Hardik Pandya: ರಾಷ್ಟ್ರಧ್ವಜ ಹೊದ್ದುಕೊಂಡು ಪ್ರೇಯಸಿ ಜೊತೆ ಮಲಗಿದ್ದ ಹಾರ್ದಿಕ್ ಪಾಂಡ್ಯ ವಿರುದ್ಧ ದೂರು ದಾಖಲು | Complaint Against Hardik Over Alleged Disrespect to Indian Flag During T20 World Cup Celebration

Sports

oi-Madhusudhan KR

Hardik Pandya: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಜಯಗಳಿಸಿದ ನಂತರ, ಆಟಗಾರರು ಮೈದಾನದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದರು. ಈ ವೇಳೆ ಹಾರ್ದಿಕ್ ಪಾಂಡ್ಯ ಅವರು ಭಾರತದ ರಾಷ್ಟ್ರಧ್ವಜವನ್ನು ತಮ್ಮ ಹೆಗಲ ಮೇಲೆ ಹೊದ್ದುಕೊಂಡು, ಮೈದಾನದಲ್ಲಿ ತಮ್ಮ ಗೆಳತಿಯೊಂದಿಗೆ ಕುಣಿದಾಡಿ ನಂತರ ನೆಲದ ಮೇಲೆ ಮಲಗಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಇದೀಗ ಟಿ20 ವಿಶ್ವಕಪ್ ವಿಜಯದ ಸಂಭ್ರಮಾಚರಣೆಯ ವೇಳೆ ಭಾರತದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ ಎಂಬ ಆರೋಪದ ಮೇಲೆ ಕ್ರಿಕೆಟಿಗ ಹರ್ದಿಕ್ ಪಾಂಡ್ಯ ಅವರ ವಿರುದ್ಧ ಬೆಂಗಳೂರಿನ ಶಿವಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

Complaint Against Hardik Over Alleged Disrespect to Indian Flag During T20 World Cup Celebration

ವಕೀಲರ ಆರೋಪ ಏನು?

ಪುಣೆ ಮೂಲದ ವಕೀಲ ವಾಜಿದ್ ಖಾನ್ ಬಿದ್ಕರ್ ಅವರು ಈ ಪಾಂಡ್ಯ ವಿರುದ್ಧ ದೂರು ನೀಡಿದ್ದಾರೆ. ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆಯ ವೇಳೆ, ಹರ್ದಿಕ್ ಪಾಂಡ್ಯ ಅವರು ರಾಷ್ಟ್ರಧ್ವಜವನ್ನು ಹೆಗಲ ಮೇಲೆ ಹೊದ್ದುಕೊಂಡುಕೊಂಡು ತಮ್ಮ ಗೆಳತಿಯೊಂದಿಗೆ ಮಲಗಿ ಸಂಭ್ರಮಿಸಿದ್ದಾರೆ. ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ ಎಂದು ವಕೀಲರು ಆರೋಪಿಸಿದ್ದಾರೆ.

ಕಾನೂನಿನ ಅಡಿಯಲ್ಲಿ ಶಿಕ್ಷೆ

‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971’ರ (Prevention of Insults to National Honour Act, 1971) ಸೆಕ್ಷನ್ 2ರ ಅಡಿಯಲ್ಲಿ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಕಾಯ್ದೆಯಡಿ ತಪ್ಪಿತಸ್ಥರೆಂದು ಸಾಬೀತಾದರೆ, 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶವಿದೆ. ದೂರುದಾರರು ಶಿವಜಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಅದನ್ನು ಸ್ವೀಕರಿಸಿ ಪ್ರತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಕುಟುಂಬದ ಕುರಿತ ವದಂತಿಗಳು

ಇನ್ನೂ ಸಂಭ್ರಮಾಚರಣೆಯಲ್ಲಿ ಹರ್ದಿಕ್ ಅವರ ಸಹೋದರ ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಖುರಿ ಶರ್ಮಾ ಕಾಣಿಸಿಕೊಳ್ಳದಿರುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಶುಭಾಶಯ ಕೋರದಿರುವುದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. ಇದು ಕುಟುಂಬದ ನಡುವೆ ಬಿರುಕು ಮೂಡಿರಬಹುದು ಎಂದು ಚರ್ಚೆಯಾಗುತ್ತಿದೆ.

ಯಾವುದೇ ಪಂದ್ಯದಲ್ಲೂ ಕಾಣಿಸಿಕೊಳ್ಳದ ಕೃನಾಲ್

ಹಿಂದಿನ ಪಂದ್ಯಗಳು ಮತ್ತು ಪ್ರಮುಖ ಟೂರ್ನಿಗಳಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಬೆಂಬಲಿಸಲು ಕ್ರೀಡಾಂಗಣದಲ್ಲಿ ಸಕ್ರಿಯವಾಗಿರುತ್ತಿದ್ದ ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಖುರಿ ಶರ್ಮಾ ಅವರು, ಈ ಬಾರಿ ಟಿ20 ವಿಶ್ವಕಪ್‌ನ ಯಾವುದೇ ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ, ಭಾರತದ ಐತಿಹಾಸಿಕ ಗೆಲುವಿನ ನಂತರ ಕೃನಾಲ್ ಪಾಂಡ್ಯ ಯಾವುದೇ ರೀತಿಯ ಅಭಿನಂದನಾ ಸಂದೇಶವನ್ನು ನೀಡಿಲ್ಲ. ತಮ್ಮ ಸಹೋದರನ ಸಾಧನೆಯ ಬಗ್ಗೆ ಕೃನಾಲ್ ಅಥವಾ ಅವರ ಪತ್ನಿ ಪಂಖುರಿ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಂಚಿಕೊಳ್ಳದಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನದ ಬದಲಾವಣೆಗಳು, ವಿಶೇಷವಾಗಿ ಮಹಿಕಾ ಶರ್ಮಾ ಅವರೊಂದಿಗಿನ ನಂಟು ಮತ್ತು ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಅವರೊಂದಿಗಿನ ವಿಚ್ಛೇದನದ ನಂತರ ಈ ಅಂತರ ಉಂಟಾಗಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಕೃನಾಲ್ ಮತ್ತು ಪಂಖುರಿ ಅವರು ನತಾಶಾ ಮತ್ತು ಅಗಸ್ತ್ಯ ಅವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ.

ಕೃನಾಲ್ ಪಾಂಡ್ಯ ಅವರ ಗೈರುಹಾಜರಿ ಮತ್ತು ಮೌನದ ಬಗ್ಗೆ ಇದುವರೆಗೆ ಕುಟುಂಬದ ಕಡೆಯಿಂದ ಅಥವಾ ಆಟಗಾರರ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಇವೆಲ್ಲವೂ ಕೇವಲ ಅಭಿಮಾನಿಗಳ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿರುವ ಚರ್ಚೆಗಳಾಗಿವೆ. ಆದರೂ, ಹಿಂದೆ ಇಬ್ಬರೂ ಸಹೋದರರು ಒಟ್ಟಿಗೆ ಹಬ್ಬಗಳು ಮತ್ತು ಸಾಧನೆಗಳನ್ನು ಒಟ್ಟಿಗೆ ಆಚರಿಸುತ್ತಿದ್ದರು. ಈಗಿನ ಈ ಬದಲಾವಣೆ ಅವರ ನಡುವಿನ ಸಂಬಂಧದಲ್ಲಿ ಏನಾದರೂ ಬಿರುಕು ಉಂಟಾಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/sports/complaint-against-hardik-over-alleged-disrespect-to-indian-flag-during-t20-world-cup-celebration-446865.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo