Gold Rate April 8: ಯುದ್ಧ ನಿಂತ ಬೆನ್ನಲ್ಲೇ ಚಿನ್ನ – ಬೆಳ್ಳಿ ಬೆಲೆ ಭಾರೀ ಹೆಚ್ಚಳ, ಎಷ್ಟಿದೆ ಇಂದಿನ ಚಿನ್ನದ ಬೆಲೆ | Gold Rate April 8: Gold, Silver Prices Surge After War Ends; Check Today’s Rates

Business

-Hitesh Y

Gold Rate April 8: ಸತತ ಮೂರು ವಾರಗಳ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಯು ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಿದೆ. ಇರಾನ್ – ಅಮೆರಿಕ, ಇಸ್ರೇಲ್ ನಡುವಿನ ಯುದ್ಧವು ತಾರ್ಕಿಕ ಅಂತ್ಯ ಕಾಣುವ ಲಕ್ಷಣ ಕಾಣಿಸುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಇರಾನ್ ಮೇಲಿನ ಯುದ್ಧಕ್ಕೆ 2 ಕದನ ವಿರಾಮ ಘೋಷಣೆ ಮಾಡುತ್ತಿದ್ದಂತೆಯೇ ಕಚ್ಚಾ ತೈಲದ ಬೆಲೆ ಭರ್ಜರಿ ಕುಸಿತ ಕಂಡಿದೆ. ಅಲ್ಲದೆ ಚಿನ್ನ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ಏಪ್ರಿಲ್ 08ರಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಾಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆಯೇ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

24 ಕ್ಯಾರೆಟ್ ಚಿನ್ನದ ಬೆಲೆ: ಏಪ್ರಿಲ್ 8ರ ಬುಧವಾರ 24 ಕ್ಯಾರೆಟ್ ಚಿನ್ನದ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 15,382 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,53,820 ರೂ. ಆಗಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ 24 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 398 ರೂಪಾಯಿ ಹಾಗೂ 10 ಗ್ರಾಂಗೆ 3,980 ರೂ. ಆಗಿದೆ.

Gold Rate April 8

22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭಾರೀ ಹೆಚ್ಚಳವಾಗಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 14,100 ರೂ. ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,41,000 ರೂ. ಆಗಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 365 ರೂಪಾಯಿ ಹಾಗೂ 10 ಗ್ರಾಂನ ಮೇಲೆ 3,650 ರೂಪಾಯಿ ಹೆಚ್ಚಳವಾಗಿದೆ.

18 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 24 ಕ್ಯಾರೆಟ್ ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆಯಂತೆಯೇ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭಾರೀ ಹೆಚ್ಚಳವಾಗಿದೆ. 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 11,537 ರೂ. ಹಾಗೂ 10 ಗ್ರಾಂನ ಮೇಲೆ 1,15,370 ರೂ. ಆಗಿದೆ. 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 299 ರೂ. ಹಾಗೂ 10 ಗ್ರಾಂನ ಮೇಲೆ 2,990 ರೂಪಾಯಿ ಹೆಚ್ಚಳವಾಗಿದೆ.

Gold Rate April 8: ಬೆಳ್ಳಿ ಬೆಲೆ ಎಷ್ಟಾಗಿದೆ ?

ಚಿನ್ನದೊಂದಿಗೆ ಬೆಳ್ಳಿಯ ಬೆಲೆಯಲ್ಲೂ ಭರ್ಜರಿ ಹೆಚ್ಚಳವಾಗಿದೆ. ಒಂದು ಗ್ರಾಂ ಬೆಳ್ಳಿ ಬೆಲೆಯು 260 ರೂಪಾಯಿ ಹಾಗೂ ಒಂದು ಕೆ.ಜಿ ಬೆಳ್ಳಿ ಬೆಲೆಯು 2.60 ಲಕ್ಷ ರೂ. ಆಗಿದೆ. ಕಳೆದ ಮೂರು ದಿನಗಳಿಂದಲೂ ತಟಸ್ಥವಾಗಿದ್ದ ಬೆಳ್ಳಿ ಬೆಲೆಯು ಏಪ್ರಿಲ್ 8ರ ಬುಧವಾರ ಭರ್ಜರಿ ಹೆಚ್ಚಳವಾಗಿದೆ.

ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳ ಸಾಧ್ಯತೆ

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆ ತಾರ್ಕಿಕ ಅಂತ್ಯ ಅಥವಾ ಮುಗಿಯುವ ಲಕ್ಷಣಗಳು ಕಾಣಿಸುತ್ತಿವೆ. ಮಾರ್ಚ್ ಮೊದಲ ವಾರದಲ್ಲಿ ಪ್ರಾರಂಭವಾದ ಈ ಯುದ್ಧವು ಬರೋಬ್ಬರಿ 5 ವಾರಗಳ ಕಾಲ ನಡೆದಿದೆ. ಈ ಐದು ವಾರಗಳ ಅವಧಿಯಲ್ಲಿ ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಸಂಕಷ್ಟವನ್ನು ಅನುಭವಿಸಿವೆ. ಈ ಮೊದಲೇ ಅಂದಾಜಿಸಿದಂತೆಯೇ ಯುದ್ಧ ಮುಕ್ತಾಯವಾಗುವ ಸಮಯಕ್ಕೆ ಚಿನ್ನ ಮತ್ತು ಬೆಳ್ಳಿ ಬೆಲೆಯು ಹೆಚ್ಚಳವಾಗುತ್ತಿದೆ. ಸಂಪೂರ್ಣ ಕದನ ವಿರಾಮ ಘೋಷಣೆಯಾದರೆ ಚಿನ್ನ ಮತ್ತು ಬೆಳ್ಳಿ ಬೆಲೆಯು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/business/gold-rate-april-8-gold-silver-prices-surge-after-war-ends-check-today-s-rates-011-449749.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo