Gold Price Increased: ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಗ್ರಾಹಕರಿಗೆ ಶಾಕ್! ಬೆಳ್ಳಿ ದರ ಎಷ್ಟಿದೆ? | Gold Prices Jump Again in Bengaluru, 24K Crosses Rs 1.52 Lakh, Silver Rates Steady, Latest update

Business

oi-Shankrappa Parangi

ಬೆಂಗಳೂರು: ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದ್ದು, ಇಂದು (ಏಪ್ರಿಲ್ 11) ಶನಿವಾರ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಆಗಿದೆ. ಸತತ ಎರಡನೇ ದಿನವು ಚಿನ್ನಾಭರಣ ಗಗನದತ್ತ ಮುಖ ಮಾಡಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಕೊಲ್ಲಿ ರಾಷ್ಟ್ರಗಳ ಯುದ್ಧ, ಜಾಗತಿಕ ಮತ್ತು ರಾಜತಾಂತ್ರಿಕ ಬೆಳವಣಿಗೆ ಹಾಗೂ ಅಮೆರಿಕಾ ಆರ್ಥಿಕ ಪ್ರಭಾವವು ಚಿನ್ನ-ಬೆಳ್ಳಿ ಲೋಹಗಳ ದರ ಬದಲಾವಣೆಗೆ ಪ್ರಮುಖ ಕಾರಣವಾಗಿವೆ. ಇಂದು ಬೆಳ್ಳಿಯ ದರವು ತಟಸ್ಥವಾಗಿದೆ. ಮುಂದಿನ ಒಂದು ವಾರ ಈ ಬಂಗಾರದ ಬೆಲೆ ಹೆಚ್ಚಾಗುವ ಲಕ್ಷಣಗಳು ಇವೆ.

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಳೆದ ಎರಡು ದಿನಗಳಿಂದ ಹಳದಿ ಲೋಹ ಚಿನ್ನಕ್ಕೆ ಬೇಡಿಕೆ ಇದೆ. ಆರ್ಥಿಕ ಅಸ್ಥಿರತೆ ನಡುವೆಯು ದರ ಹೆಚ್ಚಿಸಿಕೊಂಡಿದೆ. ಶನಿವಾರ 22ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ 45 ರೂಪಾಯಿ ಏರಿಕೆ ಆಗುವ ಮೂಲಕ 14,010 ರೂ. ತಲುಪಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಚಿನ್ನವು 49 ರೂ. ಹೆಚ್ಚಿಸಿಕೊಂಡು 15,284 ರೂ. ಮುಟ್ಟಿದೆ. ಇನ್ನೂ 18 ಗ್ರಾಂ ಚಿನ್ನಕ್ಕೆ 37 ರೂ.ಗೆ ಏರಿಕೆ ಆಗಿದ್ದು, 11,463 ರೂ.ಗೆ ಮಾರಾಟವಾಗಿದೆ.

Gold Prices

ಬೆಂಗಳೂರಿನ ದರದ ಮಾಹಿತಿ

* 24 ಕ್ಯಾರಟ್ ಚಿನ್ನ: 10 ಗ್ರಾಂ 24 ಕ್ಯಾರಟ್ ಚಿನ್ನಕ್ಕೆ ಬೆಂಗಳೂರಿನಲ್ಲಿಂದು 1,52,840 ರೂಪಾಯಿ ಇದೆ, ನೆನ್ನೆಗೆ ಇದರ ಬೆಲೆ 1,52,350 ರೂ.ನಷ್ಟಿತ್ತು. ಒಂದೇ ದಿನಕ್ಕೆ 490 ರೂ. ಹೆಚ್ಚಳ ಕಂಡಿದೆ.

* 22 ಕ್ಯಾರಟ್ ಚಿನ್ನ: 10 ಗ್ರಾಂ 22 ಕ್ಯಾರಟ್ ಬಂಗಾರಕ್ಕೆ ಬೆಂಗಳೂರಿನಲ್ಲಿಂದು 1,40,100 ರೂಪಾಯಿ ಇದೆ, ನೆನ್ನೆಗೆ ಅದರ ಬೆಲೆ 1,39,650 ರೂ.ನಷ್ಟಿತ್ತು. ಒಂದೇ ದಿನಕ್ಕೆ 360 ರೂ. ಏರಿಕೆ ಆಗಿದೆ.

* 18 ಕ್ಯಾರಟ್ ಬಂಗಾರ: ಈ ಬಂಗಾರದ 10 ಗ್ರಾಂ ದರಕ್ಕೆ 370 ರೂ. ಏರಿಕೆ ಆಗಿದ್ದು, 1,14, 630 ರೂಪಾಯಿ ತಲುಪಿದೆ.

ಹಿಂದಿನ ಒಂದು ವಾರದಲ್ಲಿ ದರ ಏರಿಕೆ ಮತ್ತು ಇಳಿಕೆ ನಿರಂತರವಾಗಿ ಸಂಭವಿಸಿದೆ. ಇಳಿಕೆಗಿಂತ ಏರಿಕೆ ಜಾಸ್ತಿ ದಾಖಲಾಗಿದೆ. ಇರಾನ್ ಮೇಲೆ ಕೈಗೊಂಡಿದ್ದ ಇಸ್ರೇಲ್-ಯುಎಸ್ ಜಂಟಿ ವೈಮಾನಿಕ ಹಾಗೂ ಇತರ ದಾಳಿ ಎರಡು ವಾರದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಕದನ ವಿರಾಮ ಘೋಷಣೆ ಆಗುತ್ತಿದ್ದಂತೆ ಷೇರುಪೇಟೆ ಚೇತರಿಕೆಯ ಹಾದಿ ಹಿಡಿದಿತ್ತು. ಅದರ ಬೆನ್ನಲ್ಲೆ ಚಿನ್ನದ ಬೆಲೆಯು ಹೆಚ್ಚುತ್ತಾ ಸಾಗಿದೆ.

ಬೆಳ್ಳಿ ದರ ಎಷ್ಟಿದೆ?

ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ, ಹೆಚ್ಚಳ ಕಾಣದೇ ತಟಸ್ಥವಾಗಿದೆ. 100 ಗ್ರಾಂ ಬೆಳ್ಳಿಗೆ 26000 ರೂ. ಇದ್ದರೆ, 01 ಕೆಜಿ ಬೆಳ್ಳಿಯ ದರ ಬರೋಬ್ಬರಿ 2,60,000 ರೂಪಾಯಿ ಇದೆ. ಕೆಲ ವಾರಗಳ ಹಿಂದೆ 2,50,000 ರೂ.ಗೆ ಕುಸಿದು ಮತ್ತೆ ಬೆಲೆಯಲ್ಲಿ ಪ್ರಗತಿ ಸಾಧಿಸಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/business/gold-prices-jump-again-in-bengaluru-24k-crosses-rs-1-52-lakh-silver-rates-steady-latest-update-450097.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo