Gold and Silver Rate Today April 5: ಚಿನ್ನ – ಬೆಳ್ಳಿ ಪ್ರಿಯರಿಗೆ ಗುಡ್‌ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ | Gold and Silver Rate Today April 5: Prices Dip Now, Will Gold Surge Next Week? Here’s What Experts Say

Business

oi-Hitesh Y

Gold and Silver Rate Today April 5: ಕಳೆದ ಕೆಲವು ದಿನಗಳಿಂದ ಭಾರೀ ಏರಿಳಿತ ಕಂಡಿದ್ದ ಚಿನ್ನದ ಬೆಲೆಯು ಏಪ್ರಿಲ್ ಮೊದಲ ವಾರದ ಅಂತ್ಯದ ವೇಳೆಗೆ ಅಲ್ಪ ಇಳಿಕೆ ಕಂಡಿದೆ. ಕಳೆದ ಎರಡೂವರೆ ತಿಂಗಳಿನಿಂದಲೂ ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತ ಮುಂದುವರಿದಿತ್ತು. ಇದೀಗ ಚಿನ್ನದ ಬೆಲೆಯು ವಾರಾಂತ್ಯದಲ್ಲಿ ತಟಸ್ಥವಾಗಿದ್ದು, ಚಿನ್ನ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ. ಆದರೆ ನಾಳೆಯಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಳತಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಏಪ್ರಿಲ್ 5ರಂದು ಚಿನ್ನ ಮತ್ತು ಬೆಳ್ಳಿಯು ಎಷ್ಟಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಚಿನ್ನದ ಬೆಲೆಯು ಇಳಿಕೆಯಾಗಿದೆ. ಆದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಭಾರೀ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇರಾನ್ Vs ಅಮೆರಿಕ, ಇಸ್ರೇಲ್ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಚಿನ್ನದ ಬೆಲೆಯಲ್ಲಿ ಮತ್ತೆ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಡಾಲರ್ ಮೌಲ್ಯ ಬಲಗೊಳ್ಳುತ್ತಿರುವುದು ಹಾಗೂ ಅಮೆರಿಕದ ಆರ್ಥಿಕ ಪ್ರಭಾವ ಸೇರಿದಂತೆ ಹಲವು ವಿಚಾರಗಳು ಚಿನ್ನದ ಮೌಲ್ಯದ ಮೇಲೆ ಪ್ರಭಾವ ಬೀರಲಿವೆ ಎಂದು ಅಂದಾಜಿಸಲಾಗಿದೆ.

Gold and Silver Rate Today 5 April

ವಾರಾಂತ್ಯವಾದ ಏಪ್ರಿಲ್ 5ರ ಭಾನುವಾರದಂದು ಚಿನ್ನದ ಬೆಲೆಯು ಯಥಾಸ್ಥಿತಿಯಲ್ಲಿದೆ. ಇನ್ನು ಭಾರತದಲ್ಲಿ ಚಿನ್ನದ ಒಟ್ಟಾರೆ ಬೆಲೆಯು ಗರಿಷ್ಠ ಮಟ್ಟದಿಂದ ಶೇ. 17ರಷ್ಟು ಕಡಿಮೆಯಾಗಿದ್ದರೂ, ಸಹ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಭಾರೀ ಹೆಚ್ಚಳವಾಗುವ ಸಾಧ್ಯತೆ ಇದೆ.

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಭಾನುವಾರ ಭರ್ಜರಿ ಇಳಿಕೆಯಾಗಿದೆ. 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 11,320 ರೂಪಾಯಿ ಆಗಿದೆ. 10 ಚಿನ್ನದ ಬೆಲೆಯು 1,13,200 ರೂ. ಆಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 13,835 ರೂಪಾಯಿ ಆಗಿದೆ. ಇನ್ನು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 1,38,350 ರೂ. ಆಗಿದೆ. ಶನಿವಾರಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.

24 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯು ಏಪ್ರಿಲ್ 5ರಂದು 1 ಗ್ರಾಂಗೆ 15,093 ರೂ. ಹಾಗೂ 10 ಗ್ರಾಂಗೆ 1,50,930 ರೂ. ಆಗಿದೆ. ಶನಿವಾರಕ್ಕೆ ಹೋಲಿಕೆ ಮಾಡಿದರೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

Gold and Silver Rate Today April 5:ಬೆಳ್ಳಿ ಬೆಲೆ ಎಷ್ಟಾಗಿದೆ

ಇನ್ನು ಬೆಳ್ಳಿಯು ಯಥಾಸ್ಥಿತಿ ಮುಂದುವರಿದಿದೆ. ಬೆಳ್ಳಿ ಬೆಲೆಯು 1 ಗ್ರಾಂಗೆ 250 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 2.50 ಲಕ್ಷ ರೂ. ಆಗಿದೆ. ಬೆಳ್ಳಿ ಬೆಲೆಯು ಸಹ ಯಥಾಸ್ಥಿತಿ ಮುಂದುವರಿದಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/business/gold-and-silver-rate-today-april-5-prices-dip-now-will-gold-surge-next-week-here-s-what-experts-s-449411.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo