
Business
oi-Shankrappa Parangi
ಚಿನ್ನದ ದರದಲ್ಲಿ ನಿರಂತರ ಏರಿಳಿತಗಳು ಉಂಟಾಗುತ್ತಿವೆ. ಗರಿಷ್ಠ ಬೆಲೆಗೆ ಏರಿದ್ದ ಚಿನ್ನ-ಬೆಳ್ಳಿ ಇದೀಗ ಇಳಿಕೆ ಕಂಡಿದೆ. ದೇಶದ ಇತರ ಹಬ್ಬಗಳ ಪೈಕಿ ಹೆಚ್ಚಿನ ಮಂದಿ ‘ಅಕ್ಷಯ ತೃತೀಯ 2026’ ಕ್ಕೆ (Akshaya Tritiya 2026) ಚಿನ್ನಾಭರಣ ಖರೀದಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡ ಆಭರಣ ವ್ಯಾಪಾರಿಗಳು ಗಮನಾರ್ಹ ಪ್ರಚಾರ ತಂತ್ರ ಅನುಸರಿಸುತ್ತಿದ್ದಾರೆ. ಕೆಲವರು ಗ್ರಾಹಕರಿಗೆ ಒಂದಷ್ಟು ಕೊಡುಗೆಗಳನ್ನು ಪರಿಚಯಿಸುತ್ತಿದ್ದಾರೆ. ಹಬ್ಬದ ವೇಳೆ ಆಭರಣಗಳ ಬೆಲೆ ಖಚಿತತೆ ನೀಡಲಾಗುತ್ತಿದೆ. ಅಂದರೆ ಮುಂಗಡ ಬುಕ್ ಮಾಡಿ ಹಬ್ಬಕ್ಕೆ ಖರೀದಿಸುವ ಅವಕಾಶ ನೀಡುತ್ತಿದೆ.
ಅಕ್ಷಯ ತೃತಿಯ ಸಲುವಾಗಿ ಚಿನ್ನಾಭರಣ ಮತ್ತು KISNA ವಜ್ರದಾಭರಣಗಳ ದರ ಸಂರಕ್ಷಣಾ ಯೋಜನೆ ಪರಿಚಯಿಸಿವೆ. ವಿಶೇಷವಾದ ಈ ಕೊಡುಗೆಯನ್ನು ಖರೀದಿಯ ಶೇ. 25ರಷ್ಟು ಮುಂಗಡ ಹಣ ಪಾವತಿಸುವ ಗ್ರಾಹಕರಿಗೆ ನೀಡಲಾಗುತ್ತಿದೆ. ಮುಂಗಡ ಹಣ ನೀಡಿ ಚಿನ್ನದ ಬೆಲೆಯನ್ನು ಲಾಕ್ ಮಾಡಬಹುದು. ನಂತರ ಹಬ್ಬದ ದಿನ ತರಬಹುದು. ಹಬ್ಬಕ್ಕು ಮುನ್ನ ಖರೀದಿಗೆ ಹೋದಾಗ ಇಂದಿಗಿಂತ ದರ ಹೆಚ್ಚಾಗಿದ್ದರೆ ಗ್ರಾಹಕರಿಗೆ ನಷ್ಟವಾಗುತ್ತದೆ. ಇದನ್ನರಿತ ವ್ಯಾಪಾರಿಗಳು ದರ ಲಾಕ್ಗೆ ಅವಕಾಶ ನೀಡಿದ್ದಾರೆ.

ಏಪ್ರಿಲ್ 19 ರವರೆಗೆ ಕೊಡುಗೆ
ಈ ಕೊಡುಗೆಗಳು ಹಬ್ಬದ ವೇಳೆ ಬೆಲೆಯ ಏರಿಳಿತದಿಂದ ಗ್ರಾಹಕರ ಮೇಲಾಗುವ ಆರ್ಥಿಕ ಹೊರತೆಯಿಂದ ರಕ್ಷಿಸುತ್ತದೆ. ಈ ಕೊಡುಗೆಯು ಏಪ್ರಿಲ್ 19 ರವರೆಗೆ ಲಭ್ಯವಿರಲಿದೆ. ಮಾನ್ಯವಾಗಿರುತ್ತದೆ, ಖರೀದಿದಾರರು ಮುಂಚಿತವಾಗಿ ಆಭರಣಗಳನ್ನು ಬುಕ್ ಮಾಡಲು ಮತ್ತು ಅಕ್ಷಯ ತೃತೀಯದಂದು ಖರೀದಿಸಬಹುದಾಗಿದೆ. ಚಿನ್ನದ ಬೆಲೆಗಳು ಅನಿರೀಕ್ಷಿತವಾಗಿದೆ. ಹೀಗಾಗಿ ಇದು ಗ್ರಾಹಕರಿಗೆ ಜಾಗರೂಕರಾಗಿರಲು ಉತ್ತೇಜಿಸುತ್ತದೆ.
