Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ | Gold Dilemma Buy or Sell Now Which iS Good Economist Mary George Shares Crucial Advice

Business

oi-Hitesh Y

Gold: ಇರಾನ್ – ಇಸ್ರೇಲ್, ಅಮೆರಿಕ ದೇಶಗಳ ನಡುವೆ ನಡೆಯುತ್ತಿರುವ ಯುದ್ಧವು ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಯುದ್ಧ ಪ್ರಾರಂಭವಾದಾಗಿನಿಂದಲೂ ಚಿನ್ನದ ಬೆಲೆಯು ಚಂಚಲವಾಗಿದೆ. ಚಿನ್ನದ ಬೆಲೆಯಲ್ಲಿ ಭಾರೀ ವ್ಯತ್ಯಾಸವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯತ್ಯಾಸವಾಗುವ ಸಾಧ್ಯತೆ ಇದೆ. ಇನ್ನು ಚಿನ್ನದ ಬೆಲೆ ಏರಿಕೆಯಾಗಲಿದೆ ಎಂದು ಕೆಲವರು ಚಿನ್ನ ಖರೀದಿ ಮಾಡಿದ್ದರು, ಚಿನ್ನದ ಬೆಲೆ ಕಡಿಮೆಯಾಗುತ್ತಿದೆ ಎಂದೂ ಕೆಲವರು ಚಿನ್ನ ಖರೀದಿ ಮಾಡಿದ್ದರು. ಆದರೆ ಈ ಎರಡೂ ರೀತಿ ಚಿನ್ನದ ಮೇಲೆ ಭರವಸೆ ಇರಿಸಿರುವವರಿಗೂ ಸಂಕಷ್ಟ ತಪ್ಪಿದ್ದಲ್ಲ ಎಂದು ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ ಅವರು ಎಚ್ಚರಿಸಿದ್ದಾರೆ. ಚಿನ್ನದ ಖರೀದಿ ಹಾಗೂ ಮಾರಾಟದ ವಿಷಯದಲ್ಲಿ ಈಗ ಇರುವ ಪರಿಸ್ಥಿತಿಯಲ್ಲಿ ಯಾವುದು ಸರಿ ಹಾಗೂ ಯಾವುದು ತಪ್ಪು, ನೀವು ಏನು ಮಾಡಿದರೆ ಉತ್ತಮ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಿನ್ನದ ಬೆಲೆಯಲ್ಲಿನ ದಿಢೀರ್ ಏರಿಳಿತವು ಆಭರಣ ಪ್ರಿಯರನ್ನು ಅಕ್ಷರಶಃ ಆಘಾತಗೊಳಿಸಿದೆ. ನಿನ್ನೆ ಚಿನ್ನದ ಬೆಲೆ 98,000 ರೂ.ಗೆ ಕುಸಿತವಾದಾಗ ಚಿನ್ನದ ಬೆಲೆಯು ಮತ್ತಷ್ಟು ಕುಸಿಯಬಹುದು ಎಂದು ಹಲವರು ನಿರಾಳರಾಗಿದ್ದರು. ಆದರೆ, ಮತ್ತೆ ಚಿನ್ನದ ಬೆಲೆ ಒಂದು ಲಕ್ಷ ರೂಪಾಯಿ ದಾಟಿದೆ. ಚಿನ್ನದ ಬೆಲೆ ಈಗ ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ ಹೇಳಿದ್ದಾರೆ. ಜೀ ನ್ಯೂಸ್ ಮಲಯಾಳಂನೊಂದಿಗೆ ಅವರು ಮಾತನಾಡಿರುವುದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Gold

ಇನ್ನು ಯುದ್ಧ ಕೊನೆಗೊಳ್ಳುವ ಪರಿಸ್ಥಿತಿ ಉದ್ಭವಿಸಿದರೆ, ಚಿನ್ನದ ಬೆಲೆ ಮೊದಲಿನಂತೆ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಈಗ ಚಿನ್ನದ ಬೆಲೆ ಏರಿಕೆ ಆಗಲಿದೆ ಅಥವಾ ಇಳಿಕೆಯಾಗಲಿದೆ ಎನ್ನುವುದು ನಿರ್ದಿಷ್ಟವಾಗಿ ನಿರ್ಧರಿಸುವುದಕ್ಕೆ ಸಾಧ್ಯವಿಲ್ಲ. ಒಂದು ಲಕ್ಷ ರೂಪಾಯಿಗಿಂತಲೂ ಕಡಿಮೆಯಾಗಿದ್ದ ಚಿನ್ನದ ಬೆಲೆಯು ಇದೀಗ ಏಕಾಏಕಿ ಒಂದು ಲಕ್ಷಕ್ಕಿಂತ ಹೆಚ್ಚಾಗಿದೆ. ಅಮೆರಿಕದ ಷೇರು ಮಾರುಕಟ್ಟೆ, ಡೌ ಜೋನ್ಸ್ ಮಾರುಕಟ್ಟೆಯು ಸಕಾರಾತ್ಮಕವಾಗಿದೆ. ಇದರರ್ಥ ಹೂಡಿಕೆದಾರರು ಅಮೆರಿಕದ ಷೇರುಗಳ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗಿದೆ. ಭಾರತದಂತಹ ದೇಶಗಳಿಂದ ಷೇರುಗಳನ್ನು ಮಾರಾಟ ಮಾಡಲಾಗುತ್ತಿದೆ. ಅದಕ್ಕಾಗಿಯೇ ನಮ್ಮ ಸೂಚ್ಯಂಕ ನಕಾರಾತ್ಮಕವಾಗುತ್ತಿದೆ.

ಷೇರು ಮಾರುಕಟ್ಟೆ ಬಲಗೊಳ್ಳುತ್ತಿದೆ ಅಂದರೆ ಡಾಲರ್ ಬಲಗೊಳ್ಳುತ್ತಿದೆ. ಇದೇ ಸಮಯದಲ್ಲಿ, ಚಿನ್ನದ ಬೆಲೆಯೂ ಹೆಚ್ಚುತ್ತಿದೆ. ಸಾಮಾನ್ಯವಾಗಿ, ಡಾಲರ್ ಬಲಗೊಳ್ಳುವಾಗ ಚಿನ್ನಕ್ಕಿಂತ ಹೆಚ್ಚಿನ ಹೂಡಿಕೆ ಡಾಲರ್‌ಗೆ ಹೋಗುತ್ತದೆ. ಆದರೆ ಈಗ, ಹೂಡಿಕೆ ಎರಡಕ್ಕೂ ಹೋಗುತ್ತದೆ. ಆದರೆ ಇದೀಗ ಒಟ್ಟಾರೆ ಅನಿಶ್ಚಿತತೆ ಮುಂದುವರಿಯುತ್ತಿದೆ.

Gold ಈಗ ಚಿನ್ನ ಖರೀದಿ ಮಾಡುವುದು ಸುರಕ್ಷಿತವಲ್ಲ

ಇನ್ನು ಗ್ರಾಹಕರು ಈ ಸಮಯದಲ್ಲಿ ಚಿನ್ನ ಖರೀದಿ ಮಾಡುವುದು ಸುರಕ್ಷಿತವಲ್ಲ. ಈಗ ಚಿನ್ನ ಖರೀದಿಸುವುದು ಸುರಕ್ಷಿತವಲ್ಲ; ಸ್ವಲ್ಪ ಸಮಯ ಕಾಯಿರಿ ಎಂದು ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ ಅವರು ಹೇಳಿದ್ದಾರೆ. ಈ ಯುದ್ಧದ ಪರಿಸ್ಥಿತಿ ಸ್ಥಿರತೆಗೆ ಬದಲಾಗಲಿ. ಡೊನಾಲ್ಡ್‌ ಟ್ರಂಪ್ ಅವರು ನಿಜವಾಗಿಯೂ ಏನಾಗಲಿದೆ ಎಂಬುದನ್ನು ವಿವರಿಸಲಿ. ಅಲ್ಲಿಯವರೆಗೆ, ಈ ಏರಿಳಿತಗಳು ಮುಂದುವರಿಯಲಿದೆ.

ನೀವು ಈಗ ಚಿನ್ನವನ್ನು ಖರೀದಿಸಿದರೆ, ನಂತರ ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ ಎಂಬ ಭಯವಿದೆ. ಖಚಿತವಾಗಿ ಏನನ್ನೂ ಹೇಳಲಾಗುವುದಿಲ್ಲ. ಇರಾನ್‌ನ ನೈಜ ಪರಿಸ್ಥಿತಿ ಈಗ ಜಗತ್ತಿನ ಯಾವುದೇ ದೇಶಕ್ಕೆ ಸ್ಪಷ್ಟವಾಗಿಲ್ಲ. ಇರಾನ್‌ನ ಪರಮಾಣು ಸಾಮರ್ಥ್ಯ ಎಷ್ಟರ ಮಟ್ಟಿಗೆ ನಾಶವಾಗಿದೆ ಮತ್ತು ಅದು ಇನ್ನೂ ಎಷ್ಟರ ಮಟ್ಟಿಗೆ ಅಸ್ತಿತ್ವದಲ್ಲಿದೆ ಎಂಬುದು ಸ್ಪಷ್ಟವಾಗಿಲ್ಲ.

ಟ್ರಂಪ್ ಮತ್ತು ಇಸ್ರೇಲ್ ತಮ್ಮ ಪರಮಾಣು ಸಾಮರ್ಥ್ಯವನ್ನು ನಾಶಪಡಿಸಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇರಾನ್ ಅದಕ್ಕೆ ಒಂದೇ ಒಂದು ಗೀರು ಕೂಡ ಬಿದ್ದಿಲ್ಲ ಎಂದು ಹೇಳುತ್ತದೆ. ಯಾರು ಸರಿ ಎಂದು ನಮಗೆ ಖಚಿತವಿಲ್ಲ. ಆದ್ದರಿಂದ ಯುದ್ಧ ಮುಂದುವರಿಯಬಹುದು, ಅಥವಾ ಅದು ಕಡಿಮೆಯಾಗಬಹುದು. ಅಲ್ಲಿಯ ವರೆಗೆ ಚಿನ್ನ ಖರೀದಿ ಅಥವಾ ಮಾರಾಟ ಎರಡೂ ಸುರಕ್ಷಿತವಲ್ಲ ಎಂದು ಅವರು ಸಲಹೆ ನೀಡಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/business/gold-dilemma-buy-or-sell-now-which-is-good-economist-mary-george-shares-crucial-advice-448299.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo