
Business
oi-Shankrappa Parangi
Gold Price Today: ಮಾರ್ಚ್ ತಿಂಗಳಿನಲ್ಲಿ ದಾಖಲೆ ಮಟ್ಟದಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ ಆಗಿದೆ. ಕಳೆದ ಒಂದು ವಾರದಲ್ಲಿ ಒಂದೇ ದಿನ ಮಾತ್ರವೇ ಈ ಲೋಹಗಳ ದರ ಏರಿಕೆ ಆಗಿದ್ದು, ಉಳಿದಂತೆ ಕಳೆದ ನಾಲ್ಕು ದಿನಗಳಿಂದ ಸತತವಾಗಿ ದರ ಇಳಿಕೆ ಆಗಿದೆ. ಇಂದು ಭಾನುವಾರ 22 ಕ್ಯಾರಟ್ ಒಂದು ಗ್ರಾಂ ಚಿನ್ನಕ್ಕೆ 13,380 ರೂ. ಮತ್ತು 24 ಕ್ಯಾರಟ್ 14,597 ರೂ.ಗೆ ಇಳಿಕೆ ಆಗಿದೆ. ಯುದ್ಧಗಳು ಸೇರಿ ಜಾಗತಿಕ ಬೆಳವಣಿಗೆ ನಡುವೆಯೂ ಚಿನ್ನ-ಬೆಳ್ಳಿ ದರ ತೀವ್ರವಾಗಿ ಕುಸಿದಿವೆ.
ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ನಾನಾ ಮಾರುಕಟ್ಟೆಗಳಲ್ಲಿ ಈ ಲೋಹಗಳ ದರವು ಸದ್ಯಕ್ಕೆ ಹೆಚ್ಚಾಗುವ ಮುನ್ಸೂಚನೆ ಇಲ್ಲ. ಕಳೆದ ವಾರ 300 ರೂಪಾಯಿಯಷ್ಟು ಹೆಚ್ಚಾಗಿದ್ದು ಬಿಟ್ಟರೆ ಮತ್ತೆ ಹೆಚ್ಚಾಗದೇ ಇಳಿಕೆಯ ಹಾದಿಯೇ ಹಿಡಿದಿದೆ. ನೆನ್ನೆ ಶನಿವಾರ (ಮಾ.21) 24ಕ್ಯಾರಟ್ ಒಂದು ಗ್ರಾಂ ಚಿನ್ನಕ್ಕೆ 294 ರೂಪಾಯಿ, 22 ಕ್ಯಾರಟ್ ಒಂದು ಗ್ರಾಂ 275 ರೂಪಾಯಿ ಇಳಿಕೆ ಆಗಿತ್ತು. 18 ಕ್ಯಾರಟ್ನ ಒಂದು ಗ್ರಾಂ ಬಂಗಾರಕ್ಕೆ 10,948 ರೂಪಾಯಿ ಇದೆ. ಇಂದು ಭಾನುವಾರ ಚಿನ್ನ ಬೆಳ್ಳಿ ದರದಲ್ಲಿ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

ಬೆಳ್ಳಿ ದರದಲ್ಲಿ ಭಾರೀ ಬದಲಾವಣೆ
ಮಾರ್ಚ್ 2ರಂದು ಒಂದು ಕೆಜಿಗೆ 3,15,000 ರೂಪಾಯಿ ಇತ್ತು. ಮಾರ್ಚ್ 4ಕ್ಕೆ 2,85,000 ರೂ.ಗೆ ಇಳಿಯಿತು. ಅಲ್ಲಿಂದ ಹತ್ತು ದಿನಕ್ಕೆ (ಮಾ.16) 2,70,000 ರೂ.ಗೆ ಕುಸಿಯಿತು. ಮೊನ್ನೆ ಮಾರ್ಚ್ 20ರಂದು ಶುಕ್ರವಾರ 2,55,000ಗೆ ಇಳಿಯಿತು. ಇಂದು ಮಾರ್ಚ್ 22ರಂದು 2,45,000 ರೂ.ಗೆ ಇಳಿದಿದ್ದು, ಇಂದು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ನಗರವಾರು 22ಕೆ 10 ಗ್ರಾಂ ಚಿನ್ನದ ಬೆಲೆ
ದೆಹಲಿ: 1,33,950 ರೂಪಾಯಿ
ಮುಂಬೈ: 1,33,800
ಚೆನ್ನೈ: 1,36,800
ಬೆಂಗಳೂರು: 1,33,800
ಕೊಲ್ಕತ್ತ: 1,33,800
ಹೈದರಾಬಾದ್: 1,33,800
ನಗರವಾರು 24ಕೆ 10 ಗ್ರಾಂ ಚಿನ್ನದ ಬೆಲೆ
ದೆಹಲಿ: 1,46, 120 ರೂಪಾಯಿ
ಮುಂಬೈ: 1,45,970 ರೂಪಾಯಿ
ಚೆನ್ನೈ: 1,48, 580 ರೂಪಾಯಿ
ಬೆಂಗಳೂರು: 1,45,970 ರೂಪಾಯಿ
ಕೊಲ್ಕತ್ತ: 1,45,970 ರೂಪಾಯಿ
ಹೈದರಾಬಾದ್: 1,45,970 ರೂಪಾಯಿ
ಇಂದಿನ ಬೆಳ್ಳಿ ದರ
ಬೆಳ್ಳಿ ಒಂದು ಗ್ರಾಂ: 245 ರೂಪಾಯಿ
ಬೆಳ್ಳಿ ಒಂದು ಕೆಜಿ”: 2,45,000 ರೂಪಾಯಿ
Disclaimer: This content was automatically imported from a third-party source via RSS feed. The original source is: https://kannada.oneindia.com/news/business/gold-silver-price-today-march-22-record-drop-in-silver-prices-gold-rates-stable-in-bengaluru-447943.html. xn--babytilbehr-pgb.com does not claim ownership of this content. All rights remain with the original publisher.
