E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್‌ಗಳು | Karnataka Transport Corporation is Planning to Operate 1950 Electric Buses in Rural Areas as well

Karnataka

oi-Shankrappa Parangi

ಬೆಂಗಳೂರು: ಕೇಂದ್ರ ಸರ್ಕಾರ ಪಿಎ-ಇ-ಬಸ್‌ ಯೋಜನೆಯಂತೆ ಕರ್ನಾಟಕ ರಾಜ್ಯಾದ್ಯಂತ ಎಲೆಕ್ಟ್ರಿಕ್ ಬಸ್ ಕಾರ್ಯಕ್ರಮ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಎಲ್ಲವೂ ಅಂದುಕೊಂಡಂತಾರೆ ರಾಜ್ಯದ ಗ್ರಾಮೀಣ ಭಾಗಗಳು, ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಕೆಎಸ್‌ಆರ್‌ಟಿಸಿ ವಿದ್ಯುತ್ ಚಾಲಿತ ಬಸ್‌ಗಳ ಕಾರ್ಯಾಚರಣೆಗೆ ಚಿಂತನೆ ನಡೆಸಲಾಗಿದೆ. ಇತ್ತ ಕೇಂದ್ರದಿಂದ ಪಿಎಂ ಇ-ಬಸ್ ಯೋಜನೆಯಡಿ ನಗರವೊಂದಕ್ಕೆ 100 ಬಸ್ ವಿತರಿಸುವ ಕಾರ್ಯಕ್ರಮವು ಜಾರಿಯಲ್ಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್‌ನಲ್ಲಿ ‘ಕರ್ನಾಟಕ ಎಲೆಕ್ಟ್ರಿಕ್‌ ಬಸ್‌ ಪ್ರೋಗ್ರಾಮ್’ (KEBP) ಘೋಷಿಸಿದ್ದಾರೆ. ಇದರಡಿ ಡಿಪೋಗಳ ಅಭಿವೃದ್ಧಿ ಜೊತೆಗೆ 4000 ಇವಿ ಬಸ್‌ಗಳ ಖರೀದಿಸುವ ಬಗ್ಗೆ ಅವರು ಅಧಿಕೃತ ಮಾಹಿತಿ ನೀಡಿದ್ದರು. ರಾಜ್ಯ ಸಾರಿಗೆ ಸಂಸ್ಥೆ ಪ್ರಕಾರ, ಮೊದಲ ಹಂತದಲ್ಲಿ 1950 ಎಲೆಕ್ಟ್ರಿಕ್ ಬಸ್‌ಗಳನ್ನು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಓಡಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಆಯಾ ಭಾಗದಲ್ಲಿ ಒಂದು ಎಕರೆ ಜಾಗದ ಅಗತ್ಯವಿದೆ. ಅಲ್ಲಿ ಇ-ಬಸ್‌ ನಿಲ್ದಾಣ ಸ್ಥಾಪಿಸಿ, ಅಲ್ಲಿಯೇ ‘ಹಸಿರು ಘಟಕ’ ತಲೆ ಎತ್ತಲಿದೆ. ಇವಿ ವಾಹನಗಳ ಚಾರ್ಜಿಂಗ್ ಮಾಡಿ ಅಲ್ಲಿಂದಲೇ ಬಸ್ ಸಂಚಾರ ನಿರ್ವಹಣೆ ಮಾಡುವ ಚಿಂತನೆಯು ಇದೆ.

Karnataka Transport Corporation

ಇಂಧನ ಮೇಲಿನ ಅವಲಂಬನೆ ಇಳಿಕೆ

ಜಾಗತಿಕ ಮಟ್ಟದಲ್ಲಿ ಯುದ್ಧಗಳು ಮುಂದುವರಿದಿವೆ. ಅದು ತೈಲ ಪೂರೈಕೆ, ಇಂಧನ ಬೆಲೆ ಹೆಚ್ಚಳದ ಮೇಲೆ ಪ್ರಭಾವ ಬೀರಿದೆ. ಭವಿಷ್ಯದಲ್ಲಿ ಇಂಧನ ಕೊರತೆ ಮತ್ತು ಅದರ ಮೇಲಿನ ಅವಲಂಬನೆ ತಪ್ಪಿಸಲು ಹಾಕಿಕೊಂಡು ಮಹತ್ತರ ಯೋಜನೆ ಇದಾಗಿದೆ. ಎಲೆಕ್ಟ್ರಿಕ್ ಬಸ್‌ಗಳ ಮೂಲಕ ಸಾರಿಗೆ ಸೇವೆ ನೀಡುವುದರಿಂದ ಪರಿಸರ ವ್ಯವಸ್ಥೆಗೂ ಕೊಡುಗೆ ನೀಡುವ ಜೊತೆಗೆ ಭವಿಷ್ಯದಲ್ಲಿ ದುಬಾರಿ ಇಂಧನದ ಖರ್ಚು ಉಳಿಯಲಿದೆ ಎಂಬ ಲೆಕ್ಕಾಚಾರ ರಾಜ್ಯ ಸಾರಿಗೆ ಸಂಸ್ಥೆಯದ್ದಾಗಿದೆ.

ಬೆಂಗಳೂರು, ಮಂಗಳೂರು, ಮೈಸೂರು ಸೇರಿ ನಗರ ಹಂತಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಸೇವೆ ಲಭ್ಯವಿದೆ. ಈ ಸೇವೆಯು ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗೂ ಸಿಗುವಂತೆ ಮಾಡಲಾಗುತ್ತದೆ. ಸದ್ಯಕ್ಕೆ ಈ ಯೋಜನೆಯು ಆರಂಭಿಕ ಹಂತದಲ್ಲಿದ್ದು, ಶೀಘ್ರವೇ ಕಾರ್ಯರೂಪಕ್ಕೆ ಬರಬಹುದು ಎನ್ನಲಾಗಿದೆ. ಅಗತ್ಯ ಮೂಲಸೌಕರ್ಯಗಳೊಂದಿಗೆ ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಜಾಗ ಇರುವ ಕಡೆಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸಲಾಗುತ್ತಿದೆ. ಈ 1950 ಬಸ್‌ಗಳ ನಿರ್ವಹಣೆಗಾಗಿ ಗ್ರಾಮೀಣ ಭಾಗದಲ್ಲಿ ಒಂದು ಎಕರೆ ಜಾಗದಲ್ಲಿ 20 ಬಸ್, ಮೂರು ಎಕರೆ ಜಾಗ ಸಿಕ್ಕಲ್ಲಿ 60 ಬಸ್‌ಗಳನ್ನು ನಿರ್ವಹಿಸಲು ಯೋಜಿಸಲಾಗಿದೆ. ಅಲ್ಲಿಯೇ ಇ-ಬಸ್‌ ನಿಲ್ದಾಣ ಜೊತೆಗೆ ಹಸಿರು ಘಟಕ ಸ್ಥಾಪನೆ ಆಗಲಿದೆ.

ಕೇಂದ್ರದಿಂದ ಶೀಘ್ರವೇ ಇ-ಬಸ್‌ಗಳ ವಿತರಣೆ

ಪ್ರಧಾನಮಂತ್ರಿ ಇ-ಬಸ್ ಯೋಜನೆಯಡಿ ಇ-ಬಸ್‌ಗಳನ್ನು ಕರ್ನಾಟಕಕ್ಕೆ ವಿತರಿಸಲಿದೆ. ರಾಜ್ಯದಲ್ಲಿ ಆಯ್ದ ನಗರಗಳಾದ ಬೆಂಗಳೂರು, ಮೈಸೂರು, ಮಂಗಳುರು, ಬೆಳಗಾವಿ ಜಿಲ್ಲೆಗಳಿಗೆ ತಲಾ 100 ರಂತೆ ಹಾಗೂ ದಾವಣಗೆರೆ ನಗರಕ್ಕೆ 50 ಬಸ್‌ಗಳನ್ನು ನೀಡಲಿದೆ. ಶೀಘ್ರವೇ ಅಷ್ಟೂ ಬಸ್‌ಗಳು ರಾಜ್ಯದಲ್ಲಿ ಸೇವೆಗೆ ನಿಯೋಜನೆಗೊಳ್ಳಲಿವೆ. ಇವು ನಗರ ಪ್ರದೇಶಗಳಲ್ಲಿ, ಅಂತರ್‌ನಗರ ವ್ಯಾಪ್ತಿಯಲ್ಲಿ ಓಡಾಡಲಿವೆ ಎಂದು ಹೇಳಲಾಗುತ್ತಿದೆ. ಸದರಿ ‘ಕರ್ನಾಟಕ ಎಲೆಕ್ಟ್ರಿಕ್ ಬಸ್ ಪ್ರೋಗ್ರಾಮ್’ ಮೂಲಕ ಹಳ್ಳಿ ಭಾಗಕ್ಕೂ ಇವಿ ಬಸ್ ಓಡಿಸಲು ತಿರ್ಮಾನಿಸಲಾಗಿದೆ. ಈ ಬಗ್ಗೆ ಮತ್ತಷ್ಟು ಅಪ್ಡೇಟ್ ಸಿಗಬೇಕಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-transport-corporation-is-planning-to-operate-1950-electric-buses-in-rural-areas-as-well-446479.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo