
Entertainment
oi-Hitesh Y
Dolly Dhananjay: ಒಬ್ಬರಿಂದ ಚಿತ್ರಕಥೆ ಕೇಳುವುದು ಬಹಳ ಪ್ರಯಾಸದ ಕೆಲಸ.. ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು ಎಂದು ನಟ ಡಾಲಿ ಧನಂಜಯ್ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು. ಒಬ್ಬರಿಂದ ಚಿತ್ರಕಥೆ ಕೇಳುವುದು ಬಹಳ ಪ್ರಯಾಸದ ಕೆಲಸ. ಆದರೆ ನಮ್ಮ ಕೆಲಸವೇ ಕಥೆ ಕೇಳುವುದು. ಆದಷ್ಟು ಕೇಳುವುದನ್ನು ತಡೆದು, ‘ಓದುವೆ, ಬೌಂಡ್ ಸ್ಕ್ರಿಪ್ಟ್ ಕೊಟ್ಟು ಹೋಗಿ’ ಅಂತ ಕೇಳ್ತಿನಿ. ಓದೋ ಪ್ರಯತ್ನ ಮಾಡ್ತಿನಿ. ಓದಿಸಿಕೊಳ್ಳೋದು ಚಿತ್ರಕಥೆಯ ತಾಕತ್ತು.

ಹಾಗೆ ಓದುತ್ತಲೇ ನಕ್ಕು ನಗಿಸಿದ್ದು, ಕಣ್ತುಂಬಿಸಿದ್ದು, “ಬಡವ ರಾಸ್ಕಲ್” , “ಟಗರುಪಲ್ಯ” ಹಾಗೂ ಇನ್ನು ಬಿಡುಗಡೆಯಾಬೇಕಿರುವ ಪೂರ್ಣಚಂದ್ರ ನಟನೆಯ, ಅವಿನಾಶ್ ಬಲೆಕ್ಕಳ ನಿರ್ದೇಶನದ “ಹೆಗ್ಗಣ ಮುದ್ದು”.
ಈ ಮಧ್ಯೆ ಗೆಳೆಯ ಪೂರ್ಣ ಒಂದು ಕಥೆಯ ಮೇಲೆ ಕೆಲಸ ಮಾಡುತ್ತಿರುವುದು ಆಗಾಗ ಕಣ್ಣಿಗೆ ಬೀಳುತ್ತಿತ್ತು. ‘ಈ ಕಥೆ ಕೇಳು’ ಅಂತ ಹೇಳ್ತಾ ಇದ್ರೂ, ನನ್ನ ಕೆಲಸದ ಒತ್ತಡದಲ್ಲಿ ಕೇಳೋಕೆ ಆಗಿರಲಿಲ್ಲ. ‘ಪೂರ್ತಿ ಬರೆದು ಮುಗಿಸಿಕೊಡಿ ಓದ್ತೀನಿ’ ಅಂತ ಹೇಳಿ ನಾನೂ ಮರೆತು ಹೋದೆ. ಸುಮಾರು 6 ತಿಂಗಳ ನಂತರ, ಒಂದು ದಿನ ಬಾಲ್ಕನಿ ಅಲ್ಲಿ ನಿಂತು ಮಾತಾಡ್ತಾ ನೆನಪಾಗಿ ಕೇಳ್ದೆ ‘ಬರಿತಿದ್ರಲ್ಲ ಏನಾಯ್ತು?’. ‘ಬರಿತಿದ್ವಿ, ಆದ್ರೆ .. ಅಲ್ಲೇ ಟೇಬಲ್ ಮೇಲಿದೆ ನೋಡು 6 ತಿಂಗಳಿಂದ… ಇದನ್ನ ಸಿನಿಮಾ ಮಾಡಬಹುದಾ ಇಲ್ವಾ ಗೊತ್ತಾಗಲಿಲ್ಲ, ಅದಿಕ್ಕೆ ನಿಲ್ಸಿದಿವಿ’ ಅಂತ ಹೇಳಿ ಹೋದ.
ಬದುಕು ಎಷ್ಟೇ ಹೆದರಿಸಿದ್ರೂ, ಯಾವಾಗಲೂ ನಗ್ತಾ ನಗಿಸ್ತಾ ತಮಾಷೆಯಾಗೆ ಇರೋ ಇವ್ನು, ಏನ್ ಬರೆದಿರಬಹುದು ಅನ್ನೋ ಕುತೂಹಲದಲ್ಲಿ ಅವತ್ತು ಆ ಚಿತ್ರಕಥೆನ ಓದಿದೆ. ಒಬ್ಬನೇ ನಗ್ತಾ ನಗ್ತಾ, ಎಲ್ಲ ಪಾತ್ರಗಳ ಜೊತೆ ಪ್ರಯಾಣ ಮಾಡ್ತಾ, ಓದು ಮುಗಿದಿದ್ದೇ ಗೊತ್ತಾಗ್ಲಿಲ್ಲ! ಇವತ್ತಿನ ಬೆಂಗಳೂರನ್ನ ಎಷ್ಟು ಅರ್ಥಪೂರ್ಣವಾಗಿ ಕಟ್ಟಿದ್ರು ಅಂದ್ರೆ, ಮಹಾನಗರಗಳ ಪಡಿಪಾಟಿಲುಗಳನ್ನ ನಗಿಸ್ತಾ ಮನ ಮುಟ್ಟೊ ಹಂಗೆ ಬರೆದಿದ್ರು. ಆದ್ರೆ ಚಿತ್ರಕಥೆ end ಆಗಿರಲಿಲ್ಲ. ಕೂಡಲೇ ಪೂರ್ಣಂಗೆ ಕಾಲ್ ಮಾಡಿ, ‘ಇದನ್ನ ಯಾಕೆ complete ಮಾಡಿಲ್ಲ? ಮಾಡಿ, ನಾನೇ ನಿರ್ಮಾಣ ಮಾಡ್ತಿನಿ’ ಅಂದೆ. ‘ನೀನ್ ಆಕ್ಟಿಂಗ್ ನೂ ಮಾಡ್ಬೇಕು’ ಅಂದ. ‘ಮಾಡ್ತಿನಿ’ ಅಂದೆ.
ಶಶಾಂಕ್ ಸೋಗಾಲ್ ಗೆ ಕಾಲ್ ಮಾಡಿ ಓದು ಚೆನ್ನಾಗಿದೆ ಅಂದೆ. Already ನಿರ್ದೇಶಕ ಆಗಿ ಗೆದ್ದಿದ್ರು, ಈ project ಅಲ್ಲಿ ಪೂರ್ಣನ ಜೊತೆ ಇರ್ತಿನಿ ಅಂದ. ಕಥೆ complete ಮಾಡಿದ್ರು. Most lovable ending! ❤️ ನಿರ್ಮಾಣಕ್ಕೆ ಗೆಳೆಯ ಹರ್ಷ ಜೊತೆಯಾದ. ಜೇನುಕಲ್ ಸಿದ್ದಪ್ಪನಿಗೆ ಪೂಜೆ ಸಲ್ಲಿಸಿ ಕೆಲಸ ಶುರು ಮಾಡಿದ್ವಿ. ಹತ್ತು ಹಲವು ಹೊಸ ಅದ್ಭುತ ಪ್ರತಿಭೆಗಳನ್ನ, ಒಂದಷ್ಟು GenZ ಹುಡುಗರನ್ನ ಸೇರಿಸಿಕೊಂಡು, ಪೂರ್ಣಚಂದ್ರ ನಿರ್ದೇಶನದಲ್ಲಿ ಒಂದು ಒಳ್ಳೆ 100% entertainer ಸಿನಿಮಾ ಕಟ್ಟಿದಿವಿ.
ಇನ್ನು ನಿಮ್ಮ ಮುಂದೆ ಬರೋದಷ್ಟೇ ಬಾಕಿ. ಬಹಳ ಉತ್ಸುಕತೆಯಿಂದ post-production ಕೆಲಸ ನಡಿತಾ ಇದೆ. ಹಬ್ಬದ ಸೀಸನ್ ಗೆ ನಿಮ್ಮ ಮುಂದೆ ಸಿನಿಮಾ. ಸದ್ಯದಲ್ಲೇ Title Announcement. ಓಡು ಗೆಲುವೆ ನೀ ಆದಷ್ಟು ದೂರ ಪಡೆದೆ ತೀರುವೆವು ನೀ ಹೋದಷ್ಟು ದೂರ
マザープロミス
ಬರಹ: ನಟ ಡಾಲಿ ಧನಂಜಯ್
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/dolly-dhananjay-reveals-script-that-sat-on-his-table-for-6-months-is-now-a-film-in-the-making-448819.html. xn--babytilbehr-pgb.com does not claim ownership of this content. All rights remain with the original publisher.