ಪ್ರತಿ ವರ್ಷ “ಅಕ್ಷಯ ತೃತೀಯ’ ಹಬ್ಬವು ನಮಗೆ ವಾರ್ಷಿಕ ಆದಾಯದ ಸುಮಾರು ಶೇ.15 ರಿಂದ 18 ರಷ್ಟು ಕೊಡುಗೆ ನೀಡುತ್ತದೆ. ಹೀಗಾಗಿ ಈ ಹಬ್ಬವು ಆದಾಯ ದೃಷ್ಟಿಯಲ್ಲಿ ನಮಗೆ ನಿರ್ಣಾಯಕ ಎಂದು ಹರಿ ಕೃಷ್ಣ ಎಕ್ಸ್ಪೋರ್ಟ್ಸ್ ಮತ್ತು KISNA ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಘನಶ್ಯಾಮ್ ಧೋಲಾಕಿಯಾ ಮಾಹಿತಿ ನೀಡಿದ್ದಾರೆ.
ಚಿನ್ನ, ವಜ್ರದಾಭರಣಗಳಿಗೆ ಮಾತ್ರ ಕೊಡುಗೆ ಅನ್ವಯ
ವ್ಯಾಪಾರದಲ್ಲಿ ಲಾಭ, ಗ್ರಾಹಕರ ಆಕರ್ಷಣೆ, ವ್ಯಾಪಾರ ವೃದ್ಧಿಗೆ ಇಂತಹ ವಿಶೇಷ ಮತ್ತು ರಚನಾತ್ಮಕ ಯೋಜನೆಗಳಿಂದ ಬೇಡಿಕೆ ಹೆಚ್ಚಾಗುತ್ತದೆ. ಆರಂಭಿಕ ಚಿನ್ನಾಭರಣ, ವಜ್ರ ಬುಕಿಂಗ್ಗಳಿಂದ ಗ್ರಾಹಕರಿಗೂ ಸಹಾಯವಾಗುತ್ತದೆ. ವಿಶೇಷ ಕೊಡುಗೆಗಳು ಹಬ್ಬದ ಪ್ರಯುಕ್ತ ಚಿನ್ನ ಮತ್ತು ವಜ್ರದ ಆಭರಣಗಳಿಗೆ ಮಾತ್ರವೇ ಅನ್ವಯಿಸುತ್ತದೆ. ಖರೀದಿಯಲ್ಲಿ ಮಾಸಿಕ ವ್ಯವಹಾರದಲ್ಲಿ ಸುಮಾರು ಶೇ.25ರಷ್ಟು ಕೊಡುಗೆ ನೀಡಲಾಗುತ್ತದೆ. ಆರಂಭಿಕ ಆಕರ್ಷಣೆ ಜೊತೆಗೆ ಈ ರಚನಾತ್ಮಕ ಕೊಡುಗೆಗಳು ಗ್ರಾಹಕರನ್ನು ಹೆಚ್ಚಿಸುತ್ತವೆ ಎಂದು ಅವರು ಮಾಹಿತಿ ನೀಡಿದರು.
KISNA ಡೈಮಂಡ್ ಮತ್ತು ಚಿನ್ನದ ಆಭರಣದ ಸಿಇಒ ಪರಾಗ್ ಶಾ ಅವರು, ಮಾರುಕಟ್ಟೆಯಲ್ಲಿ ಚಿನ್ನಾಭರಣಗಳ ಬೆಲೆಯಲ್ಲಿ ನಿತ್ಯ ಏರಿಳಿತವಾಗುತ್ತಿದೆ. ಈ ನಡುವೆ ಗ್ರಾಹಕರಿಗೆ ಬೆಲೆ ಬಗ್ಗೆ ಗೊಂದಲ ಇರುತ್ತದೆ. ಅದಕ್ಕೆ ಸ್ಪಷ್ಟತೆ ಸಿಕ್ಕಾಗ ಅವರು ಖರೀದಿಗೆ ಮುಂದಾಗುತ್ತಾರೆ. ನಮ್ಮ ಮುಂಗಡ ಪಾವತಿ, ಚಿನ್ನಾಭರಣ ಬೆಲೆ ಲಾಕ್ ಯೋಜನೆಯು ಖರೀದಿದಾರರಿಗೆ ಬೆಲೆ ಏರಿಳಿತದ ಬಗೆಗಿನ ಚಿಂತೆಯನ್ನು ದೂರ ಮಾಡುತ್ತದೆ ಎಂದಿದ್ದಾರೆ.
ಏನೆಲ್ಲ ಕೊಡುಗೆಗಳು ಇರುತ್ತವೆ?
ಅಕ್ಷಯ ತೃತೀಯದಲ್ಲಿ ಚಿನ್ನಾಭರಣ ಖರೀದಿಗೆ ಗ್ರಾಹಕರು ಮಳಿಗೆಗಳತ್ತ ಬರಲು ಆಭರಣ ವ್ಯಾಪಾರಿಗಳು ಮುಂಗಡ ಬುಕಿಂಗ್ ಯೋಜನೆಗಳು, ಮೇಕಿಂಗ್ ಶುಲ್ಕಗಳ ಮೇಲಿನ ರಿಯಾಯಿತಿ, ಬೆಲೆ-ಲಾಕ್ ಗ್ಯಾರಂಟಿ ಸೇರಿದಂತೆ ಇನ್ನಿತರ ಕೊಡುಗೆ ನೀಡಲು ಮುಂದಾಗುತ್ತಾರೆ. ಇಂತಹ ಆಫರ್ಗಳು ಪ್ರತಿ ವರ್ಷ ಇರುತ್ತವೆ. ಈಗಾಗಲೇ ದಿಢೀರ್ ಬೆಲೆ ಏರಿಕೆ ಮತ್ತು ಇಳಿಕೆ ಅನಿಶ್ಚಿತತೆಯಿಂದ ಚಿಲ್ಲರೆ ವ್ಯಾಪಾರಕ್ಕೂ ಹೊಡೆತ ಬಿದ್ದಿತ್ತು. ಆದಾಯ, ವಹಿವಾಟು ಕಡಿಮೆ ಆಗಿತ್ತು. ಅದನ್ನು ಈ ಅಕ್ಷಯ ತೃತೀಯಕ್ಕೆ ಸಮಲೋಲನಕ್ಕೆ ತರಲು ಉದ್ಯಮಿಗಳು, ವ್ಯಾಪಾರಿಗಳು ಹರಸಾಹಸಪಡುವಂತಾಗಿದೆ.
ಇಂದು ಚಿನ್ನದ ದರಗಳು ಎಷ್ಟಿದೆ
ಮಧ್ಯಪ್ರಾಚ್ಯದ ಯುದ್ಧ, ರಾಜಕೀಯ ಉದ್ವಿಗ್ನತೆಗಳ ನಡುವೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಅಸ್ಥಿರವಾಗಿವೆ. ನೆನ್ನೆ ಶುಕ್ರವಾರ ಎಂಸಿಎಕ್ಸ್ ನಲ್ಲಿ ಚಿನ್ನ 10 ಗ್ರಾಂಗೆ 1,48,101 ರೂ.ಗೆ ಮುಕ್ತಾಯಗೊಂಡಿತು. ಬೆಳ್ಳಿ ದರದಲ್ಲಿ ಶೇ. 4.48ರಷ್ಟು ತೀವ್ರವಾಗಿ ಇಳಿದು ಪ್ರತಿ ಕೆಜಿಗೆ 2,32,600ರೂಪಾಯಿ ಮುಟ್ಟಿತು. ಇಂದು ಸೋಮವಾರ 24 ಕ್ಯಾರಟ್ ಚಿನ್ನದ 10 ಗ್ರಾಂ ದರ 1,49,130 ರೂಪಾಯಿ ಹಾಗೂ 22ಕೆ ಚಿನ್ನದ ಬೆಲೆ 10 ಗ್ರಾಂ ಬೆಲೆ 1,36,700 ರೂಪಾಯಿ ಇದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/business/akshaya-tritiya-2026-kisna-jewellery-launches-gold-rate-protection-plan-amid-price-volatility-449535.html. xn--babytilbehr-pgb.com does not claim ownership of this content. All rights remain with the original publisher.
