
Entertainment
oi-Manohara M
ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧವು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಈ ಹೊತ್ತಿನಲ್ಲಿ ಇರಾನ್ ಮೂಲದ ಬಾಲಿವುಡ್ ನಟಿ ಎಲ್ನಾಜ್ ನೊರೌಜಿ (Elnaaz Norouzi) ಅವರು ತಮ್ಮ ತಾಯ್ನಾಡಿನ ಸದ್ಯದ ಪರಿಸ್ಥಿತಿ ಮತ್ತು ತಮ್ಮ ಜೀವಕ್ಕೆ ಇರುವ ಭೀತಿಯ ಬಗ್ಗೆ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ. ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯನ್ನು ಬೆಂಬಲಿಸಿದ ಬೆನ್ನಲ್ಲೇ ನಟಿ ಎಲ್ನಾಜ್ ಈ ಹೇಳಿಕೆ ನೀಡಿದ್ದಾರೆ.
‘ಸೇಕ್ರೆಡ್ ಗೇಮ್ಸ್’ ಮೂಲಕ ಭಾರತೀಯ ಪ್ರೇಕ್ಷಕರಿಗೆ ಪರಿಚಿತರಾಗಿರುವ ಇರಾನ್ ಮೂಲದ ನಟಿ ಎಲ್ನಾಜ್ ನೊರೌಜಿ, ತಮ್ಮ ತಾಯ್ನಾಡಿನ ಸದ್ಯದ ಪರಿಸ್ಥಿತಿ ಮತ್ತು ತಮ್ಮ ಜೀವಕ್ಕೆ ಇರುವ ಭೀತಿಯ ಬಗ್ಗೆ ಅಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಇತ್ತೀಚೆಗೆ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯನ್ನು ನಟಿ ಬೆಂಬಲಿಸಿದ್ದರು.

ತಾಯ್ನಾಡಿಗೆ ಮರಳಲು ಜೀವಭಯ
ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಎಲ್ನಾಜ್, “ನಾನು ಇರಾನ್ಗೆ ಕಾಲಿಟ್ಟರೆ ಅವರು ನನ್ನನ್ನು ಕೊಲ್ಲುವುದು ಖಚಿತ. ಅಲ್ಲಿನ ಪ್ರಸ್ತುತ ಸರ್ಕಾರ ಅಧಿಕಾರದಲ್ಲಿರುವವರೆಗೂ ನಾನು ಮನೆಗೆ ಮರಳುವ ಆಯ್ಕೆಯೇ ಇಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ಅಲ್ಲಿನ ಆಡಳಿತವು ಅತ್ಯಂತ ಕ್ರೂರವಾಗಿ ಹತ್ತಿಕ್ಕುತ್ತಿದೆ ಎಂದು ನಟಿ ಆರೋಪಿಸಿದ್ದಾರೆ.
ಖಮೇನಿ ಹತ್ಯೆ ಸಂಭ್ರಮಿಸಿದ ನಟಿ
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಕಾರ್ಯಾಚರಣೆಯಲ್ಲಿ ಇರಾನ್ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯನ್ನು ಎಲ್ನಾಜ್ ಬಹಿರಂಗವಾಗಿ ಬೆಂಬಲಿಸಿದ್ದರು. ಈ ಕುರಿತು ಸ್ಪಷ್ಟನೆ ನೀಡಿದ ಅವರು “ನನ್ನ ವಿರೋಧ ಇರುವುದು ಇರಾನ್ ದೇಶದ ಮೇಲಲ್ಲ, ಅಲ್ಲಿನ ದಬ್ಬಾಳಿಕೆಯ ಆಡಳಿತದ ಮೇಲೆ. ಇರಾನ್ನ ಬಹುಪಾಲು ಜನರು ವಿದ್ಯಾವಂತರು ಮತ್ತು ಶಾಂತಿಪ್ರಿಯರು. ಆದರೆ ಅಲ್ಲಿನ ಇಸ್ಲಾಮಿಕ್ ರಿಪಬ್ಲಿಕ್ ಆಡಳಿತವು ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ” ಎಂದು ಕಿಡಿಕಾರಿದ್ದಾರೆ.
2022ರಲ್ಲಿ ಸರಿಯಾಗಿ ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸ್ ವಶದಲ್ಲಿದ್ದ ಮಾಹ್ಸಾ ಅಮಿನಿ ಎಂಬ ಯುವತಿಯ ಸಾವಿನ ನಂತರ ಇರಾನ್ನಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಅಂದಿನಿಂದಲೂ ಎಲ್ನಾಜ್ ಆಡಳಿತದ ವಿರುದ್ಧ ಸತತವಾಗಿ ಧ್ವನಿ ಎತ್ತುತ್ತಿದ್ದಾರೆ. ಈ ಯುದ್ಧದಲ್ಲಿ ಜನರು ಸತ್ತರೆ ಅದಕ್ಕೆ ಅಯತೊಲ್ಲಾ ಅವರೇ ಕಾರಣ. ಜನ ಸಾಮಾನ್ಯರು ಬೇಡವೆಂದರೂ ಅವರು ಅಧಿಕಾರ ಬಿಟ್ಟು ಹೋಗುತ್ತಿಲ್ಲ ಎಂದು ಎಲ್ನಾಜ್ ನೊರೌಜಿ ದೂರಿದ್ದಾರೆ.

ಇರಾನ್-ಇಸ್ರೇಲ್ ಬಾಂಧವ್ಯ ಚೆನ್ನಾಗಿತ್ತು
ಒಂದು ಕಾಲದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಅತ್ಯಂತ ಉತ್ತಮ ಸಂಬಂಧವಿತ್ತು ಎಂಬುದನ್ನು ಎಲ್ನಾಜ್ ನೆನಪಿಸಿಕೊಂಡಿದ್ದಾರೆ. ಇತಿಹಾಸದ ಪುಟಗಳನ್ನು ತಿರುವಿದರೆ ಪರ್ಷಿಯಾದ ರಾಜ ಸೈರಸ್ ದಿ ಗ್ರೇಟ್, ಯಹೂದಿಗಳನ್ನು ರಕ್ಷಿಸಿದವನು. ಆದರೆ ಈಗಿನ ಆಡಳಿತವು ಇಸ್ರೇಲ್ ಅನ್ನು ಭೂಪಟದಿಂದ ಅಳಿಸಲು ಹೊರಟಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇರಾನ್ಗೂ ನಟಿಗೂ ನಂಟೇನು?
ನಟಿ ಎಲ್ನಾಜ್ ನೊರೌಜಿ ಇರಾನ್ನಲ್ಲಿ ಜನಿಸಿ ಜರ್ಮನಿಯಲ್ಲಿ ಬೆಳೆದವರು. ಕಳೆದ ಒಂದು ದಶಕದಿಂದ ಭಾರತದಲ್ಲಿ ನೆಲೆಸಿದ್ದಾರೆ. ‘ಸೇಕ್ರೆಡ್ ಗೇಮ್ಸ್’, ‘ಮೇಡ್ ಇನ್ ಹೆವನ್’ ನಂತಹ ಜನಪ್ರಿಯ ವೆಬ್ಸಿರೀಸ್ಗಳಲ್ಲಿ ನಟಿಸಿದ್ದಾರೆ. ಎಲ್ನಾಜ್ ನೊರೌಜಿ 2017ರಲ್ಲಿ ತಮ್ಮ ನಟನಾ ಜೀವನವನ್ನು ಒಂದು ಪಾಕಿಸ್ತಾನಿ ಚಿತ್ರದ ಮೂಲಕಆರಂಭಿಸಿದರು. ಆದರೆ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ನೀಡಿದ್ದು ಭಾರತದ ಮೊದಲ ಜನಪ್ರಿಯ ವೆಬ್ ಸರಣಿ ‘ಸೇಕ್ರೆಡ್ ಗೇಮ್ಸ್’ (Sacred Games).
2018 ಮತ್ತು 2019ರಲ್ಲಿ ಮೂಡಿಬಂದ ಈ ಸರಣಿಯ ಎರಡು ಸೀಸನ್ಗಳಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಮನೆಮಾತಾದರು. ಇತ್ತೀಚೆಗೆ ಹಾಲಿವುಡ್ ನಟ ಜೆರಾರ್ಡ್ ಬಟ್ಲರ್ ಜೊತೆ ‘ಕಂದಹಾರ್’ ಚಿತ್ರದಲ್ಲಿ ನಟಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ. ನಟನೆಯ ಜೊತೆಗೆ ನಿರೂಪಣೆಯಲ್ಲೂ ಗುರುತಿಸಿಕೊಂಡಿರುವ ಎಲ್ನಾಜ್, ಪ್ರಸ್ತುತ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರೊಂದಿಗೆ ಜನಪ್ರಿಯ ರಿಯಾಲಿಟಿ ಶೋ ‘ವೀಲ್ ಆಫ್ ಫಾರ್ಚೂನ್’ (Wheel of Fortune) ನಲ್ಲಿ ಸಹ-ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇರಾನ್ನಲ್ಲಿ ಯುದ್ಧದ ಪರಿಸ್ಥಿತಿ ನಡುವೆ ಅವರು ನೀಡಿರುವ ಹೇಳಿಕೆಗಳು ಚರ್ಚೆಗೆ ಕಾರಣವಾಗಿವೆ.
-

Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್
-

ರಶ್ಮಿಕಾ ಮೊದಲ ಸಿನಿಮಾದಲ್ಲಿ ನಾನು ಹೀರೋ, ನೀನು ಬಾಲಿವುಡ್ಗೆ ಪಕ್ಕಾ ಹೋಗ್ತೀಯ ಎಂದಿದ್ದೆ: ನಟ ತ್ರಿವಿಕ್ರಮ್
-

ಮೂತ್ರ ವಿಸರ್ಜನೆ ವಿಡಿಯೋಗೆ ಕಿಚ್ಚ ಸುದೀಪ್ ಹಾಡು: ಬಿಗ್ಬಾಸ್ ಡಾಗ್ ಸತೀಶ್ ವಿರುದ್ಧ ರಜತ್ ದೂರು
-

ದುಬೈಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು: ಪಿ.ವಿ ಸಿಂಧು, ಭೋಜೇಗೌಡ ಸೇರಿದಂತೆ ಹಲವರು ಬೆಂಗಳೂರಿಗೆ ವಾಪಾಸ್
-

ಇರಾನ್ ನಾಯಕ ಅಲಿ ಖಮೇನಿ ಹತ್ಯೆ ಹಿಂದೆ ಅಮೆರಿಕ–ಇಸ್ರೇಲ್ ಮಾಸ್ಟರ್ ಪ್ಲ್ಯಾನ್, ಯುದ್ಧತಂತ್ರದ ರಹಸ್ಯ: ಆಶಿಶ್ ಸಾರಡ್ಕ ಬರಹ
-

Iran Vs America, Israel ಯುದ್ಧ ತೀವ್ರ: ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿದ ಸಂಕಷ್ಟ; ಈ ಕ್ಷಣದ 10 ಪ್ರಮುಖ ಬೆಳವಣಿಗೆಗಳು
-

Israel-Iran War: ಬೆಂಗಳೂರು ಏರ್ಪೋರ್ಟ್ನಲ್ಲಿ 15 ವಿಮಾನಗಳ ಹಾರಾಟ ದಿಢೀರ್ ರದ್ದು, ಪ್ರಯಾಣಿಕರ ಪರದಾಟ
-

ಮಧ್ಯಪ್ರಾಚ್ಯ ಸಂಘರ್ಷ: ಕನ್ನಡಿಗರ ರಕ್ಷಣೆಗೆ ತುರ್ತು ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ
-

ಇಸ್ರೇಲ್ – ಇರಾನ್ ಸಂಘರ್ಷ: ಭಾರತದ ಮೇಲೆ ನೇರ ಮತ್ತು ಪರೋಕ್ಷವಾಗಿ ಬೀರುವ ಪರಿಣಾಮಗಳು
-

Iran Vs Israel War: 7 ದೇಶಗಳಲ್ಲಿ ಇಂದಿನ CBSE ಬೋರ್ಡ್ ಪರೀಕ್ಷೆಗಳು ಮುಂದೂಡಿಕೆ
-

ರಶ್ಮಿಕಾ ಮೊದಲ ಸಿನಿಮಾದಲ್ಲಿ ನಾನು ಹೀರೋ, ನೀನು ಬಾಲಿವುಡ್ಗೆ ಪಕ್ಕಾ ಹೋಗ್ತೀಯ ಎಂದಿದ್ದೆ: ನಟ ತ್ರಿವಿಕ್ರಮ್
-

Thalapathy Vijay: 400 ಕೋಟಿ ಆಸ್ತಿಗೆ ಒಡತಿ, ಲಂಡನ್ ಬೆಡಗಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ದಳಪತಿ ವಿಜಯ್-ಸಂಗೀತಾ ಲವ್ ಸ್ಟೋರಿ
-

Gold Price: ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ, ಯುದ್ಧದ ಎಫೆಕ್ಟ್ನಿಂದ ಬಂಗಾರ-ಬೆಳ್ಳಿ ಮತ್ತಷ್ಟು ದುಬಾರಿ! ಮುನ್ಸೂಚನೆ
-

ವೆಸ್ಟ್ ಇಂಡೀಸ್ ವಿರುದ್ಧ ಭಾರತ ಗೆಲುವು: ಎರಡು ಬೌಂಡರಿಗಳ ಬಗ್ಗೆ ಯಾರೂ ಮಾತನಾಡಲಿಲ್ಲ ಎಂದು ಬೂಮ್ರಾ ಬೇಸರ
-

ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/elnaaz-norouzi-fears-for-her-life-says-she-cannot-return-to-iran-amid-ongoing-conflict-bollywood-445917.html. xn--babytilbehr-pgb.com does not claim ownership of this content. All rights remain with the original publisher.
