Gold Rate Feb 16: ಚಿನ್ನದ ಬೆಲೆ 13,100 ರೂ., ಬೆಳ್ಳಿ ಬೆಲೆ 7,000 ರೂ. ಭರ್ಜರಿ ಇಳಿಕೆ, ಇಂದಿನ ಚಿನ್ನ – ಬೆಳ್ಳಿ ಬೆಲೆ | Gold Rate Feb 16: Gold 13,100 Rs, Silver 7,000 Rs Price Drop Today Gold Price India Gold and Silver Rate

Business

oi-Hitesh Y

Gold Rate Feb 16: ಚಿನ್ನದ ಬೆಲೆಯು ಸೋಮವಾರದಂದು ಭರ್ಜರಿ ಇಳಿಕೆಯಾಗಿದೆ. ಕಳೆದ ಒಂದು ವಾರದಿಂದಲೂ ಅಲ್ಪ ಪ್ರಮಾಣದಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಿತ್ತು. ಆದರೆ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿದೆ. ಕಳೆದ ಮೂರು ತಿಂಗಳಿನಿಂದಲೂ ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತ ಕಂಡು ಬರುತ್ತಿತ್ತು. ಆದರೆ ಇದೀಗ ಜಗತ್ತಿನಾದ್ಯಂತ ಶಾಂತಿಯ ವಾತಾವರಣ ನಿರ್ಮಾಣವಾಗುತ್ತಿರುವುದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಒಟ್ಟಾರೆ ಚಿನ್ನದ ಬೆಲೆಯಲ್ಲಿ ಸೋಮವಾರ ಫೆಬ್ರವರಿ 16ರಂದು ಭರ್ಜರಿ 13,100 ರೂ. ಇಳಿಕೆಯಾಗಿದೆ. ಫೆಬ್ರವರಿ 13ರ ಚಿನ್ನ ಮತ್ತು ಬೆಳ್ಳಿ ಬೆಲೆಯ ಸಂಪೂರ್ಣ ವಿವರ ಇಲ್ಲಿದೆ.

24 ಕ್ಯಾರೆಟ್ ಚಿನ್ನದ ಬೆಲೆ: ಸೋಮವಾರ ಫೆಬ್ರವರಿ 16ರಂದು ಚಿನ್ನದ ಬೆಲೆಯು ಭರ್ಜರಿ ಇಳಿಕೆಯಾಗಿದೆ. 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 15,644 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,56,440 ರೂಪಾಯಿ ಆಗಿದೆ. ವಾರಾಂತ್ಯಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯು 1 ಗ್ರಾಂನ ಮೇಲೆ 131 ರೂಪಾಯಿ ಹಾಗೂ 10 ಗ್ರಾಂನ ಮೇಲೆ ಬರೋಬ್ಬರಿ 1,310 ರೂಪಾಯಿ ಇಳಿಕೆಯಾಗಿದೆ.

Gold Rate Feb 16

22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 14,340 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,43,400 ರೂ. ಆಗಿದೆ. ವಾರಾಂತ್ಯಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 120 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು ಭರ್ಜರಿ 1,200 ರೂಪಾಯಿ ಕಡಿಮೆಯಾಗಿದೆ.

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಭರ್ಜರಿ ಇಳಿಕೆಯಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 11,733 ರೂಪಾಯಿ ಆಗಿದೆ. 18 ಕ್ಯಾರೆಟ್ ಚಿನ್ನದ 10 ಗ್ರಾಂನ ಬೆಲೆಯು 1,17,330 ರೂ. ಆಗಿದೆ. ವಾರಾಂತ್ಯಕ್ಕೆ ಹೋಲಿಕೆ ಮಾಡಿದರೆ 18 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂನ ಮೇಲೆ 98 ರೂಪಾಯಿ ಹಾಗೂ 10 ಗ್ರಾಂನ ಮೇಲೆ 980 ರೂಪಾಯಿ ಕಡಿಮೆಯಾಗಿದೆ.

ಬರೋಬ್ಬರಿ 13,100 ರೂಪಾಯಿ ಇಳಿಕೆ

ಚಿನ್ನದ ಬೆಲೆ ಇಳಿಕೆ: 24 ಕ್ಯಾರೆಟ್ ಚಿನ್ನದ 100 ಗ್ರಾಂನ ಮೇಲೆ ಬರೋಬ್ಬರಿ 13,100 ರೂಪಾಯಿ ಕಡಿಮೆಯಾಗಿದೆ. ಚಿನ್ನದೊಂದಿಗೆ ಬೆಳ್ಳಿ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ.

ಬೆಳ್ಳಿ ಬೆಲೆ ಎಷ್ಟಾಗಿದೆ ?

ಇನ್ನು ಬೆಳ್ಳಿ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಭರ್ಜರಿ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಒಂದು ಗ್ರಾಂಗೆ 268 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 2,68,000 ರೂ. ಆಗಿದೆ. ವಾರಾಂತ್ಯಕ್ಕೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಬೆಳ್ಳಿ ಬೆಲೆಯು 7 ರೂಪಾಯಿ ಕಡಿಮೆಯಾಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು ಬರೋಬ್ಬರಿ 7,000 ರೂ. ಇಳಿಕೆಯಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/business/gold-rate-feb-16-gold-13100-rs-silver-7000-rs-price-drop-today-gold-price-india-gold-and-silver-rate-443903.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo