
India
oi-Shankrappa Parangi
Oil Price Hike: ಇರಾನ್ ಮೇಲೆ ಇಸ್ರೇಲ್-ಯುಎಸ್ ದಾಳಿ ವೈಮಾನಿಕ ದಾಳಿ ಮುಂದುವರಿದಿದೆ. ಯುದ್ಧವು ಇವತ್ತು ಮಂಗಳವಾರಕ್ಕೆ (ಮಾರ್ಚ್ 3) ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗಿದೆ. ಇರಾನ್-ಇಸ್ರೇಲ್ ಮಧ್ಯದಲ್ಲಿರುವ ಹಾರ್ಮುಜ್ ಜಲಸಂಧಿ (Strait of Hormuz) ಮೂಲಕ ತೈಲ ಟ್ಯಾಂಕರ್‌ಗಳು ಸಾಗಿ ಬರುತ್ತವೆ. ಈ ಯುದ್ಧದಿಂದಾಗಿ ಈ ಮಾರ್ಗವನ್ನು ಬಂದ್ ಮಾಡಲಾಗಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಯುದ್ಧದ ಕಾರಣದಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಸುಮಾರು ಶೇಕಡಾ 9 ರಿಂದ 10ರಷ್ಟು ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹೊತ್ತಿನಲ್ಲಿ ತೈಲಗಳ ದರ ಏರಿಕೆ ಆಗುತ್ತಿದೆ. ಹಾರ್ಮುಜ್ ಜಲಸಂಧಿ (Strait of Hormuz) ಇರಾನ್ ಮತ್ತು ಓಮನ್ ನಡುವೆ ಇರುವ, ಪರ್ಷಿಯನ್ ಕೊಲ್ಲಿಯನ್ನು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುವ ವಿಶ್ವದ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗ. ಈ ಮಾರ್ಗವಾಗಿ ಜಾಗತಿಕ ಕಚ್ಚಾ ತೈಲದ ಶೇಕಡಾ 20ರಷ್ಟು ಪೂರೈಕೆ ಆಗುತ್ತದೆ. ಈ ಮಾರ್ಗದ ಸಂಚಾರವನ್ನು ಇರಾನ್ ನಿಷೇಧಿಸಿದ ಕಾರಣ ತೈಲ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗಿದೆ.

ಕಚ್ಚಾ ತೈಲ ಬೆಲೆ ಎಷ್ಟಿದೆ?
ಅಂತಾರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ ದರ 80 ಡಾಲರ್ ಸಮೀಪಕ್ಕೆ ಸಾಗಿತು, ಆದರೆ ಯುಎಸ್ ಕಚ್ಚಾ ತೈಲವು ಶೇ. 8.6 ರಷ್ಟು ಹೆಚ್ಚಾಗಿ 67 ರಿಂದ 72.79 ಡಾಲರ್ ತಲುಪಿತು. ಇಂಧನಗಳಾಗಿ ಪರಿವರ್ತನೆ ಆಗುವ ಮೊದಲೇ ಕಚ್ಚಾ ತೈಲಕ್ಕೆ ಇಷ್ಟೊಂದು ಹಣ ನೀಡಬೇಕಾದರೆ ಅದು ಪೆಟ್ರೋಲ್ ಮತ್ತು ಡೀಸೆಲ್ ಆದ ಬಳಿಕ ಪೂರೈಕೆ ಹೊತ್ತಿಗೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಶೇ. 88ರಷ್ಟು ಕಚ್ಚಾ ತೈಲ ಪೂರೈಕೆ ಮಾಡುತ್ತಿದ್ದು, ಬೆಲೆ ಹೆಚ್ಚಾದರೆ ಭಾರತವು ಅಮದ ಹೊರೆ ಹೊರಬೇಕಾಗುತ್ತದೆ.
ಭಾರತದಲ್ಲಿ ಇಂಧನ ಚಿಲ್ಲರೆ ದರ ಏರಿಕೆ ಆಗುತ್ತಾ?
ಸದ್ಯದ ಮಾಹಿತಿ ಪ್ರಕಾರ, ಜಾಗತಿಕ ತೈಲ ಬೆಲೆಗಳಲ್ಲಿ ತೀವ್ರ ಏರಿಕೆ ಆಗುತ್ತಿವೆ. ಭಾರತದಲ್ಲಿ ಚಿಲ್ಲರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈ ತಕ್ಷಣದ ಹೆಚ್ಚಾಗುವ ಸ್ಥಿತಿ ಇಲ್ಲ. ಯುದ್ಧ ಮುಂದುವರಿದರೆ ಭವಿಷ್ಯದಲ್ಲಿ ದರ ಪರಿಷ್ಕರಣೆ ಆಗಲಿವೆ. ತೈಲ ಮಾರುಕಟ್ಟೆ ಕಂಪನಿಗಳಿಂದ ಅಂತಾರಾಷ್ಟ್ರೀಯ ಬೆಲೆಗಳು ಕಡಿಮೆಯಾದಾಗ ಲಾಭವನ್ನು ಸುಧಾರಿಸಲು ಮತ್ತು ಜಾಗತಿಕ ದರಗಳು ಹೆಚ್ಚಾದಾಗ ಗ್ರಾಹಕರನ್ನು ರಕ್ಷಿಸಲು ಸರ್ಕಾರವು ಮಹತ್ವದ ಕ್ರಮ ಕೈಗೊಳ್ಳಲಿದೆ ಎಂದು ಪಿಟಿಐ ವರದಿ ಮಾಡಿದೆ.
2022ರ ಮಧ್ಯ ಭಾಗದಿಂದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ಚಿಲ್ಲರೆ ವ್ಯಾಪಾರಿಗಳು ಕಚ್ಚಾ ತೈಲ ಬೆಲೆಗಳು ಏರಿಕೆ ಆಗಿ ನಷ್ಟ ಎದುರಿಸುವಂತಾಗಿದೆ. ಲಾಭದ ಪ್ರಮಾಣ ಗಣನೀಯವಾಗಿ ಇಳಿಕೆ ಆಗಿದೆ. ಜಾಗತಿಕವಾಗಿ ಕಚ್ಚಾ ತೈಲ ವೆಚ್ಚ ಏರಿಕೆ ಆಗಿದ್ದರೂ ಸಹಿತ ದೇಶೀಯ ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿಲ್ಲ. ಹೀಗಾಗಿ ಈ ಕಂಪನಿಗಳಿಗೆ ಆದಾಯ ಕುಸಿತವಾಗಿದೆ.
ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ ಸೇರಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿವೆ. ಇನ್ನೂ ದಿನಾಂಕ ಘೋಷಣೆ ಆಗಿಲ್ಲ. ಪ್ರಚಾರ ವೇಳೆ ಕಚ್ಚಾ ತೈಲ ಬೆಲೆ ಏರಿಕೆ ವಿಚಾರ ರಾಜಕೀಯಕ್ಕೆ ಬಳಕೆ ಆಗಬಹುದು.
-

ದುಬೈಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು: ಪಿ.ವಿ ಸಿಂಧು, ಭೋಜೇಗೌಡ ಸೇರಿದಂತೆ ಹಲವರು ಬೆಂಗಳೂರಿಗೆ ವಾಪಾಸ್
-

ಹರ್ಮೂಜ್ ಜಲಸಂಧಿ ಬಂದ್: ಭಾರತಕ್ಕೆ ತಟ್ಟಲಿದೆ ತೈಲ ದರದ ಬಿಸಿ, ಆರ್ಥಿಕತೆಗೂ ಭಾರಿ ಹೊಡೆತ
-

Gold Price: ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ, ಯುದ್ಧದ ಎಫೆಕ್ಟ್ನಿಂದ ಬಂಗಾರ-ಬೆಳ್ಳಿ ಮತ್ತಷ್ಟು ದುಬಾರಿ! ಮುನ್ಸೂಚನೆ
-

ಗೌರಿಬಿದನೂರಿನ ಅಲೀಪುರಕ್ಕೂ ಇರಾನ್ ನಾಯಕ ಖಮೇನಿಗೂ ಇದೆ ನಂಟು, ಹತ್ಯೆ ಖಂಡಿಸಿ ಅಘೋಷಿತ ಬಂದ್
-

ಮಧ್ಯಪ್ರಾಚ್ಯ ಸಂಘರ್ಷ: ಕನ್ನಡಿಗರ ರಕ್ಷಣೆಗೆ ತುರ್ತು ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ
-

ಕರ್ನಾಟಕದ ಅಲಿಪುರದಲ್ಲಿ ಇರಾನ್ ನಾಯಕ ಖಮೇನಿ ಅಂದು ಆಡಿದ್ದ ಮಾತುಗಳೇನು ?
-

Iran Vs America, Israel ಯುದ್ಧ ತೀವ್ರ: ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿದ ಸಂಕಷ್ಟ; ಈ ಕ್ಷಣದ 10 ಪ್ರಮುಖ ಬೆಳವಣಿಗೆಗಳು
-

ದುಬೈ ಏರ್ಪೋರ್ಟ್ನಲ್ಲಿ ಕನ್ನಡಿಗರು: ಡ್ರೋನ್ ಪ್ರತಾಪ್, ಪಿ.ವಿ ಸಿಂಧು, ವಿಷ್ಣು ಮಂಚು, ಸೋನಾಲ್ ಚೌಹಾಣ್ಗೆ ಸಂಕಷ್ಟ
-

ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ
-

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ರಕ್ಷಣೆ ಬಗ್ಗೆ Oneindia Kannada ಬರಹ ಹಂಚಿಕೊಂಡು ಅಪ್ಡೇಟ್ ಕೊಟ್ಟ ಸಿ.ಎಂ
-

Donald Trump: ಅಮೆರಿಕ, ಇಸ್ರೇಲ್ Vs ಇರಾನ್ ಯುದ್ಧದ ಬಗ್ಗೆ ಬಿಗ್ ಅಪ್ಡೇಟ್ಸ್ ಕೊಟ್ಟ ಡೊನಾಲ್ಡ್ ಟ್ರಂಪ್, ಏನದು
-

ಇರಾನ್ ಸುಪ್ರೀಂ ಲೀಡರ್ ಅಯಾತೊಲ್ಲ ಖಮೇನಿ ಕೊಲೆಯಾಗಿದೆ; ಅಮೆರಿಕಾ – ಇಸ್ರೇಲ್ ಗುರಿ ಸಾಧಿಸಿದೆ: ಗೋಪಾಲಕೃಷ್ಣ ಕುಂಟಿನಿ ಬರಹ
-

ಕುವೈತ್ ಮೇಲೆ ಭೀಕರ ದಾಳಿ ನಡೆಸಿದ ಇರಾನ್ ಮಿಲಿಟರಿ, ಅಮೆರಿಕ ಸೇನಾ ನೆಲೆಗೆ ಹಾನಿ ಆರೋಪ | Israel Military
-

ಪಾಕಿಸ್ತಾನದ ಅಮೆರಿಕ ರಾಯಭಾರ ಕಚೇರಿ ಮೇಲೆ ದಿಢೀರ್ ದಾಳಿ, ಹಿಂಸಾಚಾರದಲ್ಲಿ 8 ಸಾವು | Israel Military
-

ಖಮೇನಿ ಜಾಗಕ್ಕೆ ಹೊಸ ನಾಯಕನ ಆಯ್ಕೆ ಮಾಡಲು ಮಂಡಳಿ ರಚಿಸಿದ ಇರಾನ್ | Israel Military
Disclaimer: This content was automatically imported from a third-party source via RSS feed. The original source is: https://kannada.oneindia.com/news/india/fuel-price-stable-despite-international-crude-oil-spike-and-impact-by-iran-israel-us-war-445753.html. xn--babytilbehr-pgb.com does not claim ownership of this content. All rights remain with the original publisher.
