Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ | Gold Price Today in Bengaluru 24K Gold at 16364 per Gram Silver Hits 2 Lakh per Kg Know details

Business

oi-Manohara M

ಸಿಲಿಕಾನ್ ಸಿಟಿಯಲ್ಲಿ ಚಿನ್ನದ ಬೆಲೆಯು ಗಗನಕ್ಕೇರಿದ್ದು, ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ದರಗಳು ನಿರಂತರವಾಗಿ ಇಳಿಕೆ ಕಂಡಿತ್ತು. ಆದರೆ ಶನಿವಾರ ದರ ದಿಢೀರ್‌ ಏರಿಕೆ ಕಾಣುವ ಶಾಕ್‌ ನೀಡಿದೆ. ಬೆಂಗಳೂರಿನಲ್ಲಿ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಕಾಣಿಸಿಲ್ಲ. 24 ಕ್ಯಾರೆಟ್‌, 22 ಕ್ಯಾರೆಟ್‌ ಹಾಗೂ 18 ಕ್ಯಾರೆಟ್‌ ಚಿನ್ನದ ದರಗಳು ನಿನ್ನೆ ಇದ್ದ ಮಟ್ಟದಲ್ಲೇ ಮುಂದುವರಿದಿವೆ. ಬೆಂಗಳೂರಿನಲ್ಲಿ ಇಂದಿನ ಅಧಿಕೃತ ಚಿನ್ನದ ದರದ ವಿವರ ಇಲ್ಲಿ ತಿಳಿಯಿರಿ.

ನಿನ್ನೆಯ ದರವೇ ಮುಂದುವರಿಕೆ

24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ₹16,364ರಂತೆ ಮಾರಾಟವಾಗುತ್ತಿದೆ. ಇದನ್ನು ಹೂಡಿಕೆಗಾಗಿ ಬಳಸುವ ಶುದ್ಧ ಬಂಗಾರ ಅಥವಾ ಅಪರಂಜಿ ಎನ್ನಲಾಗುತ್ತದೆ. 22 ಕ್ಯಾರೆಟ್ ಚಿನ್ನ ಆಭರಣ ತಯಾರಿಕೆಯಲ್ಲಿ ಬಳಸುವ ಈ ಬಂಗಾರದ ಬೆಲೆ ಪ್ರತಿ ಗ್ರಾಂಗೆ ₹15,000 ತಲುಪಿದೆ. ಇನ್ನು ಹರಳು ಮತ್ತು ವಜ್ರದ ಆಭರಣಗಳಿಗೆ ಬಳಸುವ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹12,273ರಷ್ಟಿದೆ.

Gold Price

24 ಕ್ಯಾರೆಟ್‌ ಚಿನ್ನದ ದರ

1 ಗ್ರಾಂ-₹16,364
8 ಗ್ರಾಂ-₹1,30,912
10 ಗ್ರಾಂ-₹1,63,640
100 ಗ್ರಾಂ-₹16,36,400

22 ಕ್ಯಾರೆಟ್‌ ಚಿನ್ನದ ದರ

1 ಗ್ರಾಂ-₹15,000
8 ಗ್ರಾಂ-₹1,20,000
10 ಗ್ರಾಂ-₹1,50,000
100 ಗ್ರಾಂ-₹15,00,000

18 ಕ್ಯಾರೆಟ್‌ ಚಿನ್ನದ ದರ

1 ಗ್ರಾಂ-₹12,273
8 ಗ್ರಾಂ-₹98,184
10 ಗ್ರಾಂ-₹1,22,730
100 ಗ್ರಾಂ-₹12,27,300

ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರ (1 ಗ್ರಾಂ)

ದಿನಾಂಕ: 24 ಕ್ಯಾರೆಟ್: 22 ಕ್ಯಾರೆಟ್

ಮಾರ್ಚ್ 08: ₹16,364 ; ₹15,000
ಮಾರ್ಚ್ 07: ₹16,364 ; ₹15,000
ಮಾರ್ಚ್ 06: ₹16,113 ; ₹14,770
ಮಾರ್ಚ್ 05: ₹16,288 ; ₹14,930
ಮಾರ್ಚ್ 04: ₹16,451 ; ₹15,080
ಮಾರ್ಚ್ 03, ₹16,762 ; ₹15,365
ಮಾರ್ಚ್ 02: ₹17,051 ; ₹15,630
ಮಾರ್ಚ್ 01: ₹17,309 ; ₹15,865
ಫೆಬ್ರವರಿ 28: ₹16,871 ; ₹15,465
ಫೆಬ್ರವರಿ 27: ₹16,157 ; ₹14,810

ಬೆಳ್ಳಿ-ಪ್ಲಾಟಿನಂ ದರ ಎಷ್ಟಿದೆ?

ಬೆಂಗಳೂರಿನಲ್ಲಿ ಇಂದಿನ ಮಾರುಕಟ್ಟೆ ದರದಂತೆ ಅಮೂಲ್ಯ ಲೋಹಗಳ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಆಭರಣ ಪ್ರಿಯರ ನೆಚ್ಚಿನ ಪ್ಲಾಟಿನಂ ದರವು ಪ್ರತಿ ಗ್ರಾಂಗೆ ₹6,340 ರಷ್ಟಿದ್ದು, 10 ಗ್ರಾಂ ಪ್ಲಾಟಿನಂ ಖರೀದಿಸಲು ₹63,400 ವ್ಯಯಿಸಬೇಕಾಗುತ್ತದೆ. ಇನ್ನು ಬೆಳ್ಳಿಯ ಬೆಲೆಯು ಕೂಡ ಏರುಗತಿಯಲ್ಲಿದ್ದು, ಪ್ರತಿ ಗ್ರಾಂಗೆ ₹285 ರಂತೆ ಮಾರಾಟವಾಗುತ್ತಿದೆ. ಇದರೊಂದಿಗೆ ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆಯು ₹2,85,000 ತಲುಪಿ ದಾಖಲೆ ಬರೆದಿದೆ.

ಕಳೆದ ಕೆಲವು ದಿನಗಳಿಂದ ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಂದಾಗಿ ಚಿನ್ನದ ದರಗಳು ನಿರಂತರವಾಗಿ ಇಳಿಕೆ ಕಂಡಿದ್ದವು. ಈ ಇಳಿಕೆಯು ಗ್ರಾಹಕರಲ್ಲಿ ಹಬ್ಬದ ಸೀಸನ್ ಮತ್ತು ಮದುವೆ ಸಮಾರಂಭಗಳಿಗೆ ಖರೀದಿ ಮಾಡಲು ಭರವಸೆ ಮೂಡಿಸಿತ್ತು. ಆದರೆ ಶನಿವಾರ ದರ ದಿಢೀರ್‌ ಏರಿಕೆ ಕಾಣುವ ಮೂಲಕ ಗ್ರಾಹಕರಿಗೆ ದೊಡ್ಡ ಶಾಕ್‌ ನೀಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆಗಳು ಮತ್ತು ಹೂಡಿಕೆದಾರರ ಬೇಡಿಕೆಯಿಂದಾಗಿ ಬೆಲೆ ಏರಿಕೆ ಮುಂದುವರಿದಿದೆ. ಆಭರಣ ಖರೀದಿದಾರರು ಈ ಮೂಲ ಬೆಲೆಯ ಮೇಲೆ ಜಿಎಸ್‌ಟಿ (GST) ಮತ್ತು ತಯಾರಿಕಾ ವೆಚ್ಚವನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/business/gold-price-today-in-bengaluru-24k-gold-at-16364-per-gram-silver-hits-2-lakh-per-kg-know-details-446355.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo