India AI Impact Expo 2026: ನವದೆಹಲಿ ಭಾರತ್ ಮಂಟಪದಲ್ಲಿ ವಿಶ್ವದ ಅತಿ ದೊಡ್ಡ ಎಐ ಶೃಂಗಸಭೆ, ಏನಿದರ ವಿಶೇಷ | India AI Impact Expo 2026: World’s Largest AI Summit Bharat Mandapam India What Special

India

oi-Hitesh Y

ವಿಶ್ವದ ಅತ್ಯಂತ ದೊಡ್ಡ ಎಐ ಶೃಂಗಸಭೆ ಭಾರತದ ನವದೆಹಲಿಯಲ್ಲಿ ಇಂದಿನಿಂದ ಪ್ರಾರಂಭವಾಗಿದೆ. ವಿಶ್ವದಾದ್ಯಂತ ಎಐ ಕೃತಕ ಬುದ್ಧಿಮತ್ತೆ (Artificial Intelligence) ದಾಪುಗಾಲು ಇರಿಸುತ್ತಿರುವಾಗಲೇ ಭಾರತವು ಇದಕ್ಕೊಂದು ಭದ್ರ ಬುನಾದಿಯನ್ನು ಹಾಕಿಕೊಟ್ಟಿದೆ. 2026ರ AI ಶೃಂಗಸಭೆಯು ಅಧಿಕೃತವಾಗಿ ಪ್ರಾರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನವದೆಹಲಿಯ ಭಾರತ್ ಮಂಟಪದಲ್ಲಿ ಭಾರತ AI ಇಂಪ್ಯಾಕ್ಟ್‌ ಶೃಂಗಸಭೆಯನ್ನು ಉದ್ಘಾಟಿಸಿದ್ದಾರೆ.

ಎಐ ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಉದ್ಯೋಗ ನಷ್ಟಕ್ಕೂ ಇದು ಕಾರಣವಾಗಲಿದೆ ಎನ್ನುವ ಚರ್ಚೆಯ ನಡುವೆ ಈ ಎಕ್ಸಪೋ ನಡೆಯುತ್ತಿರುವುದು ಹೊಸ ವಿಷಯಗಳ ಚರ್ಚೆ ಹಾಗೂ ಎಐ ಅನ್ನು ಬಳಸಿಕೊಂಡು ಅಭಿವೃದ್ಧಿ ಹೊಂದುವ ಚಿಂತನೆಗಳಿಗೆ ಪೂರಕವಾಗಿದೆ. ಎಐ ಶೃಂಗಸಭೆಯಲ್ಲಿ 600ಕ್ಕೂ ಹೆಚ್ಚು ಉನ್ನತ-ಸಾಮರ್ಥ್ಯದ ಸ್ಟಾರ್ಟ್‌ಅಪ್‌ಗಳು ಮತ್ತು AI ಪರಿಸರ ವ್ಯವಸ್ಥೆಯಲ್ಲಿ ಅಂತರರಾಷ್ಟ್ರೀಯ ಸಹಯೋಗವನ್ನು ಪ್ರದರ್ಶಿಸುವ 13 ದೇಶಗಳು ಭಾಗಿಯಾಗಿರುವುದು ವಿಶೇಷವಾಗಿದೆ. ಎಐ ಶೃಂಗಸಭೆ ಇಂಪ್ಯಾಕ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸ್ಟಾಲ್‌ಗಳಿಗೆ ಭೇಟಿ ನೀಡಿದ್ದು, ಎಕ್ಸ್‌ಪೋದಲ್ಲಿ ಭಾಗವಹಿಸುವ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳ ನಾಯಕರೊಂದಿಗೆ ಮಾತನಾಡಿದ್ದಾರೆ.

India AI Impact Expo 2026

ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆಯನ್ನು ನವದೆಹಲಿಯ ಭಾರತ್ ಮಂಟಪದಲ್ಲಿ ಎಕ್ಸ್‌ಪೋ ಆಯೋಜಿಸಲಾಗಿದೆ. ಇನ್ನು ಈ ಶೃಂಗಸಭೆಯು ಫೆಬ್ರವರಿ 20 ರವರೆಗೆ ನಡೆಯಲಿದೆ. ಫೆಬ್ರವರಿ 16ಕ್ಕೆ ಚಾಲನೆ ನೀಡಲಾಗಿದ್ದು, ಫೆಬ್ರವರಿ 17ರಿಂದ ಶೃಂಗಸಭೆಯು ಸಾರ್ವಜನಿಕರಿಗೆ ಮುಕ್ತವಾಗಿದೆ. ಈ ಶೃಂಗಸಭೆಯು ಫೆಬ್ರವರಿ 20ರ ವರೆಗೆ ಇರಲಿದೆ.

13 ದೇಶಗಳು ಭಾಗಿ

ಇನ್ನು ಈ ಎಐ ಶೃಂಗಸಭೆಯ ಮತ್ತೊಂದು ವಿಶೇಷವೆಂದರೆ, ಈ ಶೃಂಗಸಭೆಯಲ್ಲಿ ಆಸ್ಟ್ರೇಲಿಯಾ, ಜಪಾನ್, ರಷ್ಯಾ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್‌, ಜರ್ಮನಿ ಹಾಗೂ ಇಟಲಿ ಸೇರಿದಂತೆ 13 ದೇಶಗಳ ಪ್ರತಿನಿಧಿನಗಳು ಭಾಗವಹಿಸಲಿದ್ದಾರೆ. ಒಟ್ಟು 300 ಸೆಮಿನಾರ್‌ಗಳು ನಡೆಯಲಿವೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್

India AI Impact Expo 2026 ಆಲೋಚನೆ, ಹೊಸ ನಾವಿನ್ಯತೆ ಮತ್ತು ಸ್ಪಷ್ಟ ಉದ್ದೇಶಗಳ ಶಕ್ತಿಯುತ ಸಂಗಮವಾಗಿತ್ತು. ಇದು ಜಾಗತಿಕ ಒಳಿತಿಗಾಗಿ ಕೃತಕ ಬುದ್ಧಿಮತ್ತೆಯ ಭವಿಷ್ಯವನ್ನು ರೂಪಿಸುವಲ್ಲಿ ಭಾರತೀಯ ಪ್ರತಿಭೆಯ ಅಪಾರ ಸಾಮರ್ಥ್ಯವನ್ನು ಪ್ರದರ್ಶಿಸಿತು. ಮುಖ್ಯವಾಗಿ, ಜನರ ಪ್ರಗತಿಗಾಗಿ AI ಅನ್ನು ಜವಾಬ್ದಾರಿಯುತವಾಗಿ, ಎಲ್ಲರನ್ನು ಒಳಗೊಂಡಂತೆ ಮತ್ತು ವ್ಯಾಪಕವಾಗಿ ಬಳಸುವ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು. ಮುಖ್ಯಾಂಶಗಳು ಇಲ್ಲಿವೆ ಎಂದು ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

ಈ ಶೃಂಗಸಭೆಯ ಧ್ಯೇಯವಾಕ್ಯವು ಸರ್ವಜನ ಹಿತಾಯ, ಸರ್ವಜನ ಸುಖಾಯ ಆಶಯದಂತೆ ಇದೆ. ಎಐ ಸಭೆಯು ಸರ್ವವರಿಗೂ ಒಳಿತಾಗುವ ಪ್ರಗತಿದಾಯಕವಾದ ಭವಿಷ್ಯಕ್ಕೆ ಮುನ್ನುಡಿಯಾಗಿದೆ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ. ಕೃತಕ ಬುದ್ಧಿಮತ್ತೆಯನ್ನು ಚರ್ಚಿಸಲು ಜಗತ್ತನ್ನು ಒಂದೇ ವೇದಿಕೆಯ ಅಡಿಯಲ್ಲಿ ತಂದಿದ್ದೇವೆ. ಮಾನವ ಕೇಂದ್ರಿತವಾದ ಅಭಿವೃದ್ಧಿಗೆ ಎಐ ಬಳಕೆ ಮಾಡಬೇಕು ಎನ್ನುವ ನಮ್ಮ ಬದ್ಧತೆಯನ್ನು ಈ ಶೃಂಗಸಭೆ ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಈ ಶೃಂಗಸಭೆಯು ಮಹತ್ವದ್ದಾಗಿದೆ

ಇನ್ನು ಈ ಶೃಂಗಸಭೆಯು ಮಹತ್ವದ್ದಾಗಿದೆ ಎಂದು ಬ್ರಿಟನ್ ಹೇಳಿದೆ. ಉಪ ಪ್ರಧಾನಿ ಡೇವಿಡ್‌ ಲ್ಯಾಮಿ ಹಾಗೂ ಎಐ ಸಚಿವ ಕನಿಷ್ಕಾ ನಾರಾಯಣ್ ಅವರ ನೇತೃತ್ವದ ಬ್ರಿಟನ್ ನಿಯೋಗವು ಎಐ ಶೃಂಗಸಭೆಯಲ್ಲಿ ಭಾಗಿಯಾಗಿದೆ. ಈ ಶೃಂಗಸಭೆಯು ಮಹತ್ವದ್ದಾಗಿದೆ. ಎಐ ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಹೇಗೆ ಕೆಲಸ ಮಾಡಬಹುದು ಎನ್ನುವುದನ್ನು ತೀರ್ಮಾನಿಸಬುಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/india/india-ai-impact-expo-2026-worlds-largest-ai-summit-bharat-mandapam-india-what-special-444023.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo