Dhurandhar 2: ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಸುನಾಮಿ: 3 ದಿನಕ್ಕೆ 500 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ಸಿನಿಮಾ | Dhurandhar 2 The Revenge Enters 500 Crore Club in 3 Days Massive Box Office Run for Ranveer Singh

Entertainment

oi-Manohara M

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ ಕಾಂಬಿನೇಷನ್‌ನ ‘ಧುರಂಧರ್ 2: ದಿ ರಿವೆಂಜ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಈ ಸಿನಿಮಾ, ಈಗ ಕೇವಲ ಮೂರೇ ದಿನಗಳಲ್ಲಿ ಜಾಗತಿಕವಾಗಿ 500 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ವಿಶ್ವದಾದ್ಯಂತ ಅಬ್ಬರಿಸುತ್ತಿದೆ.

ಮೂರನೇ ದಿನ ಈ ಸಿನಿಮಾ ಭಾರತದಾದ್ಯಂತ ಎಲ್ಲಾ ಭಾಷೆಗಳಿಂದ ಒಟ್ಟು 113 ಕೋಟಿ ರೂಪಾಯಿ ನಿವ್ವಳ ಸಂಗ್ರಹ ಮಾಡಿದೆ. ವಿಶೇಷವೆಂದರೆ ಹಿಂದಿ ಆವೃತ್ತಿಯೊಂದರಿಂದಲೇ 102 ಕೋಟಿ ರೂಪಾಯಿ ಗಳಿಸುವ ಮೂಲಕ, ಈ ಹಿಂದೆ ‘ಪುಷ್ಪ 2’ (86 ಕೋಟಿ) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು, ಹಿಂದಿ ಸಿನಿಮಾ ಇತಿಹಾಸದಲ್ಲೇ ‘ಒಂದೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ’ ಎಂಬ ಕೀರ್ತಿಗೆ ಭಾಜನವಾಗಿದೆ.

Dhurandhar 2

ಕೆಜಿಎಫ್ 2 ಮತ್ತು ಪುಷ್ಪ 2 ದಾಖಲೆಗಳು ಉಡೀಸ್

ಎರಡನೇ ದಿನವೇ ತನ್ನ ಪ್ರತಾಪ ತೋರಿಸಿದ್ದ ‘ಧುರಂಧರ್ 2’, ಭಾರತದಲ್ಲಿ 96.76 ಕೋಟಿ ರೂಪಾಯಿ ಗಳಿಸಿತ್ತು. ಈ ಮೂಲಕ ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ (90.50 ಕೋಟಿ) ಮತ್ತು ಅಲ್ಲು ಅರ್ಜುನ್ ಅವರ ‘ಪುಷ್ಪ 2’ (96 ಕೋಟಿ) ಚಿತ್ರಗಳ ಎರಡನೇ ದಿನದ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿದೆ. ಒಟ್ಟು ದೇಶೀಯ ಕಲೆಕ್ಷನ್ ಅಂದಾಜು ₹339.27 ಕೋಟಿ, ವಿಶ್ವದಾದ್ಯಂತ ಒಟ್ಟು ಗಳಿಕೆ ₹500 ಕೋಟಿಗೂ ಹೆಚ್ಚು ಎನ್ನಲಾಗಿದೆ. ಸಲ್ಮಾನ್ ಖಾನ್ ಅವರ ‘ಭಾರತ್’ (42.30 ಕೋಟಿ) ದಾಖಲೆಯನ್ನು ಹಿಂದಿಕ್ಕಿ ಬಾಲಿವುಡ್‌ನ ‘ಹೈಯೆಸ್ಟ್ ಈದ್ ಕಲೆಕ್ಷನ್’ ಸಿನಿಮಾ ಎನಿಸಿಕೊಂಡಿದೆ.

ಸದ್ಯ ಭಾರತದಲ್ಲಿ ಅತಿ ಹೆಚ್ಚು ಓಪನಿಂಗ್ ವೀಕೆಂಡ್ ಕಲೆಕ್ಷನ್ ಮಾಡಿದ ದಾಖಲೆ ‘ಪುಷ್ಪ 2’ (354 ಕೋಟಿ) ಹೆಸರಿನಲ್ಲಿದೆ. ಇದನ್ನು ಮುರಿಯಲು ‘ಧುರಂಧರ್ 2’ ಗೆ ಇನ್ನು ಕೇವಲ 128 ಕೋಟಿ ರೂಪಾಯಿಗಳ ಅಗತ್ಯವಿದೆ. ಭಾನುವಾರದ ಕಲೆಕ್ಷನ್ ಕೂಡ 100 ಕೋಟಿ ದಾಟುವ ನಿರೀಕ್ಷೆಯಿರುವುದರಿಂದ, ರಣವೀರ್ ಸಿಂಗ್ ಸಿನಿಮಾ ಈ ಮೈಲಿಗಲ್ಲನ್ನು ಸುಲಭವಾಗಿ ತಲುಪುವ ಸಾಧ್ಯತೆಯಿದೆ. ತಮಿಳು ಮತ್ತು ತೆಲುಗು ಆವೃತ್ತಿಗಳು ಕೂಡ ಈಗ ತೆರೆಕಂಡಿರುವುದು ಚಿತ್ರದ ಕಲೆಕ್ಷನ್ ಏರಿಕೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಸದ್ಯಕ್ಕೆ ಚಿತ್ರಮಂದಿರಗಳಲ್ಲಿ ‘ಧುರಂಧರ್’ ಅಲೆ ಜೋರಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಏನೆಲ್ಲಾ ದಾಖಲೆ ಬರೆಯಲಿದೆ ಎಂದು ಕಾದು ನೋಡಬೇಕಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/dhurandhar-2-the-revenge-enters-500-crore-club-in-3-days-massive-box-office-run-for-ranveer-singh-447983.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo