Epstein Files: ಎಪ್ಸ್ಟೀನ್ ಫೈಲ್ಸ್‌ನಲ್ಲಿ ಬಿಲ್ ಗೇಟ್ಸ್ ಹೆಸರು: ಆಂಧ್ರ ಪ್ರದೇಶದ ಐಟಿ ಸಚಿವ ನಾರಾ ಲೋಕೇಶ್‌ಗೆ ಕ್ಲಾಸ್ | Epstein Files: Bill Gates’ Name Surfaces, Questions Raised Andhra Pradesh IT Minister Nara Lokesh

India

oi-Hitesh Y

Epstein Files: ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಜೆಫ್ರಿ ಎಪ್‌ಸ್ಟೀನ್ ಫೈಲ್‌ನಲ್ಲಿ ಬಿಲ್ ಗೇಟ್ಸ್ ಹೆಸರು ಕೇಳಿ ಬಂದಿತ್ತು. ಮೈಕ್ರೋಸಾಫ್ಟ್ ಸ್ಥಾಪಕರಾದ ಬಿಲ್ ಗೇಟ್ಸ್ ರಷ್ಯಾದ ಮಹಿಳೆಯೊಬ್ಬರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ, ರೋಗಕ್ಕೆ ತುತ್ತಾಗಿದ್ದರು ಎಂಬ ಆರೋಪ ಜೆಫ್ರಿ ಎಪ್‌ಸ್ಟೀನ್ ಫೈಲ್‌ನಲ್ಲಿ ಉಲ್ಲೇಖವಾಗಿದೆ ಎಂದು ಹೇಳಲಾಗಿತ್ತು. ಆದರೆ ಈ ಆರೋಪವನ್ನು ಬಿಲ್ ಗೇಟ್ಸ್ ತೀವ್ರವಾಗಿ ನಿರಾಕರಿಸಿದ್ದಾರೆ. ಈ ನಡುವೆ ಅವರು ಭಾರತಕ್ಕೆ ಭೇಟಿ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಅಮರಾವತಿಗೆ ಸ್ವಾಗತ ಬಿಲ್ ಗೇಟ್ಸ್‌ ಎಂದು ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಅವರು ಟ್ವೀಟ್ ಮಾಡಿದ್ದಾರೆ. ಈ ವಿಚಾರವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ನಾರಾ ಲೋಕೇಶ್ ಅವರ ಟ್ವೀಟ್ ಹಾಗೂ ಆಂಧ್ರಪ್ರದೇಶಕ್ಕೆ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಅವರ ಭೇಟಿ ವಿಚಾರವು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.

Epstein Files

ಆಂಧ್ರಪ್ರದೇಶದ ಗನ್ನವರಂ ವಿಮಾನ ನಿಲ್ದಾಣದಲ್ಲಿ ಗೇಟ್ಸ್ ಫೌಂಡೇಶನ್‌ನ ಅಧ್ಯಕ್ಷ ಬಿಲ್ ಗೇಟ್ಸ್‌ ಅವರನ್ನು ಆಹ್ವಾನಿಸಿದ್ದು ಸಂತೋಷವಾಯಿತು. ನನ್ನೊಂದಿಗೆ ಸಹೋದ್ಯೋಗಿಗಳಾದ ಗೃಹ ಸಚಿವೆ ಅನಿತಾ, ಕೃಷಿ ಸಚಿವೆ ಅಚ್ಚನ್ನೈದು ಮತ್ತು ಆರೋಗ್ಯ ಸಚಿವೆ ಸತ್ಯ ಕುಮಾರ್ ಅವರು ಇದ್ದರು. ಆರೋಗ್ಯ, ಕೃಷಿ, ಶಿಕ್ಷಣ ಮತ್ತು ತಂತ್ರಜ್ಞಾನ ಆಧಾರಿತ ಆಡಳಿತದಲ್ಲಿ ಪಾಲುದಾರಿಕೆಗಳನ್ನು ಬಲಪಡಿಸುವ ಕುರಿತು ಚರ್ಚೆ ನಡೆದಿದೆ. ಆಂಧ್ರಪ್ರದೇಶ ಸರ್ಕಾರವು, ನಮ್ಮ ಜನರಿಗೆ ಉಪಯುಕ್ತ ಮತ್ತು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲು ಗೇಟ್ಸ್ ಫೌಂಡೇಶನ್‌ನೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ ಎಂದು ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಅವರು ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್‌ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದ್ದು, ರಾಜಕೀಯ ಚರ್ಚೆಗೂ ಇದು ಕಾರಣವಾಗಿದೆ.

ಇದನ್ನು ನಾವು ನಿರೀಕ್ಷಿಸಿರಲಿಲ್ಲ

ಈ ಬೆಳವಣಿಗೆಯನ್ನು ನಾವು ಯುವ ರಾಜಕಾರಣಿಯಿಂದ ನಿರೀಕ್ಷೆ ಮಾಡಿರಲಿಲ್ಲ ಎಂದು ರಾಜ್ಯಸಭೆ ಸದಸ್ಯೆ, ಶಿವಸೇನೆ (ಉದ್ಧವ್‌ ಠಾಕ್ರೆ ಬಣ)ದ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು ಹೇಳಿದ್ದಾರೆ. ಈ ಸಂಬಂಧ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ನನ್ನ ವಿರೋಧದ ನಂತರ AI ಸಮಿಟ್ ವೆಬ್‌ಸೈಟ್‌ನ “Visionaries on the Global Stage” ವಿಭಾಗದಿಂದ ಬಿಲ್ ಗೇಟ್ಸ್ ಪ್ರಚಾರವನ್ನು ತೆಗೆದುಹಾಕಲಾಗಿದೆ. ಆದರೂ ಆಂಧ್ರಪ್ರದೇಶದಿಂದ ಬಂದ ಈ ಚಿತ್ರಗಳನ್ನು ನೋಡಿ ಬೇಸರವಾಗಿದೆ. ನಿಮ್ಮಂತಹ ಯುವ ನಾಯಕ ಲೋಕೇಶ್ ಜಿಯಿಂದ ಇನ್ನಷ್ಟು ಉತ್ತಮ ನಿರೀಕ್ಷೆ ಇತ್ತು. ನಿಮ್ಮಿಂದ ಇದಕ್ಕಿಂತ ಉತ್ತಮವಾದ್ದನ್ನು ನಿರೀಕ್ಷೆ ಮಾಡಿದ್ದೆವು ಎಂದಿದ್ದಾರೆ.

ಮುಂದುವರಿದು ಲೈಂಗಿಕ ದೌರ್ಜನ್ಯ ನಡೆಸುವವರನ್ನು ಮತ್ತು ಅವರ ಅಪರಾಧಗಳನ್ನು ಅವರ ಕೆಲಸದಿಂದ ಬೇರ್ಪಡಿಸುವ ವಿಧಾನವನ್ನು ನಾವು ಕಿರಿಯ ನಾಯಕರಿಂದ ನಿರೀಕ್ಷಿಸುವುದಿಲ್ಲ. ವಿಶ್ವಾದ್ಯಂತ ಮಹಿಳೆಯರು ಇಂತಹ ವಿಕೃತತೆಯಿಂದ ನ್ಯಾಯವನ್ನು ಬಯಸುವ ಇಂತಹ ಸೂಕ್ಷ್ಮ ಸಮಯದಲ್ಲಿ ಗೌರವಾನ್ವಿತ ಮಹಾರಾಷ್ಟ್ರದ ರಾಜ್ಯಪಾಲರು ನನ್ನ ವಿನಂತಿಯನ್ನು ಒಪ್ಪಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಭಾರತವು ಅವರ ತಪ್ಪುಗಳನ್ನು ಮರೆಮಾಚಲು ವೇದಿಕೆಯಾಗಬಾರದು. ನರಾ ಲೋಕೇಶ್ ಜಿ ಅವರು ಮೆಲಿಂಡಾ ಗೇಟ್ಸ್ ವಿಚ್ಛೇದನಕ್ಕೆ ನೀಡಿದ ಕಾರಣಗಳನ್ನು ಹಾಗೂ DoJ ಇಮೇಲ್‌ಗಳಲ್ಲಿ ಹೊರಬಂದ ವಿಷಯಗಳನ್ನು ಗಮನಿಸಬೇಕಿತ್ತು ಎಂದು

ಪ್ರಿಯಾಂಕಾ ಚತುರ್ವೇದಿ ಅವರು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/india/epstein-files-bill-gates-name-surfaces-questions-raised-andhra-pradesh-it-minister-nara-lokesh-444003.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo