
Business
oi-Hitesh Y
Gold: ಚಿನ್ನ ಎಂದಿಗೂ ನಿದ್ರಿಸುವುದಿಲ್ಲ ಎನ್ನುವ ಮಾತಿದೆ. ಅಂದರೆ ಚಿನ್ನದ ಮೇಲೆ ಹೂಡಿಕೆ ಮಾಡಿದರೆ, ನಿಮಗೆ ಎಂದಿಗೂ ನಷ್ಟವಾಗುವುದಿಲ್ಲ. ಚಿನ್ನ ಇಂದಲ್ಲ ನಾಳೆ ಒಳ್ಳೆಯ ಲಾಭವನ್ನು ತರಲಿದೆ ಎನ್ನುವುದು ಇದರ ಅರ್ಥ. ಒಮ್ಮೆ ನೀವು ಯಾವುದಾದರೂ ನಿರ್ದಿಷ್ಟ ವಸ್ತುವಿನ ಮೇಲೆ ಹೂಡಿಕೆ ಮಾಡಿ, ಬಿಟ್ಟರೆ ಸಾಕು ಅದರ ಮೌಲ್ಯವು ಹೆಚ್ಚಾಗುತ್ತಿರುತ್ತದೆ ಎನ್ನುವುದು ಈ ಮಾತಿನ ಅರ್ಥ. ಆದರೆ ಚಿನ್ನವನ್ನು ಇಂದಿಗೂ ಸಣ್ಣ ಅಂಗಡಿಗಳಲ್ಲಿ ಸಣ್ಣದೊಂದು ಕಾಗದ ಚಿನ್ನಕ್ಕೆ ಆಸರೆಯಾಗಿದೆ ಎಂದರೆ ನಂಬುತ್ತೀರಾ. ಹೌದು ಇಂದಿಗೂ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಚಿನ್ನಕ್ಕೆ ಪಿಂಕ್ ಪೇಪರ್ ಆಸರೆಯಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಭಾರತದಲ್ಲಿ ಇಂದಿಗೂ ಕೆಲವು ಸಣ್ಣ ಅಥವಾ ಕುಟುಂಬಗಳು ನಡೆಸುವ ಆಭರಣ ಅಂಗಡಿಗಳಲ್ಲಿ ಚಿನ್ನಕ್ಕೆ ಪೇಪರ್ ಆಸರೆಯಾಗಿದೆ. ನೀವು ಸಣ್ಣ ಅಂಗಡಿಗಳಲ್ಲಿ ಚಿನ್ನ ಖರೀದಿ ಮಾಡುವಾಗ ಗಮನಿಸಿರಬಹುದು. ಇಂದಿಗೂ ಚಿನ್ನ ಮಾರಾಟ ಮಾಡುವಾಗ ಗುಲಾಬಿ ಬಣ್ಣದ (ಪಿಂಕ್ ಕವರ್) ಕಾಗದ ಬಳಕೆ ಮಾಡಲಾಗುತ್ತದೆ. ಆದರೆ ಇದೇ ದೊಡ್ಡ ದೊಡ್ಡ ಅಂಗಡಿಗಳಲ್ಲಿ ಚಿನ್ನ ಮಾರಾಟ ಮಾಡುವಾಗ ಮತ್ತು ಖರೀದಿ ಮಾಡುವಾಗ ಈ ಗುಲಾಬಿ ಬಣ್ಣದ ಕಾಗದ ಕಾಣಸಿಗುವುದಿಲ್ಲ. ಇಷ್ಟಕ್ಕೂ ಈ ಕಾಗದವನ್ನು ಯಾಕೆ ಬಳಕೆ ಮಾಡಲಾಗುತ್ತದೆ. ಇದರಿಂದ ಏನೆಲ್ಲಾ ಉಪಯೋಗಗಳಿವೆ ಎನ್ನುವುದನ್ನು ನೋಡೋಣ.

ಚಿನ್ನ – ಬೆಳ್ಳಿಗೆ ಪಿಂಕ್ ಕಾಗದ ಬಳಕೆಗೆ ಕಾರಣವೇನು ?
ಚಿನ್ನ ಅಥವಾ ಬೆಳ್ಳಿ ಆಭರಣ ಖರೀದಿಸಿದಾಗ ಅದನ್ನು ಸಣ್ಣ ಗುಲಾಬಿ (ಪಿಂಕ್) ಬಣ್ಣದ ಕಾಗದದಲ್ಲಿ ಮುಚ್ಚಿ ಕೊಡುವ ಪದ್ಧತಿ ಈಗಲೂ ಕೆಲವು ಕಡೆ ಇದೆ. ಇಂದಿನಂತೆ ಬ್ರ್ಯಾಂಡ್ ಡಬ್ಬಿಗಳು, ವೆಲ್ವೆಟ್ ಕೇಸ್‌ಗಳು ಆಗಿನ ಕಾಲದಲ್ಲಿ ದೇಶದಾದ್ಯಂತ ಜುವೆಲ್ಲರಿ ಅಂಗಡಿಗಳಲ್ಲಿ ಇರಲಿಲ್ಲ. ಹೀಗಾಗಿ, ಈ ಪಿಂಕ್ ಕಾಗದವನ್ನು ಬಳಸಲಾಗುತ್ತಿತ್ತು. ಅಲ್ಲದೆ ಈ ಕಾಗದವನ್ನು ಬಳಕೆ ಮಾಡುವುದರ ಹಿಂದೆ ಬಂಗಾರ ಹಾಗೂ ಲೋಹದ ಸುರಕ್ಷತೆಯ ದೃಷ್ಟಿಯೂ ಇದೆ. ಇದು ಸಾಮಾನ್ಯವಾಗಿತ್ತು.
ಈ ಗುಲಾಬಿ ಕಾಗದವನ್ನು ಕೇವಲ ಅಲಂಕಾರಕ್ಕಾಗಿ ಬಳಕೆ ಮಾಡಲ್ಲ. ಇದರಿಂದ ಭಾರೀ ಉಪಯೋಗವೂ ಇದೆ. ಚಿನ್ನ ಮತ್ತು ಬೆಳ್ಳಿ ಆಭರಣಗಳು ಹೊಳಪು ಕಳೆದುಕೊಳ್ಳಬಾರದು, ಬೇಗ ಕಪ್ಪಾಗಬಾರದು ಎಂಬ ಉದ್ದೇಶದಿಂದ ಕಾಗದದಲ್ಲಿ ಸುತ್ತಿಕೊಡಲಾಗುತ್ತಿತ್ತು. ವಿಶೇಷವಾಗಿ ಬೆಳ್ಳಿ ವಸ್ತುಗಳು ಬೇಗ ಮಂಕಾಗುವ ಸಾಧ್ಯತೆ ಇರುವುದರಿಂದ ಈ ವಿಧಾನ ಸಹಾಯ ಮಾಡುತ್ತಿತ್ತು. ಅದೇ ಮಾದರಿಯನ್ನು ಇಂದಿಗೂ ಹಲವರು ಮುಂದುವರಿಸಿಕೊಂಡು ಬಂದಿದ್ದಾರೆ. ತಂತ್ರಜ್ಞಾನ ಬದಲಾದರೂ ಇಂದಿಗೂ ಚಿನ್ನ ಮತ್ತು ಬೆಳ್ಳಿಯ ಹೊಳಪು ಉಳಿದುಕೊಳ್ಳುವುದಕ್ಕೆ ಪಿಂಕ್ ಕವರ್ ಸಹಾಯ ಮಾಡಿದೆ.
ಪಿಂಕ್ ಕಾಗದ ಬಳಕೆಯ ಹಿನ್ನೆಲೆ ಏನು ?
ಗುಲಾಬಿ ಕಾಗದಕ್ಕೆ ಸಾಮಾನ್ಯವಾಗಿ ತೆಳುವಾದ ರಕ್ಷಣಾತ್ಮಕ ಲೇಪನ (coating) ಇರುವುದರಿಂದ ಇದು ಗಾಳಿ ಮತ್ತು ತೇವಾಂಶದಿಂದ ಆಭರಣವನ್ನು ರಕ್ಷಿಸುತ್ತಿತ್ತು. ಗಾಳಿ ಮತ್ತು ತೇವಾಂಶವು ಲೋಹಗಳ ಮೇಲ್ಮೈಗೆ ಪರಿಣಾಮ ಬೀರುತ್ತವೆ. 24 ಕ್ಯಾರೆಟ್ ಶುದ್ಧ ಚಿನ್ನಕ್ಕೆ ಕಳಪೆ ಆಗುವ ಸಮಸ್ಯೆ ಕಡಿಮೆ ಇದ್ದರೂ, ಬಹುತೇಕ ಆಭರಣಗಳಲ್ಲಿ ತಾಮ್ರ ಅಥವಾ ಬೆಳ್ಳಿ ಮಿಶ್ರಣವಾಗಿರುವುದರಿಂದ ಅವು ತೇವಾಂಶಕ್ಕೆ ಪ್ರತಿಕ್ರಿಯಿಸಬಹುದು. ಈ ಪ್ರಕ್ರಿಯೆಯನ್ನು ಪಿಂಕ್ ಕಾಗದವು ನಿಧಾನಗೊಳಿಸುತ್ತಿತ್ತು.
ಅಲ್ಲದೆ ಪಿಂಕ್ ಕಾಗದದಲ್ಲಿ ಇರಿಸುವುದರಿಂದ ಧೂಳು, ಸಣ್ಣ ಸ್ಕ್ರಾಚ್‌ಗಳು, ಕಲ್ಲುಗಳು ಸಡಿಲಾಗುವುದು ಸೇರಿದಂತೆ ಹಲವು ಸಮಸ್ಯೆಗಳಿಂದ ತಪ್ಪಿಸುವುದಕ್ಕೆ ಸಾಧ್ಯವಾಗುತ್ತಿತ್ತು. ಹೀಗಾಗಿ, ಇಂದಿಗೂ ಸಣ್ಣ ಅಂಗಡಿಗಳಲ್ಲಿ ಹಾಗೂ ಮನೆಗಳಲ್ಲಿ ಪಿಂಕ್ ಕವರ್ ಬಳಕೆ ಮಾಡುವ ರೂಢಿಯಲ್ಲಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯು ಹೆಚ್ಚಳವಾಗುತ್ತಿದ್ದರೂ, ಪಿಂಕ್ ಕವರ್ ಬಳಕೆ ಮಾಡುವುದು ಇಂದಿಗೂ ಮುಂದುವರಿಯುತ್ತಿದೆ ಎನ್ನುವುದು ವಿಶೇಷವಾಗಿದೆ.
-

Gold Rate Feb 16: ಚಿನ್ನದ ಬೆಲೆ 13,100 ರೂ., ಬೆಳ್ಳಿ ಬೆಲೆ 7,000 ರೂ. ಭರ್ಜರಿ ಇಳಿಕೆ, ಇಂದಿನ ಚಿನ್ನ – ಬೆಳ್ಳಿ ಬೆಲೆ
-

Gold Price: ಬಂಗಾರದ ಬೆಲೆ 80,000 ರೂ.ಗಿಂತಲೂ ಕಡಿಮೆ ಆಗಲಿದೆ: ತಜ್ಞರ ಮುನ್ಸೂಚನೆ, ಕಾರಣವೇನು?
-

Gold: ಚಿನ್ನ ಎಂದಿಗೂ ನಿದ್ರಿಸುವುದಿಲ್ಲ: ಚಿನ್ನದ ಬೆಲೆ 1905ರಿಂದ 2026ರ ವರೆಗೆ ಎಷ್ಟಾಗಿದೆ, 120 ವರ್ಷದ ವಿವರ ಇಲ್ಲಿದೆ
-

Gold Price Feb 17: ಚಿನ್ನದ ಬೆಲೆ 15,300 ರೂ., ಬೆಳ್ಳಿ ಬೆಲೆ 8,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಖುಷ್
-

Gold-Silver: ಬೆಳ್ಳಿ ಬೆಲೆ ಭಾರಿ ಕುಸಿತ, ಬಂಗಾರದ ದರವೂ ಜಾರುತ್ತಿದೆ: ಏರುತ್ತೆ ಅಂತ ತಗೊಂಡೋರು ಕಂಗಾಲು
-

Silver Price: ಬೆಳ್ಳಿ ಬೆಲೆ ಪಾತಾಳಕ್ಕೆ; ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಭಾರಿ ಕುಸಿತ, ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ
-

ಚಿನ್ನ-ಬೆಳ್ಳಿ ದರ ಮತ್ತೆ ಕುಸಿತ: ಭವಿಷ್ಯದಲ್ಲಿ ಇನ್ನಷ್ಟು ಇಳಿಕೆಯಾಗುವುದೇ? ಖರೀದಿ, ಹೂಡಿಕೆಗೆ ಮುನ್ನ ಗಮನಿಸಲೇಬೇಕಾದ ಅಂಶಗಳಿವು
-

ಮನೆಯಲ್ಲಿಯೇ ನಿಮ್ಮ ಒಡವೆಗಳನ್ನು ಹೊಸದರಂತೆ ಹೊಳೆಯುವಂತೆ ಮಾಡಲು ಈ 5 ಸರಳ ಟಿಪ್ಸ್ ಪಾಲಿಸಿ
-

Gold Rate Feb 16: ಚಿನ್ನದ ಬೆಲೆ 13,100 ರೂ., ಬೆಳ್ಳಿ ಬೆಲೆ 7,000 ರೂ. ಭರ್ಜರಿ ಇಳಿಕೆ, ಇಂದಿನ ಚಿನ್ನ – ಬೆಳ್ಳಿ ಬೆಲೆ
-

Gold: ಚಿನ್ನ ಎಂದಿಗೂ ನಿದ್ರಿಸುವುದಿಲ್ಲ: ಚಿನ್ನದ ಬೆಲೆ 1905ರಿಂದ 2026ರ ವರೆಗೆ ಎಷ್ಟಾಗಿದೆ, 120 ವರ್ಷದ ವಿವರ ಇಲ್ಲಿದೆ
-

T20 2026: ಭಾರತದ ವಿಜಯಕ್ಕೆ ಪಾಕಿಸ್ತಾನದಲ್ಲೂ ಸಂಭ್ರಮಾಚರಣೆ, ವಿಡಿಯೋ ವೈರಲ್ Viral Video
-

Horoscope February 16: ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಆರೋಗ್ಯದಲ್ಲಿ ಸುಧಾರಣೆ, ದಿನ ಭವಿಷ್ಯ ಇಲ್ಲಿದೆ
-

ಫೆಬ್ರವರಿ 17 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
-

Karnataka Weather: ಕರ್ನಾಟಕದಲ್ಲಿ ಮುಂದಿನ 3 ದಿನ ಹೇಗಿರಲಿದೆ ಹವಾಮಾನ, ಇಲ್ಲಿದೆ ಮಾಹಿತಿ
-

ಕರ್ನಾಟಕದ ಕರಾವಳಿಗೆ ಬರಲು ಐಟಿ – ಬಿಟಿ ಕಂಪನಿಗಳ ಹಿಂದೇಟು ಚರ್ಚೆ, ಸೋಷಿಯಲ್ ಮೀಡಿಯಾದಲ್ಲಿ ವಾಕ್ಸಮರ
Disclaimer: This content was automatically imported from a third-party source via RSS feed. The original source is: https://kannada.oneindia.com/news/business/gold-and-silver-wrapped-in-pink-paper-for-decades-unique-reason-and-history-behind-tradition-444163.html. xn--babytilbehr-pgb.com does not claim ownership of this content. All rights remain with the original publisher.

