Gold Price: ಬಂಗಾರದ ಬೆಲೆ 80,000 ರೂ.ಗಿಂತಲೂ ಕಡಿಮೆ ಆಗಲಿದೆ: ತಜ್ಞರ ಮುನ್ಸೂಚನೆ, ಕಾರಣವೇನು? | Gold Price Massive Crash: Gold Will Drop Below Rs 80,000 per 8 Grams, Expert Predictions 2026, Why

Business

oi-Shankrappa Parangi

Gold Price Forecast 2026: ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ವಹಿವಾಟಿನಲ್ಲಿ ನಿರಂತರ ಏರಿಳಿತ ಮುಂದುವರಿದಿದೆ. ಈ ಲೋಹಗಳ ದರವು ಇಳಿಮುಖವಾಗಿದೆ. ಹೊಸ ಮುನ್ಸೂಚನೆಗಳ ಪ್ರಕಾರ, ಚಿನ್ನದ ಬೆಲೆ 08 ಗ್ರಾಂಗೆ (ಒಂದು ಸವರನ್) 80,000 ರೂ.ಗಿಂತ ಕಡಿಮೆ ಆಗುವ ಸಾಧ್ಯತೆ ಇದೆ. ತಿಂಗಳುಗಳಲ್ಲಿ ಗರಿಷ್ಠ ಹಂತ ತಲುಪಿದ್ದ ಬೆಲೆಗಳು ದಾಖಲೆಯ ಹಂತಕ್ಕೆ ಇಳಿಯಬಹುದು ಎಂದು ವಿಶ್ಲೇಷಣೆ ಮಾಡಲಾಗಿದೆ. ಈ ಮುನ್ಸೂಚನೆ ಸಾಮಾನ್ಯ ಖರೀದಿದಾರರು ಹಾಗೂ ಹೂಡಿಕೆದಾರರಲ್ಲಿ ಕುತೂಹಲ ಹೆಚ್ಚಾಗಿದೆ. ಹಾಗಾದರೆ ಸದ್ಯ ದರ ಎಷ್ಟಿದೆ? ಗರಿಷ್ಠ ಮಟ್ಟದ ಇಳಿಕೆಗೆ ಪ್ರಮುಖ ಕಾರಣಗಳೇನು? ಇಲ್ಲಿದೆ ಮಾಹಿತಿ.

ವರ್ಷಗಳಿಂದ ಚಿನ್ನದ ಬೆಲೆಗಳು ಕ್ರಮೇಣ ಏರಿಕೆಯಾಗುತ್ತಲೇ ಬಂದಿತ್ತು. ಜಾಗತಿಕ ಆರ್ಥಿಕ ಅಸ್ಥಿರತೆ, ಸುಂಕ ನೀತಿ, ಡಾಲರ್ ಮೌಲ್ಯ ಕುಸಿತ, ರಾಷ್ಟ್ರಗಳ ಮಧ್ಯದ ಯುದ್ಧಗಳು, ಹಲವು ದೇಶಗಳ ಕೇಂದ್ರ ಬ್ಯಾಂಕುಗಳು ದೊಡ್ಡ ಪ್ರಮಾಣದಲ್ಲಿ ಚಿನ್ನ ಖರೀದಿಸಿದ್ದರಿಂದ ಬೆಲೆ ಏರಿಕೆ ಆಗಿತ್ತು. ಸದ್ಯದ ಮುನ್ಸೂಚನೆ ಪ್ರಕಾರ ದರಗಳು ಕುಸಿಯಬಹುದೆಂದು ಹೇಳಲಾಗುತ್ತಿದೆ.

Gold Price Massive Crash Gold Will Drop Below Rs 80 000 per 8 Grams Expert Predictions 2026 Why

ಎರಡೇ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆ

2025ರ ಸೆಪ್ಟೆಂಬರ್‌ನಿಂದ ಚಿನ್ನದ ಬೆಲೆ ಗಣನೀಯವಾಗಿ ದಾಖಲೆಯ ಹಂತಕ್ಕೆ ಹೆಚ್ಚಾಯಿತು. ಜನವರಿ 29ರಂದು ಐತಿಹಾಸಿಕ ಗರಿಷ್ಠ ಮಟ್ಟ ತಲುಪಿದ್ದ ಚಿನ್ನ ಮತ್ತು ಬೆಳ್ಳಿ ದರ ಪಾತಾಳದತ್ತ ಮುಖ ಮಾಡಿದವು. ಒಂದು ಗ್ರಾಂ ಚಿನ್ನದ ಬೆಲೆ ಸುಮಾರು 16,800 ರೂ. ಆಗಿದ್ದರೆ, ಒಂದು ಸವರನ್(8 ಗ್ರಾಂ) ಬೆಲೆ 1,34,400 ರೂ. ಗಡಿಗೆ ತಲುಪಿತ್ತು. ಆದರೆ ಜನವರಿ 30ರಂದು ಅಚ್ಚರಿಯ ಬೆಳವಣಿಗೆಯಾಗಿ ಚಿನ್ನದ ದರದಲ್ಲಿ ಶೇ.10 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕುಸಿತ ಕಂಡು ಬಂತು. ನಂತರದ 15 ದಿನಗಳಲ್ಲಿ ಹೂಡಿಕೆದಾರರು ತೀವ್ರ ದರ ಇಳಿಕೆಗೆ ಸಾಕ್ಷಿಯಾದರು.

ಬಂಗಾರದ ಬೆಲೆಯಲ್ಲಿ ಭಾರಿ ಕುಸಿತ ಮುನ್ಸೂಚನೆ

ಅನಿಶ್ಚಿತ ಪರಿಸ್ಥಿತಿಯ ನಡುವೆಯೇ, ಮುಂದಿನ ದಿನಗಳಲ್ಲಿ ಚಿನ್ನ ಖರೀದಿಸಬೇಕೆಂದು ಕೊಂಡವರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಬಂಗಾರದ ದರವು ಎಂಟು ಗ್ರಾಂಗೆ 80,000 ರೂ.ಗಿಂತಲೂ ಕಡಿಮೆ ಆಗಲಿದೆ. ಇಂದು ಫೆಬ್ರವರಿ 17ರಂದು 22ಕ್ಯಾರಟ್ ಎಂಟು ಗ್ರಾಂ ದರ 1,13,080 ರೂಪಾಯಿ ಹಾಗೂ 24 ಕ್ಯಾರಟ್ ಚಿನ್ನದ 8 ಗ್ರಾಂ ಬೆಲೆ 1,23,360 ರೂಪಾಯಿ ಇದೆ. ಇದು ದಾಖಲೆಯ ಹಂತದಲ್ಲಿ ಇಳಿಕೆ ಆಗಲಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ. ಇದು ಖರೀದಾರರಿಗೆ ಖುಷಿ ತಂದರೆ, ಹೂಡಿಕೆದಾರರನ್ನು ಚಿಂತೆಗೀಡು ಮಾಡಿದೆ.

ಬೆಲೆ ಕುಸಿತಕ್ಕೆ ತಜ್ಞರು ತಿಳಿಸಿರುವ ಕಾರಣಗಳೇನು?

ಚಿನ್ನದ ಬೆಲೆ ಹೆಚ್ಚಾಗುವಂತೆ ಮಾಡಿದ್ದ ಜಾಗತಿಕ ಪರಿಸ್ಥಿತಿಗಳು ಇದೀಗ ಕ್ರಮೇಣ ಬದಲಾಗುತ್ತಿವೆ. ಅಮೆರಿಕಾ ಜೊತೆಗೆ ಉದ್ವಿಗ್ನತೆ ಹೆಚ್ಚಿದ್ದ ಸಂದರ್ಭದಲ್ಲಿ ರಷ್ಯಾ ಅಂತಾರರಾಷ್ಟ್ರೀಯ ವ್ಯಾಪಾರದಲ್ಲಿ ಅಮೆರಿಕ ಡಾಲರ್ ಬಳಕೆಯನ್ನು ಕಡಿಮೆ ಮಾಡಿತ್ತು. ಆದರೆ ಇತ್ತೀಚಿನ ವರದಿಗಳು, ರಷ್ಯಾ ಮತ್ತೆ ಡಾಲರ್‌ನ ವ್ಯಾಪಕ ಬಳಕೆಗೆ ಮರಳುವ ಸಾಧ್ಯತೆ ಇದೆ ಎಂದು ವರದಿ ಆಗಿದೆ. ಇದರಿಂದ ಚಿನ್ನದ ದರ ಇಳಿಕೆ ಆಗುವುದು ಬಹುತೇಕ ಖಚಿತ ಎನ್ನಲಾಗಿದೆ.

ಅಮೆರಿಕವು ರಷ್ಯಾದ ಆರ್ಥಿಕತೆಯ ಮೇಲೆ ಒತ್ತಡ ಹೇರುವ ಉದ್ದೇಶದಿಂದ, ವಿಶೇಷವಾಗಿ ಭಾರತಕ್ಕೆ ರಷ್ಯಾದ ಕಚ್ಚಾ ತೈಲ ಆಮದುಗಳಿಗೆ ಅಡ್ಡಿ ತರಲು ಯತ್ನ ನಡೆಸಿತ್ತು. ಡಾಲರ್‌ಗಳ ಲಭ್ಯತೆ ಹೆಚ್ಚಿಸಲು ರಷ್ಯಾ ತನ್ನ ಚಿನ್ನದ ಸಂಗ್ರಹದ ಒಂದು ಭಾಗವನ್ನು ಮಾರಾಟ ಮಾಡಿದರೆ, ಜಾಗತಿಕ ಚಿನ್ನದ ಬೆಲೆಗಳಲ್ಲಿ ತೀವ್ರ ಕುಸಿತ ಎದುರಾಗಬಹುದೆಂಬ ಅಂದಾಜುಗಳಿವೆ. ಜೊತೆಗೆ ರಷ್ಯಾ-ಉಕ್ರೇನ್ ಸಂಘರ್ಷ ಅಂತ್ಯಗೊಂಡರೆ, ದರಗಳು ಇನ್ನಷ್ಟು ಇಳಿಯಬಹುದು ಎಂದು ಹೇಳಲಾಗುತ್ತಿದೆ. ರಷ್ಯಾ ಮತ್ತೆ ಅಮೆರಿಕದ ಡಾಲರ್ ಬಳಕೆ ಹೆಚ್ಚಿಸಿದಲ್ಲಿ ಅದರ ಮೌಲ್ಯ ವೃದ್ಧಿಸಬಹುದು. ಆರ್ಥಿಕ ಸ್ಥಿರತೆ ಸುಧಾರಣೆ ಆಗಲಿದೆ. ಇದು ಬಂಗಾರದ ದರ ಇಳಿಕೆಗೆ ದಾರಿ ಮಾಡುವ ಸಂಭವವಿದೆ ಎಂದು ತಜ್ಞರು ತಿಳಿಸಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/business/gold-price-massive-crash-gold-will-drop-below-rs-80-000-per-8-grams-expert-predictions-2026-why-444133.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo