
Entertainment
oi-Shankrappa Parangi
Dhurandhar-2 The Revenge: ಪ್ಯಾನ್ ಇಂಡಿಯಾ ನಟ ರಣವೀರ್ ಸಿಂಗ್ ಅವರು ನಟಿಸಿರುವ ‘ಧುರಂಧರ-ದಿ ರಿವೆಂಜ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 2000 ಕೋಟಿ ರೂಪಾಯಿ ಕಲೆಹಾಕಿ ಮುನ್ನುಗ್ಗುತ್ತಿದೆ. ಥಿಯೇಟರ್ನಲ್ಲಿ ನೋಡಿದ ಸಿನಿ ಪ್ರೇಕ್ಷಕರು ಬಹುಪರಾಕ್ ಹೇಳಿದ್ದಾರೆ. ದೊಡ್ಡ ಪರದೆ ಮೇಲೆ ಸಿನಿಮಾ ನೋಡದವರು ಮೊಬೈಲ್ನಲ್ಲಿ ಯಾವ ಒಟಿಟಿಯಲ್ಲಿ ನೋಡಬಹುದೆಂದು ತಡಕಾಡುತ್ತಿದ್ದಾರೆ. ಯಾರೆಲ್ಲ ಒಟಿಟಿ ರಿಲೀಸ್ ದಿನಾಂಕ, ಒಟಿಟಿ ಫ್ಲಾಟ್ಫಾರ್ಮ್ ಅಪ್ಡೇಟ್ಗೆ ಕಾಯುತ್ತಿದ್ದೀರಿ ನಿಮಗಾಗಿ ಇಲ್ಲಿದೆ ಅಪ್ಡೇಟ್ ಮಾಹಿತಿ.
ಈ ಹಿಂದೆ ಪಾರ್ಟ್-1 ‘ಧುರಂಧರ’ ಫಿಲ್ಮ್ ನೆಟ್ಫಿಕ್ಸ್ (Netflix) ವೇದಿಕೆಯಲ್ಲಿ ಪ್ರಸಾರವಾಗಿತ್ತು. ಆದರೆ ಈ ಬಾರಿ ನೆಟ್ಫ್ಲಿಕ್ಸ್ಗೆ ಒಟಿಟಿ ಹಕ್ಕು ಮಾರಾಟವಾಗಿಲ್ಲ ಎಂದು ವರದಿ ಆಗಿದೆ. ಬದಲಾಗಿ ‘ಧುರಂಧರ ದಿ ರಿವೆಂಜ್’ ಜಿಯೋ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಬರೋಬ್ಬರಿ 150 ಕೋಟಿ ರೂಪಾಯಿಗೆ ಡಿಜಿಟಲ್ ಪ್ರಸಾರದ ಹಕ್ಕು ಮಾರಾಟವಾಗಿದೆ.

‘ಧುರಂಧರ’ ಮೊದಲ ಭಾಗದ ಡಿಜಿಟಲ್ ಹಕ್ಕುಗಳು ಸುಮಾರು 85 ಕೋಟಿ ರೂಪಾಯಿಗೆ ಮಾರಾಟವಾಗಿತ್ತು. ಇದೀಗ ಅದರ ಮುಂದುವರಿದ ಭಾಗದ ಡಿಜಿಟಲ್ ಹಕ್ಕುಗಳು ದುಪ್ಪಟ್ಟು ಬೆಲೆಗೆ ಮಾರಾಟವಾಗಿದೆ. ಇನ್ನೂ ಸ್ಯಾಟಲೈಟ್ ಟೆಲಿವಿಷನ್ (ದೂರದರ್ಶನ) ಹಕ್ಕುಗಳನ್ನು ಸ್ಟಾರ್ ಗೋಲ್ಡ್ ಪಡೆದುಕೊಂಡಿದೆ ಎಂದು ವರದಿ ಆಗಿದೆ.
ಒಟಿಟಿ ಬಿಡುಗಡೆ ದಿನಾಂಕ ಯಾವಾಗ?
ಸಿನಿಮಾ ತಯಾರಕರು ಒಟಿಟಿಗೆ ಯಾವ ದಿನ ಬಿಡುಗಡೆ ಮಾಡುತ್ತೇವೆ ಎಂಬುದನ್ನು ಈವರೆಗೆ ಅಧಿಕೃತವಾಗಿ ಎಲ್ಲಿಯೂ ತಿಳಿಸಿಲ್ಲ. ಪ್ರೀಮಿಯರ್ ದಿನಾಂಕ ಶೀಘ್ರವೇ ಘೋಷಣೆ ಆಗಲಿದೆ. ಜನರ IPL 2026 T20 ಪಂದ್ಯಾವಳಿಗಳ ವೀಕ್ಷಣೆಯಲ್ಲಿ ನಿರತರಾಗಿದ್ದಾರೆ. ಮಾರ್ಚ್ ಅಂತ್ಯದಲ್ಲಿ ಆರಂಭವಾದ ಐಪಿಎಲ್ ಮೇ ಕೊನೆಯ ವಾರ ಮುಗಿಯುತ್ತವೆ. ಜೂನ್ 2026ರ ಮೊದಲ ವಾರ ರಣವೀರ್ ಸಿಂಗ್ ಅವರ ಪ್ಯಾನ್ ಇಂಡಿಯಾ ಸಿನಿಮಾ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಮೊದಲ ಬಾರಿಗೆ ಸ್ಟ್ರೀಮಿಂಗ್ ಆಗುವ ನಿರೀಕ್ಷೆಗಳು ಇವೆ.
‘ಧುರಂಧರ್ 2’ ಭರ್ಜರಿ ಬಾಕ್ಸ್ ಆಫೀಸ್ ಕಲೆಕ್ಷನ್
ಕಳೆದ ಮಾರ್ಚ್ 19 ರಂದು ಬಿಡುಗಡೆಯಾದ ‘ಧುರಂಧರ 2’ ಕಳೆದ 21 ದಿನಗಳಲ್ಲಿ ಬರೋಬ್ಬರಿ 1041 ಕೋಟಿ ನಿವ್ವಳ ಮತ್ತು ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ 1653.67 ರೂಪಾಯಿ ಗಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಹಿಂದಿ ಚಿತ್ರರಂಗದಲ್ಲಿ ಇಂತಹ ಯಶಸ್ವಿ ಸಿನಿಮಾ ಬಂದಿರಲಿಲ್ಲ. ರಣವೀರ್ ಸಿಂಗ್ ಅವರು ಸಿನಿಮಾ ಬಾಲಿವುಡ್ಗೆ ದೊಡ್ಡ ಬ್ರೇಕ್ ನೀಡಿದೆ. ಅಷ್ಟರ ಮಟ್ಟಿಗೆ ಜನರಿಗೆ ಹತ್ತಿರವಾದ ಸಿನಿಮಾ ಇದಾಗಿದ್ದು, ಇದರ ಒಟಿಟಿ ಹಕ್ಕು ಇನ್ನಿತರ ಎಲ್ ಮೂಲಗಳಿಂದ ಸಿನಿಮಾ ಬರೋಬ್ಬರಿ 2000 ಕೋಟಿ ರೂ. ಗಳಿಕೆ ದಾಟಿದೆ ಎಂದು ವರದಿ ಆಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/dhurandhar-2-ott-platform-confirmed-ranveer-singh-s-blockbuster-to-stream-on-jiohotstar-read-more-449881.html. xn--babytilbehr-pgb.com does not claim ownership of this content. All rights remain with the original publisher.
