Global tariffs: ಟ್ರಂಪ್ ಜಾರಿಗೆ ತಂದಿದ್ದ ಜಾಗತಿಕ ಸುಂಕಗಳು ರದ್ದು: ಅಮೆರಿಕ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು | Supreme Court of the United States Strikes Down Donald Trump Global Tariffs in 6–3 Verdict

International

oi-Manohara M

ಅಮೆರಿಕದ ಆರ್ಥಿಕ ಮತ್ತು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾದ ಪ್ರಕರಣದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಭಾರೀ ಹಿನ್ನಡೆಯಾಗಿದೆ. 6-3 ಮತಗಳ ಬಹುಮತದಿಂದ ಟ್ರಂಪ್‌ ಜಾರಿಗೆ ತಂದಿದ್ದ ಜಾಗತಿಕ ಸುಂಕಗಳನ್ನು ಅಲ್ಲಿನ ಸುಪ್ರೀಂಕೋರ್ಟ್‌ ಅಸಂವಿಧಾನಿಕವೆಂದು ಘೋಷಿಸಿ ರದ್ದುಗೊಳಿಸಿದೆ. ಟ್ರಂಪ್ ಆಡಳಿತವು ತುರ್ತು ಅಧಿಕಾರ ಕಾಯ್ದೆಯಡಿ, “ಅಮೆರಿಕದ ವ್ಯಾಪಾರ ಹಿತಾಸಕ್ತಿಗಳನ್ನು ರಕ್ಷಿಸುವುದು” ಎಂಬ ಕಾರಣ ನೀಡಿ, ಬಹುತೇಕ ಎಲ್ಲ ದೇಶಗಳ ಮೇಲೂ ಆಮದು ಸುಂಕಗಳನ್ನು ವಿಧಿಸಿತ್ತು. ಈ ಕ್ರಮವು ಜಾಗತಿಕ ವ್ಯಾಪಾರ ಸಂಬಂಧಗಳಲ್ಲಿ ತೀವ್ರ ಒತ್ತಡಕ್ಕೆ ಕಾರಣವಾಗಿತ್ತು. ಹಲವು ಕಂಪನಿಗಳು ಹಾಗೂ ವ್ಯಾಪಾರ ಸಂಘಟನೆಗಳು ಈ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದವು.

ತೆರಿಗೆ ವಿಧಿಸುವ ಅಧಿಕಾರ ಇಲ್ಲ

ಮುಖ್ಯ ನ್ಯಾಯಮೂರ್ತಿ ಜಾನ್‌ ರಾಬರ್ಟ್ಸ್‌ ತಮ್ಮ ತೀರ್ಪಿನಲ್ಲಿ, “ಸಂವಿಧಾನವು ತೆರಿಗೆ ವಿಧಿಸುವ ಅಧಿಕಾರವನ್ನು ಸ್ಪಷ್ಟವಾಗಿ ಕಾಂಗ್ರೆಸ್‌ಗೆ ನೀಡುತ್ತದೆ. ಕಾರ್ಯಪಾಲಕ ವಿಭಾಗಕ್ಕೆ ತೆರಿಗೆ ವಿಧಿಸುವ ಅಧಿಕಾರ ನೀಡಲಾಗಿಲ್ಲ” ಎಂದು ತಿಳಿಸಿದ್ದಾರೆ. ಈ ಅಭಿಪ್ರಾಯಕ್ಕೆ ಟ್ರಂಪ್ ನೇಮಕ ಮಾಡಿದವರೂ ಸೇರಿ ಮೂವರು ಲಿಬರಲ್ ನ್ಯಾಯಮೂರ್ತಿಗಳೂ ಬೆಂಬಲ ನೀಡಿದ್ದಾರೆ.

Supreme Court

ಫೆಡರಲ್ ಮಾಹಿತಿಯ ಪ್ರಕಾರ, ಡಿಸೆಂಬರ್ ವೇಳೆಗೆ ಅಮೆರಿಕದ ಖಜಾನೆ ಇಲಾಖೆ ತುರ್ತು ಅಧಿಕಾರ ಕಾಯ್ದೆಯಡಿ ವಿಧಿಸಿದ ಸುಂಕಗಳಿಂದ 133 ಬಿಲಿಯನ್‌ ಡಾಲರ್‌ಗಿಂತ ಹೆಚ್ಚು ಮೊತ್ತವನ್ನು ಸಂಗ್ರಹಿಸಿದೆ. ಮುಂದಿನ ದಶಕದಲ್ಲಿ ಇದರ ಆರ್ಥಿಕ ಪರಿಣಾಮವು ಸುಮಾರು 3 ಟ್ರಿಲಿಯನ್‌ ಡಾಲರ್‌ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಈ ತೀರ್ಪಿನ ನಂತರ ಪ್ರಮುಖವಾಗಿ ಕಂಪನಿಗಳಿಗೆ ಹಣ ಮರುಪಾವತಿ ಮಾಡುವ ವಿಚಾರ ಎದುರಾಗಿದೆ. ಅಮೆರಿಕದ ದೊಡ್ಡ ಕಂಪನಿಗಳು, ವಿಶೇಷವಾಗಿ ಕೋಸ್ಟೋ ಮುಂತಾದ ಸಂಸ್ಥೆಗಳು, ಈಗಾಗಲೇ ನ್ಯಾಯಾಲಯದಲ್ಲಿ ಮರುಪಾವತಿ ಕೋರಿ ಅರ್ಜಿ ಸಲ್ಲಿಸಿವೆ. ಈ ತೀರ್ಪು ಟ್ರಂಪ್ ಅವರ ಆರ್ಥಿಕ ನೀತಿಗೆ ದೊಡ್ಡ ಹಿನ್ನಡೆಯೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತಮ್ಮ ಎರಡನೇ ಅವಧಿ ಆರಂಭಿಸಿದ ಬಳಿಕ ಜಾರಿಗೆ ತಂದ ಭಾರಿ ಸುಂಕಗಳು ಜಾಗತಿಕ ವ್ಯಾಪಾರ ಯುದ್ಧಕ್ಕೆ ದಾರಿ ಮಾಡಿಕೊಟ್ಟಿದ್ದವು. ಈ ಕ್ರಮಗಳಿಂದ ಅಮೆರಿಕದ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿದ್ದರೆ, ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲೂ ಅಸ್ಥಿರತೆ ಕಾಣಿಸಿಕೊಂಡಿತ್ತು. ಜಾಗತಿಕ ಆರ್ಥಿಕತೆಯಲ್ಲಿ ಅನಿಶ್ಚಿತತೆ ಹೆಚ್ಚಿದೆಯೆಂಬ ಆತಂಕವೂ ವ್ಯಕ್ತವಾಗಿತ್ತು.

ಅಮೆರಿಕ ಆರ್ಥಿಕತೆಗೆ ಹೊಡೆತ

ಟ್ರಂಪ್ ಸರ್ಕಾರದ ಪ್ರಕಾರ, ಈ ಸುಂಕಗಳಿಂದ ಮುಂದಿನ ಹತ್ತು ವರ್ಷಗಳಲ್ಲಿ ಅಮೆರಿಕಕ್ಕೆ ಲಕ್ಷಾಂತರ ಕೋಟಿ ಡಾಲರ್‌ಗಳ ಆದಾಯ ಲಭಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ಅಮೆರಿಕಕ್ಕೆ ಇದು ದೊಡ್ಡ ಆದಾಯ ಮೂಲವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಸುಂಕ ಸಂಗ್ರಹದ ನಿಖರ ಅಂಕಿಅಂಶಗಳನ್ನು ಟ್ರಂಪ್ ಆಡಳಿತ ಬಹಿರಂಗಪಡಿಸಿಲ್ಲ. ಇದೀಗ ಯುನೈಟೆಡ್ ಸ್ಟೇಟ್ಸ್‌ನ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ IEEPA ಆಧಾರಿತ ಸುಂಕಗಳು ಅಮಾನ್ಯವಾಗಿದ್ದರೆ, ಈ ಮೊತ್ತವನ್ನು ಆಮದುದಾರ ಕಂಪನಿಗಳಿಗೆ ಹಿಂತಿರುಗಿಸುವ ಪ್ರಶ್ನೆ ಎದುರಾಗಲಿದೆ. ಇದು ಸರ್ಕಾರಕ್ಕೆ ದೊಡ್ಡ ಆರ್ಥಿಕ ಹಾಗೂ ಆಡಳಿತಾತ್ಮಕ ಸವಾಲಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಇದು ಅವಮಾನಕರ: ಸುಪ್ರೀಂಕೋರ್ಟ್ ತೀರ್ಪಿಗೆ ಟ್ರಂಪ್ ಕಿಡಿ

ಜಾಗತಿಕ ಸುಂಕಗಳನ್ನು ರದ್ದುಪಡಿಸಿದ ಸುಪ್ರೀಂಕೋರ್ಟ್ ತೀರ್ಪಿಗೆ ಟ್ರಂಪ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ವೈಟ್‌ಹೌಸ್‌ನಲ್ಲಿ ನಡೆದ ಉಪಾಹಾರ ಸಭೆಯಲ್ಲಿ ಮಾತನಾಡಿದ ಅವರು, ಈ ತೀರ್ಪನ್ನು “ಅವಮಾನಕರ” ಎಂದು ಕರೆದರು. ಜೊತೆಗೆ, ತಾನು ಪರ್ಯಾಯ ಯೋಜನೆ ಹೊಂದಿದ್ದೇನೆ ಎಂದೂ ತಿಳಿಸಿದರು. 6-3 ಬಹುಮತ ತೀರ್ಪಿನಲ್ಲಿ ಟ್ರಂಪ್ ವಿಧಿಸಿದ್ದ ಜಾಗತಿಕ ಸುಂಕಗಳು ಮಾನ್ಯವಲ್ಲ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ. ಈ ಕಾಯ್ದೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಸಂದರ್ಭಗಳಲ್ಲಿ ಮಾತ್ರ ಅಧ್ಯಕ್ಷರಿಗೆ “ಅಸಾಮಾನ್ಯ ಮತ್ತು ಅತಿವಿಶೇಷ” ಪರಿಸ್ಥಿತಿಗಳಲ್ಲಿ ವ್ಯಾಪಾರ ನಿಯಂತ್ರಣ ಮಾಡುವ ಅಧಿಕಾರ ನೀಡುತ್ತದೆ.

ನ್ಯಾಯಮೂರ್ತಿಗಳ ಅಭಿಪ್ರಾಯದ ಪ್ರಕಾರ, ಟ್ರಂಪ್ ವಿಧಿಸಿದ್ದ ವ್ಯಾಪಕ ಜಾಗತಿಕ ಸುಂಕಗಳು ಆ ಕಾಯ್ದೆಯ ಮಿತಿಯನ್ನು ಮೀರಿ ಹೋಗಿವೆ. ಈ ತೀರ್ಪು ಟ್ರಂಪ್ ಅವರ ಆರ್ಥಿಕ ಕಾರ್ಯಯೋಜನೆಗೆ ದೊಡ್ಡ ಹೊಡೆತವೆಂದು ವಿಶ್ಲೇಷಿಸಲಾಗುತ್ತಿದೆ. ಇದೀಗ ಮುಂದಿನ ಹೆಜ್ಜೆ ಏನು ಎಂಬುದರ ಬಗ್ಗೆ ಕುತೂಹಲ ಮೂಡಿದ್ದು, ಟ್ರಂಪ್ ಪರ್ಯಾಯ ಕಾನೂನು ಮಾರ್ಗಗಳನ್ನು ಅನುಸರಿಸುವ ಸಾಧ್ಯತೆಗಳ ಬಗ್ಗೆ ಸುಳಿವು ನೀಡಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/supreme-court-of-the-united-states-strikes-down-donald-trump-global-tariffs-in-6-3-verdict-444501.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo