
International
oi-Hitesh Y
Iran-US-Israel War: ಇರಾನ್ ದೇಶದ ಮೇಲೆ ಇನ್ನೇನು ಬಾಂಬ್ ದಾಳಿಗಳನ್ನು ಅಮೆರಿಕ ಮಾಡಿಯೇ ಬಿಡಲಿದೆ ಎನ್ನುವಾಗಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ಗೆ ಇನ್ನೂ ಎರಡು ವಾರಗಳ ಕಾಲಾವಕಾಶ ನೀಡಿದ್ದಾರೆ. ಆ ದೇವರು ಇರಾನ್ ಜನರನ್ನು ಆಶೀರ್ವದಿಸಲಿ; ಈ ರಾತ್ರಿಯೇ ಸಮಸ್ತ ಇರಾನ್ ನಾಗರಿಕತೆ ಸರ್ವನಾಶವಾಗಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕುವಂತೆ ಇರಾನ್ಗೆ ಅಮೆರಿಕ ತೀವ್ರ ಒತ್ತಡ ಹಾಕುತ್ತಲ್ಲೇ ಇದೆ. ಇನ್ನು ಅಮೆರಿಕಾದೊಂದಿಗೆ ಇರಾನ್ನ ಮೇಲೆ ಇಸ್ರೇಲ್ಸಹ ತೀವ್ರ ದಾಳಿ ನಡೆಸಿತ್ತು.
ಡೊನಾಲ್ಡ್ ಟ್ರಂಪ್ ಇರಾನ್ನ ಮೇಲೆ ಪರಮಾಣು / ನ್ಯೂಕ್ಲಿಯರ್ ಬಾಂಬ್ ಬಳಕೆ ಮಾಡಬಹುದು ಎನ್ನುವ ಆತಂಕವಿತ್ತು. ಕೊನೆಗೂ ಟ್ರಂಪ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಆದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವ ಕ್ಷಣದಲ್ಲಿ ಏನು ಮಾಡಲಿದ್ದಾರೆ ಎನ್ನುವುದು ಯಾರಿಗೂ ಅಂದಾಜಿಗೇ ಸಿಗುತ್ತಿಲ್ಲ.

ಇರಾನ್ ಯುದ್ಧದ ವಿಚಾರದಲ್ಲಿ ಮಧ್ಯವರ್ತಿಗಳಿಂದ 14 ದಿನಗಳ ಕದನ ವಿರಾಮ ಪ್ರಸ್ತಾವನೆ ಬಂದಿರುವ ಹಿನ್ನೆಲೆಯಲ್ಲಿ ಇರಾನ್ ಮೇಲೆ ಬಾಂಬ್ ದಾಳಿ ಮಾಡುವುದನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸಲು ಒಪ್ಪಿಕೊಂಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ತಡರಾತ್ರಿ ಹೇಳಿದ್ದಾರೆ. ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಮಧ್ಯವರ್ತಿಯಾಗಿರುವ ಮತ್ತು ಎರಡು ವಾರಗಳ ಕದನ ವಿರಾಮವನ್ನು ಕೋರಿದ್ದ ಪಾಕಿಸ್ತಾನದ ನಾಯಕರೊಂದಿಗೆ ಮಾತನಾಡಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನದ ಮಧ್ಯಪ್ರವೇಶದಿಂದಾಗಿ ಕದನ ವಿರಾಮ ಘೋಷಣೆಯಾದಂತಾಗಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೊಂದಿಗಿನ ಸಂಭಾಷಣೆಗಳ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ ಇಂದು ರಾತ್ರಿ ಇರಾನ್ನ ಮೇಲೆ ವಿನಾಶಕಾರಿ ದಾಳಿ ಮಾಡುವುದನ್ನು ತಡೆಹಿಡಿಯುವಂತೆ ವಿನಂತಿಸಿದ್ದಾರೆ ಮತ್ತು ಇಸ್ಲಾಮಿಕ್ ಗಣರಾಜ್ಯ ಆಫ್ ಇರಾನ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣ, ತಕ್ಷಣ ಮತ್ತು ಸುರಕ್ಷಿತವಾಗಿ ತೆರೆಯುವಿಕೆಗೆ ಒಪ್ಪಿಕೊಂಡರೆ, ಇರಾನ್ ಮೇಲೆ ಬಾಂಬ್ ದಾಳಿ ಮತ್ತು ಎಲ್ಲಾ ಮಾದರಿಯ ದಾಳಿಯನ್ನು ಎರಡು ವಾರಗಳ ಅವಧಿಗೆ ಸ್ಥಗಿತಗೊಳಿಸಲು ನಾನು ಒಪ್ಪಿಕೊಂಡಿದ್ದೇನೆ ಎಂದು ಡೊನಾಲ್ಡ್ ಟ್ರಂಪ್ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Iran-US-Israel War: ದ್ವಿಪಕ್ಷೀಯ ಕದನ ವಿರಾಮ
ಇನ್ನು ಇರಾನ್ – ಅಮೆರಿಕ, ಇಸ್ರೇಲ್ ನಡುವಿನ ಯುದ್ಧದ ಅಂತ್ಯದ ಬಗ್ಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್. ಇದೀಗ ನಡೆಯುವ ಕದನ ವಿರಾಮ ಒಪ್ಪಂದವು ದ್ವಿಪಕ್ಷೀಯ ಕದನ ವಿರಾಮವಾಗಿರುತ್ತದೆ. ಇರಾನ್ನಿಂದ ಅಮೆರಿಕಕ್ಕೆ 10 ಅಂಶಗಳ ಪ್ರಸ್ತಾವನೆ ಬಂದಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನು ಮಾತುಕತೆ ನಡೆಸಬೇಕಾಗಿದೆ. ಯುಎಸ್ ಮತ್ತು ಇರಾನ್ ನಡುವೆ ಹಿಂದಿನ ಎಲ್ಲಾ ವಿವಾದಾತ್ಮಕ ಅಂಶಗಳನ್ನು ಒಪ್ಪಿಕೊಳ್ಳಲಾಗಿದೆ ಮತ್ತು ಎರಡು ವಾರಗಳ ಅವಧಿಯು ಒಪ್ಪಂದವನ್ನು ಅಂತಿಮಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು ಟ್ರಂಪ್ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ಇರಾನ್ – ಇಸ್ರೇಲ್ ಯುದ್ಧ ಪ್ರಾರಂಭವಾಗಿದ್ದು ಯಾವಾಗ, ಯಾಕೆ
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ದಾಳಿ ಮಾಡಿದಾಗ ಈ ಯುದ್ಧ ಪ್ರಾರಂಭವಾಯಿತು. ಟೆಹ್ರಾನ್ ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳ ಮೇಲೆ ತನ್ನದೇ ಆದ ದಾಳಿಗಳೊಂದಿಗೆ ಯುಎಸ್ ನೆಲೆಗಳನ್ನು ನಾಶ ಮಾಡಿತು. ಯುದ್ಧವು ಜಾಗತಿಕ ಮಾರುಕಟ್ಟೆಗಳನ್ನು ಅಲುಗಾಡಿಸಿದೆ ಮತ್ತು ತೈಲ ಬೆಲೆಗಳನ್ನು ಹೆಚ್ಚಿಸಿದೆ.
ಇರಾನ್ನ ಮೇಲೆ ಯುಎಸ್-ಇಸ್ರೇಲಿ ದಾಳಿಗಳು ಮತ್ತು ಲೆಬನಾನ್ನಲ್ಲಿ ಇಸ್ರೇಲಿ ದಾಳಿಗಳು ಸಾವಿರಾರು ಜನರ ಸಾವಿಗೆ ಕಾರಣವಾಗಿದ್ದು, ಲಕ್ಷಾಂತರ ಜನರನ್ನು ಸ್ಥಳಾಂತರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇರಾನ್ ಒಪ್ಪಂದ ಮಾಡಿಕೊಳ್ಳದಿದ್ದರೆ ಇಂದು ರಾತ್ರಿ ಇಡೀ ಇರಾನ್ ನಾಗರಿಕತೆಯು ಸಾಯುತ್ತದೆ ಎಂದು ಟ್ರಂಪ್ ಮಂಗಳವಾರ ಎಚ್ಚರಿಸಿದ್ದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/iran-us-israel-war-donald-trump-announces-2-week-ceasefire-after-pakistan-intervention-449725.html. xn--babytilbehr-pgb.com does not claim ownership of this content. All rights remain with the original publisher.
