
International
-Shankrappa Parangi
Iran vs Israel and US Conflict: ಅಮೆರಿಕ ಮತ್ತು ಇಸ್ರೇಲ್ ಎರಡು ರಾಷ್ಟ್ರಗಳು ಇರಾನ್ ಮೇಲೆ ಶನಿವಾರ (ಫೆ.28) ದಾಳಿ ನಡೆಸಿವೆ. ಇದರ ಪರಿಣಾಮ ಭಾರತ, ಯುಕೆ, ಯುರೋಪ್, ಮಧ್ಯಪ್ರಾಚ್ಯ ಮತ್ತು ಉತ್ತರ ಅಮೆರಿಕದ ಮಧ್ಯ ನಾಗರಿಕನ್ನು ಹೊತ್ತು ಸಂಚಾರ ನಡೆಸಬೇಕಿದ್ದ ವಿಮಾನಗಳ ಕಾರ್ಯಾಚರಣೆ ಅಸ್ತವ್ಯಸ್ಥಗೊಂಡಿದೆ. ಯುದ್ಧದಿಂದಾಗಿ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, ಸಾವಿರಾರು ವಿಮಾನ ಪ್ರಯಾಣಿಕರು ಪದಾಡುವಂತಾಯಿತು.
ಇಸ್ರೇಲ್-ಇರಾನ್ ಯುದ್ಧ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಪ್ರಮುಖ ಯುದ್ಧ ಕಾರ್ಯಾಚರಣೆ” ಕುರಿತು ಪ್ರತಿಕ್ರಿಯಿಸುತ್ತಿದ್ದಂತೆ ಇರಾನ್ ಮತ್ತು ಇರಾಕ್ ತಮ್ಮ ನಾಗರಿಕ ವಾಯು ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದವು. ಬೇರೆ ಬೇರೆ ರಾಷ್ಟ್ರಗಳಿಂದ ಇರಾನ್, ಇರಾಕ್‌ಗೆ ಬರುತ್ತಿದ್ದ ವಿಮಾನಯಾನಗಳನ್ನು ಆಯಾ ವಿಮಾನ ಸಂಸ್ಥೆಗಳು ಮಾರ್ಗ ಬದಲಿಸುವಂತೆ ಒತ್ತಾಯಿಸಿವೆ. ಇಸ್ರೇಲ್‌ನಿಂದ ಇರಾನ್ ಕಡೆಗೆ ಕ್ಷಿಪಣಿಗಳನ್ನು ಹಾರಿಸಲಾಗುತ್ತಿದೆ. ಯುದ್ಧ ಮುಂದುವರಿದಿದ್ದು, ನಾಗರಿಕರ ಸಂರಕ್ಷಣೆ ದೃಷ್ಟಿಯಿಂದ ನಾಗರಿಕ ವಿಮಾನಗಳನ್ನು ಹಾರಾಟ ನಡೆಸಲು ಅನುಮತಿ ನೀಡಲಾಗಲಿಲ್ಲ. ಇದರಿಂದ ಬೇರೆ ಬೇರೆ ರಾಷ್ಟ್ರಗಳಿಗೆ ಹಾಗೂ ದೇಶಿ ವಿಮಾನಗಳ ಹಾರಾಟಕ್ಕೂ ಬ್ರೇಕ್ ಬಿದ್ದಂತಾಗಿದೆ.

ಏರ್ ಇಂಡಿಯಾ ವಿಮಾನಗಳ ಸಂಚಾರಕ್ಕೆ ಬ್ರೇಕ್
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಏರ್ ಇಂಡಿಯಾ ಪ್ರತಿಕ್ರಿಯಿಸಿದೆ. “ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಅಲ್ಲಿನ ಪರಿಸ್ಥಿತಿ ತಿಳಿಯಾಗುವವರೆಗೂ, ವಾತಾವರಣ ಸಹಜ ಸ್ಥಿತಿಯತ್ತ ಬರುವವರೆಗೂ ಮಧ್ಯಪ್ರಾಚ್ಯದ ಎಲ್ಲಾ ಸ್ಥಳಗಳಿಗೆ ಎಲ್ಲಾ ಏರ್ ಇಂಡಿಯಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದೆ.
‘ದಿಢೀರ್ ವಿಮಾನ ಹಾರಾಟ ಸ್ಥಗಿತದಿಂದಾಗಿ ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿ ರಕ್ಷಣೆಗೆ ನಾವು ಸದಾ ಬದ್ಧರಾಗಿದ್ದೇವೆ. ಏರ್ ಇಂಡಿಯಾ ವಿಮಾನ ಕಾರ್ಯಾಚರಣೆಗಳಿಗೆ ಸುರಕ್ಷತೆ ಮತ್ತು ಭದ್ರತಾ ವಾತಾವರಣ ನಿರ್ಮಾಣವಾಗುವವರಿಗೆ ವಿಮಾನ ಹಾರಾಡುವುದಿಲ್ಲ. ಅಗತ್ಯತೆ ನೋಡಿಕೊಂಡು ಸೂಕ್ತ ವ್ಯವಸ್ಥೆ, ನಿರ್ಧಾರ ಪ್ರಕಟಿಸಲಾಗುವುದು. ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲಾ ಸಹಕಾರ, ಬೆಂಬಲ ನೀಡಲಾಗುವುದು’ ಎಂದು ತಿಳಿಸಿದೆ.
ಇಸ್ರೇಲ್‌ಗೆ ಹೊರಟಿದ್ದ ವಿಮಾನ ಮರಳಿ ಮುಂಬೈಗೆ
ಇಸ್ರೇಲ್‌ನಲ್ಲಿ ವಾಯು ಪ್ರದೇಶ ಸ್ಥಗಿತಗೊಳಿಸಿದ ನಂಂತರ ದೆಹಲಿ-ಟೆಲ್ ಅವಿವ್ ಸೇವೆಯಾದ AI139 ಅನ್ನು ಮುಂಬೈಗೆ ಹಿಂತಿರುಗಲು ಸೂಚಿಸಿದ್ದನ್ನು ಏರ್ ಇಂಡಿಯಾ ಖಚಿತಪಡಿಸಿದೆ. “ಫೆಬ್ರವರಿ 28 ರಂದು ದೆಹಲಿಯಿಂದ ಟೆಲ್ ಅವೀವ್‌ಗೆ ಕಾರ್ಯ ನಿರ್ವಹಿಸುತ್ತಿದ್ದ AI139 ವಿಮಾನವು ಇಸ್ರೇಲ್ ಗೆ ತೆರಳುವ ಬದಲು ವಿಮಾನ ಸಂಸ್ಥೆ ಸೂಚನೆ ಮೇರೆಗೆ ಹಾಗೂ ಪ್ರಯಾಣಿಕರು ಮತ್ತು ಸಿಬ್ಬಂದಿ ಹಿತದೃಷ್ಟಿಯಿಂದ ಮುಂಬೈಗೆ ಹಿಂತಿರುಗಿತು. ಪ್ರಯಾಣಿಕರು ಆತಂಕಗೊಳ್ಳುತ್ತಿದ್ದಂತೆ ಈ ಅನಿರೀಕ್ಷಿತ ಪರಿಸ್ಥಿತಿಯಿಂದ ಪ್ರಯಾಣಿಕರಿಗೆ ಉಂಟಾದ ತೊಂದರೆಗೆ ಏರ್‌ಇಂಡಿಯಾ ವಿಷಾಧ ವ್ಯಕ್ತಪಡಿಸಿದೆ. ಮುಚ್ಚಿದ ವಾಯು ಪ್ರದೇಶದ ಹೊರತಾಗಿ ಬೇರೆಡೆ ಸುಗಮ ಸಂಚಾರವನ್ನು ಏರ್‌ಇಂಡಿಯಾ ದೃಢಪಡಿಸಿದೆ. ಪ್ರಯಾಣಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ.
ಅದೇ ರೀತಿ ಚಿಕಾಗೋದಿಂದ ದೆಹಲಿಗೆ ಹೋಗುವ ಮತ್ತೊಂದು ವಿಮಾನಸೇವೆಗೂ (AI126) ಯುದ್ಧದ ಬಿಸಿ ತಟ್ಟಿದೆ. ಹೀಗಾಗಿ ಇರಾಕ್ ವಾಯು ಪ್ರದೇಶ ತಲುಪುವ ವಿಮಾನ ಸಿರಿಯಾ ಮೂಲಕ ಭಾರತಕ್ಕೆ ಹಿಂತಿರುಗಿತು. ದೀರ್ಘ ಮಾರ್ಗದಲ್ಲಿ ಸಂಚಾರ ಮಾಡಿ ಸುರಕ್ಷಿತವಾಗಿ ಭಾರತದಲ್ಲಿ ಇಳಿಯಿತು. ಮಾತ್ರವಲ್ಲದೇ ಇಂದು ರಾತ್ರಿ ನಿಗದಿ ಆಗಿದ್ದ ಯುರೋಪ್‌ಗೆ ಮತ್ತು ಅಲ್ಲಿಂದ ಹೊರಡುವ ರಾತ್ರಿ ವಿಮಾನಗಳು ಇರಾಕ್ ವಾಯು ಮಾರ್ಗವಾಗಿ ಹಾದು ಬರಬೇಕಿತ್ತು. ಆ ಸೇವೆಯನ್ನೂ ಸಹ ನಿಲ್ಲಿಸಿದೆ.
ಏರ್ ಇಂಡಿಯಾ ಟೆಲ್ ಅವೀವ್‌ನಿಂದ ತಮ್ಮ ಸಿಬ್ಬಂದಿಯನ್ನು ಸ್ಥಳಾಂತರಿಸುವ ಕೆಲಸ ಮಾಡುತ್ತಿದೆ. ಚೀನಾದ ಹೋಟನ್ ವೇ ಪಾಯಿಂಟ್ ಅನ್ನು ಪರ್ಯಾಯ ಮಾರ್ಗ ಆಯ್ಕೆಯಾಗಿ ಬಳಸಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದೆ. ಅದಕ್ಕೆ ಒಪ್ಪಿಗೆ ಸಿಕ್ಕಲ್ಲಿ ಎತ್ತರದ ಪರ್ವತ ಪ್ರದೇಶದ ಮೇಲಿನ ಮಾರ್ಗವು ಯುರೋಪ್, ಯುಕೆ ಮತ್ತು ಉತ್ತರ ಅಮೆರಿಕಾಕ್ಕೆ ಹೋಗುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳಿಗೆ ಪಾಕಿಸ್ತಾನದ ವಾಯು ಪ್ರದೇಶವನ್ನು ತಪ್ಪಿಸಲು ಏರ್ ಇಂಡಿಯಾಗೆ ಅವಕಾಶ ನೀಡಬಹುದು ಎಂದು ಹೇಳಲಾಗುತ್ತಿದೆ. ಅಂತಿಮ ನಿರ್ಧಾರಕ್ಕೆ ಏರ್‌ಇಂಡಿಯಾ ಕಾಯುತ್ತಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/iran-israel-war-air-india-cancels-flights-to-israel-and-iran-amid-rising-conflict-flight-details-011-445463.html. xn--babytilbehr-pgb.com does not claim ownership of this content. All rights remain with the original publisher.
