IPL 2026: ಐಪಿಎಲ್‌ ಹಬ್ಬ ಆರಂಭಕ್ಕೂ ಮುನ್ನ 10 ಫ್ರಾಂಚೈಸಿಗಳಿಗೂ ಬಿಸಿಸಿಐ ಕಟ್ಟುನಿಟ್ಟಿನ ಮಾರ್ಗಸೂಚಿಗಳು | IPL 2026: BCCI Issues Strict Practice Guidelines for All 10 Franchises Ahead of Season: Know details

Sports

oi-Madhusudhan KR

IPL 2026: ಈಗಾಗಲೇ ಇಂಡಿಯನ್‌ ಪ್ರೀಮಿಯರ್ ಲೀಗ್‌ 2026ರ ಮೊದಲ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹಾಗಾದ್ರೆ, ಅವುಗಳಲ್ಲಿ ಏನೆಲ್ಲಾ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬಿಸಿಸಿಐ ಹೊರಡಿಸಿದ ಮಾರ್ಗಸೂಚಿಗಳು

ಐಪಿಎಲ್ 2026ರ ಸಿದ್ಧತೆಗಳ ಭಾಗವಾಗಿ ಹೊರಡಿಸಲಾಗಿರುವ ಈ ಹೊಸ ಮಾರ್ಗಸೂಚಿಗಳ ಅನ್ವಯ, ಯಾವುದೇ ಐಪಿಎಲ್ ತಂಡವು ಎದುರಾಳಿ ತಂಡ ಅಭ್ಯಾಸ ನಡೆಸಿದ ಅದೇ ಪಿಚ್‌ ಅಥವಾ ನೆಟ್ಸ್ ಅನ್ನು ಬಳಸುವಂತಿಲ್ಲ. ಪ್ರತಿಯೊಂದು ತಂಡದ ಅಭ್ಯಾಸದ ಅವಧಿಗೂ ಹೊಸ ನೆಟ್ಸ್‌ಗಳನ್ನು ಒದಗಿಸಬೇಕು ಎಂದು ಬಿಸಿಸಿಐ ತಿಳಿಸಿದೆ ಅಂತಾ ವರದಿಯಾಗಿದೆ.

IPL 2026 BCCI Issues Strict Practice Guidelines for All 10 Franchises Ahead of Season Know details

* ಅಭ್ಯಾಸ ಮಾಡುವ ಸಂದರ್ಭಗಳಲ್ಲಿ, ಮೊದಲ ತಂಡವು ಬಳಸಿದ ನೆಟ್ಸ್ ಅನ್ನು ಮತ್ತೊಂದು ತಂಡ ಬಳಸಲು ಅವಕಾಶವಿಲ್ಲ. ಒಂದು ತಂಡವು ನಿಗದಿತ ಸಮಯಕ್ಕಿಂತ ಮೊದಲೇ ಅಭ್ಯಾಸ ಮುಗಿಸಿದರೆ, ಆ ಪಿಚ್‌ ಅನ್ನು ಬಳಸಲು ಇನ್ನೊಂದು ತಂಡಕ್ಕೆ ಅನುಮತಿ ಇರುವುದಿಲ್ಲ ಎಂದು ತಿಳಿಸಿದೆ.

10 ಫ್ರಾಂಚೈಸಿಗಳಿಗೆ ಕಟ್ಟಿನಿಟ್ಟಿನ ಸೂಚನೆಗಳು

* ಒಂದು ತಂಡವು ಫ್ಲಡ್‌ಲೈಟ್ಸ್‌ನಲ್ಲಿ ಅಭ್ಯಾಸ ಪಂದ್ಯವನ್ನು ಆಡಲು ಬಯಸಿದರೆ, ಆ ಪಂದ್ಯದ ಅವಧಿಯು ಮೂರೂವರೆ ಗಂಟೆಗಳಿಗಿಂತ ಹೆಚ್ಚಿರಬಾರದು ಎಂದು ಬಿಸಿಸಿಐ ತನ್ನ ನಿರ್ದೇಶನದಲ್ಲಿ ತಿಳಿಸಿದೆ.

* ತಂಡಗಳು ಗರಿಷ್ಠ ಎರಡು ಅಭ್ಯಾಸ ಪಂದ್ಯಗಳನ್ನು ಆಡಬಹುದು, ಆದರೆ ಅದಕ್ಕೂ ಮುನ್ನ ಅವರು ಬಿಸಿಸಿಐಗೆ ಮಾಹಿತಿ ನೀಡಬೇಕು. ಅಲ್ಲದೆ, ಈ ಪಂದ್ಯಗಳನ್ನು ಮುಖ್ಯ ಪಂದ್ಯಕ್ಕಾಗಿ ಬಳಸಲಾಗುವ ಪಿಚ್‌ ಮೇಲೆ ನಡೆಸುವಂತಿಲ್ಲ.

* ಸೀಸನ್‌ಗಾಗಿ ಪಿಚ್ ಅನ್ನು ಸಿದ್ಧಪಡಿಸುವ ಉದ್ದೇಶದಿಂದ, ಸಂಬಂಧಿತ ಫ್ರಾಂಚೈಸಿಯ ಮೊದಲ ತವರು ಪಂದ್ಯಕ್ಕೆ ಮುನ್ನ ನಾಲ್ಕು ದಿನಗಳ ಅವಧಿಯಲ್ಲಿ ಮುಖ್ಯ ಮೈದಾನದ ಪಿಚ್ ಮೇಲೆ ಯಾವುದೇ ಅಭ್ಯಾಸ ಪಂದ್ಯಗಳನ್ನು ನಡೆಸಲು ಅನುಮತಿ ಇರುವುದಿಲ್ಲ. ಈ ಅವಧಿಯಲ್ಲಿ, ತವರು ಫ್ರಾಂಚೈಸಿ ಮನವಿ ಮಾಡಿದಲ್ಲಿ, ರಾಜ್ಯ ಕ್ರಿಕೆಟ್ ಸಂಸ್ಥೆಯು ಅವರಿಗೆ ಯಾವುದೇ ಶುಲ್ಕವಿಲ್ಲದೆ ಪರ್ಯಾಯ ಅಭ್ಯಾಸ ಮೈದಾನವನ್ನು ಒದಗಿಸಬೇಕು.

* ಎರಡು ತಂಡಗಳಿಗೆ ಅಭ್ಯಾಸಕ್ಕಾಗಿ ತಲಾ ಎರಡು ನೆಟ್ಸ್‌ಗಳನ್ನು ನೀಡಲಾಗುತ್ತದೆ. ಜೊತೆಗೆ ರೇಂಜ್ ಹಿಟ್ಟಿಂಗ್‌ಗಾಗಿ ಮುಖ್ಯ ಮೈದಾನದಲ್ಲಿ ಒಂದು ನೆಟ್ ಅನ್ನು ಮೀಸಲಿಡಲಾಗುವುದು. ಅಭ್ಯಾಸದ ವೇಳಾಪಟ್ಟಿಯ ಕುರಿತು ಯಾವುದೇ ವಿವಾದ ಉಂಟಾದಲ್ಲಿ, ಅತಿಥಿ ತಂಡಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.

* ತವರು ತಂಡವು ತಮಗೆ ಅನುಕೂಲಕರವಾದ ಅಭ್ಯಾಸದ ಸಮಯವನ್ನು ಮೊದಲೇ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿದ್ದರೂ, ಅತಿಥಿ ತಂಡದ ಮನವಿಗಳನ್ನು ಪರಿಗಣಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ, ಅತಿಥಿ ತಂಡವು ಹಿಂದಿನ ದಿನವೇ ಪಂದ್ಯ ಆಡಿದ್ದರೆ ಮತ್ತು ಅವರ ಪ್ರಯಾಣದ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/ipl-2026-bcci-issues-strict-practice-guidelines-for-all-10-franchises-ahead-of-season-know-details-447011.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo