೆಯ ಬಗ್ಗೆ ವಿವಾದ
ದುರಂಧರ್ 2 ಸಿನಿಮಾದ ರಂಗ್ ದೇ ಲಾಲ್ ಹಾಡಿನ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಎದುರಾಗಿದೆ. ಬಾರ್ ಮತ್ತು ಬೆಂಚ್ ವರದಿಯ ಪ್ರಕಾರ, ವಿವಾದವು 1989 ರ ಚಲನಚಿತ್ರ ತ್ರಿದೇವ್ನ ಜನಪ್ರಿಯ ಟ್ರ್ಯಾಕ್ನ ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದಂತೆ ಆಗಿದೆ. ಈ ಹಾಡನ್ನು ಕಲ್ಯಾಣ್, ಆನಂದ್ ಮತ್ತು ವಿಜು ಶಾ ಸಹ-ಸಂಯೋಜಿಸಿದ್ದಾರೆ, ಆನಂದ್ ಬಕ್ಷಿ ಸಾಹಿತ್ಯ ಬರೆದಿದ್ದಾರೆ ಮತ್ತು ಅಮಿತ್ ಕುಮಾರ್ ಮತ್ತು ಸಪ್ನಾ ಮುಖರ್ಜಿ ಹಾಡಿದ್ದಾರೆ. ಈ ಹಾಡನ್ನು ಸಿನಿಮಾವೊಂದರಲ್ಲಿ ಬಳಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಪರವಾನಗಿಗಳನ್ನು ಪಡೆಯದೆಯೇ ಅಥವಾ ಅದಕ್ಕೆ ಹೋಲುವ ಆವೃತ್ತಿಯನ್ನು ಚಿತ್ರದಲ್ಲಿ ಬಳಸಲಾಗಿದೆ ಎಂದು ತ್ರಿಮೂರ್ತಿ ಫಿಲ್ಮ್ಸ್ ಗಂಭೀರ ಆರೋಪವನ್ನು ಮಾಡಿದೆ.
ಅಲ್ಲದೆ ತ್ರಿಮೂರ್ತಿ ಸಂಸ್ಥೆ ಈ ಹಾಡಿನ ಸಂಗೀತ ಹಾಗೂ ಧ್ವನಿ ರೆಕಾರ್ಡಿಂಗ್ ಹಕ್ಕುಗಳು ನಮ್ಮದೇ ಎಂದು ಹೇಳಿದೆ. ಈ ಹಾಡನ್ನು ಅನುಮತಿ ಇಲ್ಲದೆ ಬಳಸಲಾಗಿದೆ, ಇದು ಹಕ್ಕುಸ್ವಾಮ್ಯ ಉಲ್ಲಂಘನೆ ಎಂದು ಕಂಪನಿ ಆರೋಪಿಸಿದೆ. ಈ ಕಾರಣದಿಂದ, ಹಾಡನ್ನು ಇನ್ನಷ್ಟು ಬಳಸಬಾರದು ಎಂದು ಕೋರ್ಟ್ಗೆ ಮನವಿ ಮಾಡಿ ತಡೆಯಾಜ್ಞೆ ನೀಡುವಂತೆ ಮನವಿ ಮಾಡಲಾಗಿದೆ. ಅಲ್ಲದೆ ನಷ್ಟ ಮೊತ್ತ ಸಹ ಕೊಡುವಂತೆ ಕೇಳಲಾಗಿದೆ. ಚಿತ್ರ ಬಿಡುಗಡೆಯಲ್ಲೂ, ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲೂ ಮತ್ತು ಪ್ರಚಾರದಲ್ಲೂ ಈ ಹಾಡನ್ನು ಬಳಸುತ್ತಿರುವುದರಿಂದ ಕಂಪನಿಗೆ ಆತಂಕವನ್ನುಂಟು ಮಾಡಿದೆ ಎಂದು ಹೇಳಿರುವುದು ವರದಿಯಾಗಿದೆ.
ಬಾಕ್ಸ್ ಆಫೀಸ್ ಓಟ ಹೇಗಿದೆ ?
ದುರಂಧರ್ 2 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ರೂ.ಗಳ ಗಡಿ ದಾಟಿದೆ. ಆದಿತ್ಯ ಧರ್ ನಿರ್ದೇಶನದ, ಧುರಂಧರ್ 2: ದಿ ರಿವೆಂಜ್ ಅನ್ನು ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ನಿರ್ಮಿಸಿದೆ. ಸ್ಪೈ ಆಕ್ಷನ್ ಥ್ರಿಲ್ಲರ್ನಲ್ಲಿ ರಣವೀರ್ ಸಿಂಗ್ ನಾಯಕನಾಗಿ ನಟಿಸಿದ್ದಾರೆ ಮತ್ತು ಧುರಂಧರ್ (2025) ನ ಮುಂದುವರಿದ ಭಾಗವಾಗಿದ್ದು, ಇದು ಸಹ ಭಾರೀ ಸಕ್ಸಸ್ ಕಂಡಿದೆ.
ಈ ಸಿನಿಮಾಗೆ ಸಂಬಂಧಿಸಿದಂತೆ ಹಲವು ವಿವಾದಗಳು ಸೃಷ್ಟಿಯಾಗಿದ್ದವು, ಈ ವಿವಾದಗಳ ಹೊರತಾಗಿಯೂ, ಚಿತ್ರವು ಅಸಾಧಾರಣ ಯಶಸ್ಸನ್ನು ಕಂಡಿದೆ. ಈ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ರೂ.ಗಳ ಗಡಿ ದಾಟಿದೆ ಎಂದು ವರದಿಯಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/dhurandhar-2-new-legal-trouble-hits-as-film-crosses-1000-crore-rupess-at-box-office-449859.html. xn--babytilbehr-pgb.com does not claim ownership of this content. All rights remain with the original publisher.
