IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್‌ಎಸ್‌ಜಿ ಮಣಿಸಿದ ಗುಜರಾತ್ ಟೈಟಾನ್ಸ್ | Gujarat Titans Beat Lucknow Super Giants by 7 Wickets: Shubman Gill & Jos Buttler Shine in IPL 2026

Sports

oi-Madhusudhan KR

GT Vs LSG IPL 2026: ಲಕ್ನೋದಲ್ಲಿ ಭಾನುವಾರ (ಏಪ್ರಿಲ್‌ 12) ನಡೆದ ಐಪಿಎಲ್ 2026ರ 19ನೇ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಮತ್ತು ಜೋಸ್ ಬಟ್ಲರ್ ಅವರ ಅದ್ಭುತ ಜೊತೆಯಾಟದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಟಾಸ್ ಗೆದ್ದ ಗುಜರಾತ್ ಟೈಟಾನ್ಸ್‌ ನಾಯಕ ಶುಭ್‌ಮನ್ ಗಿಲ್‌ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ರಿಷಭ್ ಪಂತ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 164 ರನ್‌ಗಳನ್ನು ಕಲೆಹಾಕಿದರು. ಈ ಗುರಿಯನ್ನು ಜಿಟಿ ತಂಡವು 18.4 ಓವರ್‌ಗಳಲ್ಲಿ ಮುಟ್ಟುವಲ್ಲಿ ಯಶಸ್ವಿಯಾಗುವ ಮೂಲಕ ಭರ್ಜರಿ ಗೆಲುವು ಸಾಧಿಸಿತು.

Gujarat Titans Beat Lucknow Super Giants by 7 Wickets Shubman Gill amp amp Jos Buttler Shine in IPL 2026

ಮಾರಕ ಬೌಲಿಂಗ್ ದಾಳಿ ಮಾಡಿದ ಪ್ರಸಿದ್ಧ್ ಕೃಷ್ಣ

ಜಿಟಿ ಪರ ಪ್ರಸಿದ್ಧ್ ಕೃಷ್ಣ ಅವರ ಮಾರಕ ಬೌಲಿಂಗ್ ದಾಳಿಯಿಂದಾಗಿ ಗುಜರಾತ್ ಟೈಟಾನ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ಅನ್ನು ನಿಗದಿತ 20 ಓವರ್‌ಗಳಲ್ಲಿ 164/8 ರನ್‌ಗಳಿಗೆ ಕಟ್ಟಿಹಾಕಿತು. ಲಕ್ನೋ ಪರ ಏಡೆನ್ ಮಾರ್ಕ್ರಾಮ್ 30(21) ಗರಿಷ್ಠ ರನ್ ಗಳಿಸಿದರು. ಉಳಿದಂತೆ ತಂಡದ ನಾಯಕ ರಿಷಬ್ ಪಂತ್ 18, ನಿಕೋಲಸ್ ಪೂರನ್ 19, ಅಬ್ದುಲ್ ಸಮದ್ 18 ಮತ್ತು ಮುಕುಲ್ ಚೌಧರಿ 18 ರನ್‌ ಕಲೆಹಾಕಿದರು. ಇದರಿಂದ ತಂಡ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು.

ನಾಲ್ಕು ವಿಕೆಟ್‌ ಕಬಳಿಸಿದ ಪ್ರಸಿದ್ಧ್ ಕೃಷ್ಣ

ಗುಜರಾತ್ ಪರ ಪ್ರಸಿದ್ಧ್ ಕೃಷ್ಣ ನಾಲ್ಕು ವಿಕೆಟ್‌ ಪಡೆದು ಮಿಂಚಿದರೆ, ಅಶೋಕ್ ಶರ್ಮಾ ಎರಡು ವಿಕೆಟ್, ಮೊಹಮ್ಮದ್ ಸಿರಾಜ್ ಮತ್ತು ಕಗಿಸೊ ರಬಾಡ ತಲಾ ಒಂದು ವಿಕೆಟ್ ಪಡೆದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್‌ ತಂಡವನ್ನು 164 ರನ್‌ಗಳಿಗೆ ಕಟ್ಟಿಹಾಕಿ ತಮ್ಮ ತಂಡದ ಬ್ಯಾಟಿಂಗ್ ಹೊರೆಯನ್ನು ತಗ್ಗಿಸಿದರು.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/gujarat-titans-beat-lucknow-super-giants-by-7-wickets-shubman-gill-jos-buttler-shine-in-ipl-2026-450229.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo