
Entertainment
oi-Manohara M
ಕನ್ನಡ ಬಿಗ್ಬಾಸ್ ಖ್ಯಾತಿಯ ಸತೀಶ್ ಕ್ಯಾಡಬಾಮ್ಸ್ (ಡಾಗ್ ಸತೀಶ್) ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿಡಿಯೋವೊಂದು ಈಗ ಸ್ಯಾಂಡಲ್ವುಡ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವಿವಾದದ ಕುರಿತು ಸತೀಶ್ ಸ್ಪಷ್ಟನೆ ನೀಡಿದ್ದು, ಸಿಎಂ ಬಂದು ಹೇಳಿದ್ರೂ ಆ ವಿಡಿಯೋ ಡಿಲೀಟ್ ಮಾಡಲ್ಲ ಎಂದು ತೊಡೆತಟ್ಟಿದ್ದಾರೆ.
ಏನಿದು ವಿವಾದ?
ಸತೀಶ್ ಕ್ಯಾಡಬಾಮ್ಸ್ ಇತ್ತೀಚೆಗೆ ತಾವು ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋಗೆ ಹಿನ್ನೆಲೆಯಾಗಿ ನಟ ಕಿಚ್ಚ ಸುದೀಪ್ ಅಭಿನಯದ ಸಿನಿಮಾದ ‘ದಾದ ಯಾರ್ ಗೊತ್ತ..’ ಎಂಬ ಮಾಸ್ ಹಾಡನ್ನು ಬಳಸಿದ್ದರು. ಈ ನಡೆ ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ನೆಚ್ಚಿನ ನಟನ ಹಾಡನ್ನು ಇಂತಹ ವಿಡಿಯೋಗೆ ಬಳಸಿರುವುದು ಅವಮಾನಕಾರಿ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಸತೀಶ್ ಅವರ ಈ ನಡವಳಿಕೆಯನ್ನು ಖಂಡಿಸಿರುವ ಬಿಗ್ಬಾಸ್ ರಜತ್, ಕಿಚ್ಚ ಸುದೀಪ್ ಅವರಂತಹ ಸಾಧಕರಿಗೆ ಅವಮಾನ ಮಾಡಲಾಗಿದೆ ಎಂದು ಪೊಲೀಸ್ ಮೆಟ್ಟಿಲೇರಿದ್ದಾರೆ. ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸದ್ಯ ಸತೀಶ್ ನೀಡಿರುವ ಈ ಪ್ರಚೋದನಾಕಾರಿ ಹೇಳಿಕೆಗಳು ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಾದ-ವಿವಾದಗಳು ತಾರಕಕ್ಕೇರಿವೆ.
ಹಾಡು ಸೂಕ್ತ ಎನಿಸಿ ಹಾಕಿದೆ
ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಡಾಗ್ ಸತೀಶ್, ಈ ವಿಡಿಯೋ ಹಿಂದಿನ ಉದ್ದೇಶವನ್ನು ವಿವರಿಸಿದ್ದಾರೆ. “ನಾನು ಮೂತ್ರ ಮಾಡಿದ್ರೂ ಅದು ಸುದ್ದಿಯಾಗುತ್ತದೆ ಎಂದು ಈ ಹಿಂದೆ ಹೇಳಿದ್ದೆ. ಅದನ್ನು ಸಾಬೀತುಪಡಿಸಲಿಕ್ಕಾಗಿಯೇ ಈ ವಿಡಿಯೋ ಮಾಡಿದ್ದು” ಎಂದು ಅವರು ಹೇಳಿದ್ದಾರೆ. ಆ ವಿಡಿಯೋಗೆ ಸುದೀಪ್ ಅವರ ಹಾಡು ಸೂಕ್ತವೆನಿಸಿತು, ಹಾಗಾಗಿ ಅದನ್ನು ಬಳಸಿಕೊಂಡೆ ಎಂದಿದ್ದಾರೆ.
ಸಿಎಂ ಹೇಳಿದ್ರೂ ತೆಗೆಯಲ್ಲ
ವಿಡಿಯೋಗೆ ಬಂದಿರುವ ಕಾಮೆಂಟ್ಗಳನ್ನು ನಾನು ಗಮನಿಸಿಲ್ಲ, ಆದ್ದರಿಂದ ಯಾರು ಏನು ಹೇಳುತ್ತಿದ್ದಾರೆ ಎಂಬುದು ನನಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ. ವಿವಾದ ತಾರಕಕ್ಕೇರಿದ್ದರೂ ಸತೀಶ್ ಮಾತ್ರ ತಮ್ಮ ನಿಲುವಿನಿಂದ ಹಿಂದೆ ಸರಿಯಲು ಸಿದ್ಧರಿಲ್ಲ. ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣದಿಂದ ಆ ವಿಡಿಯೋವನ್ನು ತೆಗೆದುಹಾಕುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ನನಗೆ ಮೀಟರ್ ಇಲ್ಲದಿದ್ದರೆ ವಿಡಿಯೋ ಡಿಲೀಟ್ ಮಾಡುತ್ತಿದ್ದೆ. ಆದರೆ ನನಗೆ ಮೀಟರ್ ಇದೆ, ಆದ್ದರಿಂದ ವಿಡಿಯೋ ಹಾಗೆಯೇ ಇರುತ್ತದೆ. ಖುದ್ದು ಮುಖ್ಯಮಂತ್ರಿಗಳೇ ಬಂದು ಹೇಳಿದರೂ ನಾನು ಆ ವಿಡಿಯೋವನ್ನು ಡಿಲೀಟ್ ಮಾಡುವುದಿಲ್ಲ” ಎಂದಿದ್ದಾರೆ.
ಇನ್ಸ್ಟಾಗ್ರಾಂ ಯಾರ ಅಪ್ಪನ ಆಸ್ತಿಯೂ ಅಲ್ಲ. ಒಂದು ವೇಳೆ ಆ ವಿಡಿಯೋ ಅಪರಾಧವಾಗಿದ್ದರೆ ಇನ್ಸ್ಟಾಗ್ರಾಂನವರೇ ಅದನ್ನು ತೆಗೆಯುತ್ತಿದ್ದರು. ಇದನ್ನು ಪ್ರಶ್ನಿಸಲು ಇವರೆಲ್ಲ ಯಾರು? ನಾನು ತುಂಬಾ ಬಿಂದಾಸ್ ಆಗಿದ್ದೇನೆ. ನನ್ನ ಏಳಿಗೆಯನ್ನು ಸಹಿಸಲು ಸಾಧ್ಯವಾಗದವರು ಇಂತಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಡಾಗ್ ಸತೀಶ್ ದೂರಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/bigg-boss-dog-satish-refuses-to-delete-instagram-video-amid-kiccha-sudeep-song-controversy-445899.html. xn--babytilbehr-pgb.com does not claim ownership of this content. All rights remain with the original publisher.
