Gold Price: ಇರಾನ್ – ಅಮೆರಿಕ ಕದನ ವಿರಾಮದ ಬೆನ್ನಲ್ಲೇ ಚಿನ್ನ – ಬೆಳ್ಳಿ ಬೆಲೆ ಏರಿಕೆ, ಮೂರು ವಾರಗಳ ನಂತರ ಬೆಲೆ ಏರಿಕೆ | Gold Price Today: Gold Silver Rise After Iran-US Ceasefire Hit 3-Week High

Business

oi-Hitesh Y

ಇರಾನ್ Vs ಅಮೆರಿಕ, ಇಸ್ರೇಲ್ ನಡುವೆ ಎರಡು ವಾರಗಳ ಕಾಲಕ್ಕೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಮೂರು ವಾರಗಳ ನಂತರ ಚಿನ್ನದ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ಇರಾನ್ ಮೇಲಿನ ದಾಳಿಯನ್ನು ಟ್ರಂಪ್ ನಿಲ್ಲಿಸುತ್ತಿದ್ದಂತೆ ಚಿನ್ನ ಮೂರು ವಾರಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ವಾರಗಳ ಕಾಲ ಇರಾನ್ ಮೇಲಿನ ಬಾಂಬ್ ದಾಳಿ ಮತ್ತು ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಮಾರುಕಟ್ಟೆಗಳು ಅಲ್ಪಾವಧಿಯಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿದೆ. ಬುಧವಾರ ಚಿನ್ನದ ಬೆಲೆಗಳು ಮೂರು ವಾರಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಇದು ಇಂಧನ ಆಧಾರಿತ ಹಣದುಬ್ಬರದ ಭಯವನ್ನು ಕಡಿಮೆ ಮಾಡಿದೆ.

Gold Price Today

ಸ್ಪಾಟ್ ಚಿನ್ನದ ಬೆಲೆ 2.3% ಏರಿಕೆಯಾಗಿ ಪ್ರತಿ ಔನ್ಸ್‌ಗೆ $4,812.49ಕ್ಕೆ ತಲುಪಿದೆ (0215 GMT ವೇಳೆಗೆ). ಇದಕ್ಕೂ ಮೊದಲು ವ್ಯವಹಾರದಲ್ಲಿ ಚಿನ್ನದ ಬೆಲೆ 3% ಕ್ಕಿಂತ ಹೆಚ್ಚು ಏರಿಕೆಯಾಗಿ ಮಾರ್ಚ್ 19 ನಂತರದ ಗರಿಷ್ಠ ಮಟ್ಟ ತಲುಪಿತ್ತು. ಅಮೆರಿಕದ ಜೂನ್ ವಿತರಣೆ ಚಿನ್ನದ ಫ್ಯೂಚರ್ಸ್ ಬೆಲೆ 3.4% ಏರಿಕೆಯಾಗಿ $4,841.60ಕ್ಕೆ ಏರಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಎರಡು ವಾರಗಳ ಕಾಲ ಯುದ್ಧ ವಿರಾಮಕ್ಕೆ ಒಪ್ಪಿಕೊಂಡಿದ್ದೇವೆ ಮತ್ತು ಇರಾನ್‌ನಿಂದ 10 ಅಂಶಗಳ ಪ್ರಸ್ತಾವನೆ ಬಂದಿದ್ದು, ಅದು ಮಾತುಕತೆಗೆ ಸೂಕ್ತ ಆಧಾರವಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು, ಇರಾನ್ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಬೇಕು, ಇಲ್ಲವಾದರೆ ಅಮೆರಿಕ ಪ್ರತಿದಾಳಿ ನಡೆಸಬಹುದು ಎಂದು ಎಚ್ಚರಿಕೆ ನೀಡಲಾಗಿತ್ತು.

ಇದು ತಕ್ಷಣದ ಪ್ರತಿಕ್ರಿಯೆಯಿಂದ ಉಂಟಾದ ತಾತ್ಕಾಲಿಕ ಏರಿಕೆ. ಇರಾನ್ ಈ ಒಪ್ಪಂದವನ್ನು ಪಾಲಿಸುತ್ತದೆಯೇ ಎನ್ನುವುದು ಇನ್ನೂ ನೋಡಬೇಕಾಗಿದೆ. ಚಿನ್ನದ ಬೆಲೆಯಲ್ಲಿ $4,930 (200 ದಿನಗಳ ಸರಾಸರಿ) ಮತ್ತು ನಂತರ $5,000 ಪ್ರಮುಖ ಅಡೆತಡೆಗಳಾಗಿವೆ. ಅದೇ ರೀತಿ ಬೆಳ್ಳಿಗೆ $80-$81 ಡಾಲರ್ ಆಗಿದೆ ಎಂದು ವರದಿಯಾಗಿದೆ.

Gold Price: ಎಷ್ಟಿದೆ ಏಪ್ರಿಲ್ 8ರ ಚಿನ್ನದ ಬೆಲೆ

ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿತ ಮುಂದುವರಿದಿದೆ. ಬಹುತೇಕ ಚಿನ್ನದ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಇನ್ನು ಷೇರುಮಾರುಕಟ್ಟೆ ವಹಿವಾಟು ಪ್ರಾರಂಭವಾಗುತ್ತಿದ್ದಂತೆಯೇ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಭಾರತದಲ್ಲಿ ಎಷ್ಟಾಗಿದೆ ಎನ್ನುವುದುಕ್ಕೆ ಸಂಬಂಧಿಸಿದಂತೆ ನಿಖರ ಮಾಹಿತಿ ಲಭ್ಯವಾಗಲಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/business/gold-price-today-gold-silver-rise-after-iran-us-ceasefire-hit-3-week-high-449739.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo