
Business
oi-Shankrappa Parangi
ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಇವತ್ತು ಫೆಬ್ರವರಿ 11ರಂದು ಸಹ ಹಾವು ಏಣಿ ಆಟ ಮುಂದುವರಿದಿದೆ. ಚಿನ್ನಾಭರಣ ಕೊಳ್ಳುವ ಗ್ರಾಹಕರಿಗೆ ದರ ಇಳಿಕೆಯು ಖುಷಿ ಸುದ್ದಿ ನೀಡಿದಂತಾಗಿದೆ. ನೆನ್ನೆ ಮಂಗಳಾವಾರ ಇಳಿಕೆ ಆಗಿದ್ದ ಬೆಳ್ಳಿ ದರದಲ್ಲಿ ಇಂದು ಯಥಾಸ್ಥಿತಿ ಮುಂದುವರಿದಿದೆ. ಒಂದು ಕೆಜಿ ಬೆಳ್ಳಿಗೆ 2,90,000 ರೂಪಾಯಿ ಇದೆ. ದರ ಹೆಚ್ಚಿಸಿಕೊಂಡ ಬಂಗಾರದ ಇಂದಿನ ಅಪ್ಡೇಟ್ ಮಾಹಿತಿ ಇಲ್ಲಿದೆ.
ಯುಎಸ್ ಡಾಲರ್ ಮೌಲ್ಯ ಕುಸಿತ, ಸುಂಕ ನೀತಿ, ಯುದ್ಧ, ಕೇಂದ್ರ ಬ್ಯಾಂಕ್‌ಗಳ ಖರೀದಿ ಹಾಗೂ ಇನ್ನಿತರ ಕಾರಣಗಳಿಂದ ನಿರಂತರವಾಗಿ ಹೆಚ್ಚಾಗಿದ್ದ ಚಿನ್ನ-ಬೆಳ್ಳಿ ದರವು ಕ್ರಮೇಣ ಇಳಿಕೆ ಆಗುತ್ತಿದೆ. ಇಂದು 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ 27 ರೂಪಾಯಿ, 24 ಕ್ಯಾರಟ್ ಒಂದು ಚಿನ್ನವು 25 ರೂಪಾಯಿ ಹಾಗೂ 18 ಕ್ಯಾರಟ್ ಚಿನ್ನದ ಒಂದು ಗ್ರಾಂಗೆ 20 ರೂಪಾಯಿ ಕುಸಿತವಾಗಿದೆ.

22 ಕ್ಯಾರಟ್ 10 ಗ್ರಾಂ ಚಿನ್ನವು 250 ರೂಪಾಯಿ ದರ ಇಳಿಕೆಯಾಗಿ 1,45,300 ರೂಪಾಯಿ ತಲುಪಿತು. 24 ಕ್ಯಾರಟ್ ಹತ್ತು ಗ್ರಾಂಗೆ 270 ರೂಪಾಯಿ ಕುಸಿತು 1,58,510 ರೂಪಾಯಿ ಮುಟ್ಟಿದೆ. 18 ಕ್ಯಾರಟ್ ನ 10 ಗ್ರಾಂ ಬಂಗಾರದ ದರ ಇಂದು 1,18,890 ರೂಪಾಯಿ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆ ಆಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ನಗರವಾರು 22 ಕ್ಯಾರಟ್ 10 ಗ್ರಾಂ ದರಪಟ್ಟಿ
ಚೆನ್ನೈ: 14,600 ರೂಪಾಯಿ
ಮುಂಬೈ: 14,530 ರೂಪಾಯಿ
ದೆಹಲಿ: 14,545 ರೂಪಾಯಿ
ಕೊಲ್ಕತ್ತಾ: 14,530 ರೂಪಾಯಿ
ಬೆಂಗಳೂರು: 14,530 ರೂಪಾಯಿ
ಹೈದರಾಬಾದ್: 14,530 ರೂಪಾಯಿ
ಕೇರಳ: 14,530 ರೂಪಾಯಿ
ಪುಣೆ: 14,530 ರೂಪಾಯಿ
ವಡೋದರ: 14,535 ರೂಪಾಯಿ
ನಗರವಾರು 24 ಕ್ಯಾರಟ್ 10 ಗ್ರಾಂ ದರಪಟ್ಟಿ
ಚೆನ್ನೈ: 15,928 ರೂಪಾಯಿ
ಮುಂಬೈ: 15,851 ರೂಪಾಯಿ
ದೆಹಲಿ: 15,866 ರೂಪಾಯಿ
ಕೊಲ್ಕತ್ತಾ: 15,851 ರೂಪಾಯಿ
ಬೆಂಗಳೂರು: 15,851 ರೂಪಾಯಿ
ಹೈದರಾಬಾದ್: 15,851 ರೂಪಾಯಿ
ಕೇರಳ: 15,851 ರೂಪಾಯಿ
ಪುಣೆ:15,851 ರೂಪಾಯಿ
ವಡೋದರ: 15,866 ರೂಪಾಯಿ
Disclaimer: This content was automatically imported from a third-party source via RSS feed. The original source is: https://kannada.oneindia.com/news/business/gold-price-drops-in-india-on-feb-11-2026-22k-at-rs-1-45-300-per-10g-silver-steady-at-rs-2-9-lakh-443319.html. xn--babytilbehr-pgb.com does not claim ownership of this content. All rights remain with the original publisher.

