GST: ಕಾಂಗ್ರೆಸ್ ಜನರ ಪರವೋ ಅಥವಾ ಹೆಚ್ಚಿನ ತೆರಿಗೆ ದರದ ಪರವೋ? ಮಾಜಿ ಸಿಎಂ ನೇರ ಪ್ರಶ್ನೆ | Basavaraj Bommai Challenges CM Siddaramaiah: Prove the rs 10,000 Crore GST Dues Claim, Details

Karnataka

oi-Shankrappa Parangi

ಬೆಂಗಳೂರು: ಕೇಂದ್ರ ಸರ್ಕಾರದಿಂದ 10,000 ಕೋಟಿ ರೂಪಾಯಿ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಯಿಂದ ಬರಬೇಕು ಎಂದು ಸುಳ್ಳು ಹೇಳಿದ್ದಾರೆ. ಪ್ರತಿ ತಿಂಗಳು ಜಿಎಸ್ ಟಿ ಯಿಂದ ಪಾಲು ರಾಜ್ಯಕ್ಕೆ ಬರುವುದು ಬರುತ್ತದೆ. ಕಾಂಗ್ರೆಸ್ ಜಿಎಸ್ ಟಿ ಕಡಿಮೆ ಮಾಡಿರುವುದನ್ನು ಒಪ್ಪಿ ಜನರ ಪರ ಇದಿಯಾ ಅಥವಾ ಹೆಚ್ಚಿನ ದರದ ಪರ ಇದಿಯಾ? ಎನ್ನುವುದನ್ನು ತಿಳಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಮಾತನಾಡಿ ಬಿಜೆಪಿ ವಿರುದ್ಧ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಎಸ್ ಜಿಎಸ್ ಟಿ ಯಿಂದ ಶೇಕಡಾ 50ರಷ್ಟು ಸಿ ಜಿಎಸ್ ಟಿ ಯಿಂದ ಶೇ. 40ರಷ್ಟು ಬರುತ್ತದೆ. 10 ಸಾವಿರ ಕೋಟಿ ಯಾವ ಬಾಬತ್ತಿನಲ್ಲಿ ಉಳಿದಿದೆ ಎಂಬ ವಿವರವನ್ನು ಸಿಎಂ ಸಿದ್ದರಾಮಯ್ಯ ಲೆಕ್ಕ ಕೊಡಬೇಕು. ಮುಖ್ಯಮಂತ್ರಿಗಳು ಮಾಹಿತಿ ನೀಡಿದರೆ ನ್ಯಾಯ ಸಮ್ಮತವಾಗಿ ರಾಜ್ಯಕ್ಕೆ ಬರುವ ಜಿಎಸ್ ಟಿ ಹಣವನ್ನು ಪಡೆಯಲು ನಮ್ಮ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

Basavaraj Bommai

ಜಿಎಸ್ ಟಿ ದರ ಇಳಿಕೆ ಮಾಡಿರುವುದರಲ್ಲಿ ಹಣ ಬರಬೇಕೆನ್ನುವುದು ಕಾಂಗ್ರೆಸ್ ನಿಲುವು ಇದ್ದರೆ, ವಸ್ತುಗಳ ಮೇಲಿನ ದರ ಕಡಿಮೆ ಮಾಡಬೇಕೆನ್ನುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿಲುವು. ಅದನ್ನು ಒಪ್ಪಿ ಕಾಂಗ್ರೆಸ್ ಜನರ ಪರ ಇದಿಯಾ ಅಥವಾ ಹೆಚ್ಚಿನ ದರದ ಪರ ಇದ್ದಾರ ಎನ್ನುವುದನ್ನು ತಿಳಿಲಿ ಎಂದು ಸವಾಲೆಸೆದರು.

ಜಿಎಸ್‌ಟಿ, ದರ ಕಡಿಮೆ ಮಾಡಿದ್ದು ಮರೆತೀರಾ?

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕೇಂದ್ರ ಸರ್ಕಾರ ಕೆಲವು ವಸ್ತುಗಳ ಮೇಲಿನ ಜಿಎಸ್ ಟಿ ದರವನ್ನು ಶೇಕಡಾ 18ರಿಂದ 5 ಕ್ಕೆ ಮತ್ತು ಶೇ.5 ರಿಂದ ಶೂನ್ಯಕ್ಕೆ ಇಳಿಸಿರುವುದನ್ನು ಮರೆತಿದ್ದಾರೆ. ಇದೆಲ್ಲ ಚುನಾವಣೆಯ ಸ್ಟಂಟ್. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು 2013 ರಿಂದ 2018 ರ ವರೆಗೆ ಮತ್ತು ಈಗಿನ ಅವಧಿಯಲ್ಲಿ ಒಟ್ಟು 5 ಲಕ್ಷ 55 ಸಾವಿರ ಕೋಟಿ ಸಾಲ ಮಾಡಿದ್ದು, ಅದು ಬಿಜೆಪಿಯದ್ದಲ್ಲಾ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸರ್ಕಾರದ ತಪ್ಪು ಮುಚ್ಚಿಕೊಳ್ಳಲು ಸಂಸದರ ಮೇಲೆ ಬೊಟ್ಟು

ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಅವರು, ರಾಜಕಿಯ ಲಾಭಕ್ಕಾಗಿ ತಂದಿರುವ ಗ್ಯಾರೆಂಟಿ ಅನುಷ್ಠಾನ ಮಾಡಲು ಮೊದಲನೆ ಬಜೆಟ್ ನಿಂದ ಸ್ಟಾಂಪ್ ಡ್ಯೂಟಿ, ಅಬಕಾರಿ ತೆರಿಗೆ,, ಮೊಟರ್ ವೆಹಿಕಲ್ ತೆರಿಗೆ ಹೆಚ್ಚಳ ಮಾಡಿದೆ. ತೆರಿಗೆ ಭಯೊತ್ಪಾದನೆ ಮಾಡಿರುವ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಕುಟುಕಿದರು.

ಹದಿನಾಲ್ಕನೇ ಹಣಕಾಸಿನ ಶರತ್ತುಗಳು ನಿರ್ಧಾರ ಮಾಡುವಾಗ. ನಿಮ್ಮದೇ ಸರ್ಕಾರ ಇತ್ತು ಮತ್ತು ಅದನ್ನು ಅಂತಿಮಗೊಳಿಸುವಾಗ ನಿಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರ ಇತ್ತು ಆಗ ಅದರಲ್ಲಿ ಐದು ಜನ ಕಾಂಗ್ರೆಸ್ಸಿನ ಸಚಿವರಿದ್ದರು. ಆಗ ಬಾಯಿ ಮುಚ್ಚಿಕೊಂಡು ಸುಮ್ಮನಿದ್ದು, ಈಗ ಅನ್ಯಾಯ ಆಗಿದೆ ಅನ್ನುವುದು ಬೂಟಾಟಿಕೆ ಅಲ್ಲವೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/basavaraj-bommai-challenges-cm-siddaramaiah-prove-the-rs-10-000-crore-gst-dues-claim-details-449223.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo