Gautam Gambhir: ನನಗೆ ಪ್ರಾಮಾಣಿಕತೆಯೇ ಮುಖ್ಯ ಎಂದ ಗಂಭೀರ್; ಕೊಹ್ಲಿ-ರೋಹಿತ್ ನಿವೃತ್ತಿ ಹಿಂದಿದೆಯೇ ಕೋಚ್ ಕೈವಾಡ? | Gautam Gambhir Admits Mistakes, Responds to Rift Rumours with Virat Kohli and Rohit Sharma: Viral

Sports

oi-Madhusudhan KR

Gautam Gambhir: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ತಮ್ಮ ಸಂಬಂಧವನ್ನು ತಾವು ಬಯಸಿದ ರೀತಿಯಲ್ಲಿ ನಿರ್ವಹಿಸಿಲ್ಲವೇನೋ ಎಂಬ ಸುಳಿವು ನೀಡಿದ್ದಾರೆ. ಈ ಹೇಳಿಕೆ ಇದೀಗ ಕ್ರಿಕೆಟ್‌ ವಯಲದಲ್ಲಿ ಹಾಗೂ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಗಂಭೀರ್ ಅವರ ತರಬೇತಿಯ ಮೊದಲ ವರ್ಷದಲ್ಲೇ, ಇಂಗ್ಲೆಂಡ್ ಸರಣಿಗಿಂತ ಮುನ್ನವೇ ಈ ಇಬ್ಬರು ದಿಗ್ಗಜ ಆಟಗಾರರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಬಾರ್ಡರ್-ಗವಾಸ್ಕರ್ ಟ್ರೋಫಿಯ ಹೀನಾಯ ಸೋಲಿನ ನಂತರ ಗೌತಮ್‌ ಗಂಭೀರ್ ಮತ್ತು ಹಿರಿಯ ಆಟಗಾರರ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವರದಿಗಳು ಹರಿದಾಡಿದ್ದವು.

Gautam Gambhir Admits Mistakes Responds to Rift Rumours with Virat Kohli and Rohit Sharma Viral

‘ನನಗೂ ತಪ್ಪು ಮಾಡಲು ಅವಕಾಶ ಕೊಡಬೇಕು’

ಮಾಧ್ಯಮಗಳಲ್ಲಿ ಹರಿದಾಡಿದ ಈ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದ ಗೌತಮ್‌ ಗಂಭೀರ್, “ನಾನು ಕೂಡ ಮನುಷ್ಯನೇ, ತಮಗೂ ತಪ್ಪುಗಳನ್ನು ಮಾಡಲು ಅವಕಾಶ ಕೊಡಬೇಕು,” ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಈ ಮೂಲಕ ತಮ್ಮ ಮತ್ತು ಹಿರಿಯ ಆಟಗಾರರ ನಡುವಿನ ಸಂಬಂಧದ ಬಗ್ಗೆ ಉಂಟಾದ ಚರ್ಚೆಗಳಿಗೆ ಗಂಭೀರ್ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿ ಗಮನ ಸೆಳದಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, “ನಾನು ಕೂಡ ಒಬ್ಬ ಮನುಷ್ಯ ಮತ್ತು ಬೇರೆಯವರಂತೆ ನನಗೂ ತಪ್ಪುಗಳನ್ನು ಮಾಡಲು ಅವಕಾಶವಿರಬೇಕು. ಆಟಗಾರರಿಗೂ ತಪ್ಪು ಮಾಡಲು ಅವಕಾಶ ನೀಡಬೇಕು. ನಾನು ತಪ್ಪು ಮಾಡಲು ಅರ್ಹನಾಗಿದ್ದೇನೆ ಮತ್ತು ಕಳೆದ 18 ತಿಂಗಳಲ್ಲಿ ನಾನು ಖಂಡಿತವಾಗಿಯೂ ತಪ್ಪುಗಳನ್ನು ಮಾಡಿರಬಹುದು. ಅದನ್ನು ಎಂದಿಗೂ ನಿರಾಕರಿಸಿಲ್ಲ, ಆದರೆ, ಯಾವಾಗಲೂ ಒಂದು ವಿಷಯವನ್ನು ನಂಬುತ್ತೇನೆ. ಸರಿಯಾದ ಉದ್ದೇಶದಿಂದ ತೆಗೆದುಕೊಂಡ ತಪ್ಪು ನಿರ್ಧಾರವು ಸ್ವೀಕಾರಾರ್ಹ, ಆದರೆ ತಪ್ಪು ಉದ್ದೇಶದಿಂದ ತೆಗೆದುಕೊಂಡ ತಪ್ಪು ನಿರ್ಧಾರವು ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ. ಪ್ರತಿಯೊಬ್ಬರಿಗೂ ತಪ್ಪುಗಳನ್ನು ಮಾಡಲು ಅವಕಾಶ ನೀಡಬೇಕು,” ಎಂದು ಹೇಳಿದ್ದಾರೆ.

ನಿರೂಪಕರ ಪ್ರಶ್ನೆ ಏನು?

“ನೀವು ಕೆಲವರು ನಿಮ್ಮ ಆಟಗಾರರನ್ನು ನಿಮ್ಮ ವಿರುದ್ಧವೇ ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂದು ನೀವು ಟ್ವೀಟ್ ಮಾಡಿದ್ದೀರಿ. ಅದು ಸ್ಪಷ್ಟವಾಗಿ ವಿರಾಟ್ ಮತ್ತು ರೋಹಿತ್ ಅವರನ್ನೇ ಉದ್ದೇಶಿಸಿ ಹೇಳಿದ್ದಾಗಿದೆ. ಟ್ರೋಲ್‌ಗಳು, ಹೊರಗಿನ ಗದ್ದಲಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ನೀವೆಲ್ಲರೂ ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುತ್ತಿದ್ದೀರಿ. ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲುತ್ತಿದ್ದೀರಿ. ಇಂತಹ ಪರಿಸ್ಥಿತಿಯನ್ನು ನೀವು ಹೇಗೆ ನಿಭಾಯಿಸುತ್ತೀರಿ? ಮುಖ್ಯ ಕೋಚ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಹಿರಿಯ ಆಟಗಾರರ ವಿರುದ್ಧವಾಗಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಸಹಜವಾಗಿಯೇ ಇಲ್ಲಿ ಒತ್ತಡ ಇರುತ್ತದೆ. ಇಂತಹ ಕಾಮೆಂಟ್‌ಗಳನ್ನು ನೀವು ಹೇಗೆ ಎದುರಿಸುತ್ತೀರಿ?,” ಎಂದು ನಿರೂಪಕರು ಸಾಲು ಪ್ರಶ್ನೆಗಳು ಕೇಳಿದರು.

ಪ್ರಾಮಾಣಿಕತೆಯೇ ಎಲ್ಲಕ್ಕಿಂತ ಮುಖ್ಯ: ಗಂಭೀರ್

ಇದಕ್ಕೆ ಉತ್ತರಿಸಿದ ಗೌತಮ್ ಗಂಭೀರ್ ಅವರು “ತಮಗೆ ಪ್ರಾಮಾಣಿಕತೆಯೇ ಎಲ್ಲಕ್ಕಿಂತ ಮುಖ್ಯ. ಎಲ್ಲಿಯವರೆಗೆ ತಾವು ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಪ್ರತಿಯೊಬ್ಬರ ಜೊತೆ ಪ್ರಾಮಾಣಿಕವಾಗಿರುತ್ತಾರೋ, ಅಲ್ಲಿಯವರೆಗೆ ತಮ್ಮ ಸ್ಥಾನಕ್ಕೆ ತಾವು ಸರಿಯಾದ ನ್ಯಾಯ ಒದಗಿಸಿದ್ದೇವೆ ಎಂದು ನಂಬುಬಿದ್ದೇನೆ,” ಎಂದು ಹೇಳಿದರು.

“ಕ್ರಿಕೆಟಿಗರು ಯಾಕೆ ತಪ್ಪು ಮಾಡಬಾರದು? ಅವರು ಕೂಡ ಮನುಷ್ಯರೇ ಎಂದು ನಾನು ಭಾವಿಸುತ್ತೇನೆ. ನನ್ನ ಮಟ್ಟಿಗೆ ಇದು ಸರಳ. ಎಲ್ಲಿಯವರೆಗೆ ನಾನು ಪ್ರತಿಯೊಂದನ್ನೂ ಪ್ರಾಮಾಣಿಕತೆಯಿಂದ ಮಾಡುತ್ತೇನೋ ಮತ್ತು ಆ ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಪ್ರತಿಯೊಬ್ಬರ ಜೊತೆಗೂ ಪ್ರಾಮಾಣಿಕವಾಗಿರುತ್ತೇನೋ, ಅಲ್ಲಿಯವರೆಗೆ ನಾನು ನನ್ನ ಸ್ಥಾನಕ್ಕೆ ನ್ಯಾಯ ಒದಗಿಸುತ್ತಿದ್ದೇನೆ ಎಂದು ಭಾವಿಸುತ್ತೇನೆ,” ಎಂದು ಹೇಳಿದರು.

ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಮರಳಿ ಸೇರಿಸಿಕೊಳ್ಳುವ ನಿರ್ಧಾರ ಮತ್ತು ಅದು ಭಾರತದ ಟಿ20 ವಿಶ್ವಕಪ್ ಅಭಿಯಾನಕ್ಕೆ ಹೇಗೆ ನೆರವಾಯಿತು ಎಂಬ ಬಗ್ಗೆ ಗಂಭೀರ್ ಈ ಹಿಂದೆ ಮನಬಿಚ್ಚಿ ಮಾತನಾಡಿದ್ದರು. “ಟಾಪ್ ಆರ್ಡರ್‌ನಲ್ಲಿದ್ದ ಮೂವರು ಎಡಗೈ ಬ್ಯಾಟರ್‌ಗಳನ್ನು ಬೇರ್ಪಡಿಸಲು ನಾವು ಯತ್ನಿಸಿದ್ದೇವೆ ನಾವು ಈ ನಿರ್ಧಾರ ಮಾಡಿದೆವು ಎಂದು ಹಲವರು ಮಾತನಾಡಿಕೊಳ್ಳುತ್ತಾರೆ ಎಂಬುದು ನನಗೆ ಗೊತ್ತು. ಆದರೆ ಖಂಡಿತವಾಗಿಯೂ ಅದು ಕಾರಣವಲ್ಲ. ಮೈದಾನಕ್ಕಿಳಿದು ಆಕ್ರಮಣಕಾರಿ ಆಟ ಆಡಲು ಬಯಸಿದ್ದೆವು ಅಷ್ಟೇ. ಯಾಕೆಂದರೆ, ಕಳೆದ ಒಂದೂವರೆ ವರ್ಷದಿಂದ ನಮ್ಮ ಸಿದ್ಧಾಂತವೇ ಅದಾಗಿದೆ,” ಎಂದು ಗೌತಮ್ ಗಂಭೀರ್ ತಿಳಿಸಿದರು. ಇನ್ನೂ ಈ ಹೇಳಿಕೆಯಿಂದ ಇವರೇ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ಅವರು ನಿವೃತ್ತಿ ಹೇಳಲು ಕಾರಣನಾ ಎನ್ನುವ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಎದ್ದಿವೆ.

ಮೇ 2025ರಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಗೌತಮ್ ಗಂಭೀರ್ ಅವರೇ ಈ ಜೋಡಿಯನ್ನು ಟೆಸ್ಟ್ ಮಾದರಿಯಿಂದ ಬಲವಂತವಾಗಿ ನಿವೃತ್ತಿ ಹೊಂದುವಂತೆ ಮಾಡಿದರು ಎಂಬ ಸುದ್ದಿಗಳು ಹರಿದಾಡಿದ್ದರು.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/gautam-gambhir-admits-mistakes-responds-to-rift-rumours-with-virat-kohli-and-rohit-sharma-viral-447441.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo